ಈಗ ಎಲ್ಲ ಪೆಟ್ರೋಲ್ ಗಡಿಗಳಿಗಿಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಜಾಸ್ತಿ ಆಗುತ್ತಿದೆ. ಎಲೆಕ್ಟ್ರಿಕ್ ವಾಹನದ ಬೇಡಿಕೆ ಹೆಚ್ಚಾದಂತೆ ಬೈಕ್ ಕಂಪನಿಗಳು ಹೊಸ ಹೊಸ ಬೈಕ್ ಬಿಡುಗಡೆ ಮಾಡುತ್ತಾರೆ. ಈಗಾಗಲೇ ಹಲವು ಕಂಪನಿಗಳ ಎಲೆಕ್ಟ್ರಿಕ್ ಬೈಕ್ ಹಾಗೂ ಕಾರ್ ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಅದರ ಜೊತೆಗೆ ಕೇವಲ 55 ಸಾವಿರ ರೂಪಾಯಿಗೆ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಆಗಿದೆ ಎಂದರೆ ನೀವು ನಂಬಲೇಬೇಕು. ಇಷ್ಟು ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಂಪನಿ ಯಾವುದು ಹಾಗೂ ಇದರ ವಿಶೇಷತೆಗಳು ಏನೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
55 ಸಾವಿರ ರೂಪಾಯಿಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಂಪನಿ ಯಾವುದು?: ಎಲೆಕ್ಟ್ರಿಕ್ ಸ್ಕೂಟರ್ ಎಂದಾಕ್ಷಣ ನಾವು ಹೆಚ್ಚು ಹಣ ಇರುತ್ತದೆ ಎಂದು ಭಾವಿಸುತ್ತೇವೆ. ಆದರೆ ಭಾರತದ ಸ್ಥಳೀಯ ಕಂಪನಿಗಳಿಗಲ್ಲಿ ಒಂದಾದ iVOOMi ಈಗ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟಿ ಬಿಡುಗಡೆ ಮಾಡಿದೆ. ಇದು ಸ್ಥಳೀಯವಾಗಿ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸುವ ಕಂಪನಿ ಆಗಿದೇ. ಈ ಕಂಪನಿಯಿಂದ ಬಿಡುಗಡೆ ಆಗುತ್ತಿರುವ ಎರಡನೇ ಸ್ಕೂಟರ್ ಇದಾಗಿದೆ. ಇದಕ್ಕೂ ಮೊದಲು iVOOMi ಅವರು ಒಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದಾಗ ಇದನ್ನು 10 ಸಾವಿರ ಜನರು ಖರೀದಿಸಿದ್ದರು. ಈಗ ಮತ್ತೊಂದು ಸ್ಕೂಟರ್ ಬಿಡುಗಡೆ ಮಾಡಿದೆ. ಅದು ಯಾವುದೆಂದರೆ S1 Lite. ಆರಂಭಿಕ ಬೆಲೆ ಕೇವಲ 55 ಸಾವಿರ ಆಗಿದ್ದು ಈ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 85KM Range ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
S1 Lite ವಿಶೇಷತೆಗಳು ಏನೇನು?
iVOOMi ಕಂಪನಿಯು S1 Lite ಸ್ಕೂಟರ್ ಬಿಡುಗಡೆ ಮಾಡಿ ಇದು ಹಲವು ವಿಶೇಷತೆಗಳನ್ನು ಹೊಂದಿದೆ. ಗ್ರಾಹಕರ ಬೇಡಿಕೆ ಮತ್ತು ಅವಶ್ಯಕತೆಗೆ ತಕ್ಕಂತೆ ಈ ಸ್ಕೂಟರ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದೆ. ಇದರ ವಿಶೇಷತೆಗಳು ಏನೆಂದರೆ :-
1) ಬ್ಯಾಟರಿ :- S1 Lite ಸ್ಕೂಟರ್ ಬ್ಯಾಟರಿಯ ವಿಶೇಷತೆ ಏನೆಂದರೆ ನೀವು ಇದರಲ್ಲಿರುವ ಬ್ಯಾಟರಿ ತೆಗೆದು ಮನೆಯಲ್ಲಿಯೇ ಚಾರ್ಜ್ ಮಾಡಿಕೊಂಡು ಮತ್ತೆ ಅಳವಡಿಸಿಕೊಂಡು ಸ್ಕೂಟರ್ ಓಡಿಸಬಹುದಾಗಿದೆ. ಈ ಬೈಕ್ ಎರಡು ಬ್ಯಾಟರಿ ರೂಪಾಂತರಗಳೊಂದಿಗೆ ಬಿಡುಗಡೆ ಆಗಲಿದೆ. ಗ್ರ್ಯಾಫೀನ್ ಐಯಾನ್ ಬ್ಯಾಟರಿ ಬೆಲೆಯು 54,999 ರೂಪಾಯಿ ಆಗಿದೆ. ಲಿಥಿಯಂ ಐಯಾನ್ ಬ್ಯಾಟರಿ ಬೆಲೆಯು 64,999 ರೂಪಾಯಿ ಆಗಿದೆ. ಬ್ಯಾಟರಿ IP67 ರೇಟಿಂಗ್ ಹೊಂದಿದೆ.
2) ಬಣ್ಣಗಳು :- ಸಾಮಾನ್ಯವಾಗಿ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಎರಡು ಅಥವಾ ಮೂರು ಬಣ್ಣಗಳ ಆಪ್ಷನ್ ಇರುತ್ತದೆ. ಆದರೆ S1 Lite ಸ್ಕೂಟರ್ ಬರೋಬ್ಬರಿ 6 ಬಣ್ಣಗಳಲ್ಲಿ ಸಿಗುತ್ತವೆ. ನೀವು ನಿಮ್ಮ ಆಯ್ಕೆಗೆ ತಕ್ಕಂತೆ ಯಾವ ಬಣ್ಣದ ಬೈಕ್ ಬೇಕಾದರೂ ಖರೀದಿಸಬಹುದು. ಬೂದು, ಬಿಳಿ, ಕೆಂಪು, ನವಿಲು ನೀಲಿ ಬಣ್ಣ, ಅಚ್ಚ ಕೆಂಪು ಮತ್ತು ನೀಲಿ ಬಣ್ಣಗಳು ಇವೆ.
3) ಇತರ ವಿಶೇಷತೆಗಳು :- ಈ ಬೈಕ್ ನಾ ಗರಿಷ್ಠ ವೇಗ 75 ಮತ್ತು 85Kmph. ಇದರ ವ್ಯಾಪ್ತಿಯು 120 ಕಿಲೋಮೀಟರ್ ಹಾಗೂ S1 Lite ಸ್ಕೂಟರ್ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 18 ಲೀಟರ್ ಬೂಟ್ ಸ್ಪೇಸ್ ಒಳಗೊಂಡಿದೆ. ಕೇವಲ 1,499 ರೂಪಾಯಿಗಳಿಂದ ಇಎಂಐ ಆರಂಭ ಆಗುತ್ತದೆ. ಸ್ಕೂಟರ್ ನ ಚಕ್ರಗಳು 10 ಮತ್ತು 12 ಇಂಚು ಇವೆ. ಈ ಸ್ಕೂಟರ್ ಎಲ್ಇಡಿ ಡಿಸ್ಪ್ಲೇ ಸ್ಪೀಡೋಮೀಟರ್ ಒಳಗೊಂಡಿದೆ.
ಇದನ್ನೂ ಓದಿ: ಉದ್ಯಮ ಶುರು ಮಾಡಲು ಸರ್ಕಾರದಿಂದ ಸಿಗಲಿದೆ ಸಾಲ ಸೌಲಭ್ಯ; 9 ಲಕ್ಷದವರೆಗೆ ಸಿಗುತ್ತೆ ಹಣಕಾಸಿನ ನೆರವು
ಇದನ್ನೂ ಓದಿ: ತಿಂಗಳಿಗೆ 1,000 ರೂಪಾಯಿ ಹೂಡಿಕೆ ಮಾಡಿ 8,24,641 ರೂಪಾಯಿ ಗಳಿಸುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯಿರಿ.