ರಿಲಯನ್ಸ್ ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಕಂಪನೀ ಆಗಿದ್ದು, 2016 ರಲ್ಲಿ ಭಾರತೀಯ ಟೆಲಿಕಾಂ ಉದ್ಯಮದಲ್ಲಿ ಕ್ರಾಂತಿ ಉಂಟುಮಾಡಿತ್ತು. ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ 4G ಡೇಟಾ ಮತ್ತು ಧ್ವನಿ ಕರೆಗಳನ್ನು ಒದಗಿಸುವ ಮೂಲಕ, ಜಿಯೋ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆಯನ್ನು ಇನ್ನಷ್ಟು ಹೆಚ್ಚು ಮಾಡಲು ಮತ್ತು ದೇಶದ ಡಿಜಿಟಲ್ ಭೂದೃಶ್ಯವನ್ನು ತ್ವರಿತವಾಗಿ ಪರಿವರ್ತಿಸಲು ಸಹಾಯ ಆಗುವಂತೆ ಮಾಡಿತು. ಈಗ ಜಿಯೋ ತನ್ನ ದರವನ್ನು ಹೆಚ್ಚಿಸಿ ಗ್ರಾಹಕರಿಗೆ ಬೇಸರ ಉಂಟು ಮಾಡಿತು. ಆದರೆ ಜಿಯೋ ಕಡಿಮೆ ಬೆಲೆಯಲ್ಲಿ ಸಹ ಉತ್ತಮ ಸೇವೆಯನ್ನು ನೀಡುತ್ತಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.
ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ನೀಡುತ್ತಿದೆ :- ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರ ಆರ್ಥಿಕ ಒತ್ತಡ ಕಡಿಮೆ ಮಾಡುವ ಸಲುವಾಗಿ, ಕಂಪನಿಯು ಎರಡು ಹೊಸ ಅಗ್ಗದ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಡೇಟಾ ಮತ್ತು ಕರೆಗಳ ಗ್ರಾಹಕ ಉತ್ತಮ ಆಯ್ಕೆಯಾಗಿದೆ ಮತ್ತು ದೀರ್ಘಾವಧಿಯ ಮಾನ್ಯತೆಯನ್ನು ಹೊಂದಿದೆ. ರಿಲಯನ್ಸ್ ಜಿಯೋ ತನ್ನ ಕೆಲವು ರಿಚಾರ್ಜ್ ಯೋಜನೆಗಳ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದರೂ, ಕಂಪನಿಯು ಈಗ ಕೈಗೆಟುಕುವ ಬೆಲೆಯಲ್ಲಿ ಎರಡು ಹೊಸ ಯೋಜನೆಗಳನ್ನು ಪರಿಚಯಿಸಿದೆ.
ಜಿಯೋದ ರೂ 189 ಯೋಜನೆ ಬಗ್ಗೆ ಮಾಹಿತಿ :-
ಜಿಯೋ ತನ್ನ ಮೌಲ್ಯ ವಿಭಾಗದ ಅಡಿಯಲ್ಲಿ ಎರಡು ಹೊಸ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ ಅದರಲ್ಲಿ 189 ರೂಪಾಯಿಯ ಯೋಜನೆಯು ಒಂದಾಗಿದೆ. ಈ ಯೋಜನೆಯು ಇತ್ತು 28 ದಿನಗಳ ಮಾನ್ಯತೆಯನ್ನು ಹೊಂದಿದೆ ಮತ್ತು ಹಲವು ಪ್ರಯೋಜಗಳನ್ನು ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಾಗಾದರೆ ಈ ಪ್ಲಾನ್ ನಲ್ಲಿ ಸಿಗುವ ಪ್ರಯೋಜನಗಳು :-
- ಅನಿಯಮಿತ ಕರೆಗಳು: ಅನಿಯಮಿತ ಕರೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬಳಕೆದಾರರಿಗೆ ಯಾವುದೇ ನೆಟ್‌ವರ್ಕ್‌ಗೆ 28 ದಿನಗಳ ಕಾಲ ಅನಿಯಮಿತ ಕರೆಗಳನ್ನು ಉಚಿತವಾಗಿ ಮಾಡಬಹುದು.
- SMS: ಈ ಪ್ಲಾನ್ ನಲ್ಲಿ 28 ದಿನಗಳ ಕಾಲ 300 SMS. ಡೇಟಾ: ಇನ್ನು ಈಗ ಎಲ್ಲರೂ ಡೇಟಾ ಏಷ್ಟು ಸಿಗುತ್ತದೆ ಎಂಬುದರ ಬಗ್ಗೆ ಯೋಚನೆ ಮಾಡುತ್ತಾರೆ. ಈ ಯೋಜನೆಯಡಿಯಲ್ಲಿ ನೀವು ಕೇವಲ 2GB ಡೇಟಾವನ್ನು ಪಡೆಯುತ್ತೀರಿ.
- ಜಿಯೋ OTT ಚಂದಾದಾರಿಕೆಗಳು: ಈ ರಿಚಾರ್ಜ್ ಪ್ಲಾನ್ ನಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಉಚಿತ ಚಂದಾದಾರಿಕೆ ಇದೆ.
ಇದನ್ನೂ ಓದಿ: BSNL ಗೆ ಪೋರ್ಟ್ ಮಾಡುವುದು ಹೇಗೆ? ಇಲ್ಲಿದೆ ಮುಖ್ಯ ಮಾಹಿತಿ
ಜಿಯೋದ 479 ರೂಪಾಯಿ ಯೋಜನೆ ಬಗ್ಗೆ ಮಾಹಿತಿ
ಇದು ದೀರ್ಘಾವಧಿಯ ಮಾನ್ಯತೆ ಮತ್ತು ಉತ್ತಮ ಮೌಲ್ಯವನ್ನು ಬಯಸುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ:
- ದೀರ್ಘಾವಧಿಯ ಮಾನ್ಯತೆ: ಈ ಪ್ಲಾನ್ ಇತ್ತು 84 ದಿನಗಳ ಮಾನ್ಯತಾ ಅವಧಿ ಹೊಂದಿದೆ. ಇದು ಹೆಚ್ಚು ರಿಚಾರ್ಜ್‌ಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಹಣವನ್ನು ಉಳಿಸುತ್ತದೆ.
- ಅನಿಯಮಿತ ಕರೆಗಳು: ಈ ಪ್ಲಾನ್ ನಲ್ಲಿ ಯಾವುದೇ ನೆಟ್‌ವರ್ಕ್‌ಗೆ 84 ಅನಿಯಮಿತ ಕರೆಗಳ ಮಾಡಬಹುದು.
- SMS: ಈ ಪ್ಲಾನ್ ನಲ್ಲಿ 84 ದಿನಗಳ ಮಾನ್ಯತಾ ಅವಧಿಗೆ 1000 SMS ಕಳಿಸುವ ಅವಕಾಶ ಇರುತ್ತದೆ.
- ಡೇಟಾ: ಈ ಯೋಜನೆಯಲ್ಲಿ 84 ದಿನಗಳವರೆಗೆ 6GB ಡೇಟಾವನ್ನು ನೀಡುತ್ತದೆ.
- ಜಿಯೋ OTT ಚಂದಾದಾರಿಕೆಗಳು: ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಉಚಿತ ಚಂದಾದಾರಿಕೆ.
ಇದನ್ನೂ ಓದಿ: ಸ್ವಂತ ಉದ್ಯೋಗ ಮಾಡುವವರಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಒಂದು ಲಕ್ಷ ರೂಪಾಯಿ ಸಾಲ ಸೌಲಭ್ಯ.