ಶಿಕ್ಷಣ ಇಲಾಖೆಯ ಈ ನಿರ್ಧಾರ ಎಸ್‌ಎಸ್‌ಎಲ್‌ಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಬಹುದೊಡ್ಡ ನೆರವಾಗಲಿದೆ. ಅದೇನೆಂದರೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಿಕ್ಷಣ ಪಡೆಯುವ ಅವಕಾಶ ಸಿಗುತ್ತದೆ. ಇದು ಶಿಕ್ಷಿತ ಜನಸಂಖ್ಯೆ ಹೆಚ್ಚಿಸಿ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗಾದರೆ ಈ ಹೊಸ ನಿಯಮದ ಬಗ್ಗೆ ಮಾಹಿತಿ ಇಲ್ಲಿದೆ.
ಹೊಸ ಮಾದರಿಯನ್ನು ಅಳವಡಿಸುವ ರಾಜ್ಯ ಸರ್ಕಾರ :- ಆಂಧ್ರಪ್ರದೇಶದ ಮಾದರಿಯನ್ನು ಅನುಸರಿಸಿ ಕರ್ನಾಟಕ ಸರ್ಕಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಾಲೆಗೆ ಹೋಗುವ ಅವಕಾಶ ಕಲ್ಪಿಸಲಿದೆ. ರಾಜ್ಯದ ಶಿಕ್ಷಣ ಇಲಾಖೆ ಸಾಕ್ಷರತಾ ದರವನ್ನು ಹೆಚ್ಚಿಸಲು ಈ ಹೊಸ ಯೋಜನೆ ಜಾರಿಗೊಳಿಸಿದೆ. ಇದರಿಂದ ನೀವು ಒಮ್ಮೆ ಫೇಲ್ ಆದರು ಸಹ ಮತ್ತೆ ಶಾಲೆಗೆ ಅಥವಾ ಕಾಲೇಜ್ ಗೆ ಹೋಗಿ ಕಲಿಯುವ ಅವಕಾಶ ಸಿಗಲಿದೆ.
ಶಿಕ್ಷಣ ಮೊಟಕುಗೊಳಿಸುವ ಜನರ ಸಂಖ್ಯೆ ತಗ್ಗಿಸಲು ಈ ಕ್ರಮ :- ಕರ್ನಾಟಕದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗಳನ್ನು ಬಿಟ್ಟುಬಿಡುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಈಗ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಬಗ್ಗೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಯಾರು ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳಬಹುದು?
ಹೊಸ ನಿಯಮದ ಪ್ರಕಾರ, 2023-24ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ಅಥವಾ 12ನೇ ತರಗತಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು, 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಅದೇ ತರಗತಿಯಲ್ಲಿ ಮತ್ತೊಮ್ಮೆ ಅಧ್ಯಯನ ಮಾಡುವ ಅವಕಾಶವನ್ನು ಪಡೆಯುತ್ತಾರೆ.
ಪ್ರತಿ ವರುಷ ಫೇಲ್ ಆಗುವ ಜನರ ಅನುಪಾತ ಹೀಗಿದೆ :- ವರುಷವೂ ರಾಜ್ಯದಲ್ಲಿ ಇತ್ತು 8.21 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ವಿಷಾದದ ವಿಷಯ ಏನೆಂದರೆ ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇನ್ನು ಹೆಚ್ಚಾಗಿ ಹೇಳಬೇಕು ಎಂದರೆ i ಪೂರಕ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳು ಸಹ ಶೇ 45% ಅಷ್ಟೇ ಉತ್ತೀರ್ಣರಾಗುತ್ತಾರೆ. ಇದರಿಂದ ಈಗ ಹೊಸ ನಿಯಮ ಜಾರಿಗೆ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಮಗೆ ಆಸಕ್ತಿ ಇರುವ ವಿಷಯಗಳ ಪಾಠ ನೀವು ಕೇಳಬಹುದು :- ವಿದ್ಯಾರ್ಥಿಗಳು ಫೇಲ್ ಆದ ವಿಷಯಗಳಿಗೆ ಮಾತ್ರ ಅಥವಾ ಎಲ್ಲಾ ವಿಷಯಗಳಿಗೂ ಮರು ದಾಖಲಾತಿ ಮಾಡಿಕೊಂಡು ಕ್ಲಾಸ್‌ಗೆ ಹಾಜರಾಗಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಹೆಚ್ಚಿನ ಸ್ವಾತಂತ್ರ್ಯವನ್ನು ಪಡೆಯಲಿದ್ದಾರೆ ಹಾಗೂ ಫೇಲ್ ಆದ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಪೂರ್ಣಗೊಳಿಸಲು ಅನುಕೂಲ ಮಾಡಿಕೊಡಲಾಗಿದೆ.
ಇದನ್ನೂ ಓದಿ: ಸಿಎಂ 1 ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಸರ್ಕಾರವೇ ಭರಿಸಲಿದೆ ವಂತಿಗೆ ಹಣ
ಈ ನಿಯಮದಿಂದಾಗುವ ಪ್ರಯೋಜನಗಳು:
- ವಿದ್ಯಾರ್ಥಿಗಳಿಗೆ ಫೇಲ್ ಆದರೂ ನಿರಾಶೆಗೊಳ್ಳದೆ ಮತ್ತೊಮ್ಮೆ ಪ್ರಯತ್ನಿಸುವ ಅವಕಾಶ ಸಿಗುತ್ತದೆ.
- ಸಮಾಜಕ್ಕೆ ಹೆಚ್ಚು ಜನರು ಶಿಕ್ಷಣ ಪಡೆಯುವುದರಿಂದ ಸಮಾಜದ ಅಭಿವೃದ್ಧಿಗೆ ನೆರವಾಗುತ್ತದೆ.
- ಸರ್ಕಾರಕ್ಕೆ ಒಟ್ಟು ದಾಖಲಾತಿ ಅನುಪಾತ ಹೆಚ್ಚಾಗುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಕಾಣಬಹುದು.
- ಮಕ್ಕಳು ಮತ್ತೊಮ್ಮೆ ಪ್ರಯತ್ನಿಸಲು ಅವಕಾಶ ಸಿಗುವುದರಿಂದ ಪೋಷಕರ ಆತಂಕ ಕಡಿಮೆಯಾಗುತ್ತದೆ.
- ಶಿಕ್ಷಣದ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ.
- ಒಮ್ಮೆ ಫೇಲ್ ಆದರೂ ಮತ್ತೊಮ್ಮೆ ಪ್ರಯತ್ನಿಸುವ ಅವಕಾಶ ಸಿಗುವುದರಿಂದ ವಿದ್ಯಾರ್ಥಿಗಳ ಮನೋಬಲ ಹೆಚ್ಚಾಗುತ್ತದೆ.
- ಹೆಚ್ಚು ಜನರು ಶಿಕ್ಷಿತರಾದಾಗ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುತ್ತದೆ. ಜೊತೆಗೆ ಆರ್ಥಿಕವಾಗಿ ಇನ್ನು ಅಭಿವೃದ್ಧಿ ಆಗುತ್ತದೆ.
ಇದನ್ನೂ ಓದಿ: ಜಿಯೋ ರಿಚಾರ್ಜ್ ಪ್ಲಾನ್ ದಿನಕ್ಕೆ 9 ರೂಪಾಯಿಕ್ಕಿಂತ ಕಡಿಮೆ ದರದಲ್ಲಿ ಉಚಿತ ಕರೆ ಮತ್ತು ಡೇಟಾವನ್ನು ಪಡೆಯಿರಿ