ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗಾಗಿಯೇ ಮತ್ತೆ ಹೊಸ Recharge plan ಬಿಡುಗಡೆ ಮಾಡಿದೆ ಇದರಲ್ಲಿ ನೀವು ಕಡಿಮೆ ಮೊತ್ತದ ಹಣವನ್ನು ಪಾವತಿಸಿ ಉತ್ತಮ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಜಿಯೋ ಮೊದಲಿನಿಂದಲೂ ಗ್ರಾಹಕರಿಗೆ ಅನುಕೂಲ ಆಗುವಂತೆ ಯೋಜನೆಗಳನ್ನು ನೀಡುತ್ತಿದ್ದು, ಈಗ ಮತ್ತೆ ಗ್ರಾಹಕರಿಗೆ ಆರ್ಥಿಕ ಹೊರೆ ಆಗದೆ ಇರುವಂತೆ ಮತ್ತೆ ಒಂದು ಪ್ಲಾನ್ ನೀಡಿದೆ. ಈ ಸ್ಪೆಷಲ್ ರೀಚಾರ್ಜ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ವರ್ಷವಿಡೀ ರೀಚಾರ್ಜ್ ಮಾಡುವ ಅಗತ್ಯ ಇಲ್ಲ:- ಈಗ ರಿಲಾಯನ್ಸ್ ಗ್ರಾಹಕರಿಗೆ ಉತ್ತಮ ರೀತಿಯ ಯೋಜನೆ ನೀಡುತ್ತಿದ್ದು ಈ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡರೆ ನೀವು ಒಂದು ವರ್ಷಗಳ ಕಾಲ ಮತ್ತೆ ರೀಚಾರ್ಜ್ ಮಾಡಬೇಕಾದ ಅಗತ್ಯ ಇರುವುದಿಲ್ಲ. ನೀವು ಒಂದು ವರ್ಷಕ್ಕೆ ಒಮ್ಮೆ ರೀಚಾರ್ಜ್ ಮಾಡಿದರೆ ನೀವು ಇಡೀ ವರ್ಷವೂ ಕರೆಗಳನ್ನು ಹಾಗೂ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತದೆ. ಒಂದು ವರ್ಷದ ಅವಧಿಕೆಗೆ ಗ್ರಾಹಕರಿಗೆ ಎರಡು ಉತ್ತಮ ಪ್ಲಾನ್ ಗಳನ್ನು ಜಿಯೋ ನೀಡುತ್ತಿದ್ದು. ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
3599 ರೂಪಾಯಿ ರೀಚಾರ್ಜ್ ಪ್ಲಾನ್ :-
ಜಿಯೋ ತನ್ನ ಗ್ರಾಹಕರಿಗಾಗಿ 3599 ರೂಪಾಯಿಗಳ ವಿಶೇಷ ಪ್ಲಾನ್ ಅನ್ನು ನೀಡುತ್ತಿದೆ. ನಿಮಗೆ ಈ ರೀಚಾರ್ಜ್ ಪ್ಲಾನ್ 3599 ರೂಪಾಯಿಗೆ ಒಂದು ವರ್ಷದ ಅವಧಿಗೆ ಮಾನ್ಯ ಆಗಿರುತ್ತದೆ. ಇದರ ಜೊತೆಗೆ ನೀವು ವರ್ಷವಿಡೀ ಇಂಟರ್ನೆಟ್ ಹಾಗೂ ಉಚಿತ ಅನಿಯಮಿತ ಕರೆಗಳು ಹಾಗೂ ಉಚಿತ SMS ಸೇವಗಳನ್ನು ಪಡೆಯಬಹುದು. ಈ ರೀಚಾರ್ಜ್ ಪ್ಲಾನ್ ನಲ್ಲಿ ನೀವು ಒಮ್ಮೆ recahrge ಮಾಡುವ ಮೊತ್ತವು ಹೆಚ್ಚು ಅನ್ನಿಸಿದರೂ ತಿಂಗಳಿಗೆ ನಿಮಗೆ ಕೇವಲ 276 ರೂಪಾಯಿ ಬಳಸಿದಂತೆ ಆಗುತ್ತದೆ. ನೀವು ಈ ಪ್ಲಾನ್ ನಲ್ಲಿ ಒಟ್ಟು 912 GB ಉಚಿತ ಡೇಟಾ ಪಡೆಯಬಹುದು. ಅಂದರೆ ದಿನಕ್ಕೆ ನಿಮಗೆ 2.5GB ಡೇಟಾ ಉಚಿತವಾಗಿ ಸಿಗುತ್ತದೆ. ಇದರ ಜೊತೆಗೆ ನಿಮಗೆ ಜಿಯೋ ಸಿನಿಮಾ ಹಾಗೂ ಜಿಯೋ ಟೀವಿ ಯನ್ನು ಉಚಿತವಾಗಿ ಚಂದಾದಾರರು ಆಗಬಹುದು. ಜೊತೆಗೆ ಜಿಯೋ ಕ್ಲಾಡ್ ಸಹ ಉಚಿತ ಚಂದಾದಾರಿಕೆ ಸಿಗುತ್ತದೆ.
ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ Unlimited Call ಹಾಗೂ ಇಂಟರ್ನೆಟ್; ಹೊಸ ಯೋಜನೆಯನ್ನು ಪರಿಚಯಿಸಿದ ಜಿಯೋ
3999 ರೂಪಾಯಿ ರೀಚಾರ್ಜ್ ಪ್ಲಾನ್ :-
ಗ್ರಾಹಕರಿಗೆ ಇನ್ನೊಂದು ವಾರ್ಷಿಕ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದರಲ್ಲಿಯೂ ನೀವು ಒಂದು ವರ್ಷಗಳ ವರೆಗೆ Recharge ಮಾಡಿಸಬೇಕು ಎಂಬ ತಲೆಬಿಸಿ ಇಲ್ಲ. ಈ ಪ್ಲಾನ್ ಸ್ವಲ್ಪ ಅಗ್ಗವಾದರು ಅದರಂತೆ ಹೆಚ್ಚಿನ ಪ್ರಯೋಜನವನ್ನು ಸಹ ಪಡೆಯಬಹುದಾಗಿದೆ. 365 ದಿನಗಳ ಸಿಮ್ ಮಾನ್ಯತೆಯ ಜೊತೆಗೆ ನೀವು ಈ ರೀಚಾರ್ಜ್ ಪ್ಲಾನ್ ನಲ್ಲಿ ವರ್ಷಕ್ಕೆ 912.5 GB ಉಚಿತ ಡೇಟಾವನ್ನು ಪಡೆಯಬಹುದಾಗಿದೆ. ಇದು ನಿಮಗೆ ದಿನಕ್ಕೆ 2.5Gb internet ಬಳಸುವ ಪ್ರಯೋಜನವನ್ನು ನೀಡುತ್ತದೆ. ಇದರ ಜೊತೆಗೆ ನೀವು ಒಂದು ದಿನಕ್ಕೆ 100SMS ಉಚಿತವಾಗಿ ಕಳುಹಿಸಲು ಸಾಧ್ಯ. ಇದರಲ್ಲಿಯೂ ನೀವು ಉಚಿತವಾಗಿ ಜಿಯೋ ಸಿನಿಮಾ ಹಾಗೂ ಜಿಯೋ ಟಿವಿ, FanCode ಹಾಗೂ ಜಿಯೋ ಕ್ಲಾಡ್ ಉಚಿತ ಚಂದಾದಾರರು ಆಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನೀವು ಯಾವುದೇ ಮೊಬೈಲ್ ಶಾಪ್ ಅಥವಾ ಮೊಬೈಲ್ ರೀಚಾರ್ಜ್ ಅಪ್ಲಿಕೇಶನ್ ಮೂಲಕ ಈ ಎರಡು ಪ್ಲಾನ್ ರೀಚಾರ್ಜ್ ಮಾಡಲು ಸಾಧ್ಯವಿದೆ.
ಇದನ್ನೂ ಓದಿ: ಜಿಯೋದ 98 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಯಲ್ಲಿ; Unlimited Call ಜೊತೆ ಸಾಕಷ್ಟು ಡೇಟಾ ಪಡೆಯಿರಿ