ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಅರ್ಜಿ ಆಹ್ವಾನಿಸಲಾಗಿದೆ.

ಈಗಾಗಲೇ ಎಲ್ಲಾ ಶಾಲಾ ಕಾಲೇಜುಗಳು ಆರಂಭ ಆಗಿವೆ. ಈಗ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಹಿಂದುಳಿದ ವರ್ಗಗಳ ಮಕ್ಕಳಿಗೆ ಸಾವಿರಾರು ರೂಪಾಯಿಗಳನ್ನು ನೀಡಿ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಿ ಸಾಧ್ಯವಿಲ್ಲ ಅದೇ ಕಾರಣಕ್ಕೆ ಪ್ರತಿ ಶೈಕ್ಷಣಿಕ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಉಚಿತ ಹಾಸ್ಟೆಲ್ ನೀಡುತ್ತದೆ. ಅದಕ್ಕೆ ಅರ್ಜಿ ಸಲ್ಲಿಸುವ ಅರ್ಹತೆಗಳು ಹಾಗೂ ಕೊನೆಯ ದಿನಾಂಕಗಳ ಮಾಹಿತಿ ತಿಳಿಯಿರಿ.

WhatsApp Group Join Now
Telegram Group Join Now

ಯಾರು ಅರ್ಜಿ ಸಲ್ಲಿಸಬಹುದು :- ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ 1, 2A, 2b ,3A ,3B ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರೆ ಜನಾಂಗಕ್ಕೆ ಸೇರಿರುವ ಹೆಣ್ಣು ಮತ್ತು ಗಂಡು ಮಕ್ಕಳು ಅರ್ಜಿ ಸಲ್ಲಿಸಬಹುದು. 

ಯಾವ ತರಗತಿಯ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರು?: ಮೆಟ್ರಿಕ್ ಪೂರ್ವ ಅಂದರೆ 5 ರಿಂದ 10 ನೇ ತರಗತಿಯಲ್ಲಿ ಓದುವ ಎಲ್ಲಾ ಮಕ್ಕಳಿಗೆ ಪ್ರವೇಶ ಇರಲಿದೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದೆ ಬರುವ ಜೂಲೈ 10 2024 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬರೋಬ್ಬರಿ 85 KM ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 55 ಸಾವಿರ ರೂಪಾಯಿಗೆ ಮನೆಗೆ ತನ್ನಿ..

ಅರ್ಜಿ ಸಲ್ಲಿಸುವ ವಿಧಾನ :-

ಹೊಸದಾಗಿ ಉಚಿತ ಹಾಸ್ಟೆಲ್ ಗೆ ಪ್ರವೇಶ ಬಯಸುವಮತ ವಿದ್ಯಾರ್ಥಿಗಳು ತಮ್ಮ ಸ್ಯಾಟ್ಸ್ ಐಡಿಯೊಂದಿಗೆ ರಾಜ್ಯ ವಿದ್ಯಾರ್ಥಿ ನಿಲಯದ ಅಧಿಕೃತ ವೆಬ್ಸೈಟ್ https://shp.karnataka.gov.in/ ಗೆ ಭೇಟಿನೀಡಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಗಳನ್ನು ನಿಖರವಾಗಿ ಭರ್ತಿ ಮಾಡಬೇಕು ಹಾಗೂ ದಾಖಲೆಗಳನ್ನು ಒದಗಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣ ಮಾತ್ರ ಮತ್ತು ಓದುವ ತರಗತಿಯ ವಿವರಗಳು ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಿದರೆ ಮಾತ್ರ ನಿಮಗೆ ಉಚಿತ ಹಾಸ್ಟೆಲ್ ಸೌಲಭ್ಯ ಸಿಗುತ್ತದೆ. ಇಲ್ಲವಾದರೆ ನಿಮ್ಮ ಅರ್ಜಿಯು ತಿರಸ್ಕಾರ ಆಗುತ್ತದೆ. ಜೊತೆಗೆ ನಿಗದಿತ ಸಮಯದ ಒಳಗಾಗಿ ನೀವು ನಿಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ.

ಹೆಚ್ಚಿನ ಮಾಹಿತಿ :-

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಿದ್ಯಾರ್ಥಿನಿಯರ ಉಚಿತ ಹಾಸ್ಟೆಲ್ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವವರು ತಾಲ್ಲೂಕುವಾರು ಹಾಗೂ ಜಿಲ್ಲಾವಾರು ವಿದ್ಯಾರ್ಥಿನಿಲಯಗಳ ವಿವರಗಳನ್ನೂ ಜೊತೆಗೆ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರ್ಬೇಕಾದ ಅರ್ಹತೆ ಮತ್ತು ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕಾದ ವಿವರಗಳು ಹಾಗೂ ನೀಡಬೇಕಾದ ದಾಖಲೆಗಳ ಪೂರ್ಣ ವಿವರಗಳನ್ನು ತಿಳಿಯಲಿ ನೀವು ವಿವರಗಳನ್ನು ರಾಜ್ಯ ವಿದ್ಯಾರ್ಥಿ ನಿಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು. ಅಧಿಕೃತ ವೆಬ್ಸೈಟ್ ವಿಳಾಸವು https://shp.karnataka.gov.in/ ಆಗಿದೆ. ಯಾವುದೇ ಕಾರಣಗಳಿಂದ ವಿದ್ಯಾರ್ಥಿಗಳು ಈ ಹಿಂದೆ ಬೇರೆ ಶಾಲೆಯಲ್ಲಿ ಕಲಿತಿದ್ದು ಈಗ ಅಂದರೆ 2024-25ನೇ ಸಾಲಿನಲ್ಲಿ ಬೇರೆ ಶಾಲೆಗಳಿಗೆ ಪ್ರವೇಶ ಪಡೆದಿದ್ದರೆ ಆಗ ವಿದ್ಯಾರ್ಥಿಗಳ ಸ್ಯಾಟ್ಸ್ ಐಡಿಯನ್ನು ಪ್ರಸಕ್ತ ಶಾಲೆಯಲ್ಲಿ ಸಂಬಂಧಿಸಿದ ಮಾಹಿತಿಯನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕೆಂಬ ನಿಯಮ ಇದೆ. ದಯವಿಟ್ಟು ಹೆಚ್ಚಿನ ಮಾಹಿತಿಗೆ ಅಧೀರ್ಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇಲ್ಲವೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.

ಇದನ್ನೂ ಓದಿ: ವಿದ್ಯಾರ್ಥಿಗಳೆ ಗಮನಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಟಾಟಾ ಕಂಪನಿ ಸ್ಕಾಲರ್ಶಿಪ್ ನೀಡುತ್ತಿದೆ. ಈಗಲೇ ಅಪ್ಲೈ ಮಾಡಿ

Sharing Is Caring:

Leave a Comment