ಕಾರ್ಮಿಕ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಸಹಾಯಧನ ಸಿಗಲಿದೆ. ನೋಂದಾಯಿತ ಕಾರ್ಮಿಕ ವರ್ಗಕ್ಕೆ ಸೇರಿದ ಮಕ್ಕಳು ಈ ಸಹಾಯಧನವನ್ನು ಪಡೆಯಬಹುದಾಗಿದೆ. ಫಲಾನುಭವಿಗಳು ಅರ್ಜಿ ಸಲ್ಲಿಸುವ ಮೂಲಕ ಸಹಾಯಧನ ಪಡೆಯಬಹುದು.
ನೋಂದಾಯಿತ ಕಾರ್ಮಿಕ ವರ್ಗಕ್ಕೆ ಸೇರಿದ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು :- ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ಕಾರ್ಮಿಕ ನೋಂದಣಿ ಮಾಡಿಕೊಂಡ ಸದಸ್ಯರ ಇಬ್ಬರು ಮಕ್ಕಳಿಗೆ ಮಾತ್ರ ಈ ಯೋಜನೆಯ ಸೌಲಭ್ಯ ಸಿಗಲಿದೆ.
ಅರ್ಹತೆಗಳು :-
ಕಲಿಕಾ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳು ಇವೆ. ಅವು ಯಾವುದೆಂದರೆ :-
- ನೋಂದಾಯಿತ ಸದಸ್ಯ :- ಸಹಾಯಾಧನಕ್ಕೆ ಅರ್ಜಿ ಸಲ್ಲಿಸುವ ಮಕ್ಕಳ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು ಆದರೂ ಕಾರ್ಮಿಕ ನೋಂದಣಿ ಮಾಡಿಸಿಕೊಂಡಿರಬೇಕು. ನೋಂದಣಿ ಮಾಡಿಕೊಂಡರೆ ಮಾತ್ರ ಸಹಾಯಧನ ಪಡೆಯಬಹುದು.
- ಉತ್ತೀರ್ಣ ಆಗಿರಬೇಕು :- ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಹಿಂದಿನ ತರಗತಿಯಲ್ಲಿ ಪಾಸ್ ಆಗಿರಬೇಕು. ಅದಕ್ಕೇ ಬೇಕಾದ ಪುರಾವೆಗಳನ್ನು ನೀಡಬೇಕು. ಉದಾಹರಣೆಗೆ ಪ್ರಥಮ ಪಿಯುಸಿ ಪಾಸ್ ಆಗಿ ದ್ವಿತೀಯ ಪಿಯುಸಿ ಗೆ ತೇರ್ಗಡೆ ಹೊಂದಿರುವ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು. ಪ್ರಥಮ ಪಿಯುಸಿ ತರಗತಿಯಲ್ಲಿ ಎರಡನೇ ಬಾರಿ ಅಧ್ಯಯನ ಮಾಡುವ ವಿದ್ಯಾರ್ಥಿ ಆಗಿದ್ದಲ್ಲಿ ಅರ್ಜಿ ಸಲ್ಲಿಕೆಗೆ ಅರ್ಹರಲ್ಲ.
- ಒಂದು ಕುಟುಂಬದ ಇಬ್ಬರಿಗೆ ಮಾತ್ರ ಸಹಾಯಧನ :- ಒಂದು ಕುಟುಂಬದ ಪಾಲಕರು ಕಾರ್ಮಿಕ ಕಲ್ಯಾಣ ನೀಡುವ ಕಲಿಕಾ ಭಾಗ್ಯ ಯೋಜನೆಗೆ ಇಬ್ಬರು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಇದಕ್ಕೂ ಹೆಚ್ಚಿನ ಮಕ್ಕಳಿಗೆ ಸಹಾಯಧನ ಸಿಗುವುದಿಲ್ಲ.
- ಒಮ್ಮೆ ಮಾತ್ರ ಸಿಗಲಿದೆ :- ಕೆಲವು ಕುಟುಂಬದಲ್ಲಿ ತಂದೆ ತಾಯಿ ಇಬ್ಬರೂ ಸಹ ಕಾರ್ಮಿಕರಾಗಿರುತ್ತಾರೆ. ಆಗ ತಂದೆಯ ಹೆಸರಲ್ಲಿ ಒಮ್ಮೆ ಹಾಗೂ ತಾಯಿಯ ಹೆಸರಲ್ಲಿ ಒಮ್ಮೆ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಹಾಗೆ ಅರ್ಜಿ ಸಲ್ಲಿಸಿದರು ನಿಮ್ಮ ಅರ್ಜಿ ತಿರಸ್ಕಾರ ಆಗಲಿದೆ.
ಇದನ್ನೂ ಓದಿ: ರಾಜ್ಯದ ಬಡ ವರ್ಗದ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ಸಿಗುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ.
ಈ ಯೋಜನೆಯ ಲಾಭಗಳೇನು?
ಕಲಿಕಾ ಭಾಗ್ಯ ಯೋಜನೆಯಿಂದ ಕಾರ್ಮಿಕ ವರ್ಗದವರಿಗೆ ಅನೇಕ ಲಾಭಗಳು ಇವೆ. ಅವು ಯಾವುದೆಂದರೆ :-
- ಕಲಿಕೆಗೆ ಸಹಾಯಕ :- ಮನೆಯ ಆರ್ಥಿಕ ಪರಿಸ್ತಿಯಿಂದ ಮಕ್ಕಳ ಉನ್ನತ ಶಿಕ್ಷಣಕ್ಕೆ ಮೊಟಕು ಗೊಳಿಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯೆ ಕಲಿಯಲಿ ಸಾಧ್ಯವಾಗುತ್ತದೆ.
- ಸಾಮಾಜಿಕ ಸಮತೋಲನ :- ಸಾಮಾಜಿಕವಾಗಿ ಕಲಿಕೆಯಿಂದ ದೂರವಿದ್ದು ಸಾಮಾಜಿಕವಾಗಿ ಹಿಂದುಳಿದಿರುವ ಕಾರ್ಮಿಕ ವರ್ಗಗಳ ಮಕ್ಕಳು ಸಮಾಜದಲ್ಲಿನ ಉತ್ತಮ ಸ್ಥಾನ ಮಾನ ಪಡೆಯಲು ಸಾಧ್ಯವಾಗುತ್ತದೆ. ಅವರು ಶಿಕ್ಷಿತ ವರ್ಗದ ಜೊತೆಗೆ ಸೇರಲಿ ಸಹಾಯಕ ಆಗುತ್ತದೆ.
- ಕುಟುಂಬದ ಆರ್ಥಿಕ ಸ್ಥಿತಿ ಉತ್ತಮ :- ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಜೊತೆಗೆ ಪಾಲಕರಿಗೆ ಹೆಚ್ಚಿನ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿ ಮನೆಯ ಖರ್ಚು ನಿಭಾಯಿಸಲು ಕಷ್ಟ ಆಗುವುದು ತಪ್ಪುತ್ತದೆ. ಒಟ್ಟಾರೆಯಾಗಿ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.
ಈ ಯೋಜನೆಯ ಬಗ್ಗೆ ನೀವು ಇನ್ನಷ್ಟು ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಕಾರ್ಮಿಕ ಮಂಡಳಿಯ ಶಾಖೆಗೆ ನೇರವಾಗಿ ಭೇಟಿ ನೀಡಬಹುದು ಅಥವಾ ಕಾರ್ಮಿಕ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಇಲ್ಲವಾದರೆ ಸಹಾಯವಾಣಿ ಸಂಖ್ಯೆ 155214 ಗೆ ಕರೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ITI, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ಈಗ ವಿದೇಶದಲ್ಲೂ ಸಿಗಲಿದೆ ನಿಮಗೆ ಕೆಲಸ!