ನಿಮ್ಮ ಹೂಡಿಕೆಯ ಹಣ ಡಬಲ್ ಆಗಬೇಕು ಎಂದರೆ ನೀವು ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಲೇಬೇಕು.

ಪೋಸ್ಟ್ ಆಫೀಸ್ ನಲ್ಲಿ ಹಲವಾರು ಯೋಜನೆಗಳು ಇವೆ. ನೀವು ಕಡಿಮೆ ಮೊತ್ತದ ಹೂಡಿಕೆ ಯಿಂದ ಲಕ್ಷ ಮೊತ್ತದ ಹಣವನ್ನು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಬಹುದು. ಈಗ ನೀವು ಪೋಸ್ಟ್ ಆಫೀಸ್ ನ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ಡಬಲ್ ಮಾಡಿಕೊಳ್ಳಲು ಸಾಧ್ಯವಿದೆ. ಹಾಗಾದರೆ ಇದು ಯಾವ ಯೋಜನೆ ಎಂಬುದನ್ನು ತಿಳಿಯಿರಿ.

WhatsApp Group Join Now
Telegram Group Join Now

ಏನಿದು ಪೋಸ್ಟ್ ಆಫೀಸ್ ಯೋಜನೆ?: ಪೋಸ್ಟ್ ಆಫೀಸ್ ನಾ ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ ಎಂದು. ಕಿಸಾನ್ ವಿಕಾಸ್ ಪತ್ರ(Kisan Vikas Patra Scheme) (ಕೆವಿಪಿ) ಎಂಬುದು ಭಾರತೀಯ ಅಂಚೆ ಕಚೇರಿಯು ನೀಡುವ ಒಂದು ವಿಶಿಷ್ಟ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸುಮಾರು 9 ವರ್ಷ 5 ತಿಂಗಳ ಅವಧಿಯಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಉದಾಹರಣೆಗೆ, 5000 ರೂಪಾಯಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿಯ ಸಮಯದಲ್ಲಿ 10,000 ರೂಪಾಯಿಗಳು ಹಿಂತಿರುಗುತ್ತವೆ.

ಕನಿಷ್ಠ ಹೂಡಿಕೆಯ ಮೊತ್ತ :- ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬಹುದು. ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಲು ಯಾವುದೇ ಮಿತಿ ಇಲ್ಲ. ಈ ಯೋಜನೆ ವಾರ್ಷಿಕವಾಗಿ 7.5% ಬಡ್ಡಿದರವನ್ನು ನೀಡುತ್ತಿದೆ.

ರೈತರ ಹಿತಾಸಕ್ತಿ ಗೆ ಆರಂಭ ಆಗಿರುವ ಯೋಜನೆ :-

ಮೊದಲ ರೈತರನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭವಾದ ಈ ಯೋಜನೆ ಈಗ ಎಲ್ಲರಿಗೂ ತೆರೆದಿದ್ದರೂ, ಹಣ ವರ್ಗಾವಣೆಯಲ್ಲಿ ಅಕ್ರಮಗಳನ್ನು ತಡೆಯಲು 2014 ರಿಂದ 50,000 ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡುವವರು ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ. 10 ಲಕ್ಷ ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡುವವರು ತಮ್ಮ ಆದಾಯದ ಮೂಲವನ್ನು ಸಾಬೀತುಪಡಿಸಬೇಕು. ಕಡಿಮೆ ಅಪಾಯವನ್ನು ಹೊಂದಿರುವ ಈ ಉಳಿತಾಯ ಯೋಜನೆಯಲ್ಲಿ ನಿಮ್ಮ ಹಣವನ್ನು ನಿರ್ದಿಷ್ಟ ಅವಧಿಗೆ ಸುರಕ್ಷಿತವಾಗಿ ಇಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೂಡಿಕೆಗೆ ಅರ್ಹತೆಗಳು ಹೀಗಿವೆ:- ಕೆವಿಪಿ ಯೋಜನೆಯಲ್ಲಿ(Kisan Vikas Patra Scheme) ಹೂಡಿಕೆ ಮಾಡಲು ನಿಮಗೆ ಅರ್ಹತೆ ಇದೆಯೇ ಎಂದು ಕೆಳಗಿನ ಮಾಹಿತಿ ನಿಮಗೆ ಸಹಾಯ ಮಾಡುತ್ತದೆ.

  • ನಾಗರಿಕ :-ನೀವು ಭಾರತದ ನಾಗರಿಕರಾಗಿರಬೇಕು .
  • ವಯಸ್ಸು: ನಿಮ್ಮ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.
  • ಅಪ್ರಾಪ್ತ ವಯಸ್ಕರು ಮತ್ತು ಅಸ್ವಸ್ಥ ಮನಸ್ಸಿನವರು: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ ಅವರ ಪರವಾಗಿ ಯಾರಾದರೂ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ನಿಮ್ಮ ಮಗಳು 21 ವರ್ಷಕ್ಕೆ 71 ಲಕ್ಷ ಪಡೆಯುತ್ತಾರೆ; ಸರ್ಕಾರದ ಈ ಯೋಜನೆ ಅದ್ಬುತ!

ತೆರಿಗೆ ವಿನಾಯಿತಿ :

ಕೆವಿಪಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಆದಾಯ ತೆರಿಗೆ 80C ಅಡಿಯಲ್ಲಿ ಕಡಿತ ಮಾಡಿಕೊಳ್ಳಲು ಅನುಮತಿ ಇಲ್ಲ. ಈ ಯೋಜನೆಯಿಂದ ಬರುವ ಬಡ್ಡಿಯ ಮೇಲೆ ಸಂಪೂರ್ಣವಾಗಿ ಆದಾಯ ತೆರಿಗೆ ವಿಧಿಸುವುದಿಲ್ಲ. ಪ್ರತಿ ವರ್ಷ ಬರುವ ಬಡ್ಡಿಯ ಮೇಲೆ 10% ರಷ್ಟು ತೆರಿಗೆಯನ್ನು ಕಡಿತಗೊಳಿಸುತ್ತದೆ. ಯೋಜನೆಯ ಅವಧಿ ಮುಗಿದಾಗ ಬರುವ ಹಣವು ಅಸಲು ಹಣ ಮತ್ತು ತೆರಿಗೆ ವಿಧಿಸಲಾದ ಬಡ್ಡಿಯ ಮೊತ್ತದಲ್ಲಿ, ಇದರ ಮೇಲೆ ಮತ್ತೆ ತೆರಿಗೆ ವಿಧಿಸಲಾಗುವುದಿಲ್ಲ.

ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡುವುದು ಹೇಗೆ?

  • ಅರ್ಜಿ ನಮೂನೆ ಪಡೆಯಿರಿ: ಅಂಚೆ ಕಚೇರಿಯಿಂದ ಅಥವಾ ಆನ್‌ಲೈನ್‌ನಲ್ಲಿ ಕೆವಿಪಿ ಅರ್ಜಿ ನಮೂನೆಯನ್ನು ಪಡೆಯಿರಿ.
  • ನಮೂನೆ ಭರ್ತಿ ಮಾಡಿ: ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  • ದಾಖಲೆಗಳನ್ನು ಸಲ್ಲಿಸಿ: ನಿಮ್ಮ ಗುರುತಿನ ಪುರಾವೆ (ಆಧಾರ್, ಪಾಸ್‌ಪೋರ್ಟ್ ಇತ್ಯಾದಿ) ಮತ್ತು ವಿಳಾಸದ ಪುರಾವೆ (ಮತದಾರರ ಐಡಿ, ಬಿಲ್‌ಗಳು ಇತ್ಯಾದಿ) ಸಲ್ಲಿಸಿ.
  • ಹಣ ಪಾವತಿಸಿ: ನಗದು, ಚೆಕ್ ಅಥವಾ ಡ್ರಾಫ್ಟ್ ಮೂಲಕ ಹಣವನ್ನು ಪಾವತಿಸಿ.
  • ಪ್ರಮಾಣಪತ್ರ ಪಡೆಯಿರಿ: ಪಾವತಿ ಮಾಡಿದ ಕೂಡಲೇ ನಿಮಗೆ ಕೆವಿಪಿ ಪ್ರಮಾಣಪತ್ರ.

ಇದನ್ನೂ ಓದಿ: ನೀವು ಸಹ ಚಿನ್ನದ ಸಾಲವನ್ನು ಪಡೆಯಬೇಕಾ? ಹಾಗಾದರೆ ಈ ಮಾಹಿತಿಯನ್ನು ತಪ್ಪದೆ ತಿಳಿಯಿರಿ.

Sharing Is Caring:

Leave a Comment