KSRTC ಯಲ್ಲಿ ಕೆಲಸ ಮಾಡಬೇಕು ಎಂಬುವವರಿಗೆ ಶುಭಸುದ್ದಿ. ಹುದ್ದೆಗಳ ನೇಮಕಾತಿ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ತಿಳಿಸಿದ್ದಾರೆ. ಆಸಕ್ತರು ಹುದ್ದೆಗೆ ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ.
ಹುದ್ದೆಯ ಬಗ್ಗೆ ಮಾಹಿತಿ :- ಕೆಎಸ್ಆರ್ಟಿಸಿ ಯಲ್ಲಿ ಬರೋಬ್ಬರಿ 13,000 ಚಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ ಆಗಬೇಕಿದೆ. ಈ ಹುದ್ದೆಗಳು ಗುತ್ತಿಗೆಯ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದೆ. ಅಧಿಸೂಚನೆ ಪ್ರಕಟ ಅದ ಬಳಿಕ ಪೂರ್ಣ ಮಾಹಿತಿ ಕೆಎಸ್ಆರ್ಟಿಸಿ ವೆಬ್ಸೈಟ್ ನಲ್ಲಿ ಬಿಡುಗಡೆ ಆಗಲಿದೆ.
ಉದ್ಯೋಗ ಮಾಡಬೇಕಾದ ಸ್ಥಳಗಳು :- ಕೆಎಸ್ಆರ್ಟಿಸಿ ಚಾಲಕ ಹುದ್ದೆಗಳ ನೇಮಕಾತಿ ಬೆಂಗಳೂರು ಹಾಗೂ ರಾಮನಗರ ಮತ್ತು ಆನೇಕಲ್ ಹಾಗೂ ಇತರ ಕಡೆ ನಡೆಯಲಿದೆ. ಈ ಸ್ಥಳಗಳಲ್ಲಿ ಉದ್ಯೋಗ ಮಾಡಲು ಇಷ್ಟ ಪಡುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗೆ ಸಿಗುವ ತಿಂಗಳ ವೇತನ :- ಚಾಲಕ ಹುದ್ದೆಗೆ ನೇಮಕ ಅದ ಅಭ್ಯರ್ಥಿಗಳಿಗೆ ತಿಂಗಳಿಗೆ 23,700 ರೂಪಾಯಿ ಸಂಬಳ ನೀಡಲಾಗುತ್ತದೆ. ಸಂಬಳದ ಜೊತೆಗೆ PF ಹಾಗೂ ESI ಸೌಲಭ್ಯಗಳು ಇರಲಿದೆ.
ಶೈಕ್ಷಣಿಕ ಅರ್ಹತೆ ಏನು?: ಕೆಎಸ್ಆರ್ಟಿಸಿ ಚಾಲಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ವಾಹನ ಚಲಾವಣೆ ಪರವಾನಿಗೆ ಹೊಂದಿರುವುದು ಬಹಳ ಅಗತ್ಯ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SSLC ಪಾಸಾದವರು ಸರ್ಕಾರಿ ಉದ್ಯೋಗ ಮಾಡಬೇಕು ಅಂತ ಆಸೆ ಇರೋರಿಗೆ SSC ನೀಡುತ್ತಿದೆ ಭರ್ಜರಿ ಗುಡ್ ನ್ಯೂಸ್.
ನಿಯಮಗಳು ಏನು?
ಹುದ್ದೆಗೆ ಅರ್ಜಿ ಸಲ್ಲಿಸಲು ಕೆಲವು ನಿಯಮಗಳು ಇವೆ ಅದೇನೆಂದರೆ :-
- ಅನುಭವ : ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಲಘು ಮೋಟಾರ್ ವಾಹನ ಚಾಲಕರಾಗಿ ಕನಿಷ್ಠ ಪಕ್ಷ ಎರಡು ವರ್ಷಗಳಾದರೂ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.
- ಹಕ್ಕು :- ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತಾ ಇರುವ ಕಾರಣ ಅಭ್ಯರ್ಥಿಗೆ ಹುದ್ದೆಯ ಯಾವುದೇ ಹಕ್ಕುಗಳು ಇರುವುದು ಇಲ್ಲ.
- ತೆರವು ಗೂಳಿಸುವಿಕೆ :-ಯಾವುದೇ ಸಮಯದಲ್ಲಿ ಖಾಯಂ ಹುದ್ದೆಯ ನೇಮಕಾತಿ ನಡೆದರೆ ನಿಮ್ಮನ್ನು ಕೆಲಸದಿಂದ ಷರತ್ತು ಬದ್ಧವಾಗಿ ತೆರವು ಗೊಳಿಸಲಾಗುವುದು.
- ಷರತ್ತು ಮತ್ತು ನಿಯಮ :- ನಿಯಮ ಮತ್ತು ಷರತ್ತುಗಳಿಗೆ ಒಪ್ಪಿಗೆ ಸೂಚಿಸುವ ಅಭ್ಯರ್ಥಿ ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ :- ನಿಯಮ ಮತ್ತಷ್ಟು ಷರತ್ತು ಗಳಿಗೆ ಒಪ್ಪಿಗೆ ಇರುವ ಅಭ್ಯರ್ಥಿಗಳಿಗೆ ಚಾಲನೆ ತರಬೇತಿ ನಡೆಸಿ ನಂತರ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ನಂತರ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ. ತದನಂತರದ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗೆ ಕೆಳಕಂಡ ದೂರವಾಣಿ ಸಂಖ್ಯೆ ಸಂಪರ್ಕಿಸಿ. :-
ksrtc ಅರೆಕಾಲಿಕ ಚಾಲಕ ಹುದ್ದೆಗಳ ನೇಮಕಾತಿಯ ಕುರಿತು ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ರಾಮನಗರ ಮತ್ತು ಆನೇಕಲ್ KSRTC ವಿಭಾಗದ ದೂರವಾಣಿ ಸಂಖ್ಯೆ 8090980889 ಅಥವಾ 8618876846 ಸಂಪರ್ಕಿಸಿ ಜೊತೆಗೆ ಚಾಮರಾಜನಗರ KSRTC ದೂರವಾಣಿ ಸಂಖ್ಯೆ 8050980889 ಅಥವಾ 8618876846 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ. ಇಲ್ಲವೇ ನೇರವಾಗಿ ದೂರವಾಣಿ ಕೇಂದ್ರಕ್ಕೆ ಭೇಟಿ ನೀಡಿ ನೀವು ಹೆಚ್ಚಿನ ಮಾಹಿತಿ ಪಡೆಯಿರಿ.
ಎಚ್ಚರಿಕೆಯ ಮಾಹಿತಿ :- ಇದು ಪೂರ್ಣ ಪ್ರಮಾಣದ ಖಾಯಂ ಹುದ್ದೆ ಅಲ್ಲದೆ ಇರುವ ಕಾರಣ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಇನ್ನೊಮ್ಮೆ ಷರತ್ತುಗಳ ಬಗ್ಗೆ ತಿಳಿದು ಅರ್ಜಿ ಸಲ್ಲಿಸಿ.
ಇದನ್ನೂ ಓದಿ: ಖಾಲಿ ಇರುವ ಗ್ರಾಮ ಪಂಚಾಯತಿ ಹುದ್ದೆಗಳ ನೇಮಕಾತಿಗೆ ಆದೇಶಿಸಿದ ರಾಜ್ಯ ಸರಕಾರ.