ರೈಲ್ವೆ ಇಲಾಖೆಯಲ್ಲಿ ಹಲವು ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು. ಹುದ್ದೆಗಳ ಬಗ್ಗೆ ಅಧಿಸೂಚನೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡಲು ಬಯಸುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲೇಖನವನ್ನು ಓದಿ.
ಉದ್ಯೋಗದ ಬಗ್ಗೆ ಮಾಹಿತಿ:- 7934 ಜೂನಿಯರ್ ಇಂಜಿನಿಯರ್ (ಜೆಇ) ಹುದ್ದೆಗಳಿಗೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಯು ನೇಮಕಾತಿ ಪ್ರಕಟಿಸಲಾಗಿದೆ. ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಜೆಇ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
ಅರ್ಹತಾ ಮಾನದಂಡಗಳು:
- ವಯಸ್ಸು: ಅಭ್ಯರ್ಥಿಗಳು ಜನವರಿ 1, 2025 ರಿಂದ 18 ರಿಂದ 36 ವರ್ಷ ವಯಸ್ಸಿನವರು ಆಗಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ ಅನ್ವಯಿಸುವ ವಯೋಮಿತಿ ಸಡಿಲಿಕೆಗಳು ಅನ್ವಯ ಆಗಲಿದೆ.
- ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಸಿವಿಲ್, ಟೆಲಿಕಾಮ್ಯುನಿಕೇಶನ್, ಮೆಕ್ಯಾನಿಕಲ್, ತಂತ್ರಜ್ಞಾನ ಮತ್ತು ಜೆಇ (ಐಟಿ) ಹಾಗೂ ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ನಿರ್ದಿಷ್ಟ ಅರ್ಹತೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಪದವಿಯನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
- ನೇಮಕಾತಿ ಮಂಡಳಿಯ (RRB) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡ ವೆಬ್ಸೈಟ್ ವಿಳಾಸ rrbapply.gov.in.
- ಸೂಕ್ತವಾದ ಜೂನಿಯರ್ ಇಂಜಿನಿಯರ್ (ಜೆಇ) ಹುದ್ದೆಗೆ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
- ಎಲ್ಲಾ ಮಾಹಿತಿಯನ್ನು ಒದಗಿಸಿ ಮತ್ತು ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ.
ಆಯ್ಕೆಯಾದ ನಂತರದ ವೇತನ:
- ಜೂನಿಯರ್ ಇಂಜಿನಿಯರ್ (ಜೆಇ): 6 ನೇ ವೇತನ ಪ್ರಕಾರ ರೂಪಾಯಿ 35,400.
- ಕೆಮಿಕಲ್ ಸೂಪರ್‌ವೈಸರ್ ಮತ್ತು ಇತರ ಹುದ್ದೆಗಳು: 7 ನೇ ವೇತನ ಪ್ರಕಾರ ರೂಪಾಯಿ 44,900.
ಅರ್ಜಿ ಶುಲ್ಕ:
- ಸಾಮಾನ್ಯ, ಓಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗ: 500 ರೂಪಾಯಿ ಇದರಲ್ಲಿ 400 ರೂ. ಸಿಬಿಟಿ ಸ್ಟೀಡ್ ಒನ್ ಪರೀಕ್ಷೆಯಲ್ಲಿ ಭಾಗವಹಿಸಿದ ನಂತರ ಮರುಪಾವತಿ ಮಾಡುವುದಿಲ್ಲ.
- ಮೀಸಲಾತಿ ವರ್ಗ, ಮಹಿಳಾ ಅಭ್ಯರ್ಥಿಗಳು ಮತ್ತು ಪಿಎಚ್‌ಡಿ ವರ್ಗ: ರೂಪಾಯಿ 250. ಈ ಹಣ ಸಂಪೂರ್ಣವಾಗಿ ಮರುಪಾವತವಾಗುತ್ತದೆ.
- ಫಾರ್ಮ್ ಸಂಪಾದನೆ ಶುಲ್ಕ: 250 ರೂಪಾಯಿ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ಆಯ್ಕೆ ಮಾಡಲಾಗುವುದು. ಈ ಪರೀಕ್ಷೆಯನ್ನು ಸಿಬಿಟಿ ಮೋಡ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷೆಯ ದಿನಾಂಕ:
- ತಿಳಿಸಲಾಗಿಲ್ಲ.
- ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ತಿಳಿಸುವ ಪ್ರವೇಶ ಪತ್ರವನ್ನು ನಂತರ ಬಿಡುಗಡೆ ಮಾಡಲಾಗುವುದು.
ಅರ್ಜಿ ಪ್ರಕ್ರಿಯೆ ಮತ್ತು ಮುಖ್ಯ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜುಲೈ 30, 2024.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 29, 2024.
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಆಗಸ್ಟ್ 29, 2024.
ಮುಖ್ಯ ಅಂಶಗಳು:
- ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ನಿಗದಿತ ದಿನಾಂಕವನ್ನು ಪಾಲಿಸಬೇಕು.
- ಅಪ್ಲಿಕೇಶನ್ ಲಿಂಕ್ ಸಕ್ರಿಯಗೊಂಡ ನಂತರ ಅಭ್ಯರ್ಥಿಗಳು ತ್ವರಿತವಾಗಿ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತದೆ.
Railway RRB JE Recruitment 2024 Short Notice ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪದವಿ ಪಾಸಾದವರಿಗೆ SBI ನಲ್ಲಿ ಖಾಲಿ ಇವೆ 1,040 ಹುದ್ದೆಗಳು ಅರ್ಜಿ ಆಹ್ವಾನ.