ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯಿರಿ.

60 ವರ್ಷ ದಾಟಿದ ಬಳಿಕ ದೇಹದಲ್ಲಿ ಕೆಲಸ ಮಾಡುವ ಚೈತನ್ಯ ಕಡಿಮೆ ಆಗುತ್ತದೆ. ಇಷ್ಟು ವರುಷಗಳ ದಣಿವಿರದೆ ದುಡಿದ ಜೀವಿಗಳಿಗೆ ವಿಶ್ರಾಂತಿಯ ಅವಶ್ಯಕತೆ ಇದ್ದೆ ಇರುತ್ತದೆ. ದಿನವಿಡೀ ದುಡಿದು ಜೀವನದ ಕೊನೆಯ ಕಾಲಕ್ಕೆ ಸ್ವಲ್ಪ ಕೂಡಿಡಬೇಕು ಎಂದುಕೊಂಡರು ಹಲವರಿಗೆ ಮನೆಯ ಜವಾಬ್ದಾರಿ ಮಕ್ಕಳ ಭವಿಷ್ಯ ಎಂದು ತಮ್ಮ ರಿಟೈರ್ಮೆಂಟ್ ಲೈಫ್ ಗೆ ಎಂದು ಹಣ ಕೂಡಿಡುವ ಆಲೋಚನೆಗೆ ಹೋಗುವುಲ್ಲ. ಆದರೆ ನಿವೃತ್ತಿಯ ಜೀವನದಲ್ಲಿ ನಾವು ಕೂಡಿಟ್ಟ ಹಣವೇ ನಮಗೆ ಆಸರೆಯಾಗಿ ನಿಲ್ಲುತ್ತದೆ. ಯಾವುದೇ ಸರ್ಕಾರಿ ಅಥವಾ ಪ್ರೈವೇಟ್ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ಪೆನ್ಷನ್ ಸ್ಕೀಮ್ ಅನ್ನುವುದು ಇದ್ದೆ ಇರುತ್ತದೆ. ಆದರೆ ಜನ ಸಾಮಾನ್ಯರಿಗೆ ಎಂದೇ ಈಗ ಕೇಂದ್ರ ಸರ್ಕಾರವು ಹೊಸ ಪೆನ್ಷನ್ ಸ್ಕೀಮ್ ಪರಿಚಯಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಅಟಲ್ ಪೆನ್ಷನ್ ಸ್ಕೀಮ್(Atal Pension Scheme) :- ಇದು ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗೆ ಎಂದೇ ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯಲ್ಲಿ ನೀವು ತಿಂಗಳಿಗೆ ಕೇವಲ 210 ರೂಪಾಯಿ ಹೂಡಿಕೆ ಮಾಡಿ ನಿಮ್ಮ ನಿವೃತ್ತಿ ಜೀವನಕ್ಕೆ ನೀವು ಹಣವನ್ನು ಪಡೆಯಬಹುದು. ನಿಮ್ಮ ವೃದ್ದಾಪ್ಯ ಬದುಕಿನ ಆಸರೆಗೆ ಇದು ಬಹಳ ಮುಖ್ಯ ಆಗಿರುತ್ತದೆ. ನೀವು ಅಟಲ್ ಪೆನ್ಷನ್ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯಬಹುದಾಗಿದೆ. ಈ ಯೋಜನೆಯಲ್ಲಿ 18 ವರ್ಷದಿಂದ 40 ವರ್ಷಗಳ ವರೆಗೆ ಹೂಡಿಕೆ ಮಾಡಬಹುದು. ನಿಮ್ಮ 60 ನೇ ವಯಸ್ಸಿನ ನಂತರ ನಿಮಗೆ ಪೆನ್ಷನ್ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಟಲ್ ಪೆನ್ಷನ್ ನಲ್ಲಿ ಹೂಡಿಕೆಯ ನಿಯಮಗಳು ಹೀಗಿವೆ :-

  • 5000 ರೂಪಾಯಿ ಪೆನ್ಷನ್ ಪಡೆಯಲು :- ನೀವು 60 ವಯಸ್ಸಿನ ನಂತರ ಪ್ರತಿ ತಿಂಗಳು 5000 ಪಡೆಯಬೇಕು ಎಂದರೆ 18 ನೇ ವಯಸ್ಸಿನಿಂದ 40 ವಯಸ್ಸಿನ ವರೆಗೆ ಪ್ರತಿ ತಿಂಗಳು 210 ರೂಪಾಯಿ ಹೂಡಿಕೆ ಮಾಡಬೇಕು. ವರ್ಷಕ್ಕೆ 60,000 ರೂಪಾಯಿ ಪೆನ್ಷನ್ ಪಡೆಯಬಹುದಾಗಿದೆ. ತಿಂಗಳಿಗೆ 210 ರೂಪಾಯಿ ಪಾವತಿಸಲು ಆಗದೆ ಇದ್ದರೆ ಮೂರು ತಿಂಗಳಿಗೆ ಒಮ್ಮೆ 626 ರೂಪಾಯಿ ಪಾವತಿ ಮಾಡುವ ಅವಕಾಶ ಇರುತ್ತದೆ. ಇಲ್ಲವಾದರೆ ಆರು ತಿಂಗಳಿಗೆ 1,239 ರೂಪಾಯಿ ಪಾವತಿಸಬೇಕು. ನೀವು ಹೂಡಿಕೆ ಮಾಡುವಾಗ ನೀವು ತಿಂಗಳಿಗೆ ಅಥವಾ ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ ಪಾವತಿ ಮಾಡುತ್ತೀರಿ ಎಂಬುದನ್ನು ಅರ್ಜಿ ನಮೂನೆಯಲ್ಲಿ ತಿಳಿಸಿರಬೇಕು.
  • 1000 ರೂಪಾಯಿ ಪೆನ್ಷನ್ ಪಡೆಯಲು :- ತಿಂಗಳಿಗೆ 1000 ರೂಪಾಯಿ ಪೆನ್ಷನ್ ಪಡೆಯಬೇಕು ಎಂದಾದರೆ ನೀವು 18 ನೇ ವಯಸ್ಸಿನಿಂದ 42 ರೂಪಾಯಿಗಳನ್ನು ಪಾವತಿಸಬೇಕು.
  • ನೀವು ಈ ಯೋಜನೆಯಲ್ಲಿ ತಿಂಗಳಿಗೆ 1,000, 2,000, 3000, 4000 ಹಾಗೂ 5000 ಹೀಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಮಾಡಿ ಪೆನ್ಷನ್ ಪಡೆಯಬಹುದು.

ಹೂಡಿಕೆ ಮಾಡಲು ಇರುವ ಅರ್ಹತೆ :-

ಅಟಲ್ ಪೆನ್ಷನ್ ಯೋಜನೆಯಲ್ಲಿ(Atal Pension Scheme) ಹೂಡಿಕೆ ಮಾಡಲು ಕೆಲವು ಅರ್ಹತಾ ಮಾನದಂಡಗಳು ಇರಬೇಕಾಗುತ್ತದೆ.

  1. ಹೂಡಿಕೆಯ ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 40.
  2. ಸ್ವಯಂ ಡೆಬಿಟ್ ಸೌಲಭ್ಯದ ಮೂಲಕ ತಿಂಗಳಿಗೆ ಅಥವಾ ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ ನಿಮ್ಮ ಬ್ಯಾಂಕ್ ಅಕೌಂಟ್ ಇಂದ ಕಡಿತ ಆಗುತ್ತದೆ. ಆಗ ನಿಮ್ಮ ಖಾತೆಯಲ್ಲಿ ಹಣ ಇರಬೇಕು.
  3. ಸಮಯಕ್ಕೆ ಸರಿಯಾಗಿ ಹೂಡಿಕೆ ಮಾಡಬೇಕು.

ಇದನ್ನೂ ಓದಿ: ಕೃಷಿ ಸಖಿ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 60,000 ರೂಪಾಯಿ ಆದಾಯ ಗಳಿಸುವ ಅವಕಾಶ

ಇದನ್ನೂ ಓದಿ: ಒಂದು ವರ್ಷದ ಅವಧಿಯ FD ಯೋಜನೆಗೆ ಹೆಚ್ಚು ಬಡ್ಡಿ ದರ ನೀಡುವ ಬ್ಯಾಂಕ್ ಗಳು ಇವು..

Sharing Is Caring:

Leave a Comment