ಪ್ರಧಾನಿಯಾದ ಮೊದಲ ದಿನವೇ ರೈತರ ಖಾತೆಗೆ 2 ಸಾವಿರ ರೂಪಾಯಿ ಜಮಾ ಮಾಡಿದ ಮೋದಿ.

ರೈತರ ಆರ್ಥಿಕ ಜೀವನಕ್ಕೆ ಸಹಾಯ ಆಗಲಿ ಎಂಬ ದೃಷ್ಟಿಯಿಂದ ರೈತಾಬಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರವು. 2019 ರಿಂದ ಇಲ್ಲಿಯವರೆಗೆ ಒಟ್ಟು 16 ಕಂತಿನ ಹಣವು ಜಮಾ ಆಗಿದೆ. ವಾರ್ಷಿಕವಾಗಿ ಮೂರು ಕಂತುಗಳಲ್ಲಿ 6,000 ರೂಪಾಯಿ ಹಣವನ್ನು ಮೋದಿ ಸರ್ಕಾರವು ಅವರು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ಈಗ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ರವಿವಾರ ಸಂಜೆ 7.15 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ನಂತರ ಹುದ್ದೆಗೆ ಅಲಂಕರಿಸಿ ಮೊದಲು ಕಿಸಾನ್ ಸಮ್ಮನ್ ಯೋಜನೆಯ ಕಡತಕ್ಕೆ ಸಹಿ ಹಾಕುವ ಮೂಲಕ 17 ನೇ ಕಂತಿನ ಹಣವನ್ನು ಈ ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ.

WhatsApp Group Join Now
Telegram Group Join Now

ದೇಶದಲ್ಲಿ ಒಟ್ಟು ಕಿಸಾನ್ ಸಮ್ಮನ್ ಯೋಜನೆಯ ಫಲಾನುಭವಿಗಳು ಸಂಖ್ಯೆ ಎಷ್ಟು :- ಯಾವುದೇ ರಾಜ್ಯ ಅಥವಾ ಸಮುದಾಯಕ್ಕೆ ಮಾತ್ರ ಸೀಮಿತವಾಗಿ ಇರದೆ ದೇಶದಲ್ಲಿರುವ ಮಾಧ್ಯಮ ಮತ್ತು ಬಡ ರೈತರಿಗೆ ಕಿಸಾನ್ ಸಮ್ಮನ್ ಯೋಜನೆಯ ಹಣವನ್ನು ನೇರವಾಗಿ ಕೇಂದ್ರ ಸರ್ಕಾರ ನೀಡುತ್ತಿದೆ. ದೇಶದಲ್ಲಿ ಒಟ್ಟು 9.3 ಕೋಟಿ ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು 9.3 ಕೋಟಿ ರೈತರಿಗೆ ಬಿಡುಗಡೆ ಒಂದು ಕಂತಿನ ಹಣ ಒಟ್ಟಾರೆ 20,000 ಕೋಟಿ ರೂಪಾಯಿಗಳು.

ಕಿಸಾನ್ ಸಮ್ಮನ್ ಯೋಜನೆಯ ಬಗ್ಗೆ ಮೋದಿ ಅವರ ಹೇಳಿಕೆ ಏನು?: ಅಧಿಕಾರ ಸ್ವೀಕರಿಸಿ ಕಿಸಾನ್ ಸಮ್ಮನ್ ಯೋಜನೆಯ 17 ನೇ ಕಂತಿನ ಹಣ ಬಿಡುಗಡೆ ಮಾಡುವ ಕಡತಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಸರ್ಕಾರವು ಕೃಷಿ ಕ್ಷೇತ್ರದ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವ ಸರಕಾರವಾಗಿದೆ. ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಮತ್ತು ರೈತರಿಗಾಗಿ ಇನ್ನಷ್ಟು ದುಡಿಯುವ ಇನ್ನಷ್ಟು ಯೋಜನೆಗಳನ್ನು ರೂಪಿಸುವ ಬಯಕೆ ಇದೆ ಎಂದು ಹೇಳಿದರು. 

ಇದನ್ನೂ ಓದಿ: 1.5 ಲಕ್ಷವನ್ನು 10 ಲಕ್ಷ ಮಾಡಿ! ಅಂಚೆ ಕಚೇರಿಯ ಈ ಅದ್ಭುತ ಯೋಜನೆಯ ಸಂಪೂರ್ಣ ಮಾಹಿತಿ! 

ಪಿಎಂ ಕಿಸಾನ್ ಯೋಜನೆಯ ಉದ್ದೇಶ :-

ನರೇಂದ್ರ ಮೋದಿ ಸರಕಾರದ ಉತ್ತಮ ಯೋಜನೆಗೆ ಇದಾಗಿದ್ದು ದೇಶದ ಎಲ್ಲ ಭೂ ಹಿಡುವಳಿ ರೈತರ ಕುಟುಂಬಗಳಿಗೆ ಕೃಷಿಗೆ ಸಂಬಂಧಿಸಿದ ಗೊಬ್ಬರಗಳು ಬೀಜಗಳು ಹಾಗೂ ಕೃಷಿ ಚಟುವಿಕೆಗಳಿಗೆ ಆರ್ಥಿಕ ಸಹಾಯ ಧನ ನೀಡುವ ಯೋಜನೆ ಆಗಿದೆ. ಈ ಯೋಜನೆಯಿಂದ ದೇಶದ ರೈತರು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಹಾಯ ಆಗುತ್ತಿದೆ. ಮತ್ತು ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಇದು ಸಹಾಯಕವಾಗಿದೆ.

ಪಿಎಂ ಕಿಸಾನ್ ಯೋಜನೆಯಿಂದ ವಾರ್ಷಿಕವಾಗಿ ರೈತರಿಗೆ ಸಿಗುವ ಹಣ ಎಷ್ಟು?: ಎಲ್ಲರಿಗೂ ತಿಳಿದಿರುವಂತೆ ಕಿಸಾನ್ ಸಮ್ಮನ್ ಯೋಜನೆಯಲ್ಲಿ ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ. ಮೂರು ಕಂತಿನಲ್ಲಿ ಹಣ ಸಿಗುತ್ತಿದ್ದು ಒಂದು ಕಂತಿನಲ್ಲಿ 2,000 ರೂಪಾಯಿ ಹಣ ಜಮಾ ಮಾಡಲಾಗುತ್ತಿದೆ. ಈಗಾಗಲೇ 16 ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದ್ದು. ಒಬ್ಬರ ಖಾತೆಗೆ ಒಟ್ಟು 32,000 ರೂಪಾಯಿ ಹಣವು ಜಮಾ ಆಗಿದೆ.

ಪಿಎಂ ಕಿಸಾನ್ ಸಮ್ಮನ್ ಯೋಜನೆ ಆರಂಭ ಆಗಿದ್ದು ಯಾವಾಗ?: ಈ ಯೋಜನೆಯು ಫೆಬ್ರುವರಿ 2019 ರಿಂದ ಆರಂಭ ಆಗಿದೆ .ಆದರೆ ಡಿಸೆಂಬರ್ 2018 ರಲ್ಲಿ ಈ ಯೋಜನೆಯನ್ನು ಜಾರಿ ಗೊಳಿಸುವುದಾಗಿ ನರೇಂದ್ರ ಮೋದಿ ಸರಕಾರವು ಘೋಷಣೆ ಮಾಡಿತ್ತು. 

ಗ್ರಾಮೀಣ ಅಭಿವೃದ್ಧಿಗೆ ಈ ಯೋಜನೆಯ ಕೊಡುಗೆ ಅಪಾರ :- ರೈತರು ಈ ಯೋಜನೆಯ ಹಣದಿಂದ ಬೀಜ ಬಿತ್ತನೆಗೆ, ಔಷಧಿ ಸಿಂಪಡಿಕೆಗೆ ಹಾಗೂ ಇನ್ನಿತರ ಕೃಷಿ ಉತ್ಮನ್ನಗಳ ಖರೀದಿಗೆ ಈ ಹಣವನ್ನು ವಿನಿಯೋಗ ಮಾಡಲು ಸಾಧ್ಯ ಆಗುತ್ತದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಇನ್ವೆಸ್ಟ್ಮೆಂಟ್ ಆದರೆ ಕೃಷಿಕರಿಗೆ ಹೆಚ್ಚಿನ ಆದಾಯ ಬರುತ್ತದೆ. ಇದರಿಂದ ಗ್ರಾಮೀಣ ಪ್ರದೇಶ ಅಭಿವೃದ್ಧಿ ಆಗುತ್ತದೆ.

ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ಏಷ್ಟು ಹಣ ಬಿಡುಗಡೆ ಆಗಿತ್ತು:-

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶದಲ್ಲಿ ಲೋಕಾಸಭಾ ಚುನಾವಣೆಯ ಪ್ರಯುಕ್ತವಾಗಿ ಫೆಬ್ರುವರಿಯಲ್ಲಿ ಕೇಂದ್ರ ಸರಕಾರವು ಮಧ್ಯಂತರ ಬಜೆಟ್ ನಡೆಸಿತ್ತು. ಮಧ್ಯಂತರ ಬಜೆಟ್ ನಲ್ಲಿ ಒಟ್ಟು ಕೃಷಿ ಕ್ಷೇತ್ರಕ್ಕೆ ಎಂದೇ 1.27 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಈಗ ಸರಕಾರ ರಚನೆಗೆ ಸ್ವಲ್ಪ ಸಮಯ ಹಿಡಿಯುವುದರಿಂದ ಅದಾದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ನಡೆಯುವ ಸಾಧ್ಯತೆ ಇದೆ. ಆಗ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಹಣವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಯಾಕೆ ಎಂದರೆ ಮೋದಿ ಸರ್ಕಾರವು ದೇಶದ ರೈತರ ಪರವಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರಿಗೆ ಬಹಳ ಅನುಕೂಲ ಆಗಿದೆ. ಅದರ ಜೊತೆಗೆ ಈಗ ಮೂರನೇ ಬಾರಿಗೆ ಪ್ರಧಾನ ಮಂತ್ರಿ ಆದ ಬಳಿಕ ರೈತರ ಪರವಾಗಿ ಇರುವ ಯೋಜನೆಗೆ ಮೊದಲು ಸಹಿ ಹಾಕಿರುವ ಕಾರಣ ದೇಶದ ರೈತರಿಗೆ ಇನ್ನಷ್ಟು ಹೆಚ್ಚಿನ ನಿರೀಕ್ಷೆ ಇದೆ.

ನೇರವಾಗಿ ಫಲಾನುಭವಿಗಳ ಖಾತೆಗೆ ಸರಕಾರದ ಹಣವನ್ನು ಜಮಾ ಮಾಡುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದ ಹಾಗೆ ಆಗಿದೆ. ಇದು ನಿಜಕ್ಕೂ ಮೋದಿ ಸರಕಾರದ ಹೆಗ್ಗಳಿಕೆ. ದೇಶದ 95% ಜನರಿಗೆ ಬ್ಯಾಂಕ್ ಖಾತೆ ಮಾಡುವ ಮೂಲಕ ಜನರಿಗೆ ಸರಕಾರದ ಎಲ್ಲಾ ಯೋಜನೆಗಳ ಹಣ ನೇರವಾಗಿ ಸಿಗುವಂತೆ ಮಾಡುವಲ್ಲಿ ಯಶಸ್ವಿ ಆಗಿದೆ. ಇದು ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಹಾಯಕ ಆಗಿದೆ.

ಇದನ್ನೂ ಓದಿ: ಆಕರ್ಷಕ ಹೂಡಿಕೆ ಅವಕಾಶ; ಪೋಸ್ಟ್ ಆಫೀಸಿನ 5 ವರ್ಷಗಳ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ ಮತ್ತು ತೆರಿಗೆ ಪ್ರಯೋಜನಗಳು!

Sharing Is Caring:

Leave a Comment