ನೀವು ಬಳಸದ ಕ್ರೆಡಿಟ್ ಕಾರ್ಡ್‌ಗಳಿಂದ ವಾರ್ಷಿಕ ಶುಲ್ಕವನ್ನು ತಪ್ಪಿಸಲು ಬಯಸಿದರೆ, ಅವುಗಳನ್ನು ಮುಚ್ಚುವುದು ಒಂದು ಆಯ್ಕೆ. ಆದರೆ ಕ್ರೆಡಿಟ್ ಕಾರ್ಡ್ ಮುಚ್ಚುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಆರ್‌ಬಿಐ ನಿಯಮಗಳು ಮತ್ತು ನಿಮ್ಮ ಬ್ಯಾಂಕಿನ ನೀತಿಗಳನ್ನು ಅರ್ಥಮಾಡಿಕೊಂಡು ಮುಂದುವರಿಯುವುದು ಉತ್ತಮ. ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬದಲಾಯಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಕ್ರೆಡಿಟ್ ಕಾರ್ಡ್ ಮುಚ್ಚುವ ನಿಯಮ :- ಆರ್‌ಬಿಐ ನಿಯಮದ ಪ್ರಕಾರ, ಕ್ರೆಡಿಟ್ ಕಾರ್ಡ್ ಮುಚ್ಚುವ ವಿನಂತಿಯನ್ನು 7 ದಿನಗಳಲ್ಲಿ ಕಾರ್ಯಗತಗೊಳಿಸಬೇಕು. ಇಲ್ಲದಿದ್ದರೆ, ಬ್ಯಾಂಕ್ ದಿನಕ್ಕೆ 500 ರೂ. ದಂಡವನ್ನು ಪಾವತಿಸಬೇಕು. ಕ್ರೆಡಿಟ್ ಕಾರ್ಡ್ ಮುಚ್ಚುವ ಪ್ರಕ್ರಿಯೆ ಮತ್ತು ಆರ್‌ಬಿಐ ನಿಯಮಗಳು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗಬಹುದು. ನಿಮ್ಮ ಬ್ಯಾಂಕಿನ ವೆಬ್‌ಸೈಟ್ ಅನ್ನು ಪರಿಶೀಲಿಸುವುದು ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸುವುದು ಉತ್ತಮ.
ಕ್ರೆಡಿಟ್ ಕಾರ್ಡ್ ಮುಚ್ಚುವುದು ತುಂಬಾ ಸುಲಭ ಈ ಹಂತಗಳನ್ನು ಅನುಸರಿಸಿ :-
ಹಂತ 1:- ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚುವ ಮೊದಲು, ನಿಮ್ಮ ಖಾತೆಯಲ್ಲಿ ಯಾವುದೇ ಬಾಕಿ ಹಣ ಇಲ್ಲದಂತೆ ಎಲ್ಲಾ ಬಿಲ್‌ಗಳನ್ನು ಪಾವತಿಸುವುದು ಅತ್ಯಂತ ಮುಖ್ಯ. ಇದರರ್ಥ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಮಾಡಿದ ಎಲ್ಲಾ ಖರೀದಿಗಳಿಗೆ ಮತ್ತು ಶುಲ್ಕಗಳಿಗೆ ಸಂಬಂಧಿಸಿದ ಹಣವನ್ನು ಪೂರ್ತಿಯಾಗಿ ತೀರಿಸಬೇಕು. ಕೆಲವೇ ರೂಪಾಯಿ ಬಾಕಿ ಇದ್ದರೂ ಸಹ, ಕ್ರೆಡಿಟ್ ಕಾರ್ಡ್ ಕಂಪನಿಯು ನಿಮ್ಮ ಖಾತೆಯನ್ನು ಮುಚ್ಚಲು ನಿರಾಕರಿಸಬಹುದು.
ಹಂತ 2:- ನೀವು ಗಳಿಸಿರುವ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಪಾಯಿಂಟ್‌ಗಳು ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ ನೀವು ಪಡೆದ ಒಂದು ರೀತಿಯ ಬೋನಸ್ ಆಗಿರುತ್ತವೆ. ಈ ಪಾಯಿಂಟ್‌ಗಳನ್ನು ನೀವು ವಿವಿಧ ರೀತಿಯಲ್ಲಿ ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
STEP(ಹಂತ) 3:- ನಿಮ್ಮ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಸ್ವಯಂಚಾಲಿತ ಪಾವತಿಗಳನ್ನು ನಿಲ್ಲಿಸುವುದು ಬಹಳ ಮುಖ್ಯ. ಅನೇಕ ಜನರು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ವಿಮಾ ಪ್ರೀಮಿಯಂ, OTT ಪ್ಲಾಟ್‌ಫಾರ್ಮ್‌ಗಳ ಸದಸ್ಯತ್ವ ಶುಲ್ಕ ಅಥವಾ ಇತರ ಮಾಸಿಕ ಪಾವತಿಗಳಿಗೆ ಸಂಪರ್ಕಿಸಿರುತ್ತಾರೆ. ಕಾರ್ಡ್ ಮುಚ್ಚಿದ ನಂತರ ಈ ಪಾವತಿಗಳು ವಿಫಲವಾದರೆ, ನಿಮ್ಮ ವಿಮಾ ಪಾಲಿಸಿ ರದ್ದಾಗಬಹುದು ಅಥವಾ ನಿಮ್ಮ OTT ಸೇವೆ ನಿಂತು ಹೋಗಬಹುದು. ಆದ್ದರಿಂದ, ಕಾರ್ಡ್ ಮುಚ್ಚುವ ಮೊದಲು ನಿಮ್ಮ ಬ್ಯಾಂಕ್ ಅಥವಾ ಪಾವತಿ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ ಮತ್ತು ಈ ಸ್ವಯಂಚಾಲಿತ ಪಾವತಿಗಳನ್ನು ನಿಲ್ಲಿಸಿ.
ಹಂತ 4:- ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚಲು ನೀವು ನಿಮ್ಮ ಬ್ಯಾಂಕನ್ನು ಸಂಪರ್ಕಿಸಬೇಕು. ನೀವು ಅವರಿಗೆ ಕರೆ ಮಾಡಿ ಅಥವಾ ಬ್ರಾಂಚ್‌ಗೆ ಭೇಟಿ ನೀಡಿ ನಿಮ್ಮ ಕಾರ್ಡ್ ಮುಚ್ಚುವ ಬಗ್ಗೆ ತಿಳಿಸಬಹುದು. ಬ್ಯಾಂಕ್ ನಿಮ್ಮಿಂದ ಕಾರ್ಡ್ ಮುಚ್ಚಲು ಕಾರಣ ಕೇಳಬಹುದು. ನೀವು ಅವರಿಗೆ ಕಾರಣ ನೀಡಬೇಕು . ನಂತರ ಬ್ಯಾಂಕ್ ನಿಮ್ಮಿಂದ ಕೆಲವು ಮಾಹಿತಿಯನ್ನು ಕೇಳಬಹುದು. ಅದನ್ನು ನೀಡಿದ ನಂತರ, ಅವರು ನಿಮ್ಮ ಕಾರ್ಡ್ ಮುಚ್ಚುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಕೆಲವು ಬ್ಯಾಂಕುಗಳು ಕಾರ್ಡ್ ಅನ್ನು ಕತ್ತರಿಸಿ ಅದರ ಫೋಟೋವನ್ನು ಇಮೇಲ್ ಮಾಡಲು ಕೇಳಬಹುದು ಅಥವಾ ನಿಮಗೆ ಒಂದು ಇಮೇಲ್ ಕಳುಹಿಸಲು ಕೇಳಬಹುದು. ನೀವು ಅವರ ಸೂಚನೆಗಳನ್ನು ಅನುಸರಿಸಬೇಕು.
ಹಂತ 5:- ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚಿದ ನಂತರ, ಅದನ್ನು ಸರಳವಾಗಿ ಎಸೆಯುವುದು ಸುರಕ್ಷಿತವಲ್ಲ. ಏಕೆಂದರೆ ಕಾರ್ಡ್‌ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾರ್ಡ್ ಅನ್ನು ಸುರಕ್ಷಿತವಾಗಿ ನಾಶಪಡಿಸುವುದು ಬಹಳ ಮುಖ್ಯ.
ಇದನ್ನೂ ಓದಿ: ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ಯಾವ ಬ್ಯಾಂಕ್ ಎಷ್ಟು ಶುಲ್ಕ ವಿಧಿಸುತ್ತಿದೆ? ಈಗಲೇ ತಿಳಿಯಿರಿ