ಫೋನ್ ಪೇ ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ಒಂದು ಡಿಜಿಟಲ್ ಪಾವತಿ ಆಯಪ್ ಆಗಿದೆ. ಇದನ್ನು ನೀವು ಸುಲಭವಾಗಿ ಹಣವನ್ನು ಕಳುಹಿಸಬಹುದು, ಪಡೆಯಬಹುದು ಮತ್ತು ವಿವಿಧ ಸೇವೆಗಳಿಗೆ ಪಾವತಿ ಮಾಡಬಹುದು. ಇದು ಒಂದು ರೀತಿಯ ಡಿಜಿಟಲ್ ವಾಲೆಟ್‌ನಂತೆ ಕಾರ್ಯನಿರ್ವಹಿಸುತ್ತದೆ. ನೀವು ಸಹ ಫೋನ್ ಪೇ ಬಳಸುತ್ತಿದ್ದಾರೆ ನಿಮಗೆ ಈಗ ಒಂದು ಹೊಸ ಸುದ್ದಿ ನೀಡುತ್ತಿದೆ. ನೀವು ಫೋನ್ ಪೇ ಯಲ್ಲಿ ಹಣ ಇಲ್ಲದೆ ಇದ್ದರೂ ನೀವು ಪಾವತಿ ಮಾಡಬಹುದು. ಈ ವಿಶೇಷ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ.
ಇನ್ಮುಂದೆ ಹಣ ಇಲ್ಲದಿದ್ದರೆ ನೀವು ಚಿಂತಿಸುವ ಅಗತ್ಯ ಇಲ್ಲ:-
ಫೋನ್‌ಪೇ ಅಪ್ಲಿಕೇಶನ್ ಹೊಸ ವೈಶಿಷ್ಟ್ಯದೊಂದಿಗೆ, ನೀವು ಎಲ್ಲಿ ಹೋದರೂ ನಿಮ್ಮೊಂದಿಗೆ ನಿಮ್ಮ ಡಿಜಿಟಲ್ ವಾಲೆಟ್ ಇದ್ದರೆ ಮುಂದೆ ಹಣದ ಕೊರತೆಯಿಂದ ಪೇಚಿಗೆ ಸಿಲುಕುವ ಅಗತ್ಯವಿಲ್ಲ. ತುರ್ತು ಸಂದರ್ಭದಲ್ಲಿ ಹಣವಿಲ್ಲದೆ ಸಿಕ್ಕಿಬಿದ್ದಿದ್ದೀರಾ ಎಂದಾದರೆ ಫೋನ್‌ಪೇ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ನೀವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಪಾವತಿ ಮಾಡಬಹುದು. ಜೇಬಿನಲ್ಲಿ ಹಣ ಇಲ್ಲದಿದ್ದರೂ ಚಿಂತೆ ಮಾಡಬೇಡಿ. ಫೋನ್‌ಪೇ ನಿಮಗೆ ಯಾವಾಗಲೂ ಸಹಾಯಕ್ಕೆ ಬರುತ್ತದೆ.
ಫೋನ್ ಪೇಯ ಹೊಸ ವೈಶಿಷ್ಟ್ಯ, UPI ಮೇಲಿನ ಕ್ರೆಡಿಟ್ ಲೈನ್ ಇತ್ತೀಚೆಗೆ ತನ್ನ ಗ್ರಾಹಕರಿಗೆ ಹೊಸ ಫೋನ್ ಪೇ ಮತ್ತು ಅನುಕೂಲಕರ ಸೇವೆಯನ್ನು ಪರಿಚಯಿಸಿದೆ. ಈಗ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಕೂಡ ಫೋನ್‌ಪೇ ಮೂಲಕ ಪಾವತಿಗಳನ್ನು ಮಾಡಬಹುದು. ಇದಕ್ಕೆ ಕಾರಣ, ಫೋನ್‌ಪೇ ಈಗ UPI ಮೇಲೆ ಕ್ರೆಡಿಟ್ ಲೈನ್ ಸೇವೆಯನ್ನು ನೀಡುತ್ತಿದೆ.
ಈ ವೈಶಿಷ್ಟ್ಯದ ಪ್ರಯೋಜನಗಳು:
- ತುರ್ತು ಸಂದರ್ಭಗಳಲ್ಲಿ ಸಹಾಯಕ: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಸಹ ನೀವು ತುರ್ತು ಪರಿಸ್ಥಿತಿಯಲ್ಲಿ ಪಾವತಿಗಳನ್ನು ಮಾಡಬಹುದು.
- ಸುಲಭ ಮತ್ತು ವೇಗ: ಫೋನ್‌ಪೇ ಅನ್ನು ಬಳಸುವಷ್ಟು ಸುಲಭವಾಗಿ ಈ ಕ್ರೆಡಿಟ್ ಲೈನ್ ಸೇವೆಯನ್ನು ಬಳಸಬಹುದು.
- ವಿವಿಧ ಪಾವತಿಗಳಿಗೆ ಬಳಸಬಹುದು: ನೀವು ಈ ಕ್ರೆಡಿಟ್ ಅನ್ನು ಆನ್‌ಲೈನ್ ಶಾಪಿಂಗ್, ಬಿಲ್ ಪಾವತಿ ಇತ್ಯಾದಿ ವಿವಿಧ ಪಾವತಿಗಳಿಗೆ ಬಳಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬ್ಯಾಂಕ್ ಕ್ರೆಡಿಟ್ ಲೈನ್ ಲಿಂಕ್ ಮಾಡಬೇಕು:- ನಿಮ್ಮ ಬ್ಯಾಂಕ್‌ನ ಕ್ರೆಡಿಟ್ ಲೈನ್ ಅನ್ನು ಫೋನ್‌ಪೇಗೆ ಲಿಂಕ್ ಮಾಡುವ ಮೂಲಕ ನೀವು ಫೋನ್‌ಪೇಯ ಕ್ರೆಡಿಟ್ ಲೈನ್ ಸೌಲಭ್ಯವನ್ನು ಬಳಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯುಪಿಐ ಸೇವೆಗಳನ್ನು ಕ್ರೆಡಿಟ್ ಲೈನ್‌ಗಳಿಗೆ ಅನುಮತಿಸಿದ ನಂತರ, ಫೋನ್‌ಪೇ ಈ ಸೇವೆಯನ್ನು ತನ್ನ ಗ್ರಾಹಕರಿಗೆ ಒದಗಿಸುವ ಮೂಲಕ ಮುಂಚೂಣಿಯಲ್ಲಿ ನಿಂತಿದೆ.
ದೀಪ್ ಅಗರ್ವಾಲ್ ಅವರ ಹೇಳಿಕೆ ಏನು?: ಮುಖ್ಯಸ್ಥ ದೀಪ್ ಅಗರ್ವಾಲ್ ಅವರ ಪ್ರಕಾರ, ಈ ಹೊಸ ವೈಶಿಷ್ಟ್ಯವು ಕ್ರೆಡಿಟ್ ಬಳಕೆಯನ್ನು ಹೆಚ್ಚಿಸುವ ಮೂಲಕ ಭಾರತದ ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಮತ್ತು ಇದು ಗ್ರಾಹಕರಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕ್ರೆಡಿಟ್ ಲೈನ್ ಪ್ರಕ್ರಿಯೆ ಹೇಗೆ?
- ಫೋನ್ ಪೇ ತೆರೆಯಿರಿ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೋನ್ ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.
- ಪ್ರೊಫೈಲ್ಗೆ ಹೋಗಿ: ಮುಖಪುಟದಲ್ಲಿ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
- ಬ್ಯಾಂಕ್ ಆಯ್ಕೆ ಮಾಡಿ: ಪ್ರೊಫೈಲ್, ನಿಮ್ಮ ಬ್ಯಾಂಕ್ ಖಾತೆಗಳನ್ನು ನೀವು ನೋಡಬಹುದು. ಕ್ರೆಡಿಟ್ ಲೈನ್ ಸೌಲಭ್ಯವಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
- ಖಾತೆ ಲಿಂಕ್ ಮಾಡಿ: ಆಯ್ಕೆ ಮಾಡಿದ ಬ್ಯಾಂಕ್ ಖಾತೆಯನ್ನು ಫೋನ್ ಪೇಜ್ ಲಿಂಕ್ ಮಾಡಲು ಸೂಚನೆಗಳನ್ನು ಅನುಸರಿಸಿ. ಇದಕ್ಕೆ ನಿಮ್ಮ ಬ್ಯಾಂಕ್ ಖಾತೆ ವಿವರಗಳು ಮತ್ತು OTP (ಒನ್ ಟೈಮ್ ಪಾಸ್‌ವರ್ಡ್) ಅಗತ್ಯವಿದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಬಳಕೆದಾರರು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುತ್ತಿರುವ ಹೊಸ ನಿಯಮಗಳ ಬಗ್ಗೆ ಮಾಹಿತಿ ತಿಳಿಯಿರಿ.