ಮೊಬೈಲ್ ನಲ್ಲಿ ಈಗ ಎಲ್ಲಾ ಡಾಕ್ಯುಮೆಂಟ್ಸ್, ಫೋಟೋಸ್ ಎಲ್ಲಾ ಇರುತ್ತದೆ. ಒಮ್ಮೆ ಮೊಬೈಲ್ ಕಳೆದರೆ ನಮ್ಮ ಮೊಬೈಲ್ ನಲ್ಲಿ ಇರುವ ಎಲ್ಲ documents ಗಳು ಹ್ಯಾಕ್ ಆಗುತ್ತವೆ. ಅದೇ ಕಾರಣಕ್ಕೆ ನಾವು ಈಗ ಮೊಬೈಲ್ ಕಳೆದು ಹೋದರೆ ಅಥವಾ ನಮ್ಮ ಮೊಬೈಲ್ ಅನ್ನು ಯಾರಾದರೂ ಕಳ್ಳತನ ಮಾಡಿದರೆ ಇನ್ನು ಮುಂದೆ ನಮ್ಮ ಮೊಬೈಲ್ ಕಳೆದರೆ ನಾವು ಮೊಬೈಲ್ ಬ್ಲಾಕ್ ಮಾಡಿ ನಮ್ಮ documents ಅಥವಾ ಎಲ್ಲಾ ಫೋಟೋಸ್ ಹಾಗೂ ಮೆಸೇಜ್ ಗಳನ್ನೂ ಬೇರೆಯವರು ನೋಡದಂತೆ ಅಥವಾ ಬಳಸದಂತೆ ಮಾಡಲು ಸಾಧ್ಯವಿದೆ. ಹೇಗೆ ನಿಮ್ಮ ಮೊಬೈಲ್ ಬ್ಲಾಕ್ ಮಾಡಬಹುದು ಎಂಬುದನ್ನು ತಿಳಿಯಿರಿ.
ಮೊಬೈಲ್ ಲಾಕ್ ಮಾಡಲು ಈ ಸ್ಟೆಪ್ ಫಾಲೋ ಮಾಡಿ :-
ಅಕಸ್ಮಾತ್ ನೀವು ನಿಮ್ಮ ಮೊಬೈಲ್ ಕಳೆದುಕೊಂಡರೆ ನಿಮ್ಮ ಮೊಬೈಲ್ details ಹ್ಯಾಕ್ ಆಗದ ಹಾಗೆ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- ಸ್ಟೆಪ್ 1:- ಸಿಇಐಆರ್ ವೆಬ್‌ಸೈಟ್ ಭೇಟಿ ನೀಡಿ:- ನಿಮ್ಮ ಕಳೆದುಹೋದ ಮೊಬೈಲ್ ಬ್ಲಾಕ್ ಮಾಡುವ ಸಲುವಾಗಿಯೇ ಇಂದು ವೆಬ್ಸೈಟ್ ಇದೆ. ಅದುವೇ ಸಿಇಐಆರ್ ವೆಬ್‌ಸೈಟ್. ಈ ವೆಬ್ಸೈಟ್ ಗೆ ಯಾವುದೇ ಲ್ಯಾಪ್ಟಾಪ್ ಅಥವಾ ಮೊಬೈಲ್ ನಿಂದ ನೀವು ಈ ವೆಬ್ಸೈಟ್ ತೆರೆಯಿರಿ.
- ಸ್ಟೆಪ್ 2 ವಿವರ ದಾಖಲಿಸಿ :- ಕಳೆದುಹೋಗಿರುವ ಮೊಬೈಲ್ ನಲ್ಲಿ ಇರುವ ಸಿಮ್ ಕಾರ್ಡ್ ನಂಬರ್ ( ಮೊಬೈಲ್ ನಂಬರ್ ) ಹಾಗೂ ಐಎಂಇಐ ನಂಬರ್ ಹಾಗೂ ಒಟಿಪಿ ಎಲ್ಲವನ್ನೂ ದಾಖಲಿಸಬೇಕಾಗಿತ್ತದೆ.
- ಸ್ಟೆಪ್ 3:- ರಶೀದಿ ಪಡೆಯಿರಿ :- ನೀವು ದೂರು ದಾಖಲೆ ಮಾಡಿರುವ ಬಗ್ಗೆ ನಿಮಗೆ ಒಂದು ರಶೀದಿ ಸಿಗುತ್ತದೆ. ಆ ರಶೀದಿಯನ್ನು ನೀವು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ ಅಥವಾ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
- ಸ್ಟೆಪ್ 4:- ಪೊಲೀಸ್ ಗೆ ಮಾಹಿತಿ :- ನಿಮ್ಮ ದೂರು ದಾಖಲೆ ಆಗಿರುವ ಬಗ್ಗೆ ಹಾಗೂ ನೀವು ನೀಡಿರುವ ಎಲ್ಲಾ ಮಾಹಿತಿಗಳು ನೇರವಾಗಿ ಸಂಭದಿಸಿದ ಪೊಲೀಸ್ ಸ್ಟೇಷನ್ ಗೆ ತಲುಪುತ್ತದೆ.
- ಸ್ಟೆಪ್ 5 :- ಮೊಬೈಲ್ ಬ್ಲಾಕ್ ಆಗುತ್ತದೆ :- ನಿಮ್ಮ ದೂರು ಪೊಲೀಸ್ ಸ್ಟೇಶನ್ ಗೆ ತಲುಪಿದ ಬಳಿಕ ನಿಮ್ಮ ಕಳೆದುಹೋಗಿರುವ ಮೊಬೈಲ್ ಬ್ಲಾಕ್ ಆಗುತ್ತದೆ. ಇದರಿಂದ ಅವರು ನಿಮ್ಮ ಮೊಬೈಲ್ ನಲ್ಲಿ ಇರುವ ಯಾವುದೇ ಮಾಹಿತಿಗಳನ್ನು ತೆಗೆಯಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಮಾಹಿತಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಿರುವ ಅಧಿಕೃತ ಮಾಹಿತಿ ಆಗಿದ್ದು ಇದರಲ್ಲಿ ಯಾವುದೇ ಸುಳ್ಳು ಮಾಹಿತಿ ಇಲ್ಲ. ಇತ್ತೀಚಿಗೆ ಮೊಬೈಲ್ ಕದ್ದು ಅದರಲ್ಲಿ ಇರುವ ಮಾಹಿತಿ ಗಳನ್ನು ಕದ್ದು ಮಾರಾಟ ಮಾಡುವ ಅಥವಾ ದುರುದ್ದೇಶಕ್ಕೆ ಬಳಕೆ ಮಾಡುತ್ತಿರುವ ಘಟನೆಗಳು ಹೆಚ್ಚಾಗಿದೇ. ಇದನ್ನು ತಡೆಯಬೇಕು ಎಂಬ ನಿಟ್ಟಿನಲ್ಲಿ ಈಗ ಇಲಾಖೆ ಹೊಸದಾಗಿ ಈ ವಿಧಾನ ವನ್ನು ಕಂಡುಹಿಡಿದಿದೆ. ಇದರಿಂದ ಕಳ್ಳತನ ಆದರೂ ಮೊಬೈಲ್ ನಲ್ಲಿ ಇರುವ ಎಲ್ಲ ಮಾಹಿತಿ ಗಳು ಸೇಫ್ ಆಗಿ ಇರುತ್ತದೆ.
ಇದನ್ನೂ ಓದಿ: ಉದ್ಯಮ ಶುರು ಮಾಡಲು ಸರ್ಕಾರದಿಂದ ಸಿಗಲಿದೆ ಸಾಲ ಸೌಲಭ್ಯ; 9 ಲಕ್ಷದವರೆಗೆ ಸಿಗುತ್ತೆ ಹಣಕಾಸಿನ ನೆರವು
ಇದನ್ನೂ ಓದಿ: ತಿಂಗಳಿಗೆ 1,000 ರೂಪಾಯಿ ಹೂಡಿಕೆ ಮಾಡಿ 8,24,641 ರೂಪಾಯಿ ಗಳಿಸುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯಿರಿ