Infosys 2025 ರಲ್ಲಿ 15000 ರಿಂದ 20000 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ.

ಇನ್ಫೋಸಿಸ್ ಭಾರತದ ಉತ್ತಮ ಐಟಿ ಕಂಪನಿಗಳಲ್ಲಿ ಒಂದಾಗಿದೆ. ಇದರ ಸಂಸ್ಥಾಪಕರು ಕರ್ನಾಟಕದ ಹೆಮ್ಮೆಯ ನಾರಾಯಣ ಮೂರ್ತಿಗಳು. ಇನ್ಫೋಸಿಸ್ ನಲ್ಲಿ ಕೆಲಸ ಮಾಡಬೇಕು ಎಂಬುದು ಪ್ರತಿಯೊಬ್ಬ ಕನ್ನಡಿಗನಿಗೂ ಆಸೆ ಇರುತ್ತದೆ. ಅಂತಹವರಿಗೆ ಈಗ ಉದ್ಯೋಗ ಮಾಡಲು ಅವಕಾಶ ಇದೆ. ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಓದಿ.

WhatsApp Group Join Now
Telegram Group Join Now

ಮುಂಬರುವ ವರ್ಷದ ಪದವಿ ಪಾಸ್ ಅದ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ತಿಳಿಸಿದೆ :- ಭಾರತ ದೇಶದ ಎರಡನೇ ಅತಿ ದೊಡ್ಡ ಐಟಿ ಮೇಜರ್ ಕಂಪನಿ ಆಗಿರುವ ಇನ್ಫೋಸಿಸ್ ಮುಂಬರುವ ವರ್ಷ ಏನಾದರೆ 2025 ರ ಹಣಕಾಸು ವರ್ಷ ದಲ್ಲಿ 15,000 ದಿಂದ 20,000 ಫ್ರೆಶರ್‌ ಗಳ ನೇಮಕಾತಿ ಮಾಡುವ ಬಗ್ಗೆ ತಿಳಿಸಿದೆ. 2024-25 ರಲ್ಲಿ ಪದವಿ ಮುಗಿಸಿದವರಿಗೆ ಇದು ಅನ್ವಯ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕಂಪನಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಉದ್ಯೋಗ ಕರೆಯಲಿಲ್ಲ.

2023-24 ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ನ ನೇಮಕಾತಿ ಎಷ್ಟಿತ್ತು?: 2023-24 ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಕಂಪನಿಯ ಒಟ್ಟು 11,900 ಫ್ರೆಷರ್‌ಗಳನ್ನು ನೇಮಕ ಮಾಡಿಕೊಂಡಿತ್ತು ಇದು 2022-23 ರ ಸಂಖ್ಯೆಗಿಂತ ಬರೋಬ್ಬರಿ 50,000 ಕ್ಕೂ ಹೆಚ್ಚು ಫ್ರೆಶರ್‌ಗಳಿಗೆ ಉದ್ಯೋಗ ನೀಡಿತ್ತು. 

ಸಿಎಫ್‌ಒ ಜಯೇಶ್ ಅವರ ಹೇಳಿಕೆ ಏನು?

ಇನ್ಫೋಸಿಸ್ CFO ಜಯೇಶ್ ಅವರು ಜುಲೈ 18 ರಂದು ನಡೆದ ಮೊದಲ ತ್ರೈಮಾಸಿಕ ಸಭೆಯಲ್ಲಿ, ಕಳೆದ ಕೆಲವು ತ್ರೈಮಾಸಿಕಗಳಲ್ಲಿ ನೇಮಕಗೊಂಡಿರುವ ಮಾಹಿತಿಯನ್ನು ಖಚಿತಪಡಿಸಿದರು. ಕ್ಯಾಂಪಸ್ ಮತ್ತು ಕ್ಯಾಂಪಸ್ ಹೊರಗಿನಿಂದ ಫ್ರೆಶರ್‌ಗಳಿಗೆ ನೇಮಕಗೊಂಡಿದ್ದರೂ ಸಹ, ಈ ತ್ರೈಮಾಸಿಕದಲ್ಲಿ 2000 ಉದ್ಯೋಗಿಗಳ ನಿವ್ವಳ ಕುಸಿತವನ್ನು ಕಂಪನಿಯು ಕಂಡಿದೆ. ಇದು ಹಿಂದಿನ ತ್ರೈಮಾಸಿಕಕ್ಕಿಂತ ಕಡಿಮೆಯಾದರೂ, 85% ಉದ್ಯೋಗಿ ಬಳಕೆ ದರದೊಂದಿಗೆ, ಬೆಳವಣಿಗೆಯನ್ನು ಮತ್ತೆ ಕಾಣಲು ಪ್ರಾರಂಭಿಸಿದಾಗ ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಲು ಕಂಪನಿಯು ಗಮನಹರಿಸುತ್ತದೆ. ಈ ವರ್ಷ 15,000 ರಿಂದ 20,000 ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ಬೆಳವಣಿಗೆಯನ್ನು ಮರುಪಡೆಯುವ ಯೋಜನೆ ಕಂಪನಿ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಂಪನಿಯ ಬೆಳವಣಿಗೆಗೆ ಹೆಚ್ಚುವರಿ ನೇಮಕಾತಿ :- ಈ ವರ್ಷ ಕಂಪನಿಯ ಬೆಳವಣಿಗೆಯನ್ನು ಉತ್ತೇಜಿಸಲು 15,000 ರಿಂದ 20,000 ಹೊಸ ಉದ್ಯೋಗಿಗಳನ್ನು ನೇಮಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಇನ್ಫೋಸಿಸ್ CFO ಜಯೇಶ್ ಅವರು ತಿಳಿಸಿದರು.

ಟಿಸಿಎಸ್ ಸಹ 2024-25 ರ ಹಣಕಾಸು ವರ್ಷದಲ್ಲಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ:- ಟಾಟಾ ಕಾನ್ಸಲ್ಟೆನ್ಸಿ ಸರ್ವಿಸಸ್ (TCS) ಈ ಹಣಕಾಸು ವರ್ಷದಲ್ಲಿ 40,000 ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ, ಅದು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 11,000 ಕ್ಕೂ ಹೆಚ್ಚು ತರಬೇತಿಗಳನ್ನು ನೇಮಿಸಿಕೊಂಡಿದೆ. ಇದಕ್ಕೆ ವಿರುದ್ಧವಾಗಿ, ಇನ್ಫೋಸಿಸ್ ಸತತವಾಗಿ ಆರನೇ ತ್ರೈಮಾಸಿಕದಲ್ಲಿ 1,908 ಉದ್ಯೋಗಿಗಳನ್ನು ಕಳೆದುಕೊಂಡಿತು ಆದಾಗ್ಯೂ, TCS ಈ ಅವಧಿಯಲ್ಲಿ 5,452 ಹೊಸ ಉದ್ಯೋಗಗಳನ್ನು ಸೇರಿಸುವ ಮೂಲಕ ನಿವ್ವಳ ಉದ್ಯೋಗದ ಬೆಳವಣಿಗೆಯನ್ನು ಕಂಡಿದೆ, ಆದರೆ ಮಾರ್ಚ್ ಅಂತ್ಯದಲ್ಲಿ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 1,759 ರಷ್ಟು ಕುಸಿತವಾಗಿದೆ. HCL Tech 2025 ರಲ್ಲಿ 8,080 ಉದ್ಯೋಗಿಗಳನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಶೀಘ್ರದಲ್ಲೇ 400 ಪಶು ವೈದ್ಯರ ನೇಮಕ – ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಇದನ್ನೂ ಓದಿ: ರಾಜ್ಯದಲ್ಲಿ ಬರೋಬ್ಬರಿ 750 ಭೂ ಮಾಪಕರ ಹುದ್ದೆಗಳ ನೇಮಕಾತಿ

Sharing Is Caring:

Leave a Comment