SIM ಕಾರ್ಡ್ ಇಲ್ಲದೆ BSNL 4G ಸಿಗ್ನಲ್ ಸಾಮರ್ಥ್ಯವನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ.

BSNL 4G ಮಾಬೈಲ್ ಟವರ್ ಗಳು 15,000 ಸ್ಥಳಗಳಲ್ಲಿ ಲಭ್ಯವಿದೆ. BSNL ಸಿಮ್ ತೆಗೆದುಕೊಳ್ಳುವ ಮೊದಲು ನಿಮ್ಮ ಪ್ರದೇಶದಲ್ಲಿ BSNL ನೆಟ್‌ವರ್ಕ್ ಕೆಲಸ ಮಾಡುತ್ತದೆಯೇ ಹಾಗೂ ನಿಮ್ಮ ಪ್ರದೇಶದಲ್ಲಿ BSNL ನೆಟ್‌ವರ್ಕ್‌ನ ವೇಗ ಮತ್ತು ಕವರೇಜ್ ಹೇಗಿದೆ ಎಂಬುದನ್ನು ತಿಳಿಯಲು ಈ ಮಾಹಿತಿ ನಿಮಗೆ ಸಹಾಯಕವಾಗುತ್ತದೆ.

WhatsApp Group Join Now
Telegram Group Join Now

ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ :- ನಾವು ಇಂದು ಬದುಕುತ್ತಿರುವ ಡಿಜಿಟಲ್ ಜಗತ್ತಿನಲ್ಲಿ, ಮೊಬೈಲ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಕಳಪೆ ನೆಟ್ವರ್ಕ್ ಸಿಗ್ನಲ್ ನಮ್ಮ ಕೆಲಸವನ್ನು ಕಷ್ಟ ಮಾಡುತ್ತದೆ. ಬ್ಯಾಂಕಿಂಗ್‌ನಿಂದ ಶಾಪಿಂಗ್‌ವರೆಗೂ ಎಲ್ಲವನ್ನೂ ಮೊಬೈಲ್‌ನಲ್ಲಿ ಮಾಡುವ ಈ ಕಾಲದಲ್ಲಿ, ನೆಟ್ವರ್ಕ್ ಸಮಸ್ಯೆಯಿಂದ ನಮ್ಮ ದಿನನಿತ್ಯದ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಆದರೆ, ನಿಮ್ಮ ಮೊಬೈಲ್ ನೆಟ್‌ವರ್ಕ್‌ನ ಶಕ್ತಿಯನ್ನು ಸುಲಭವಾಗಿ ಪರಿಶೀಲಿಸುವ ವಿಧಾನಗಳಿವೆ.

ಮೊಬೈಲ್ ಅಪ್ಲಿಕೇಶನ್ ಸಹಾಯ ಬಳಸಿ :-

ನಿಮ್ಮ ಮೊಬೈಲ್ ನೆಟ್‌ವರ್ಕ್ ಸಿಗ್ನಲ್ ಬಗ್ಗೆ ತಿಳಿಯಲು ನೀವು ಸ್ಪೆಷಲ್ ಆಪ್‌ಗಳ ಸಹಾಯ ಪಡೆಯಬಹುದು. ಈ ಆಪ್‌ಗಳು ನಿಮ್ಮ ಪ್ರದೇಶದಲ್ಲಿ Jio, Airtel ಅಥವಾ Vodafone ನಂತಹ ನೆಟ್‌ವರ್ಕ್‌ಗಳ ಸಿಗ್ನಲ್ ಎಷ್ಟು ಬಲವಾಗಿದೆ ಎಂದು ತೋರಿಸುತ್ತವೆ. ನಿಮ್ಮ ಮೊಬೈಲ್ ನೆಟ್‌ವರ್ಕ್ ಸಿಗ್ನಲ್ ಎಷ್ಟು ಬಲವಾಗಿದೆ ಎಂದು ತಿಳಿಯಲು ನೀವು Opensignal ನಂತಹ ಆಪ್‌ ಬಳಸಬಹುದು. ಈ ಆಪ್‌ ನಿಮ್ಮ ಪ್ರದೇಶದಲ್ಲಿ ವಿವಿಧ ನೆಟ್‌ವರ್ಕ್‌ಗಳ ಸಿಗ್ನಲ್ ಬಗ್ಗೆ ಮಾಹಿತಿ ನೀಡುತ್ತವೆ.

ಈ Application ಸಹಾಯದಿಂದ ನೀವು ಸುಲಭವಾಗಿ ನೆಟ್ವರ್ಕ್ ಇರುವ ಜಾಗಗಳ ಮಾಹಿತಿ ಪಡೆಯಬಹುದು :- Opensignal ಅಪ್ಲಿಕೇಶನ್‌ನ ಸಹಾಯದಿಂದ ನೀವು ನಿಮ್ಮ ಪ್ರದೇಶದಲ್ಲಿ ಯಾವ ನೆಟ್‌ವರ್ಕ್‌ನ ವೇಗ ಹೆಚ್ಚು, ಯಾವ ನೆಟ್‌ವರ್ಕ್ ಎಲ್ಲೆಲ್ಲಿ ಲಭ್ಯ ಇದೆ ಎಂಬ ಮಾಹಿತಿ ತಿಳಿಯಬಹುದು. Opensignal ಅಪ್ಲಿಕೇಶನ್ ಬಳಸಿ ನೀವು Jio, Airtel, BSNL ಅಥವಾ VI ನಿಮ್ಮ ಸ್ಥಳದಲ್ಲಿ ಚೆನ್ನಾಗಿ ಸಿಗ್ನಲ್ ಬರುತ್ತದೆ ಅಂತ ನೀವು ತಿಳಿಯಬಹುದು. ನೀವು ಹೊಸ ಸಿಮ್ ಕಾರ್ಡ್ ತೆಗೆದುಕೊಳ್ಳುವ ಮುನ್ನ ಈ ಆಪ್ ಬಳಸಿ ನಿಮ್ಮ ಪ್ರದೇಶದಲ್ಲಿ ನೆಟ್‌ವರ್ಕ್ ಚೆನ್ನಾಗಿ ಕೆಲಸ ಮಾಡುತ್ತೆ ಅಂತ ತಿಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

BSNL 4G ನ ಸಿಗ್ನಲ್ ಮತ್ತು ವೇಗ ಹೇಗಿದೆ ಅಂತ ತಿಳಿಯಬೇಕಾ?

Opensignal ಅನ್ನ ಬಳಸಿ ನೀವು ಸುಲಭ ಹಂತಗಳನ್ನು ಅನುಸರಿಸಿ ನಿಮ್ಮ ಸ್ಥಳದಲ್ಲಿ BSNL ನ 4G ಸಿಗ್ನಲ್ ಎಷ್ಟು ಬಲವಾಗಿದೆ, ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗ ಎಷ್ಟಿದೆ ಅನ್ನೋದನ್ನ ನಕ್ಷೆಯಲ್ಲಿ ತೋರಿಸುತ್ತೆ. ನೀವು ಈ ಅಪ್ಲಿಕೇಶನ್ ಬಳಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಹಂತ 1: ಅಪ್ಲಿಕೇಶನ್ ಡೌನ್ಲೋಡ್ ಮಾಡಿ :- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Opensignal ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಹಾಗು ಇನ್ಸ್ಟಾಲ್ ಮಾಡಬೇಕು.
  • ಹಂತ 2: BSNL 4G ಸಿಗ್ನಲ್ ನಾ ಸಾಮರ್ಥ್ಯವನ್ನು ಪರಿಶೀಲನೆ ಮಾಡಲು ಅಪ್ಲಿಕೇಶನ್‌ನ ನಲ್ಲಿ ಕಾಣುವ ಪಿನ್ ಬಾಣದ ಮೇಲೆ ಕ್ಲಿಕ್ ಮಾಡಬೇಕು.
  • ಹಂತ 3: BSNL option ಆಯ್ಕೆ ಮಾಡಿ ಮತ್ತೆ ‘ಟೈಪ್’ ಕಾಲಮ್‌ನಿಂದ 4G ಆಯ್ಕೆಮಾಡಬೇಕು.
  • ಹಂತ 4: ನಿಮ್ಮ ಸ್ಥಳದಲ್ಲಿ BSNL ನ ಸಿಗ್ನಲ್ ಎಷ್ಟು ಬಲವಾಗಿದೆ ಅನ್ನೋದು ನಕ್ಷೆಯಲ್ಲಿ ಕಾಣಿಸುತ್ತೆ. ಹಸಿರು ಬಣ್ಣ ಸಿಗ್ನಲ್ ಚೆನ್ನಾಗಿದೆ ಅಂತ ಅರ್ಥ. ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನೂ ಸಹ ನೀವು ನೋಡಬಹುದು.

ಇದನ್ನೂ ಓದಿ: BSNL ನ ಈ ಪ್ಲಾನ್ ನಲ್ಲಿ ಒಂದು ತಿಂಗಳವರೆಗೆ ಉಚಿತವಾಗಿ ದಿನಕ್ಕೆ 2GB ಡೇಟಾ ಮತ್ತು Unlimited ಕರೆಗಳನ್ನು ನೀಡುತ್ತದೆ.

ಇದನ್ನೂ ಓದಿ: ನಿಮ್ಮ ಮೊಬೈಲ್‌ನಲ್ಲಿ BSNL 4G ಅನ್ನು ಆಕ್ಟಿವೇಟ್ ಮಾಡುವುದು ಹೇಗೆ? ಈ ಸೆಟ್ಟಿಂಗ್ ನಿಮಗೆ ಉತ್ತಮ ಇಂಟರ್ನೆಟ್ ಸ್ಪೀಡ್ ಮಾಡುತ್ತದೆ.

Sharing Is Caring:

Leave a Comment