ಭಾರತದಲ್ಲಿ ಬೈಕ್ ಕ್ರೇಜ್ ಅವಳಿ ಹೆಚ್ಚು. ಲಕ್ಷಾಂತರ ರೂಪಾಯಿಯ ಕಾರ್ ಇದ್ದರೂ ಸಹ ಬೈಕ್ ಮೇಲಿನ ವ್ಯಾಮೋಹ ಮಾತ್ರ ಕಡಿಮೆ ಆಗುವುದಿಲ್ಲ. ಅತಿ ಕಡಿಮೆ ದರದ ಬೈಕ್ ಗಳಿಂದ ಕೋಟಿ ರೂಪಾಯಿಯ ಬೈಕ್ ತನಕ ಇದೆ. ಆದರೆ ಅದರಲ್ಲಿ ಎಲ್ಲರೂ ಗಮನ ಹರಿಸುವುದು ಯಾವುದು ಏಷ್ಟು ಮೈಲೇಜ್ ನೀಡುತ್ತದೆ ಎಂದು. ಈಗಿನ ಪೆಟ್ರೋಲ್ ದರದಲ್ಲಿ ನಾವು ಹೆಚ್ಚು ಮೈಲೇಜ್ ನೀಡುವ ಬೈಕ್ ಖರೀದಿ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗಾದರೆ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು ಯಾವುದು ಎಂಬುದರ ಮಾಹಿತಿ ತಿಳಿಯಿರಿ.
ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು ಯಾವುವು?
1) ಬಜಾಜ್ ಪ್ಲಾಟಿನಾ 100(Bajaj Platina 100) :- ಈ ಬೈಕ್ ಬಜಾಜ್ ಆಟೋನ ಅತ್ಯಂತ ಜನಪ್ರಿಯ ಬೈಕಾಗಿದೆ. ಈ ಬೈಕ್ ನಾ ಮೈಲೇಜ್ 72 ಕಿಲೋಮೀಟರ್‌ಗಳವರೆಗೆ ಕ್ರಮಿಸುತ್ತದೆ. ಜೊತೆಗೆ ಬಜಾಜ್ ಪ್ಲಾಟಿನಾ 100 ಬೈಕ್ ನಾ ಎಂಜಿನ್ 102 cc ಆಗಿದೆ ಹಾಗೂ ಇದು 7.79 bhp ಪವರ್ ಮತ್ತು 8.34 Nm ಟಾರ್ಕ್ ಅನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಬಜಾಜ್ ಪ್ಲಾಟಿನಾ 100 ಶೋ ರೂಂ ನ ದರವು 67,808 ರೂಪಾಯಿ ಆಗಿರುತ್ತದೆ.
2) ಟಿವಿಎಸ್ ಸ್ಪೋರ್ಟ್(TVS Sport) :- ಈ ಬೈಕ್ ಎರಡು ಮಾಡೆಲ್ ನಲ್ಲಿ ಇದೆ, ಒಂದು ಮಾಡಲ್ ನ ಶೋ ರೂಂ ಬೆಲೆ 59,881 ರೂಪಾಯಿ ಆಗಿದೆ. ಹಾಗೂ ಇನ್ನೊಂದು ಮಾಡಲ್ ಬೆಲೆ 71,223 ರೂಪಾಯಿ ಆಗಿದೆ. ಇದರ ಎಂಜಿನ್ 109.7 cc ಆಗಿದೆ. ಇದು 8.19 bhp ಪವರ್ ಮತ್ತು 8.7 Nm ಟಾರ್ಕ್ ಅನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬೈಕ್ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) ಹೋಂಡಾ ಲಿವೋ ಡ್ರಮ್(Honda Live Drum) :- ಇದು ಹೊಂಡಾ ಕಂಪನಿಯ ಬೈಕ್ ಆಗಿದ್ದು, ಈ ಬೈಕ್ ಇಂಜಿನ್ 109.51 cc ಆಗಿದೆ. ಈ ಬೈಕ್ 8.79 PS ಪವರ್ ಮತ್ತು 9.30 Nm ಟಾರ್ಕ್ ಉತ್ಪಾದನೆ ಮಾಡುತಾಯ್ದೆ. ಇನ್ನು ಹೋಂಡಾ ಲಿವೋ ಡ್ರಮ್ ಬೈಕ್ ನಾ ಮೈಲೇಜ್ ಬಗ್ಗೆ ಹೇಳುವುದಾದರೆ ಇದು 74 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಹೋಂಡಾ ಲಿವೋ ಡ್ರಮ್ ಬೈಕ್‌ನ ಶೋ ರೂಂ ಬೆಲೆಯು 78,500 ರೂಪಾಯಿ ಆಗಿರುತ್ತದೆ.
4) ಹೋಂಡಾ ಶೈನ್ 100(Honda Shine 100) :- ಹೋಂಡಾ ಕಂಪನಿಯ ಈ ಬೈಕ್ 98.98 cc ಎಂಜಿನ್ ಹೊಂದಿದೆ. ಇದು 7.38 bhp ಪವರ್ ಹಾಗೂ 8.05 Nm ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ 65 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ ಈ ಬೈಕಿನ ಶೋ ರೂಂ ಬೆಲೆಯು 64,900 ರೂಪಾಯಿ ಆಗಿರುತ್ತದೆ.
5) ಹೀರೋ ಸ್ಪ್ಲೆಂಡರ್ ಪ್ಲಸ್(Hero Splendor Plus) :- ಇದು ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ಬೈಕ್ ಆಗಿದೆ. ಈ ಬೈಕಿನ ಶೋ ರೂಂ ಬೆಲೆಯು 75,141 ರೂಪಾಯಿ ಆಗಿದ್ದೆ. ಈ ಬೈಕ್ ನಾ ಎಂಜಿನ್ 97.2 cc ಆಗಿರುತ್ತದೆ. ಇನ್ನು ಈ ಬೈಕ್ 8.02 PS ಪವರ್ ಹಾಗೂ 8.05 Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಈ ಬೈಕ್ ನಾ ಮೈಲೇಜ್ ಬಗ್ಗೆ ಹೇಳುವುದಾದರೆ 73 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: ಪ್ರಪಂಚದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಬಜಾಜ್; ಬರೋಬ್ಬರಿ 330KM ಮೈಲೇಜ್, ಕಡಿಮೆ ಬೆಲೆಯಲ್ಲಿ ಖರೀದಿಸಿ