ಮೋದಿ ಸರಕಾರದ ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.

ರವಿವಾರ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ಸ್ವೀಕಾರ ಮಾಡಿದ ನಂತರ ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಅನುಮೋದನೆ ಸಿಕ್ಕಿದ ಬೆನ್ನಲ್ಲೇ ಈಗ ಪಿಎಂ ಆವಾಸ್ ಯೋಜನೆ ಅನುಮೋದನೆ ದೊರೆತಿದೆ.

WhatsApp Group Join Now
Telegram Group Join Now

ನಿನ್ನೆ ಮೋದಿ ಸರಕಾರದ ಸಂಪುಟ ಸಭೆ ನಡೆದಿದೆ :- ಸೋಮವಾರ ಸಂಜೆ ಮೋದಿ ಸರ್ಕಾರದ ನೂತನ ಸಂಪುಟದ ಸಭೆ ನಡೆದಿದೆ. ಸಂಪುಟ ಸಭೆಯಲ್ಲಿ ಹಲವು ವಿಷಯಗಳು ಚರ್ಚೆ ನಡೆದಿದ್ದು ಮುಂದಿನ ನಿರ್ಧಾರಗಳ ಬಗ್ಗೆ ಹಲವಾರು ಚರ್ಚೆಗಳು ನಡೆದಿದೆ.

ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೆರವು :- ಕೇಂದ್ರ ಸರ್ಕಾರವು ಪಿಎಂ ಆವಾಸ್ ಯೋಜನೆಯ ಅಡಿಯಲ್ಲಿ ಗ್ರಾಮೀಣ ಮತ್ತು ನಗರದ ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೆರವು ನೀಡಲು ಈ ಯೋಜನೆಯನ್ನು ಆರಂಭಿಸಿದೆ. ಮೋದಿ ಸರಕಾರದ ಸಂಭೆಯಲ್ಲಿ ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನ ಅಥವಾ ಮನೆ ನಿರ್ಮಾಣದ ಸಂಖ್ಯೆಯಲ್ಲಿ ಹೆಚ್ಚಳ ಮಾಡುವುದಾಗಿ ಹೇಳಿದೆ.

ಪಿಎಂ ಆವಾಸ್ ಯೋಜನೆ ಯಾವಾಗ ಜಾರಿಗೆ ಬಂದಿದೆ :- ಪಿಎಂ ಆವಾಸ್ ಯೋಜನೆಯು ಮೋದಿ ಸರಕಾರದ ಉತ್ತಮ ಯೋಜನೆಯಲ್ಲಿ ಒಂದಾಗಿದ್ದು ಇದು 2015-16 ನೇ ಸಾಲಿನಲ್ಲಿ ಜಾರಿಗೆ ಬಂದ ಯೋಜನೆ ಆಗಿದೆ.

ಇಲ್ಲಿಯ ವರೆಗೆ ಎಷ್ಟು ಜನರಿಗೆ ವಸತಿ ಕಲ್ಪಿಸಲಾಗಿದೆ :- 2015-16 ರಿಂದ 2023-24 ರ ವರೆಗೆ ಭಾರತದಲ್ಲಿ ಪಿಎಂ ಆವಾಸ್ ಯೋಜನೆಯ ಅಡಿಯಲ್ಲಿ ಬಡ ಕುಟುಂಬದ ಅರ್ಹ ಫಲಾನುಭವಿಗಳಿಗೆ ಕಳೆದ 9 ವರ್ಷಗಳಲ್ಲಿ ಒಟ್ಟು ಕಳೆದ 10 ವರ್ಷಗಳಲ್ಲಿ ಒಟ್ಟು 4.21 ಕೋಟಿ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ನೀಡಲಾಗಿದೆ. 

ಪಿಎಂ ಅವಸ್ ಯೋಜನೆಯಲ್ಲಿ ನೀಡುವ ಮೂಲ ಸೌಕರ್ಯಗಳು ಏನೇನು?: ಪಿಎಂ ಅವಸ್ ಯೋಜನೆಯ ಅಡಿಯಲ್ಲಿ ನೀಡುವ ಎಲ್ಲಾ ಮನೆಗಳಿಗೆ ಗೃಹ ಶೌಚಾಲಯಗಳು ಹಾಗೂ LPG ಸಂಪರ್ಕ ಮತ್ತು ವಿದ್ಯುತ್ ಸಂಪರ್ಕಹಾಗೂ ಕ್ರಿಯಾತ್ಮಕ ಮನೆಗಳಂತೆ ಟ್ಯಾಪ್ ಸಂಪರ್ಕಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಪ್ರಧಾನಿಯಾದ ಮೊದಲ ದಿನವೇ ರೈತರ ಖಾತೆಗೆ 2 ಸಾವಿರ ರೂಪಾಯಿ ಜಮಾ ಮಾಡಿದ ಮೋದಿ.

ಮೋದಿ ಸರಕಾರದ ಉತ್ತಮ ಯೋಜನೆಗಳು ಯಾವುವು?

ನರೇಂದ್ರ ಮೋದಿ ಅವರ ಸರಕಾರ ಬಂದಾಗಿನಿಂದ ದೇಶದ ಜನತೆಗೆ ಅನುಕೂಲ ಆಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದೆ ಕಾರಣಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಸರಕಾರವನ್ನು ಅದುಳಿತ ನಡೆಸಲು ದೇಶದ ಜನರು ಮತ್ತೆ ಮತ ನೀಡಿ ಅರಿಸಿದ್ದಾರೆ. ಮೋದಿ ಸರಕಾರದ ಉತ್ತಮ ಯೋಜನೆಗಳು ಯಾವುದೆಂದರೆ ಆಯುಷ್ಮಾನ್ ಭಾರತ್ ಹಾಗೂ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಹಾಗೂ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ಮತ್ತು ಉಜ್ವಲಾ ಯೋಜನೆ ಹಾಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಾಗೂ ಮೇಕ್ ಇನ್ ಇಂಡಿಯಾ ಅಂತಹ ಉತ್ತಮ ಯೋಜನೆಗಳನ್ನು ಜಾರಿಗೆ ತರುವಲ್ಲಿ ನರೇಂದ್ರ ಮೋದಿ ಅವರ ಸರಕಾರದ ಕೊಡುಗೆ ಅಪಾರವಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯನ್ನು ನಡೆಸುತ್ತಿವೆ. :- ಪಿಎಂ ಅವಸ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಯೋಜನೆ ಆಗಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಣವನ್ನು ನೀಡುತ್ತವೆ. ಇದೆ ಕಾರಣಕ್ಕೆ ಹೆಚ್ಚಿನ ಜನರು ಈ ಯೋಜನೆಗೆ ಲಾಭವನ್ನು ಪಡೆಯುತ್ತಿದ್ದಾರೆ.

ಮುಂದಿನ ಪೀಳಿಗೆಗೆ ಮೂಲ ಸೌಕರ್ಯ ನಿರ್ಮಿಸುವುದು ಮುಖ್ಯ ಗುರಿ :- ಮುಂಬರುವ ಪೀಳಿಗೆಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಪಿಎಂ ಆವಾಸ್ ಯೋಜನೆಯನ್ನು ಜಾರಿಗೆ ಗೊಳಿಸಲಾಗಿದೆ. ಇದೆ ಕಾರಣಕ್ಕೆ ಮನೆ ನಿರ್ಮಾಣದ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ.

ಪಿಎಂ ಆವಾಸ್ ಯೋಜನೆಗೆ ಯಾರೂ ಅರ್ಜಿ ಸಲ್ಲಿಸಬಹುದು :-

ಪಿಎಂ ಆವಾಸ್ ಯೋಜನೆ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳು ಇವೆ. ಅವು ಯಾವುದೆಂದರೆ.

  1. ಬಡತನ ರೇಖೆಗಿಂತ ಕಡಿಮೆ ಆದಾಯ ಇರುವ ಸ್ವಂತ ಮನೆ ಇಲ್ಲದೆ ಇರುವ ಕುಟುಂಬದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
  2. ಅಂಗವಿಕಲರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಇರುವವರು ಅರ್ಜಿ ಸಲ್ಲಿಸಬಹುದು.
  3. ಸ್ವಂತ ಮನೆ ಇರದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಹಾಗೂ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು.
  4. ಭಾರತೀಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  5. ಅರ್ಜಿದಾರರ ಕುಟುಂಬದ ಆದಾಯ ವಾರ್ಷಿಕವಾಗಿ 3 ಲಕ್ಷದಿಂದ 6 ಲಕ್ಷ ರೂಪಾಯಿಯ ಒಳಗೆ ಇರಬೇಕು.

ಆನ್ಲೈನ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿ :-

ನೀವು ಆನ್ಲೈನ್ ಮೂಲಕ PM ಆವಾಸ್ ಯೋಜನೆ ಅರ್ಜಿ ಸಲ್ಲಿಸಬಹುದು. ಯೋಜನೆಯ ಅಧಿಕೃತ ವೆಬ್ಸೈಟ್ www.pmaymis.com ಗೆ ಭೇಟಿ ಮಾಡಿ ಅರ್ಜಿ ನಮೂನೆಯಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಇಲ್ಲವಾದರೆ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ನಿಮ್ಮ ಹತ್ತಿರದ ಬಾಪೂಜಿ ಕೇಂದ್ರ ಗಳಿಗೆ ಭೇಟಿ ನೀಡಿದ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಪಿಎಂ ಆವಾಸ್ ಯೋಜನೆಯ ಉಪಯೋಗಗಳು :- 

  • ಬಡವರಿಗೆ ವಸತಿ ಸೌಲಭ್ಯ :- ಮನೆ ಇಲ್ಲದ ಬಡವರಿಗೆ ಸೂರು ನಿರ್ಮಾಣ ಮಾಡಲು ಸಹಾಯಧನ ಸಿಗುತ್ತದೆ. ಇದರಿಂದ ಜೋಪಡಿಯಲ್ಲಿ ವಾಸ ಮಾಡುವ ಜನರ ಸಂಖ್ಯೆ ಕಡಿಮೆ ಆಗುತ್ತದೆ.
  • ಮೂಲ ಸೌಕರ್ಯ ಸಿಗುತ್ತದೆ :- ಮನೆ ನಿರ್ಮಾಣದ ಜೊತೆಗೆ ಮೂಲಕ ಸೌಕರ್ಯಗಳನ್ನು ಈ ಯೋಜನೆಯಲ್ಲಿ ನೀಡುವುದರಿಂದ ಮೂಲ ಸೌಕರ್ಯಗಳ ಕೊರತೆ ಉಂಟಾಗುವುದಿಲ್ಲ. ಇದರಿಂದ ಬಡವರು ಮೇಲ್ವರ್ಗದ ಜನರಂತೆಯೇ ಜೀವನ ನಡೆಸಲು ಸಾಧ್ಯ ಆಗುತ್ತದೆ.
  • ಸಮಾಜದಲ್ಲಿ ಸ್ಥಾನಮಾನ ದೊರೆಯುತ್ತದೆ :- ಮನೆ ಇಲ್ಲದವರಿಗೆ ಮನೆ ನೀಡುವ ಮೂಲಕ ಅಸ್ವಸ್ಥ ವರ್ಗದ ಜನರಿಗೆ ಸಮಾಜ ಕೀಳರಿಮೆಯಿಂದ ನೀಡುವುದು ತಪ್ಪುತ್ತದೆ. ಇದರಿಂದ ಎಲ್ಲರಂತೆಯೇ ಕೆಳವರ್ಗದ ಜನರಿಗೆ ಸಮಾಜದಲ್ಲಿ ಒಂದು ಉತ್ತಮ ಸ್ಥಾನ ಮಾನ ದೊರೆಯುತ್ತದೆ.
  • ಸಾಮಾಜಿಕವಾಗಿ ಬದಲಾವಣೆ :- ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇದರಿಂದ ಇನ್ನಷ್ಟು ಬದಲಾವಣೆ ಅಗಲಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಇದು ಉತ್ತಮ ಕೊಡುಗೆ ಆಗಲಿದೆ.

ಮೂರು ಬಾರಿ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಮೋದಿ :-

ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿ ಹಲವಾರು ಉತ್ತಮ ಯೋಜನೆಗಳನ್ನು ಜಾರಿಗೆ ತಂದು CAA ಜೊತೆಗೆ ಆರ್ಟಿಕಲ್ 370 ರದ್ದತಿ ಸರ್ವ ಧರ್ಮಕ್ಕೂ ಸಮನಾದ ಪ್ರಮಾಣದಲ್ಲಿ ನೆರವು ಜೊತೆಗೆ ದೇಶದ ಯೋಧರಿಗೆ ಗೌರವ ಮತ್ತು ಸಂಕಷ್ಟದಲ್ಲಿ ಅವರ ಜೊತೆಗೆ ಶಕ್ತಿಯಾಗಿ ನಿಲ್ಲುವ ಮೂಲಕ ಭಾರತದ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿ ನರೇಂದ್ರ ಮೋದಿ ಅವರು ಸತತವಾಗಿ ಮೂರನೇ ಬಾರಿಗೆ ಪ್ರಧಾನ ಮಾತ್ರಿ ಹುದ್ದೆಯನ್ನು ಸ್ವೀಕಾರ ಮಾಡಿದ್ದಾರೆ.

ಇದನ್ನೂ ಓದಿ: ಜಿಯೋದ ಈ ರಿಚಾರ್ಜ್ ಯೋಜನೆ: ದೀರ್ಘಾವಧಿಯ ಡೇಟಾ, ಉಚಿತ OTT ಸ್ಟ್ರೀಮಿಂಗ್ ಮತ್ತು ಅನಿಯಮಿತ SMS ಪಡೆಯಿರಿ! 

Sharing Is Caring:

Leave a Comment