ಮಿನಿ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರ ಹುದ್ದೆಗಳ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ.

ನಾವು ಓದಿರೋದು ಕಡಿಮೆ ನಮ್ಗೆಲ್ಲಾ ಯಾರು ಕೆಲಸ ಕೊಡ್ತಾರೆ ಯಾವ್ದಾದ್ರು ಗಾರ್ಮೆಂಟ್ಸ್ ಗೆ ಹೋದ್ರೆ ಹೇಗೋ ಜೀವನ ನಡೆಯುತ್ತೆ ಅನ್ನೋ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಹೌದು ಹೆಚ್ಚು ಓದಿಲ್ಲ ಅನ್ನೋ ಚಿಂತೆ ಬೇಡ ಜಾಸ್ತಿ ತಿಳಿದುಕೊಂಡಿಲ್ಲವಲ್ಲ ಅನ್ನೋ ಆತಂಕ ಬೇಡ… ನಿಮ್ಮ ಬುದ್ದಿ ಸಾಮರ್ಥ್ಯಕ್ಕೆ ಅನುಗುಣವಾಗುವಂತೆ ಇದೀಗ ಅಂಗನವಾಡಿಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸರ್ಕಾರ ಇದೀಗ ಅಧಿಸೂಚನೆ ಹೊರಡಿಸಿದೆ. ಹೌದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

WhatsApp Group Join Now
Telegram Group Join Now

ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿಗಳಲ್ಲಿ ಖಾಲಿ ಇರುವ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಆನ್​ಲೈನ್​​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮುಗಿಸಿದ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೌದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಈ ಕುರಿತು ಮಾಹಿತಿಯನ್ನ ನೀಡಲಾಗಿದ್ದು, ಇಲಾಖೆ ಕಡೆಯಿಂದ ನೀಡಿರುವ ವೆಬ್ಸೈಟ್ ನ ಲಿಂಕ್ ಓಪನ್ ಆದ ನಂತರ, ಖಾಲಿ ಹುದ್ದೆಗಳು ಲಭ್ಯವಿರುವ ಜಿಲ್ಲೆ,ತಾಲೂಕು, ಅಧಿಸೂಚನೆ ಸಂಖ್ಯೆ, ಹುದ್ದೆಗಳ ಸಂಖ್ಯೆ ಆಯ್ಕೆ ಮಾಡಿಕೊಂಡು ಆನ್ಲೈನ್ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಅಪ್ಲಿಕೇಶನ್ ಸಬ್ಮಿಟ್ ಮಾಡಿದ ನಂತರ ಫಾರ್ಮನ್ನು ಡೌನ್ಲೋಡ್ ಮಾಡಿಕೊಂಡ್ರೆ ಸಾಕು ನೀವು ಅರ್ಜಿ ಪರಿಪೂರ್ಣಗೊಳಿಸಿದಂತೆ. ಹಾಗಾದ್ರೆ ಈ ಕುರಿತು ಸಂಪೂರ್ಣವಾದ ಮಾಹಿತಿ ನೋಡೋಣ ಅಂದ್ರೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ವಯೋಮಿತಿ, ವಿದ್ಯಾಭ್ಯಾಸ, ಅನುಭವ ಹೀಗೆ ಏನೆಲ್ಲಾ ದಾಖಲೆಗಳು ಬೇಕು ಎಲ್ಲಿ, ಹೇಗೆ ಅರ್ಜಿ ಸಲ್ಲಿಸೋದು ನೋಡೋಣ ಬನ್ನಿ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?? ಏನೆಲ್ಲಾ ದಾಖಲೆಗಳು ಬೇಕು ಗೊತ್ತ

ಈ ಮೊದಲೇ ಹೇಳಿದಂತೆ ಹೆಚ್ಚಿನದಾಗಿ ಓದಿಕೊಂಡವರೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಅಂತ ಏನಿಲ್ಲ ಹೌದು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಟ ಪಿಯುಸಿ ತೇರ್ಗಡೆ ಹೊಂದಿರಬೇಕು. ಅಂದ್ರೆ ಪಿಯುಸಿ ಯಲ್ಲಿ ಪಾಸ್ ಆಗಿದ್ರು ಸಾಕು, ಮುಖ್ಯವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯಲ್ಲಿ ಅಧ್ಯಯನ ಮಾಡಿರಬೇಕು. ಅಂದ್ರೆ ಕನ್ನಡ ಮಾಧ್ಯಮದಲ್ಲಿ ಓದಿರಬೇಕು ಅಥವಾ ಕನ್ನಡ ಪ್ರಥಮ ಆದ್ಯತೆಯ ಭಾಷೆಯಾಗಿರಬೇಕು, ಇಲ್ಲವಾದಲ್ಲಿ ದ್ವಿತೀಯ ಭಾಷೆಯಾಗಿದ್ದರು ಸರಿ.

ಇನ್ನು ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು. ಕನಿಷ್ಠ 19 ವರ್ಷಗಳಿಂದ ಗರಿಷ್ಟ 35 ವರ್ಷದೊಳಗಿನ ಅರ್ಹ ಮಹಿಳೆಯರು ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಪ್ರಸ್ತುತ ಬೆಳಗಾವಿ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿ ಅಡಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್​ಲೈನ್​​ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಹೌದು ಬೆಳಗಾವಿ ಗ್ರಾಮೀಣ ವ್ಯಾಪ್ತಿಯ 7 ಅಂಗನವಾಡಿ ಕಾರ್ಯಕರ್ತೆಯರು ಮತ್ತು 26 ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದ್ದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೀಗಾಗಿ ಇಲಾಖೆಯ ವೈಬ್ ಸೈಟ್ ನಲ್ಲಿ ಭೇಟಿ ಕೊಟ್ಟು ಇನ್ನಷ್ಟು ಮಾಹಿತಿಯನ್ನ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೌದು ಸದ್ಯ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಹುದ್ದೆಗಳಿಗೆ ಅಧಿಸೂಚನೆ ಹೋರಾಡಿಸಿರುವುದರಿಂದ ಆ ಭಾಗದ ಮಹಿಳೆಯರು ಬೇಗನೆ ಅರ್ಜಿ ಸಲ್ಲಿಸಬಹುದು. ಇನ್ನು 08/08/2024 ರವರೆಗೂ ಬೆಳಗಾವಿ ಅವ್ರು ಅರ್ಜಿ ಸಲ್ಲಿಕೆ ಮಾಡಬಹುದು, ಜೊತೆಗೆ ಗ್ರಾಮೀಣ ವ್ಯಾಪ್ತಿಯವರು 04/08/2024 ರ ಒಳಗಡೆ ಅರ್ಜಿ ಸಲ್ಲಿಕೆ ಮಾಡಬೇಕು.

ಇನ್ನು ಈ ದಿನಾಂಕ ಕೊನೆಯ ದಿನಾಂಕ ವಾಗಿದ್ದು, ಅಷ್ಟರೊಳಗೆ ಅರ್ಜಿ ಸಲ್ಲಿಸಿದ್ರೆ ಉತ್ತಮ. ಮುಖ್ಯವಾಗಿ ಅರ್ಜಿ ನಮೂನೆಗೆ ಜನನ ಪತ್ರದಲ್ಲಿ ಜನ್ಮ ದಿನಾಂಕ ಇರುವಂತೆ ನೋಡಿಕೊಳ್ಳಿ ಇನ್ನು ಪಿಯುಸಿ ಅಥವಾ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ,ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇವು ಕಡ್ಡಾಯವಾಗಿ ಇರಲೇಬೇಕು. ಇನ್ನು ಈ ಲಿಂಕ್ ಮೇಲೆ click ಮಾಡುದ್ರೆ ಸಂಪೂರ್ಣ ಮಾಹಿತಿ ಕೂಡ ಸಿಗುತ್ತೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮುಖ್ಯವಾಗಿ ನೀವು ಅರ್ಜಿ ಸಲ್ಲಿಸುವ ಮುನ್ನ ಬೆಳಗಾವಿ ಜಿಲ್ಲಾ ಮತ್ತು ಗ್ರಾಮೀಣ ವ್ಯಾಪ್ತಿಯ ಅಧಿಸೂಚನೆಯನ್ನು ಗಮನವಿಟ್ಟು ಓದಿ ನಂತರ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 2000 ಲೈನ್‌ಮೆನ್‌ಗಳ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಕರೆಯಲಾಗುವುದು.

Sharing Is Caring:

Leave a Comment