ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರಕಾರದಿಂದ ಉಚಿತ ಮನೆ ಸಿಗಲಿದೆ. ಮನೆ ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು. ಇದು ಕೇವಲ ವಾಸಸ್ಥಳವಲ್ಲ, ಭದ್ರತೆ, ಸ್ವಾತಂತ್ರ್ಯ ಮತ್ತು ಗೌರವದ ಸಂಕೇತವಾಗಿದೆ. ಪ್ರತಿಯೊಬ್ಬರಿಗೂ ತಾವು ಬಾಳಲು ಇಚ್ಛಿಸುವ ಮನೆ ಹೊಂದುವುದೆಂಬ ಕನಸು ಇರುತ್ತದೆ.
ಯೋಜನೆಯ ಉದ್ದೇಶ ಏನು?
ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಯೋಜನೆಗಳು, ಮನೆಯ ಕನಸು ಕಂಡು ಬದುಕುತ್ತಿರುವ ಜನರ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿವೆ. ಮನೆಯ ಅಗತ್ಯವಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮೂಲಕ, ತಮ್ಮ ಜೀವನದ ಅತ್ಯಂತ ಮುಖ್ಯವಾದ ಭಾಗವನ್ನು ಸ್ಥಾಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ಯೋಜನೆ ಅಂಗವವಾಗಿ, ಕೇಂದ್ರ ಸರಕಾರ ಉಚಿತ ಮನೆಗಳನ್ನು ಒದಗಿಸುವ ಮೂಲಕ, ಹಲವಾರು ಜನರ ಜೀವನದಲ್ಲಿ ಸ್ವಪ್ನ ಸಾಧನೆಗೆ ನೆರವಾಗುತ್ತಿದೆ.
ಇದರಿಂದ ಕೇವಲ ಮನೆಯ ಕನಸು ಹೊತ್ತವರೇ ಅಲ್ಲ, ಅವರ ಕುಟುಂಬದ ಸದಸ್ಯರೂ ಕೂಡ ತೃಪ್ತಿಯಿಂದ ಬದುಕಲು ಸಾಧ್ಯವಾಗುತ್ತದೆ. ಆದಕಾರಣ, ಸರಕಾರದ ಈ ಯೋಜನೆ ಜನರ ಕನಸುಗಳನ್ನು, ಅವರ ವಾಸ್ತವಿಕತೆಯನ್ನಾಗಿ ಪರಿವರ್ತಿಸಲು ಮಹತ್ವದ ಪಾತ್ರವಹಿಸುತ್ತಿದೆ. ಈ ಯೋಜನೆಯು 2024 ರಲ್ಲಿಯೂ ಕೂಡ ಜನರಿಗೆ ಸಹಾಯ ಹಸ್ತವನ್ನ ಕೊಡುತ್ತಿದೆ. ದೇಶದ ಎಲ್ಲರಿಗೂ ಶಾಶ್ವತ ಮನೆಗಳನ್ನು ಒದಗಿಸಲು ನಿರಂತರ ಪಣತೊಡಗಿದೆ. ಈ ಯೋಜನೆಯನ್ನು 2015 ರಲ್ಲಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಯವರು ಬಡತನ ರೇಖೆಗಿಂತ ಕೆಳಗಿರುವವರಿಗಾಗಿ “ಪ್ರಧಾನ ಮಂತ್ರಿ ಆವಾಸ್ ಯೋಜನೆ”ಯ ಅಧೀನದಲ್ಲಿ ಜಾರಿಗೆ ತಂದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ 1 ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಸರ್ಕಾರವೇ ಭರಿಸಲಿದೆ ವಂತಿಗೆ ಹಣ
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಪಟ್ಟಿ ಹೀಗಿದೆ:
- ಸ್ವಂತ ಮನೆ ಇಲ್ಲದವರು ಮತ್ತು ಕಟ್ಟಲು ಸಾಮರ್ಥ್ಯವಿಲ್ಲದವರು, ಅಂದರೆ ಬಡತನ ರೇಖೆಗಿಂತ ಕೆಳಗಿರುವವರು.
- ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಈಗ ವಾಸಮಾಡುತ್ತಿರುವ ಮನೆಯಲ್ಲಿ 2 ಕೊಣೆಗಳಿದ್ದರೆ ಕೂಡ ಅವರು ಅರ್ಜಿ ಸಲ್ಲಿಸಬಹುದು.
- ವಾರ್ಷಿಕ ಆದಾಯ ₹3 ಲಕ್ಷದಿಂದ ₹6 ಲಕ್ಷ ಇರುವವರು ಕೂಡ ಅರ್ಜಿ ಸಲ್ಲಿಸಬಹುದು.
- ಮನೆಯಲ್ಲಿ ವಿಕಲಚೇತನರು ಇದ್ದರೆ ಅವರು ಕೂಡ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು ಖಚಿತವಾಗಿಯೂ ಮತದಾರರ ಚೀಟಿ ಹೊಂದಿರಬೇಕು ಮತ್ತು ಪಡಿತರ ಚೀಟಿ ಹೊಂದಿರತಕ್ಕದು.
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬೇಕು. ವೆಬ್‌ಸೈಟ್ ಹೆಸರು: https://pmaymis.gov.in/.
- ಮುಖಪುಟದಲ್ಲಿ ಕಾಣುವ “ಅವಾಸ್” ಮೇಲೆ ಕ್ಲಿಕ್ ಮಾಡಿ.
- “ಅವಾಸ್”ಗಾಗಿ ಡೇಟಾ ಎಂಟ್ರಿ ಆಯ್ಕೆ ಮಾಡಿ.
- ನಂತರ ರಾಜ್ಯ ಹಾಗೂ ಜಿಲ್ಲೆಯನ್ನು ಆಯ್ಕೆ ಮಾಡಿ.
- ನಿಮ್ಮ ಹೆಸರು, ಪಾಸ್‌ವರ್ಡ್, ಕ್ಯಾಪ್ಚಾ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ ಲಾಗಿನ್ ಆಗಿ.
- ನಂತರ ಬಳಕೆದಾರ ನೋಂದಣಿ ಫಾರ್ಮ್ನಲ್ಲಿ ವೈಯಕ್ತಿಕ ವಿವರಗಳನ್ನು ನಮೂದಿಸಿ.
- ನಿಮ್ಮ ಬ್ಯಾಂಕ್ ವಿವರಗಳನ್ನು ಬರೆಯತಕ್ಕದ್ದು.
- ನಂತರ 3ನೇ ವಿಭಾಗದಲ್ಲಿ ಫಲಾನುಭವಿಯ/ನಿಮ್ಮ ಸಮನ್ವಯದ ವಿವರಗಳನ್ನು ನಮೂದಿಸಬೇಕು.
- 4ನೇ ವಿಭಾಗದಲ್ಲಿ ಸಂಬಂಧಪಟ್ಟ ಕಚೇರಿಯಿಂದ ಭರ್ತಿಮಾಡಿದ ವಿವರಗಳನ್ನು ನಮೂದಿಸಬೇಕು ಹಾಗೂ ಸಲ್ಲಿಕೆ ಮಾಡಬೇಕು.
ಮರು ಪರಿಶೀಲನೆ ಮಾಡುವ ವಿಧಾನ ಹೀಗಿದೆ :- ಅರ್ಜಿ ಸಲ್ಲಿಕೆಯ ಬಳಿಕ ಅರ್ಜಿದಾರರು ಸಲ್ಲಿಸಿದ ಅರ್ಜಿಯ ಪಟ್ಟಿಯನ್ನು ಇಲ್ಲಿ ಕ್ಲಿಕ್ ಮಾಡಿ ವೆಬ್‌ಸೈಟ್‌ನಲ್ಲಿ ಗೆ ಭೇಟಿ ನೀಡಿ ಮರುಪರಿಶೀಲನೆ ಮಾಡಬಹುದು.
ಇದನ್ನೂ ಓದಿ: ಜಿಯೋ ಮೂರು ಅಗ್ಗದ ರೀಚಾರ್ಜ್ ಪ್ಲಾನ್ ಮೂಲಕ ನೀವು ಉಚಿತ OTT ಅಪ್ಲಿಕೇಶನ್‌ಗಳು ಅನಿಯಮಿತ ಕರೆ ಮತ್ತು ಡೇಟಾ ಸಿಗಲಿದೆ.