ರೈತರಿಗೆ ಸಿಹಿ ಸುದ್ದಿ: ತೋಟಗಾರಿಕಾ ಇಲಾಖೆಯಿಂದ ಮಿನಿ ಟ್ರ್ಯಾಕ್ಟ‌ರ್ ಖರೀದಿಗೆ 25% ರಿಂದ 35% ಸಬ್ಸಿಡಿ ನೀಡಲಾಗುತ್ತಿದೆ.

ಟ್ರ್ಯಾಕ್ಟರ್ ಗಳು ರೈತರಿಗೆ ಅನೇಕ ಕಾರಣಗಳಿಗಾಗಿ ತುಂಬಾ ಮುಖ್ಯ ಆಗುತ್ತದೆ. ಟ್ರ್ಯಾಕ್ಟರ್ ಕೃಷಿ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ದಕ್ಷತೆಯಿಂದ ಮಾಡಲು ಸಹಾಯ ಮಾಡುತ್ತದೆ, ಇದು ರೈತರ ಲಾಭ ತಂದುಕೊಟ್ಟ ಜೀವನಮಟ್ಟವನ್ನು ಸುಧಾರಿಸಲೂ ಸಹಾಯಕ. ಇದು ಮನುಷ್ಯನ ಕೆಲಸವನ್ನು ಸುಲಭ ಮಾಡುವುದರ ಜೊತೆ ಸಮಯದ ಉಳಿತಾಯವೂ ಆಗಲಿದೆ. ಅದಕ್ಕೆ ಈಗ ರೈತರ ಅನುಕೂಲಕ್ಕೆ ಎಂದೇ ತೋಟಗಾರಿಕಾ ಇಲಾಖೆ ಮಿನಿ ಟ್ರ್ಯಾಕ್ಟ‌ರ್ ಖರೀದಿಗೆ 25% ರಿಂದ 35% ಸಬ್ಸಿಡಿ ನೀಡುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

ಮಿನಿ ಟ್ರ್ಯಾಕ್ಟರ್ ಖರೀದಿಗೆ ಎಷ್ಟು ಸಹಾಯಧನ ಸಿಗುತ್ತದೆ?

ತೋಟಗಾರಿಕಾ ಇಲಾಖೆಯು ಮಿನಿ ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಸಹಾಯಧನವನ್ನು ನೀಡುತ್ತಿದೆ. ಸಬ್ಸಿಡಿ ಪ್ರಮಾಣವು ಹೀಗಿದೆ:

  • ಸಾಮಾನ್ಯ ವರ್ಗದ ರೈತರುರಿಗೆ ಟ್ರ್ಯಾಕ್ಟರ್ ಖರೀದಿ ಬೆಲೆಯ 25% ರಷ್ಟು ಸಬ್ಸಿಡಿ ಅಂದರೆ ಗರಿಷ್ಠ 75,000 ರೂಪಾಯಿಗಳ ವರೆಗೆ ಸಬ್ಸಿಡಿ ಸಿಗುತ್ತದೆ.
  • ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರ ಬರಹಕ್ಕೆ ಟ್ರ್ಯಾಕ್ಟರ್ ಖರೀದಿ ಬೆಲೆಗೆ 35% ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅಂದರೆ ಗರಿಷ್ಠ 1,00,000 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.

ಪವರ್ ಟಿಲ್ಲರ್ ಖರೀದಿಗೆ ಸಿಗುವ ಸಬ್ಸಿಡಿ ದರ ಹೀಗಿದೆ :-

ತೋಟಗಾರಿಕಾ ಇಲಾಖೆಯು ರೈತರಿಗೆ ಪವರ್ ಟಿಲ್ಲರ್ ಖರೀದಿಸಲು ಸಹಾಯಧನವನ್ನು ನೀಡುತ್ತದೆ. ಸಬ್ಸಿಡಿ ದರವು ಈ ಕೆಳಗಿನಂತೆ ಇದೆ :-

  • ಸಾಮಾನ್ಯ ವರ್ಗದ ರೈತರಿಗೆ ಟ್ರ್ಯಾಕ್ಟರ್ ಬೆಲೆಯ ಶೇಕಡಾ 40% ರಷ್ಟು ಸಬ್ಸಿಡಿ ಸಿಗುತ್ತದೆ. ರೈತರಿಗೆ ಗರಿಷ್ಠ ಪ್ರಮಾಣದಲ್ಲಿ 40,000 ರೂಪಾಯಿಗಳ ವರೆಗೆ ಸಬ್ಸಿಡಿ ಸಿಗಲಿದೆ.
  • ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಟ್ರ್ಯಾಕ್ಟರ್ ಬೆಲೆಯ ಶೇಕಡಾ 50% ರಷ್ಟು ಸಬ್ಸಿಡಿ ಸಿಗುತ್ತದೆಂ ಗರಿಷ್ಠ ಎಂದರೆ 50,000 ರೂಪಾಯಿಗಳ ವರೆಗೆ ಸಬ್ಸಿಡಿ ಸಿಗಲಿದೆ.

ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಅಗತ್ಯ ದಾಖಲೆಗಳು ಹೀಗಿವೆ :-

  1. ಹೊಲದ ಪಹಣಿ ಪತ್ರ
  2. ರೈತನ ಆಧಾರ್ ಕಾರ್ಡ್
  3. ನಿಮ್ಮ ಊರಿನ ತಲಾಟಿ ಸೆಟ್
  4. ಭಾವಚಿತ್ರ
  5. ಅರ್ಜಿ ನಮೂನೆ (ಇಲಾಖೆಯಿಂದ ಪಡೆಯಬಹುದು)

ಅರ್ಜಿ ಸಲ್ಲಿಸುವ ವಿಧಾನ: ಪೂರಿತ ಅರ್ಜಿ ನಮೂನೆಯನ್ನು ಜುಲೈ 31 ರ ಒಳಗೆ ಪಾವಗಡ ತಾಲ್ಲೂಕಿನ ಹಿರಿಯ ರೈತರ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂದಿಸುವಾಗ ಅಗತ್ಯ ದಾಖಲೆಗಳನ್ನು ನೀಡಬೇಕು ಜೊತೆಗೆ ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವಾಗ ಅರ್ಜಿ ನಮೂನೆಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ನೀಡಬಾರದು. ಒಮ್ಮೆ ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿದರೆ ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಮಾಹಿತಿಯನ್ನು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ವಿಶ್ವನಾಥ ಗೌಡ ಅವರು ಎಲ್ಲ ರೈತರಿಗೂ ಉಪಯುಕ್ತವಾಗಲಿ ಎಂಬ ದೃಷ್ಟಿಯಿಂದ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕು ಎಂದಾದರೆ ನೀವು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 0816-244189 ಆಗಿರುತ್ತದೆ.

ಇದನ್ನೂ ಓದಿ: ಆಧಾರ್ ಕಾರ್ಡ್ ಮೂಲಕ 10 ಲಕ್ಷ ರೂಪಾಯಿ ಸಾಲ ಪಡೆಯುವ ಯೋಜನೆ, ಸರ್ಕಾರವು 35% ಸಬ್ಸಿಡಿ ನೀಡುತ್ತದೆ.

ಇದನ್ನೂ ಓದಿ: ಪ್ರಪಂಚದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಬಜಾಜ್; ಬರೋಬ್ಬರಿ 330KM ಮೈಲೇಜ್, ಕಡಿಮೆ ಬೆಲೆಯಲ್ಲಿ ಖರೀದಿಸಿ

Sharing Is Caring:

Leave a Comment