HSRP ನಂಬರ್ ಪ್ಲೇಟ್ ಹಾಕಿಕೊಳ್ಳದೆ ಇದ್ದರೆ ಇನ್ನೂ 5 ದಿನಗಳ ಒಳಗೆ ನಂಬರ್ ಪ್ಲಾಟ್ ಹಾಕಿಸಿಕೊಳ್ಳಿ. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ

ಸಾರಿಗೆ ಇಲಾಖೆ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ದೇಶದ ಎಲ್ಲಾ ನಾಗರಿಕರು ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ತಿಳಿಸಿದೆ. ಈಗಾಗಲೆ ರಾಜ್ಯದ ಹಲವು ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಆಗಿದ್ದು ಇನ್ನು ಹಳೆಯ ನಂಬರ್ ಪ್ಲೇಟ್ ನಲ್ಲಿ ವಾಹನ ಓಡಿಸುತ್ತಾ ಇರುವವರ ಸಂಖ್ಯೆಯೂ ಅಧಿಕವಾಗಿ ಇದೆ. ಸರಕಾರ ದಂಡ ವಿಧಿಸುವುದಾಗಿ ಹೇಳಿದ್ದರೂ ಸಹ ಜನರು ಇನ್ನು ಎಚ್ಚೆತ್ತುಕೊಂಡಿಲ್ಲ. ಕೋರ್ಟ್ ನ ಆದೇಶದ ಮೇರೆಗೆ ಜೂನ್ 12 ರ ವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿ ಮುಂದೂಡಿದ್ದು. ಕೊನೆಯ ದಿನಕ್ಕೆ ಇನ್ನೇನು ಕೇವಲ 5 ದಿನಗಳು ಮಾತ್ರ ಬಾಕಿ ಇದೆ. ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳುವುದು ಹೇಗೆ ಮತ್ತು ಸಾರಿಗೆ ಇಲಾಖೆ ತಿಳಿಸಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ರಾಜ್ಯದಲ್ಲಿ ಇನ್ನೂ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನಗಳು ಎಷ್ಟು?: ಉನ್ನತ ಮೂಲಗಳ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇನ್ನೂ 1.55 ಕೋಟಿ ವಾಹನಗಳಿಗೆ ಇನ್ನೂ HSRP ನಂಬರ್ ಪ್ಲೇಟ್ ಅಳವಡಿಕೆ ಆಗಿಲ್ಲ. ರಾಜ್ಯದಲ್ಲಿ ಇಲ್ಲಿಯವರೆಗೆ ಸರಾಸರಿ ಸುಮಾರು 45 ಲಕ್ಷ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ. ಜೂನ್ 12 ರ ಒಳಗಾಗಿ ಅರ್ಜಿ ಸಲ್ಲಿಸಿದರು ನೀವು ಸಾರಿಗೆ ಇಲಾಖೆ ವಿಧಿಸುವ ದಂಡದಿಂದ ತಪ್ಪಿಸಿಳ್ಳಲು ಸಾಧ್ಯವಿದೆ. ಇಲ್ಲವಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು.

ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ :- 1 ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಮಾಡಿಕೊಂಡಿರುವ ಹಳೆಯ ವಾಹನಗಳಿಗೆ ಹಳೆಯ ನಂಬರ್ ಪ್ಲಾಟ್ ಗೆ ಬದಲಾಗಿ ಹೊಸದಾಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ದಿನಾಂಕ 1 ಏಪ್ರಿಲ್ 2019 ಕ್ಕೂ ನಂತರ ಖರೀದಿಸಿದ ವಾಹನಗಳಿಗೆ ವಾಹನ ನೋಂದಣಿ ಮಾಡಿಸುವಾಗ HSRP ನಂಬರ್ ಪ್ಲೇಟ್ ಅಳವಡಿಸಲಾಗಿದೆ.

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವ ವಿಧಾನ ಹೇಗೆ?

  • ವೆಬ್ಸೈಟ್ ಭೇಟಿನೀಡಿ :- HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು.
  • ವಾಹನ ತಯಾರಕರ ಆಯ್ಕೆ :- HSRP ನಂಬರ್ ಪ್ಲೇಟ್ ಗೆ ನಿಮ್ಮ ವಾಹನ ತಯಾರಿಕಾ ಕಂಪನಿಯ ಹೆಸರನ್ನು ಆಯ್ಕೆ ಮಾಡಬೇಕು.
  • ಮಾಹಿತಿ ಭರ್ತಿ ಮಾಡಿ :- HSRP ನಂಬರ್ ಪ್ಲೇಟ್ ಗೆ ಸಲ್ಲಿಸುವ ಅರ್ಜಿ ನಮೂನೆಯಲ್ಲಿ ನಿಮ್ಮ ವಾಹನದ ಪೂರ್ಣ ವಿವರಗಳು ಎಂದರೆ ಎಷ್ಟನೇ ಮಾಡಲ್ ಯಾವ ವರ್ಷ ತೆಗೆದುಕೊಂಡಿದ್ದು ಎಂಬ ಮಾಹಿತಿಗಳನ್ನು ಭರ್ತಿ ಮಾಡಿ.
  • ಡಿಲರ್ ಆಯ್ಕೆ ಮಾಡಿ :- ನೀವು ಯಾವ ಸ್ಥಳದಲ್ಲಿ ಅಥವಾ ಯಾವ ಡೀಲರ್ ಬಳಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಿರಿ ಎಂಬ ಬಗ್ಗೆ ಮಾಹಿತಿಯನ್ನು ಭರ್ತಿ ಮಾಡಿ ಅಥವಾ ಡೀಲರ್ ಆಯ್ಕೆ ಮಾಡಿ.
  • ಶುಲ್ಕ ಪಾವತಿಸಿ :- ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಗೆ ನಿಗದಿ ಪಡಿಸಿದ ಶುಲ್ಕವನ್ನು ಪಾವತಿಸಿ. ಯಾವುದೇ ಕಾರಣಕ್ಕೂ ನಗುದು ಪಾವತಿ ಮಾಡಬಾರದು. ಆನ್ಲೈನ್ ಮೂಲಕ ಯಾವುದೇ ಅಪ್ಲಿಕೇಶನ್ ಅಥವಾ ಆನ್ಲೈನ್ ಪೇಮೆಂಟ್ ನಿಂದಾ ಶುಲ್ಕ ಪಾವತಿ ಮಾಡಬೇಕು.
  • OTP ನಮೂದಿಸಿ :- ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು fill ಮಾಡಬೇಕು.
  • ವಿತರಣೆ ದಿನಾಂಕ ಆಯ್ಕೆ ಮಾಡಿ :- ನಿಮಗೆ ಯಾವಾಗ ಅನ್ಯಕುಲ ಆಗುತ್ತದೆಯೋ ಅವತ್ತು ನೀವು ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಅವಕಾಶ ಇರುತ್ತದೆ. ನೀವು ನಿಮಗೆ ಇಷ್ಟವಾದ ಅಥವಾ ನಿಮಗೆ ಅನುಕೂಲವಕಾರವಾದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ.
  • ಯಾವ ಸ್ಥಳ ಎಂಬ ಮಾಹಿತಿ ನೀಡಿ :- ನೀವು HSRP ನಂಬರ್ ಪ್ಲೇಟ್ ಅಳವಡಿಕೆಯನ್ನು ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ವಿತರಕರ ಕಚೇರಿಯಲ್ಲಿ ಮಾಡುತ್ತೀರೋ ಎಂಬ ಬಗ್ಗೆ ಮಾಹಿತಿಯನ್ನು ನೀಡಬೇಕು.
  • ವಿತರಕರ ಸಂಸ್ಥೆಗೆ ಭೇಟಿನೀಡಿ :- ನೀವು ಯಾವ ಡೀಲರ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡೆಯಿರುತ್ತಿರೋ ಅವರ ಆಫೀಸ್ ಗೆ ನೇರವಾಗಿ ಭೇಟಿ ನೀಡಿ . ನಂತರ ನೀವು ಆಯ್ಕೆ ಮಾಡಿರುವ ದಿನಾಂಕದಂದು ನೀವು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬಹುದು.

ನೀವು ಆಯ್ಕೆ ಮಾಡಿದ ದಿನಾಂಕದಂದು ನೀವು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕು. ಮನೆಯಲ್ಲಿ ನೀವು ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡರೆ ನೀವು ಅಳವಡಿಸಿಕೊಂಡ ಬಗ್ಗೆ ದಾಖಲೆಯಾಗಿ ಫೋಟೋವನ್ನು ಸಂಸ್ಥೆಗೆ ನೀಡಬೇಕಾಗುತ್ತದೆ.

HSRP ನಂಬರ್ ಪ್ಲೇಟ್ ಅಳವಡಿಕೆ ಬಗ್ಗೆ ಪ್ರಮುಖ ಅಂಶಗಳು ಏನೇನು ಎಂಬುದನ್ನು ನೋಡೋಣ :-

  • ನೀವು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಇಲಾಖೆಯ ಅಧಿಕೃತ ವೆಬ್ಸೈಟ್ ಗಳಾದ https://transport.karnataka.gov.in ಹಾಗೂ www.siam.in ಗೆ ಮಾತ್ರ ಭೇಟಿ ನೀಡಬೇಕು. ಇದರ ಹೊರತು ಬೇರೆ ವೆಬ್ಸೈಟ್ ಗಳು ಮಾನ್ಯವಾಗಿಲ್ಲ ಎಂಬುದು ನಿಮಗೆ ತಿಳಿದಿರಲಿ. ಯಾವುದೇ ಫೇಕ್ ವೆಬ್ಸೈಟ್ ಗೆ ಭೇಟಿ ನೀಡದೀರಿ.
  • ಯಾವುದೇ ರೀತಿಯಾದ ರಸ್ತೆಯ ಬದಿಯಲ್ಲಿ ಇರುವ ನಕಲಿ ಮಾರಾಟಗಾರರು ಹಾಲೋಗ್ರಾಮ್ ಅಥವಾ IND ಮಾರ್ಕ್ ಹಾಗೂ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP ನಂಬರ್ ಪ್ಲೇಟ್ ಗಳು ಒಂದೇ ರೀತಿಯ ಪ್ಲೇಟ್‌ಗಳು ಹಾಗೂ ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅದರ ಬಗ್ಗೆ ನಿಮಗೆ ಎಚ್ಚರಿಕೆ ಇರಲಿ.
  • ಅಳವಡಿಸಿದ HSRP number plate ಅಲ್ಲದೆಯೇ ಯಾವುದೇ ವಾಹನದ ಮಾಲೀಕತ್ವ ವರ್ಗಾವಣೆ ಆಗಲಿ ಅಥವಾ ವಿಳಾಸ ಬದಲಾವಣೆ ಅಗಲಿನ್ ಕಂತು ಕರಾರು ನಮೂದು ಅಥವಾ ರದ್ದತಿ ಹಾಗೂ ಪತ್ರ ನವೀಕರಣದಂತಹ ಯಾವುದೇ ಸೇವೆಗಳನ್ನು ನೀಡಲ್ಗುವುದಿಲಲ್. ಶುಲ್ಕ ಪಾವತಿಸಿರುವ ಪ್ರಕರಣಗಳಲ್ಲಿ, HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ಮಾನ್ಯವಾದ HSRP ರಸೀದಿಯನ್ನು ಹೊಂದಿರುವ ವಾಹನಗಳಿಗೆ ಯಾವುದೇ ದಂಡವಿಧಿಗಳು ಲಭ್ಯವಿಲ್ಲ ಎಂಬುದು ನಿಮಗೆ ತಿಳಿದಿರಲಿ.
  • ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಅಳವಡಿಕೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಸಂಶಯಗಳು ಅಥವಾ ತೊಂದರೆ ಆದರೆ ಸಹಾಯವಾಣಿ ಸಂಖ್ಯೆ 94498 63429 ಅಥವಾ 94498 63426 ಗೆ ಕರೆಮಾಡಿ. ಕಛೇರಿಯ ಸಮಯ ಬೆಳಿಗ್ಗೆ 10 ಗಂಟೆ ಇಂದ ಸಂಜೆ 5.30 ಗಂಟೆ ಆಗಿರುತ್ತದೆ.

ನಿಗದಿತ ಸಮಯದ ಒಳಗೆ ನೀವು HSRP ನಂಬರ್ ಪ್ಲೇಟ್ ಅಳವಡಿಕೆ ಅರ್ಜಿ ಸಲ್ಲಿಸಿದೆ ಇದ್ದರೆ ಅಥವಾ ನೀವು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದೆ ಇದ್ದರೆ ನೀವು 1000 ರೂಪಾಯಿಗಳ ವರೆಗೆ ದಂಡ ಕಟ್ಟಬೇಕು ಎಂದು ಈಗಾಗಲೇ ರಾಜ್ಯ ಸರಕಾರ ತಿಳಿಸಿದೆ. ಜೂನ್ 12 ರಂದು ಕೋರ್ಟ್ ಆದೇಶದ ಮೇಲೆ ಮುಂದಿನ ತೀರ್ಮಾನವನ್ನು ರಾಜ್ಯ ಸರಕಾರ ತೆಗೆದುಕೊಳ್ಳಲಿದೆ.

Sharing Is Caring:

Leave a Comment