ಬ್ಯಾಂಕ್ ಉದ್ಯೋಗ ಬಯಸುವವರಿಗೆ ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ ಆಸಕ್ತರು ಅರ್ಜಿ ಸಲ್ಲಿಸಿ.

ಬ್ಯಾಂಕ್ ಉದ್ಯೋಗ ಹೊಂದಲು ಇಂದು ಅನೇಕ ಜನರು ಕಾಯುತ್ತಾರೆ. ಅಂತವರಿಗೆ ಈಗ ಒಂದು ಸುವರ್ಣ ಅವಕಾಶ ಇದೆ. ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗ ಖಾಲಿ ಇದ್ದು ಆಸಕ್ತರು ಹುದ್ದೆಗೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಹುದ್ದೆಗಳ ಬಗ್ಗೆ ಮಾಹಿತಿ :- ಕರ್ನಾಟಕ ಬ್ಯಾಂಕ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಿದ್ದು ಒಟ್ಟು 14 ಹುದ್ದೆಗಳು ಖಾಲಿ ಇವೆ. ಡೇಟಾ ಎಂಜಿನಿಯರ್, ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗಳು ಖಾಲಿ ಇವೆ.

ಖಾಲಿ ಇರುವ ಹುದ್ದೆಗಳ ವಿವರ :-

  • ಡೇಟಾ ಎಂಜಿನಿಯರ್ 11 ಹುದ್ದೆಗಳು.
  • ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ 1 ಹುದ್ದೆಗಳು.
  • ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ 1 ಹುದ್ದೆಗಳು.
  • ಫೈರ್ವೆಲ್ ಅಡ್ಮಿನಿಸ್ಟ್ರೇಟರ್ 1 ಹುದ್ದೆಗಳು.

ವಯೋಮಿತಿಯ ವಿವರಗಳು :-

  • ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ.
  • ಡೇಟಾ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 30 ವರ್ಷ.
  • ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 35 ವರ್ಷ.
  • ಫೈರ್ವೆಲ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ ಅರ್ಜಿ ಸಲ್ಲಿಸಲು 35 ವರ್ಷ.
  • ಸರ್ಕಾರದ ಮೀಸಲಾತಿಯ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ ಮಾಹಿತಿ :-

  • ಡೇಟಾ ಎಂಜಿನಿಯರ್ ಹುದ್ದೆಗೆ ಬಿ.ಎಸ್ಸಿ ಅಥವಾ ಬಿಸಿಎ ಅಥವಾ ಬಿಇ ಅಥವಾ ಬಿ.ಟೆಕ್ ಅಥವಾ ಪದವಿ ಅಥವಾ ಎಂಸಿಎ ಅಥವಾ ಎಂ.ಟೆಕ್ ಆಗಿರಬೇಕು.
  • ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗಳಿಗೆ ಹಾಗೂ ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗಳಿಗೆ ಅಥವಾ ಫೈರ್ವೆಲ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳಿಗೆ ಬಿಇ ಅಥವಾ ಬಿ.ಟೆಕ್ ಅಥವಾ ಪದವಿ, ಎಂಸಿಎ ಆಗಿರಬೇಕು.

ಮಾಸಿಕ ವೇತನ ವಿವರಗಳು :-

  • ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗಳಿಗೆ ತಿಂಗಳ ವೇತನ 64,820 ರೂಪಾಯಿಗಳಿಂದ 93,960 ರೂಪಾಯಿ ಆಗಿರುತ್ತದೆ.
  • ಡೇಟಾ ಎಂಜಿನಿಯರ್ ಹುದ್ದೆಗಳಿಗೆ ತಿಂಗಳ ಸಂಬಳ 48,480 ರೂಪಾಯೋಗಳಿಂದ 85,920 ರೂಪಾಯಿ ಆಗಿರುತ್ತದೆ.
  • ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗಳಿಗೆ ತಿಂಗಳ ವೇತನ 64,820 ರೂಪಾಯಿಗಳಿದ 93,960 ರೂಪಾಯಿ ಆಗಿರುತ್ತದೆ.
  • ಫೈರ್ವೆಲ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳಿಗೆ ತಿಂಗಳ ಸಂಬಳ 64,820 ರೂಪಯೋಗಳಿಂದ 93,960 ರೂಪಾಯಿ ಆಗಿರುತ್ತದೆ.

ಉದ್ಯೋಗದ ಸ್ಥಳವು :- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಲು ರೆಡಿ ಇರಬೇಕು.

ಆಯ್ಕೆ ಪ್ರಕ್ರಿಯೆ ಹೀಗಿದೆ :- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಅನುಭವವನ್ನು ಪರಿಶೀಲನೆ ನಡೆಸಿ ನಂತರ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ :- ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಹೆಸರು, ಊರು, ವಿದ್ಯಾರ್ಹತೆ, ವಯಸ್ಸು, ಅನುಭವಗಳ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು recruitment@ktkbank.com ಗೆ ಕಳುಹಿಸಬೇಕು. ನಿಗದಿತ ದಿನಾಂಕದ ಒಳಗಾಗಿ ಅರ್ಜಿ ನಮೂನೆಯನ್ನು ಕಳುಹಿಸಬೇಕು. ಯಾವುದೇ ತಪ್ಪು ಅಥವಾ ಸುಳ್ಳು ಮಾಹಿತಿ ಸಲ್ಲಿಸಿದರೆ ನಿಮ್ಮ ಅರ್ಜಿ ತಿರಸ್ಕಾರ ಆಗುತ್ತದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತೊಮ್ಮೆ ಪರಿಶೀಲನೆ ನಡೆಸಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕದ ಮಾಹಿತಿ :-

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು 26-06-2024 ರಿಂದ 26-07-2024 ರ ಒಳಗಾಗಿ ಅರ್ಜಿಯನ್ನು ಮೇಲ್ ಕಳುಹಿಸಬೇಕು.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ದಲ್ಲಿ ಉದ್ಯೋಗ ಅವಕಾಶ ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ಬಂಪರ್ ಸುದ್ದಿ; ಉದ್ಯೋಗ ಬಯಸುವವರಿಗೆ ಸಿಹಿ ಸುದ್ದಿ ಕೊಟ್ಟ ಇಲಾಖೆ 

Sharing Is Caring:

Leave a Comment