ಈಗ ಎಲ್ಲಾರೂ ಬಿಎಸ್ಎನ್ಎಲ್ ಟೆಲಿಕಾಂ ನತ್ತಾ ಮುಖಮಾಡುತ್ತ ಇದ್ದಾರೆ. ಈಗ ನೀವು ಸಹ ಹೊಸ SIM ಕಾರ್ಡ್ ತೆಗೆದುಕೊಳ್ಳಬೇಕಾ ಅಥವಾ ಬೇರೆ ಸಿಮ್ ಅನ್ನು ನೀವು BSNL ಗೆ ಪೋರ್ಟ್ ಮಾಡಬೇಕು ಎಂಬ ಆಲೋಚನೆ ನಿಮಗೆ ಇದ್ದರೆ ನೀವು ಈಗ ಮನೆಯಲ್ಲಿಯೇ ಸುಲಭವಾಗಿ ಬಿಎಸ್ಎನ್ಎಲ್ ಕಾರ್ಡ್ ಪಡೆಯುವ ಅವಕಾಶ ಇದೆ.
ಬಿಎಸ್ಎನ್ಎಲ್ ಈಗ ಜನಪ್ರಿಯ ಆಗುತ್ತಿದೆ:- ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿ ಐ ತಮ್ಮ ರಿಚಾರ್ಜ್ ಯೋಜನೆಗಳ ದರವನ್ನು ಹೆಚ್ಚಿಸಿದ್ದರಿಂದ BSNL ಮತ್ತೆ ಲೋಕಪ್ರಿಯವಾಗುತ್ತಿದೆ. BSNL ಮಾತ್ರ ಈಗಲೂ ಅಗ್ಗದ ರಿಚಾರ್ಜ್ ಯೋಜನೆಗಳನ್ನು ಒದಗಿಸುತ್ತಿದೆ. ಅದಕ್ಕೆ ಈಗ ಹೆಚ್ಚಾಗಿ ಬಿಎಸ್ಎನ್ಎಲ್ ಹೆಚ್ಚು ಜನಪ್ರಿಯ ಆಗಿದೆ. BSNL SIM ಕಾರ್ಡ್ ಅನ್ನು ನೀವು ಹೀಗೇ ಸುಲಭವಾಗಿ ಮನೆಯಲ್ಲಿಯೇ ಪಡೆಯಬಹುದು.
ಜನರ ಅನುಕೂಲಕ್ಕೆ ಬಿಎಸ್ಎನ್ಎಲ್ ಸೇವೆ ನೀಡುತ್ತಿದೆ :- BSNL ತನ್ನ ಬಳಕೆದಾರರ ಅನುಕೂಲಕ್ಕಾಗಿ SIM ಕಾರ್ಡ್ ವಿತರಣೆ ಸೇವೆಯನ್ನು ಪ್ರಾರಂಭಿಸಿದೆ. ಹೊಸ SIM ಕಾರ್ಡ್ ಬೇಕಾದರೆ ಅಥವಾ ಹಳೆಯ ನಂಬರ್ ಅನ್ನು BSNL ಗೆ ಪೋರ್ಟ್ ಮಾಡಬೇಕಾದರೆ, ನಿಮಗೆ ಎಲ್ಲಿಗೂ ಹೋಗುವ ಅಗತ್ಯವಿಲ್ಲ. BSNL SIM ಕಾರ್ಡ್ ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೆ. ಸುಲಭ ಹಂತಗಳನ್ನು ಅನುಸರಿಸಿ ನೀವು ಬಿಎಸ್ಎನ್ಎಲ್ ಸಿಮ್ ಪಡೆಯಬಹುದು.
ಹೀಗೆ ಬುಕಿಂಗ್ ಮಾಡಿ :-
BSNL SIM ವಿತರಣಾ ಸೇವೆ ಮತ್ತು SIM ಕಾರ್ಡ್ ವಿತರಣೆಯು ಈಗ ಜನರ ಅನುಕೂಲಕ್ಕಾಗಿ Prune ಆಪ್ ಮತ್ತು LILO ಆಪ್ ಮೂಲಕ ಲಭ್ಯವಿದೆ. ನೀವು BSNL ಗೆ ಪೋರ್ಟ್ ಮಾಡಬೇಕು ಅಥವಾ ಹೊಸ SIM ಕಾರ್ಡ್ ಅನ್ನು ಖರೀದಿಸಬೇಕು ಅಂದರೆ, Prune ಆಪ್ ಅನ್ನು ಬಳಸಿ, ಅಥವಾ BSNL ವೆಬ್‌ಸೈಟ್ ಮೂಲಕ SIM ಕಾರ್ಡ್ ಅನ್ನು ಬುಕಿಂಗ್ ಮಾಡಬಹುದು.
BSNL SIM ಕಾರ್ಡ್ ವಿತರಣೆಯ ಸೇವೆ ಪ್ರಸ್ತುತ ಮೂರು ಪ್ರಮುಖ ನಗರಗಳಲ್ಲಿ ಲಭ್ಯವಿದೆ: ಗಾಜಿಯಾಬಾದ್, ಗುರುಗ್ರಾಮ್ ಮತ್ತು ತಿರುವನಂತಪುರಂ ಈ ನಗರಗಳಲ್ಲಿ ನೀವು ಉಚಿತವಾಗಿ ಬಿಎಸ್ಎನ್ಎಲ್ ಕಾರ್ಡ್ ವಿತರಣೆ ಸಿಗಲಿದೆ. ಗಾಜಿಯಾಬಾದ್ ಮತ್ತು ಗುರುಗ್ರಾಮ್ ನಗರಗಳಲ್ಲಿರುವವರು Prune ಆಪ್ ಬಳಸಿ SIM ಕಾರ್ಡ್ ಪಡೆಯಬಹುದು ಹಾಗೂ ತಿರುವನಂತಪುರಂ ನಲ್ಲಿರುವವರು LILO ಆಪ್ ಬಳಸಿ SIM ಕಾರ್ಡ್ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಈ ನಗರಗಳು ಮೊದಲು BSNL 5G ನೆಟ್ ವರ್ಕ್ ಅನ್ನು ಪಡೆಯುತ್ತವೆ, ವಿವರಗಳನ್ನು ಪರಿಶೀಲಿಸಿ.
Prune ಆಪ್ ಅಥವಾ ವೆಬ್‌ಸೈಟ್ ಬಳಸಿ ಬಿಎಸ್ಎನ್ಎಲ್ ಸಿಮ್ ಪಡೆಯುವುದು ಹೇಗೆ?
- ಪ್ರೂನ್ ಆಪ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ರೂನ್ ಆಪ್ ಅನ್ನು ಡೌನ್‌ಲೋಡ್ ಮಾಡಿ ಅಥವಾ https://prune.co.in/mno-bsnl/ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಬ್ರೌಸರ್ನಲ್ಲಿ ಹೋಗಿ.
- ಸೈನ್ ಅಪ್ ಮಾಡಿ: ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮತ್ತು OTP ಅನ್ನು ದೃಢೀಕರಿಸಿ. ಇದು ನಿಮ್ಮನ್ನು ಪ್ಲಾಟ್‌ಫಾರ್ಮ್‌ಗೆ ನೋಂದಾಯಿಸುತ್ತದೆ.
- ನಿಮ್ಮ ವಿವರಗಳನ್ನು ನಮೂದಿಸಿ: ನಿಮ್ಮ ಹೆಸರು, ವಿಳಾಸ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಿ. ನೀವು ಹೊಸ ಸಿಮ್ ಕಾರ್ಡ್ ಬೇಕೋ ಅಥವಾ ಹಳೆಯ ನಂಬರ್ ಅನ್ನು ಪೋರ್ಟ್ ಮಾಡಬೇಕೋ ಆಯ್ಕೆ ಮಾಡಿ. ನಿಮಗೆ ಬೇಕಾದ ಟ್ಯಾರಿಫ್ ಪ್ಲಾನ್ ಅನ್ನು ಆಯ್ಕೆ ಮಾಡಿ.
- ಪಾವತಿ ಮಾಡಿ: ಆನ್‌ಲೈನ್ ಪಾವತಿ ವಿಧಾನಗಳಾದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇತರ ಡಿಜಿಟಲ್ ವಾಲೆಟ್‌ಗಳನ್ನು ಬಳಸಿ ಪಾವತಿ ಮಾಡಿ.
- ಆರ್ಡರ್ ಅನ್ನು ದೃಢೀಕರಿಸಿ: ನಿಮ್ಮ ಆರ್ಡರ್ ಅನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ. ನಿಮ್ಮ ಆರ್ಡರ್ ಸಂಖ್ಯೆಯನ್ನು ನೋಟ್ ಮಾಡಿ. ಕೆಲವು ದಿನಗಳಲ್ಲಿ, ನಿಮ್ಮ ಹೊಸ BSNL ಸಿಮ್ ಕಾರ್ಡ್ ನಿಮ್ಮ ಮನೆಗೆ ತಲುಪುತ್ತದೆ.
ಇದನ್ನೂ ಓದಿ: BSNL ಕಡಿಮೆ ಬೆಲೆಯಲ್ಲಿ 395 ದಿನಗಳ ದೀರ್ಘಾವಧಿ ಯೋಜನೆಯನ್ನು ಪ್ರಾರಂಭಿಸಿದೆ.