ಕೇಂದ್ರ ಬಜೆಟ್‌ನಲ್ಲಿ 1 ಕೋಟಿ ಯುವಕರಿಗೆ ಪ್ರತಿ ತಿಂಗಳು 5000 ರೂಪಾಯಿ ಭತ್ಯೆ ನೀಡುವುದಾಗಿ ಘೋಷಣೆ ಮಾಡಲಾಗಿದೆ.

2024 ರ ಬಜೆಟ್‌ನಲ್ಲಿ, ಯುವಕರಿಗೆ ದೇಶದ ಉನ್ನತ ಕಂಪನಿಗಳಲ್ಲಿ ತರಬೇತಿ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು, ಇದಕ್ಕಾಗಿ ಈ ಯುವಕರಿಗೆ ಪ್ರತಿ ತಿಂಗಳು 5000 ರೂ ಮಾಸಿಕ ಭತ್ಯೆ ನೀಡಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಇದು ಈ ಬಾರಿಯ ಬಜೆಟ್ ಮುಖ್ಯ ಘೋಷಣೆ ಆಗಿದೆ.

WhatsApp Group Join Now
Telegram Group Join Now

12 ತಿಂಗಳ ತರಬೇತಿ :- 2024 ರ ಬಜೆಟ್ ಕೇಂದ್ರದಲ್ಲಿ ಯುವಕರಿಗೆ ದೇಶದ ಪ್ರಮುಖ ಕಂಪನಿಗಳಲ್ಲಿ 12 ತಿಂಗಳ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ’ಯನ್ನು(Internship Scheme) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ಈ ಯೋಜನೆಯಡಿ ಆಯ್ಕೆಯಾದ ಯುವ ಪ್ರತಿಭೆಗಳಿಗೆ ತಿಂಗಳಿಗೆ 5,000 ರೂಪಾಯಿ ಭತ್ಯೆ ನೀಡಲಾಗುವುದು. ಯುವಕರು ಈ ಯೋಜನೆಡಿ ಒಟ್ಟು 1 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. 

ಕೆಲಸದ ಅನುಭವ ದೊರೆಯಲಿದೆ :-

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯು(Internship Scheme) ಯುವ ಪ್ರತಿಭೆಗಳಿಗೆ ದೇಶದ ಪ್ರಮುಖ ಕಂಪನಿಗಳಲ್ಲಿ 12 ತಿಂಗಳ ಕಾಲಾವಧಿಯ ಅಮೂಲ್ಯವಾದ ಕೆಲಸದ ಅನುಭವವನ್ನು ನೀಡುತ್ತದೆ. ಈ ಯೋಜನೆಯಡಿ ಆಯ್ಕೆಯಾದ ಭಾಗವಹಿಸುವವರು ತಮ್ಮ ಇಂಟರ್ನ್‌ಶಿಪ್ ವೆಚ್ಚದ ಶೇಕಡಾ 10ರಷ್ಟು ಭರಿಸಬೇಕು. ಉಳಿದ ಶೇಕಡಾ 90ರಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಯುವ ಪ್ರತಿಭೆಗಳಿಗೆ ಪ್ರತಿ ತಿಂಗಳಿಗೆ 5,000 ರೂಪಾಯಿ ಗೌರವಧನವೂ ಇರುತ್ತದೆ. ಯಾವುದೇ ಭಾರತೀಯ ಯುವಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಮುಂದಿನ ಐದು ವರ್ಷಗಳಲ್ಲಿ ಒಟ್ಟು 1 ಕೋಟಿ ಯುವಕರಿಗೆ ಈ ಯೋಜನೆಯ ಲಾಭ ದೊರೆಯುವ ನಿರೀಕ್ಷೆಯಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯ ಉಪಯೋಗ ಏನೂ?

  • ದೇಶದ ಅಗ್ರ ಕಂಪನಿಗಳಲ್ಲಿ ಉದ್ಯೋಗ ತರಬೇತಿ: ಯುವಕರಿಗೆ ದೇಶದ ಪ್ರಮುಖ ಕಂಪನಿಗಳಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆಯನ್ನು ಪ್ರಕಟಿಸಲಾಗಿದೆ. ಈ ಯೋಜನೆಯನ್ನು ಆಯ್ಕೆಯಾದ ಯುವಕರಿಗೆ ತಿಂಗಳಿಗೆ 5,000 ರೂಪಾಯಿ ಭತ್ಯೆ ನೀಡಲಾಗುವುದು.
  • ಉದ್ಯಮಶೀಲತೆಗೆ ಉತ್ತೇಜನ: ಯುವ ಉದ್ಯಮಿಗಳಿಗೆ ಹಣಕಾಸು ಒದಗಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಡಿ, ಯುವ ಉದ್ಯಮಿಗಳಿಗೆ ಸಾಲ ಮತ್ತು ಸಬ್ಸಿಡಿಗಳನ್ನು ಒದಗಿಸಲಾಗಿದೆ.
  • ಕೌಶಲ್ಯಾಭಿವೃದ್ಧಿಗೆ ಗಮನ: ಯುವಕರಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮಗಳು, ಯುವಕರಿಗೆ ಉಚಿತ ತರಬೇತಿ ಮತ್ತು ಶಿಕ್ಷಣ ನೀಡಲಾಗುವುದು.

ಇದನ್ನೂ ಓದಿ: ಈ ಕಾರ್ಡ್ ಇದ್ರೆ 2 ಲಕ್ಷ ರೂಪಾಯಿಗಳ ಉಚಿತ ವಿಮೆ ಸೌಲಭ್ಯ; ಯಾರಿಗೆ ಸಿಗಲಿದೆ ಇದರ ಪ್ರಯೋಜನ.

ತೆರಿಗೆಯಲ್ಲಿ ಬದಲಾವಣೆ :- 

ಈ ಬಾರಿಯ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆ ಸ್ಲ್ಯಾಬ್‌ನಲ್ಲಿ ಪ್ರಮುಖ ಬದಲಾವಣೆಯ ಬಗ್ಗೆ ತಿಳಿಸಿದ್ದಾರೆ. ಇದರ ಪ್ರಕಾರ 15 ಲಕ್ಷ ರೂಪಾಯಿ ಆದಾಯ ಇದ್ದವರು ಶೇಕಡಾ 20% ತೆರಿಗೆಯನ್ನು ಪಾವತಿ ಮಾಡಬೇಕು .ಇದಕ್ಕೂ ಹೆಚ್ಚಿನ ಆದಾಯ ಇದ್ದರೆ ಶೇಕಡಾ 30% ತೆರಿಗೆ ಪಾವತಿ ಮಾಡಬೇಕು.

ಯುವಕರಿಗೆ ಉನ್ನತ ಶಿಕ್ಷಣಕ್ಕೆ ಸಾಲ :- ದೇಶದ ಯುವ ಜನತೆಗೆ ಉನ್ನತ ಶಿಕ್ಷಣ ಪಡೆಯಲು 10 ಲಕ್ಷ ರೂಪಾಯಿಗಳ ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ ಇದರಲ್ಲಿ ಯುವಕರು ಉನ್ನತ ಶಿಕ್ಷಣ ಪಡೆಯಲು ಕೇವಲ 3% ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಇದು ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸಚಿವ ಅತ್ಯುನ್ನತ ಕೊಡುಗೆ ಆಗಿದೆ. ಒಟ್ಟಾರೆಯಾಗಿ ಈ ಬಾರಿಯ ಬಜೆಟ್ ನಲ್ಲಿ ಯುವ ಜನತೆಯ ಭವಿಷ್ಯವನ್ನು ಆಲೋಚಿಸಿ ಬಜೆಟ್ ನೀಡಿದ್ದಾರೆ.

ಇದನ್ನೂ ಓದಿ: ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂಪಾಯಿಯ ವರೆಗೆ ಸಾಲ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್.

Sharing Is Caring:

Leave a Comment