ನಟ ದರ್ಶನ್ ಅರೆಸ್ಟ್ ಪ್ರಕರಣದ ಬಗ್ಗೆ ಬೆಚ್ಚಿ ಬೀಳಿಸೋ ಭವಿಷ್ಯ ನುಡಿದ್ದ ಕೋಡಿಮಠ ಶ್ರೀ

ರೇಣುಕಾಸ್ವಾಮಿ ಅವರ ಕೊಲೆ ವಿಚಾರವಾಗಿ ದರ್ಶನ್ ಮತ್ತು ಅವರ ಸಂಗಡಿಗರ ವಿಚಾರಣೆ ನಡೆಯುತ್ತಿದೆ. ಈ ಕೊಲೆಯ ಬಗ್ಗೆ ಹಲವು ಸತ್ಯಗಳು ಈಗಾಗಲೇ ಹೊರಬಿದ್ದಿವೆ. ಇನ್ನು ಈ ವಿಚಾರದ ಬಗ್ಗೆ ಕೊಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

WhatsApp Group Join Now
Telegram Group Join Now

ಯುಗಾದಿ ಹಬ್ಬದ ದಿನ ಈ ವರ್ಷದ ಭವಿಷ್ಯದ ಬಗ್ಗೆ ಕೊಡಿ ಶ್ರೀಗಳು ಭವಿಷ್ಯ ನುಡಿದಿದ್ದರು :- ಏಪ್ರಿಲ್ 9 2024 ರಿಂದ ಕ್ರೋಧೀನಾಮ ಸಂವತ್ಸರ ಆರಂಭ ಆಗಿದೆ. ಹೆಸರೇ ಹೇಳುವಂತೆ ಈ ಸಂವತ್ಸರದಲ್ಲಿ ಕೆಡುಕು ಹಾಗೂ ಒಳ್ಳೆಯದರ ಮಿಶ್ರಣ ಇರಲಿದೆ. ಈಗಾಗಲೇ ಇವರು ಹೇಳಿದಂತೆ ವಿಶ್ವದ ಪ್ರಧಾನಿಗಳಿಗೆ ಕಂಟಕ ಎದುರಾಗಿದೆ ಹಾಗೂ ಇವರು ದೇಶದಲ್ಲಿ ಈ ವರ್ಷ ದೊಡ್ಡ ದೊಡ್ಡ ಹೆಸರಾಂತ ವ್ಯಕ್ತಿಗಳು ತೊಂದರೆ ಅನುಭವಿಸುತ್ತಾರೆ ಎಂದು ಹೇಳಿದ್ದರು. ಈಗ ದರ್ಶನ್ ಅವರ ಪ್ರಕರಣದಿಂದ ಕೊಡಿ ಶ್ರೀಗಳ ಭವಿಷ್ಯ ನಿಜ ಆಗಿದೆ. ಇನ್ನು ಮುಂದುವರೆದು ಶ್ರೀಗಳು ಜಲ ಕಂಟಕಗಳು ಅಗ್ನಿ ಅವಘಡಗಳು , ಬಾಂಬ್ ಸ್ಫೋಟದಂತಹ ಘಟನೆಗಳು ಈ ವರ್ಷ ಜಾಸ್ತಿ ಆಗಲಿದೆ. ಈ ವರ್ಷ ಯುದ್ಧ ಭೀತಿ ಇದೆ ಎಂಬುದಾಗಿಯೂ ಭವಿಷ್ಯ ನುಡಿದಿದ್ದರು. ಈಗಾಗಲೇ ಹಲವು ಪ್ರಕರಣವು ನಡೆದಿವೆ . ಇನ್ನು ಇಂತಹ ಘಟನೆಗಳು ರಾಜ್ಯದಲ್ಲಿ ಮತ್ತು ದೇಶದಲ್ಲಿ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ಜೊತೆಗೆ ಈ ಸಂವತ್ಸರದಲ್ಲಿ ಗುರು ಶಿಷ್ಯನಗುತ್ತಾನೆ , ಹಾಗೆ ಶಿಷ್ಯ ಗುರು ಆಗುತ್ತಾನೆ. ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗುತ್ತದೆ. ಅದರಿಂದ ಸುಖ ಮತ್ತು ದುಃಖ ಎರಡು ಇರಲಿದೆ ಎಂದು ಹೇಳಿದರು.

ಉಮಾಪತಿ ಅವರಿಗೆ ಸಲಹೆ ನೀಡಿದ್ದ ಶ್ರೀಗಳು :-

ಈ ಹಿಂದೆ ದರ್ಶನ್ ಮತ್ತು ಉಮಾಪತಿ ಅವರ ನಡುವೆ ವೈಮನಸ್ಸು ನಡೆದಿತ್ತು. ಆಗ ಇವರ ನಡುವಿನ ಜಗಳ ಚಿತ್ರರಂಗದ ತುಂಬಾ ಚರ್ಚೆಗೆ ಕಾರಣ ಆಗಿತ್ತು. ಈಗ ದರ್ಶನ ಅವರು ಜೈಲಿನಲ್ಲಿ ಕೊಲೆ ಆರೋಪದಲ್ಲಿ ಬಂಧಿತರಾಗಿರುವ ಸಮಯದಲ್ಲಿ ಮಾಧ್ಯಮದವರು ಉಮಾಪತಿ ಅವರನ್ನು ಮಾತನಾಡಿಸುವಾಗ ಈ ಹಿಂದೆ ನಾನು ಕೊಡಿ ಮಠದ ಶ್ರೀಗಳ ಭೇಟಿ ಮಾಡಿದೆ. ಅವರು ಕೋಪವನ್ನು ಕಡಿಮೆ ಮಾಡಿಕೊಳ್ಳಿ ಎಂಬ ಸಲಹೆ ನೀಡಿದ್ದರು ಹಾಗೆಯೇ ತಾಯಿಯ ಮಾತನ್ನು ಪಾಲಿಸುವಂತೆ ಹೇಳಿದ್ದರು. ಅವರು ಹೇಳಿದಂತೆಯೇ ನಾನು ಪಾಲನೆ ಮಾಡಿಕೊಂಡು ಬಂದಿದ್ದೇನೆ. ತದನಂತರ ಯಾವುದೇ ಗಲಾಟೆ ಗಳಿಗೆ ನಾನು ಹೋಗಿಲ್ಲ. ಹಾಗೆಯೇ ದರ್ಶನ್ ಅವರ ಜೊತೆ ಅಂತರ ಕಾಯ್ದುಕೊಂಡಿದ್ದೇನೆ. ಗುರುಗಳು ಹೇಳಿದ ಮಾತನ್ನು ಪಾಲಿಸಿದ ಕಾರಣ ಈಗ ನನಗೆ ಎಲ್ಲಾ ಕಡೆಯಿಂದ ಒಳ್ಳೆಯದೇ ಆಗಿದೆ ಎಂದು ಉಮಾಪತಿ ಅವರು ಹೇಳಿದರು.

ದರ್ಶನ್ ಅವರ ಪ್ರಕರಣಕ್ಕೆ ಕೊಡಿ ಮಠದ ಶ್ರೀಗಳು ಹೇಳಿದ್ದೇನು :- 

ಉಮಾಪತಿ ಅವರು ಮಠಕ್ಕೆ ಬಂದಾಗ ಅವರಿಗೆ ಕೋಪ ಕಡಿಮೆ ಮಾಡಿಕೊಳ್ಳಿ ನಿಮಗೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿದ್ದೆ. ಮನುಷ್ಯ ಯಾವಾಗ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ ಹಾಗೂ ಕೋಪಕ್ಕೆ ತುತ್ತಾಗುತ್ತಾನೆ ಅವಘಡಗಳು ಅವನ ಹಿಂದೆ ಇರುತ್ತದೆ ಎಂದು ಹೇಳಿದರು. ಕೋಪದಿಂದಲೇ ಮನುಷ್ಯನ ಅವನತಿ ಆಗುತ್ತದೆ. ಅದರಂತೆಯೇ ದರ್ಶನ್ ಅವರು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಅವರು ಕೋಪದ ಕೈಗೆ ಬುದ್ದಿ ಕೊಟ್ಟು ಇಂತಹ ಅವಘಡ ಆಗಿದೆ. ಕೋಪವನ್ನು ಕಡಿಮೆ ಮಾಡಿಕೊಂಡು ತಾಳ್ಮೆಯಿಂದ ಈ ಪ್ರಕರಣವನ್ನು ನಿಭಾಯಿಸಿದ್ದರೆ ಕೊಲೆ ಮಾಡುವ ಹಂತಕ್ಕೆ ದರ್ಶನ್ ಅವರು ಹೋಗುತ್ತಿರಲಿಲ್ಲ. ಇದರಿಂದ ರೇಣುಕಾಸ್ವಾಮಿ ಅವರ ಕುಟುಂಬ ನೋವು ಅನುಭವಿಸುವ ಸ್ಥಿತಿ ಎದುರಾಗಿತ್ತಿರಲಿಲ್ಲ. ಹಾಗೆಯೇ ದರ್ಶನ್ ಅವರು ಮಾಡಿರುವ ಹೆಸರು ಹಾಗೂ ಹಣದ ಜೊತೆಗೆ ಅವರು ಇನ್ನಷ್ಟು ಒಳ್ಳೆಯ ಹೆಸರು ಮಾಡಿಕೊಳ್ಳಲಾಗುತ್ತಿತ್ತು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಿದೆ KSRTC ಹೊಸದಾಗಿ 1000 ಬಸ್ ಗಳು ಬಿಡುಗಡೆಗೆ ಪ್ಲಾನ್

ಮಾರ್ಮಿಕವಾಗಿ ಕೋಪದ ಬಗ್ಗೆ ಹೇಳಿದ ಕೊಡಿ ಶ್ರೀಗಳು :-

ಕೋಪದ ಬಗ್ಗೆ ಮಾರ್ಮಿಕವಾಗಿ ನುಡಿದ ಶ್ರೀಗಳು ಕರೆಯದೆ ಬರುವವನ, ಬರೆಯದೇ ಓದುವನ, ಬರಿಗಾಲಲ್ಲಿ ನಡೆಯುವನ ಎಂದು ಹೇಳಿದ್ದಾರೆ. ಅಂದರೆ ಕೋಪ ಕರೆದರೆ ಬರುವುದು ಅಲ್ಲ. ಯಾವುದೋ ಸಮಯದಲ್ಲಿ ನಮಗೆ ಅರಿಯದೆ ನಮ್ಮೊಳಗೆ ಕೋಪ ಆವರಿಸುತ್ತದೆ. ನಮಗೆ ಯಾವುದಾದರೂ ಒಂದು ಕೆಲಸ ಆಗುತ್ತಿಲ್ಲ. ನಾವು ಅಂದುಕೊಂಡ ಹಾಗೆ ಆಗುತ್ತಿಲ್ಲ ಎಂದಾಗ ನಮಗೆ ಕೋಪ ಬರುತ್ತದೆ. ಹಾಗೆಯೇ ಬರೆಯದೇ ಓದುವವನ ಅಂದರೆ ಕಣ್ಣು. ಕಣ್ಣು ನೋಡುತ್ತದೆಯೇ ಹೊರತು ಬರೆಯಲು ಸಾಧ್ಯವಿಲ್ಲ. ಹಾಗೆಯೇ ಬರಿಗಾಗಲ್ಲಿ ನಡೆಯುವವರು ಕಳ್ಳರು ಆಗಿರುತ್ತಾರೆ. ಈ ಮೂರು ವಿಷಯಗಳನ್ನು ಅರಿತು ನಡೆಯುವವರು ಮನಸನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳಬೇಕು. ಮನಸ್ಸು ನಿಯಂತ್ರದಲ್ಲಿ ಇಲ್ಲ ಎಂದರೆ ಮನಸ್ಸು ಎಲ್ಲಿಂದಲೋ ಎಲ್ಲಿಗೋ ಚಲಿಸುತ್ತದೆ.

ಮಾನವ ಜನ್ಮ ಶ್ರೇಷ್ಠ ಜನ್ಮ ಎಂದು ನುಡಿದ ಶ್ರೀಗಳು :-

ಕೋಪದ ಬಗ್ಗೆ ಮಾತನಾಡಿದ ಶ್ರೀಗಳು ಮಾನವ ಜನ್ಮ ಶ್ರೇಷ್ಠವಾಗಿದೆ. ಮನಸನ್ನು ನಿಯಂತ್ರದಲ್ಲಿ ಇಟ್ಟುಕೊಂಡ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ. ಹಾಗೆಯೇ ಮನಸ್ಸಿನ ನಿಯತ್ರಣದಲ್ಲಿ ಇರಿಸಿಕೊಂಡು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಿದರೆ ಅದು ಮನುಷ್ಯನಾಗಿ ಹುಟ್ಟಿರುವುದು ಸಾರ್ಥಕ ಆಗುತ್ತದೆ. 84 ಲಕ್ಷ ಜೀವ ರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ ಆಗಿದೆ. ನೀರಿನಲ್ಲಿ 21 ಲಕ್ಷ ಹಾಗೂ ಗಾಳಿಯಲ್ಲಿ 21 ಲಕ್ಷ ಹಾಗೂ ಭೂಮಿಯಲ್ಲಿ 21 ಲಕ್ಷ ಹಾಗೂ ಮಣ್ಣಿನಲ್ಲಿ 21 ಲಕ್ಷ ಹೀಗೆ 84 ಲಕ್ಷ ಗಳಿಂದ ಈ ಆತ್ಮ ಅನ್ನುವುದು ಬಂದಿದೆ. ಕೋಟಿ ಜನ್ಮಗಳ ಪುಣ್ಯದ ಫಲ ಮಾನವ ಜನ್ಮವಾಗಿದೆ.

ಇದನ್ನೇ ಪುರಂದರ ದಾಸರಂತಹ ಶ್ರೇಷ್ಠ ದಾಸರು ಮಾನವ ಜನ್ಮವನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ನುಡಿದಿದ್ದಾರೆ. ಮಾನವ ಜನ್ಮ ಬಂದಾಗ ದೇವರು ಮನುಷ್ಯನಿಗೆ ಕೋಪ ಆಸೆ, ಮದ, ಮಾತ್ಸರ್, ದ್ವೇಷ, ಅಸೂಯೆ, ಸಂತೋಷ, ದುಃಖ ಗಳಂತಹ ಅರಿಷಡ್ವರ್ಗ ಗಳನ್ನು ನೀಡಿದ್ದಾನೆ. ಈ ಎಲ್ಲಾ ಭಾವನೆಗಳನ್ನು ನಿಯಂತ್ರದಲ್ಲಿ ಇಟ್ಟುಕೊಂಡು ಜೀವನ ನಡೆಸಿದರೆ ಮಾತ್ರ ಮನುಷ್ಯ ಗೆಲ್ಲುತ್ತಾನೆ. ಇಲ್ಲವಾದರೆ ಮನುಷ್ಯ ಸೋಲುತ್ತಾನೆ. ಅರಿಷಡ್ವರ್ಗಗಳನ್ನು ಗೆದ್ದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಆಗುತ್ತದೆ ಎಂದು ಶ್ರೀಗಳು ನುಡಿದರು.

ಈ ದೇಶದಲ್ಲಿ ಇಂತಹ ಘಟನೆಗಳು ಇನ್ನೂ ಹೆಚ್ಚಾಗಲಿವೆ. ದರ್ಶನ್ ಅವರ ಈ ಘಟನೆಯು ಮನುಜ ಕುಲಕ್ಕೆ ಹೀಗೆ ಮಾಡಬಾರದು ಎಂದು ಹೇಳುವ ಎಚ್ಚರಿಕೆ ಗಂಟೆ ಆಗಿದೆ. ಇದನ್ನು ಅರಿತು ಪ್ರಜೆಗಳು ನಡೆಯಬೇಕು. ಮನುಷ್ಯ ಶಾಂತಿ ನೆಮ್ಮದಿ ಹಾಗೂ ಶಿಸ್ತುಬದ್ಧ ಜೀವನ ನಡೆಸುತ್ತಾನೆ ಆಗ ಅವನಿಗೆ ಏನು ಆಗುವುದಿಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಸಾರ್ಥಕ ಜೀವನ ನಡೆಸಬೇಕು. ಅನ್ನದಾನ ಮಾಡಬೇಕು, ಗುರುವಿಗೆ ಗೌರವ ನೀಡಬೇಕು. ತಂದೆ ತಾಯಿ ಗುರು ಹಿರಿಯರ ಮಾತುಗಳನ್ನು ಕೇಳಬೇಕು. ಜೀವನದಲ್ಲಿ ಒಂದು ನಿಯಮ ಪಪಾಲನೆ ಮಾಡ್ಬೇಕು. ಭುವಿಯಲ್ಲಿ ಮನುಷ್ಯನಾಗಿ ಹುಟ್ಟಿರುವುದು ಸಾರ್ಥಕ ಆಯಿತು ಎನ್ನುವ ರೀತಿಯಲ್ಲಿ ನಾವುಗಳು ಬಾಳ್ವೆ ನಡೆಸಬೇಕು ಎಂದು ಕೊಡಿ ಶ್ರೀಗಳು ಸಂದೇಶ ನೀಡಿದರು.

ಇದನ್ನೂ ಓದಿ: ಕಾರ್ ಲೋನ್ ತೆಗೆದುಕೊಳ್ಳುವ ಮೊದಲು ಈ ವಿಚಾರಗಳನ್ನು ನೆನಪಿಡಿ

Sharing Is Caring:

Leave a Comment