ವಿಶ್ವಕರ್ಮ ಯೋಜನೆ ಎಂಬುದು ಕೇಂದ್ರ ಸರಕಾರವು ಕುಶಲ ಕೆಲಸಗಾರರು ಮತ್ತು ಕುಟುಂಬದ ಸದಸ್ಯರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಪ್ರಾರಂಭಿಸಿರುವ ಒಂದು ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಆಕರ್ಷಣೆ ಎಂದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ. ನೀವು ಸಹ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಏನೇನು ದಾಖಲೆ ನೀಡಬೇಕು ಎಂಬ ಮಾಹಿತಿಗೆ ಈ ಲೇಖನವನ್ನು ಪೂರ್ತಿ ಓದಿ.
ಯೋಜನೆಗೆ ಮುಖ್ಯ ಉದ್ದೇಶ ಏನು?: ಕುಶಲಕರ್ಮಿ ವರ್ಗದವರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಮೋದಿ ಸರ್ಕಾರವು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ. ಕಡಿಮೆ ಬಡ್ಡಿಯ ಸಾಲದ ಮೂಲಕ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡುವುದು ವಿಶ್ವಕರ್ಮ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ :- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಮಧ್ಯಮ ಕೈಗಾರಿಕೆ ಕುಟುಂಬಗಳಿಗೆ ಮೊದಲ ಕಂತಿನಲ್ಲಿ 5% ಬಡ್ಡಿದರದಲ್ಲಿ ₹1 ಲಕ್ಷವನ್ನು 18 ತಿಂಗಳ ಕಾಲ ಮತ್ತು ಎರಡನೇ ಕಂತಿನಲ್ಲಿ ₹2 ಲಕ್ಷವನ್ನು ಸೇರಿಸಿ ಒಟ್ಟು ₹3 ಲಕ್ಷವನ್ನು ನೀಡಲಾಗುತ್ತದೆ, ಆದರೆ ಅರ್ಜಿದಾರರು ಕೇಂದ್ರ ಸರ್ಕಾರದ ಇತರ ಯಾವುದೇ ಸೌಲಭ್ಯವನ್ನು ಪಡೆಯಬಾರದು ಎಂಬುದು ಒಂದು ಪ್ರಮುಖ ಷರತ್ತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು:-
- ಆಧಾರ್ ಕಾರ್ಡ್.
- ಪಾಸ್ಪೋರ್ಟ್ ಗಾತ್ರದ ಫೋಟೋಗಳು.
- ಪಡಿತರ ಚೀಟಿ.
- ಪ್ಯಾನ್ ಕಾರ್ಡ್.
- ಮೊಬೈಲ್ ಸಂಖ್ಯೆ.
- ವಾಸಸ್ಥಳ ಪ್ರಮಾಣ ಪತ್ರ.
- ಜಾತಿ ಪ್ರಮಾಣ ಪತ್ರ.
- ಬ್ಯಾಂಕ್ ಖಾತೆ ವಿವರಗಳು.
- ಪಾಸ್ಬುಕ್ ವಿವರಗಳು.
ಅರ್ಜಿ ಸಲ್ಲಿಸುವ ವಿಧಾನ :- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಲಾಭ ಪಡೆಯಲು ಬಯಸುವವರು https://pmvishwakarma.gov.in/ ಈ ವೆಬ್ಸೈಟ್ಗೆ ಭೇಟಿ ನೀಡಿ ಅಗತ್ಯ ದಾಖಲೆ ಮತ್ತು ಮಾಹಿತಿಗಳನ್ನು ಸಲ್ಲಿಸಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇಲಾಖೆ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು :- ಈ ಯೋಜನೆಯಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೆ ಒಂದು ವಾರದ ಮೂಲಭೂತ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುವುದು. ಹಾಗೂ 15 ದಿನಗಳ ಸುಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುವುದು. ಈ ತರಬೇತಿಯ ಸಮಯದಲ್ಲಿ ಪ್ರತಿ ದಿನಕ್ಕೆ 500 ರೂ. ಗಳ ದೈನಂದಿನ ಭತ್ಯೆಯನ್ನು ಮತ್ತು ತರಬೇತಿಯ ಅವಧಿ ಒಮ್ಮೆ ನಂತರ 15,000 ರೂ. ಗಳನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: UPI ಮೂಲಕ ಈಗ ನೀವು ಒಂದು ಬಾರಿಗೆ 5 ಲಕ್ಷ ರೂಪಾಯಿವರೆಗೆ ಪಾವತಿಯನ್ನು ಮಾಡಬಹುದು, ಸಂಪೂರ್ಣ ವಿವರ ಇಲ್ಲಿದೆ.
ಈ ಯೋಜನೆಯಿಂದ ಯಾರಿಗೆ ಅನುಕೂಲವಾಗುತ್ತದೆ?
ಸಣ್ಣ ಕೈಗಾರಿಕೆಗಳನ್ನು ನಡೆಸುವ ಕುಟುಂಬಗಳು ಹಾಗೂ ಮಧ್ಯಮ ಕೈಗಾರಿಕೆಗಳನ್ನು ನಡೆಸುವ ಕುಟುಂಬಗಳು ಹಾಗೂ ತಮ್ಮ ಕೆಲಸವನ್ನು ವಿಸ್ತರಿಸಲು ಬಯಸುವ ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳ ಬದುಕಿಗೆ ಇದು ಉತ್ತಮ ಯೋಜನೆ ಆಗಿದೆ.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ದೇಶದ ಕುಶಲಕರ್ಮಿಗಳಿಗೆ ಒಂದು ದೊಡ್ಡ ಅವಕಾಶವಾಗಿದೆ. ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ನೀವು ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.
ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ: ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಗೆ ಸಂಪರ್ಕಿಸಿ. ಅಥವಾ ಆನ್ಲೈನ್ನಲ್ಲಿ ಈ ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ಗಳಲ್ಲಿ ಮಾಹಿತಿ ಪಡೆಯಿರಿ.