ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಿದೆ KSRTC ಹೊಸದಾಗಿ 1000 ಬಸ್ ಗಳು ಬಿಡುಗಡೆಗೆ ಪ್ಲಾನ್

ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಸಹ ಬಸ್ ಇವೆ ಆದರೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಆರಂಭ ಆದಾಗಿನಿಂದ ಏಷ್ಟು ಬಸ್ ಗಳು ಇದ್ದರೂ ಎಲ್ಲ ಬಸ್ ಗಳು ಫುಲ್ ರಶ್ ಆಗುತ್ತಿವೆ. ಇದರಿಂದ ಹೆಚ್ಚಿನ ಬಸ್ ಗಳ ಅವಶ್ಯಕತೆ ಕಾಣುತ್ತಿದೆ. ಜೂನ್ ಮೊದಲ ವಾರದಿಂದ ಎಲ್ಲಾ ಶಾಲಾ ಕಾಲೇಜುಗಳು ಆರಂಭ ಆಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಸ್ ಹತ್ತಲು ಸಹ ಆಗದ ಸ್ಥಿತಿ ಎದುರಾಗಿದೆ. ಈಗ KSRTC ಯು ಜನರ ಕಷ್ಟವನ್ನು ಅರಿತು ಹೊಸದಾಗಿ ಬಸ್ ಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

WhatsApp Group Join Now
Telegram Group Join Now

ಎಷ್ಟು ಹೊಸ ಬಸ್ ಗಳು ಬಿಡುಗಡೆ ಆಗುವ ಸಾಧ್ಯತೆ ಇದೆ?: ರಾಜ್ಯದ ಹಲವು ಭಾಗಗಳಲ್ಲಿ ಹೆಚ್ಚಿನ ಬಸ್ ಬೇಕು ಎಂಬ ಬೇಡಿಕೆ ಇದೆ. ಅದರಲ್ಲಿಯೂ ಶಕ್ತಿ ಕ್ಷೇತ್ರಗಳ ದರ್ಶನಕ್ಕೆ ಬರುವ ಜನರು ಹೆಚ್ಚಾಗಿರುವ ಕಾರಣದಿಂದ ರಾಜ್ಯದ ಹಲವು ಭಾಗಗಳಿಗೆ ಈಗ ಇರುವ ಬಸ್ ಗಳು ಸಾಕಾಗುವುದಿಲ್ಲ. ಅದರಿಂದ ಈಗ ಹೊಸದಾಗಿ ರಾಜ್ಯದಲ್ಲಿ 300 ಕ್ಕೂ ಹೆಚ್ಚಿನ ಸಾಮಾನ್ಯ ಸಾರಿಗೆ ಬಸ್ ಗಳನ್ನು ಬಿಡುಗಡೆ ಮಾಡಲು ಕೆಎಸ್ಆರ್ಟಿಸಿ ಚಿಂತನೆ ನಡೆಸಿದೆ.

ಈಗಾಗಲೇ ಮಾರ್ಗವನ್ನು ಗುರುತಿಸಲಾಗಿದೆ :- ರಾಜ್ಯದಲ್ಲಿ ಹೆಚ್ಚಿನ ಬಸ್ ಅವಶ್ಯಕತೆ ಇರುವ ಮಾರ್ಗವನ್ನು ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗುರುತಿಸಿದ್ದು, ಬೇಡಿಕೆ ಇರುವ ಹಾಗೂ ಅಗತ್ಯ ಇರುವ ಮಾರ್ಗಗಳಿಗೆ ಹೆಚ್ಚಿನ ಬಸ್ ಗಳನ್ನು ನೀಡಲಿದೆ. KSRTC ಯು ಟಿಸಿ ಅಂಬಾರಿ, ಐರಾವತ, ಪಲ್ಲಕ್ಕಿ ಬಸ್ ಗಳು ಸಹ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಾಗಿದೆ.

ಮೂರು ತಿಂಗಳಲ್ಲಿ ಸೇವೆ ಆರಂಭ :- ರಾಜ್ಯ ಸರಕಾರ ಈ ಬಗ್ಗೆ ಮಾಹಿತಿ ನೀಡಿ ಈ ಹಿಂದಿನ ಸರ್ಕಾರವು ಯಾವುದೇ ಹೊಸ ಬಸ್ ಬಿಡುಗಡೆ ಮಾಡದೆ ಇರುವುದು ಈಗ ಬಸ್ ಗಳು ಲಭ್ಯ ಇಲ್ಲ. ಆದ ಕಾರಣದಿಂದ ಇನ್ನು ಮೂರು ತಿಂಗಳ ಒಳಗೆ ಹೆಚ್ಚುವರಿ ಬಸ್ ಗಳು ಹಾಗೂ ಹೊಸ ಬಸ್ ಗಳು ರಾಜ್ಯದ ಜನರ ಸೇವೆಗೆ ಸಿದ್ಧವಾಗಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.

ಇದನ್ನೂ ಓದಿ: ಎಟಿಎಂ ನಿಂದ ಹಣ ಡ್ರಾ ಮಾಡುವ ಮೊದಲು ಎಚ್ಚರ; ಬೇಕಾ ಬಿಟ್ಟಿ ಹಣ ಡ್ರಾ ಮಾಡುದ್ರೆ ಶುಲ್ಕ ಹೆಚ್ಚಳ

ಪುನಶ್ಚೇತನ ಗೊಳ್ಳಲಿವೆ ಹಳೆ ಬಸ್ ಗಳು :-

ರಾಜ್ಯದಲ್ಲಿ ಬಸ್ ಬೇಡಿಕೆ ಹೆಚ್ಚಾಗಿರುವ ಕಾರಣ ಹೊಸ ಬಸ್ ಬಿಡುಗಡೆ ಮಾಡುವ ಜೊತೆ ಜೊತೆಗೆ 977 ಹಳೆ ಬಸ್ ಗಳನ್ನು ಪುನಶ್ಚೇತನ ಗೊಳಿಸಲು ಇಲಾಖೆ ನಿರ್ಧರಿಸಿದೆ. ಇದರ ಜೊತೆಗೆ 100 ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳ ಖರೀದಿಗೆ ಈಗಾಗಲೇ ರಾಜ್ಯ ಸರ್ಕಾರವು ಅನುಮತಿ ನೀಡಿದೆ. ಹಾಗೂ ಇನ್ನು 20 ಅಂಬಾರಿ ಹಾಗೂ 20 ಐರಾವತ ಉತ್ಸವ ಬಸ್ ಗಳ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದೆ ಇಟ್ಟಿದ್ದು ಅನುಮೋದನೆ ನೀಡುವ ಎಲ್ಲಾ ಸಾಧ್ಯತೆ ಇದೇ.

ಅವಶ್ಯಕತೆ ಇರುವ ಮಾರ್ಗಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದ ರಾಜ್ಯ ಸರ್ಕಾರ :- ರಾಜ್ಯದಲ್ಲಿ ಯಾವ ಯಾವ ಮಾರ್ಗಗಳಲ್ಲಿ ಹೆಚ್ಚಿನ ಬಸ್ ಅವಶ್ಯಕತೆ ಇದೆ ಹಾಗೂ ಎಲ್ಲಿ ಬಸ್ ಗಳು ಖಾಲಿ ಇವೆ ಎಂಬ ಎಲ್ಲಾ ಮಾಹಿತಿಗಳನ್ನು ವರದಿಯ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ರಾಜ್ಯ ಸರ್ಕಾರವು ಸೂಚನೆ ನೀಡಿದೆ. ವರದಿ ಸಲ್ಲಿಕೆಯಾದ ಬಳಿಕ ಪರಿಶೀಲನೆ ನಡೆಸಿ ಬಸ್ ಗಳ ಸೇರ್ಪಡೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಲಿದೆ.

ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ :- ದಿನವೂ ಶಾಲೆಯಿಂದ ಮನೆಗೆ ಬಸ್ ನಲ್ಲಿ ಪ್ರಯಾಣ ಮಾಡುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಬಸ್ ಬಿಡುಗಡೆ ಮಾಡುವುದರಿಂದ ಬಹಳ ಅನುಕೂಲ ಆಗಲಿದೆ. ಈಗಾಗಲೇ ರಾಜ್ಯದಲ್ಲಿ ಬಸ್ ಗಳ ಕೊರತೆ ಇಂದ ವಿದ್ಯಾರ್ಥಿಗಳಿಗೆ ಒಂದೇ ಬಸ್ ನಂಬಿ ಇರಬೇಕಾಗಿತ್ತು. ಇದರಿಂದ ದಿನವೂ ನೂಕು ನುಗ್ಗಿನಲಿ ಪ್ರಯಾಣಿಸಬೇಕಾಗಿತ್ತು. ಈಗ ಹೊಸ ಬಸ್ ಸೇರ್ಪಡೆಯಿಂದ ಬಸ್ ಪ್ರಯಾಣ ಕಷ್ಟವಾಗುವುದಿಲ್ಲ.

ಉದ್ಯೋಗಸ್ಥರಿಗೆ ಸರಿಯಾದ ಸಮಯಕ್ಕೆ ಬಸ್ ಸಿಗುತ್ತಿಲ್ಲ:-

ಕಂಪನಿ ಹಾಗೂ ಸರ್ಕಾರಿ ಸೇವೆಯಲ್ಲಿ ನಿರತರಾಗಿರುವ ನೌಕರರಿಗೆ ಆಫೀಸ್ ಕೆಲಸದ ಸಮಯದಲ್ಲಿ ನಿಗದಿತ ಬಸ್ ಸಿಗದೇ ಒದ್ದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಮಕ್ಕಳ ಶಾಲೆ ಆರಂಭ ಆಗಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಇನ್ನಷ್ಟು ಜಾಸ್ತಿ ಇದೆ. ದಿನವೂ ಸರಿಯಾದ ಸಮಯಕ್ಕೆ ಆಫೀಸ್ ಗೆ ತೆರಳುಲು ಕಷ್ಟ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನಿತರ ಮಾರ್ಗಗಳ ಬಗ್ಗೆ ನೌಕರು ಚಿಂತನೆ ಮಾಡಬೇಕಿದೆ ಸ್ಥಿತಿ ಇದೆ. ಅದರಿಂದ ರಾಜ್ಯದ ನೌಕರರು ಸಹ ತಮ್ಮ ಸಮಸ್ಯೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು.

ಶಕ್ತಿ ಯೋಜನೆಯ ಬಗ್ಗೆ ಮಾತನಾಡಿದವರು ಉತ್ತರಿಸಿದ ರಾಜ್ಯ ಸರ್ಕಾರ :- ಈಗಾಗಲೇ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಯಲ್ಲಿ ಇದ್ದು, ಇದರಿಂದ ಮನೆಯ ಹೆಂಗಸರು ಬಸ್ ನಲ್ಲಿ ಪ್ರಯಾಣ ಮಾಡುವ ಸಂಖ್ಯೆ ಜಾಸ್ತಿ ಆಗಿದೆ. ಇದರಿಂದ ಜನಸಾಮಾನ್ಯರ ಓಡಾಟಕ್ಕೆ ಬಹಳ ತಿಂದರೆ ಆಗಿದೆ ಎಂದು ಹೇಳುವ ಜನರಿಗೆ ಈಗ ರಾಜ್ಯ ಸರ್ಕಾರವು ಸರಿಯಾದ ರೀತಿಯಲ್ಲಿ ಉತ್ತರ ನೀಡುವ ನಿಟ್ಟಿನಲ್ಲಿ ಈಗ ಬಸ್ ಬಿಡುಗಡೆ ಮಾಡಿ ಉತ್ತರ ನೀಡಲು ಮುಂದಾಗಿದೆ. ಮೂರು ತಿಂಗಳ ಒಳಗೆ ಬಿಡುಗಡೆ ಆಗಲಿರುವ ಸಾವಿರಾರು ಬಸ್ ಗಳಿಂದ ರಾಜ್ಯದ ಜನರ ಸಮಸ್ಯೆ ದೂರವಾಗಲಿದೆ. ಬಸ್ ಬಿಡುಗಡೆ ಆದ ಬಳಿಕ ಶಕ್ತಿ ಯೋಜನೆಯ ಬಗ್ಗೆ ಅಪಹಾಸ್ಯ ಮಾಡಿರುವ ಜನರಿಗೆ ತಕ್ಕ ಉತ್ತರ ನೀಡಿದಂತೆ ಆಗಲಿದೆ ಎಂದು ಪ್ರಯಾಣಿಕರು ತಿಳಿಸಿದರು.

ಬಸ್ ಪಾಸ್ ವಿತರಣೆ ಮಾಡುವ KSRTC :-

ಪ್ರತಿ ವರ್ಷದಂತೆಯೇ ಈ ವರ್ಷವೂ ಸಹ ಶಾಲಾ ಕಾಲೇಜು ಮಕ್ಕಳಿಗೆ ಕಡಿಮೆ ದರದಲ್ಲಿ ಬಸ್ ಪಾಸ್ ವಿತರಣೆ ಮಾಡಲು ಈಗಾಗಲೇ ಕೆಎಸ್ಆರ್ಟಿಸಿ ಆರಂಭಿಸಿದೆ. ಜೂನ್ ಒಂದನೇ ತಾರೀಖಿನಿಂದ ರಾಜ್ಯದಲ್ಲಿ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ಆರಂಭ ಆಗಿದೆ. ಸೇವಸಿಂದು ಆನ್ಲೈನ್ ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ. ತರಗತಿಯಿಂದ ತರಗತಿಗೆ ಬಸ್ ಪಾಸ್ ದರ ಹಾಗೂ ಪಾಸ್ ನ ಸಮಯ ಬೇರೆ ಬೇರೆ ಆಗಿರಲಿದ್ದು. ಬಸ್ ಪಾಸ್ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಗೆ ಹತ್ತಿರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಅಥವಾ ಕೆಎಸ್ಆರ್ಟಿಸಿ ಆನ್ಲೈನ್ ಪೋರ್ಟಲ್ ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ. ಶಕ್ತಿ ಯೋಜನೆಯಲ್ಲಿ ಹಿಂದಿನ ವರ್ಷದ ಹಾಗೆಯೇ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ನೀಡುತ್ತಿಲ್ಲ. ವಿದ್ಯಾರ್ಥಿನಿಯರು ಎಂದಿನಂತೆ ಆಧಾರ್ ಕಾರ್ಡ್ ತೋರಿಸಿ ನಿಮ್ಮ ಉಚಿತ ಟಿಕೆಟ್ ಪಡೆದುಕೊಳ್ಳಬೇಕು. ಗಂಡು ಮಕ್ಕಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿ ನಂತರ ನಿಮ್ಮ ಪಾಸ್ ಪಡೆದುಕೊಳ್ಳಬಹುದು. ಬಿಎಂಟಿಸಿ ಯಲ್ಲಿ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೂ ಇದೆ ನಿಯಮ ಅನ್ವಯ ಆಗಲಿದೆ.

ಇದನ್ನೂ ಓದಿ: ಬಿಪಿಎಲ್ ಕಾರ್ಡ್ ವಿತರಣೆ ಮುಂದೂಡಿದ ರಾಜ್ಯ ಸರ್ಕಾರ. ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅಡ್ಡಿ

Sharing Is Caring:

Leave a Comment