ಕಿಸಾನ್ ಸಮ್ಮಾನ್ ಯೋಜನೆಯ ಹಣ ಜಮಾ ಆಗಿದೆಯಾ ಎಂಬುದನ್ನು ತಿಳಿಯಲು ಈ ಸರಳ ವಿಧಾನ ಅನುಸರಿಸಿ.

ಮೋದಿ ಸರ್ಕಾರದ ಉತ್ತಮ ಯೋಜನೆಯಲ್ಲಿ ಒಂದಾದ ಕಿಸಾನ್ ಸಮ್ಮಾನ್ ಯೋಜನೆ ಜನಪ್ರಿಯವಾಗಿದೆ. ಈಗಾಗಲೇ 16 ಕಂತಿನ ಹಣವನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು ಜೂನ್ 18 2024 ರಂದು 17 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ನಿಮ್ಮ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಜಮಾ ಆಗಿರುವ ಬಗ್ಗೆ ಆನ್ಲೈನ್ ಮೂಲಕ ಮಾಹಿತಿ ಪಡೆಯಲು ಸರಳ ವಿಧಾನ ಅನುಸರಿಸಿ.

WhatsApp Group Join Now
Telegram Group Join Now

ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ವಾರಣಾಸಿಗೆ ಭೇಟಿ ನೀಡಿದ್ದಾರೆ :- ಸತತವಾಗಿ ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗಿರು ನರೇಂದ್ರ ಮೋದಿ ಅವರು ಇಂದು ತಾವು ಗೆದ್ದ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದರು. ಇದೆ ಸಮಯದಲ್ಲಿ ಅವರು ದೇಶದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ನೀಡಿದರು. ಇದರಿಂದ ಇನ್ನಷ್ಟು ಕೃಷಿಕರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರವು ಬೆಂಬಲ ನೀಡಲಿದೆ ಎಂಬುದನ್ನು ಸಾಬೀತು ಪಡಿಸಿದರು. ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲು ಕಿಸಾನ್ ಸಮ್ಮಾನ್ ನೀಡಿ ಬಿಡುಗಡೆ ಮಾಡಿರುವ ನರೇಂದ್ರ ಮೋದಿ ಅವರ ನಡೆಗೆ ಭಾರತದಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. 

2,000 ರೂಪಾಯಿ ಹಣ ಜಮಾ ಆಗಿದೆ :- ಪ್ರತಿ ಸಲದಂತೆ ಈ ಬಾರಿಯೂ ಸಹ ದೇಶದ ರೈತರ ಖಾತೆಗೆ 2,000 ರೂಪಾಯಿ ಹಣ ಜಮಾ ಆಗಿದೆ. ದೇಶದ 9.3ಕೋಟಿ ರೈತರ ಖಾತೆಗೆ ಈ ಹಣ ಜಮಾ ಆಗಿದೆ. 

ಆನ್ಲೈನ್ ಮೂಲಕ ಪಿಎಂ ಕಿಸಾನ್ ಅಕೌಂಟ್ ಮಾಹಿತಿ ಪಡೆಯಿರಿ :- ಈಗ ಬ್ಯಾಂಕ್ ಅಥವಾ ಕಚೇರಿಗೆ ತೆರಳಾದೆಯೇ ನಿಮ್ಮ ಮನೆಯಲ್ಲಿಯೇ ಕುಳಿತು ಪಿಎಂ ಕಿಸಾನ್ ಹಣ ಜಮಾ ಆಗಿದೆಯೇ ಅಥವಾ ಇಲ್ಲವೇ ಹಾಗೂ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂಬುದನ್ನು ತಿಳಿಯಲು ಸಾಧ್ಯವಿದೆ. ಆನ್ಲೈನ್ ಮೂಲಕ ವಿವರಗಳನ್ನು ಪಡೆಯಲು ಈ ಮಾರ್ಗ ಅನುಸರಿಸಿ.

ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಲ್ಲಿ ಸಿಗುತ್ತೆ ಉಚಿತ ವಿದ್ಯುತ್; 300ಯೂನಿಟ್ ಗಳವರೆಗೆ ಸಿಗಲಿದೆ ವಿದ್ಯುತ್; ಅರ್ಜಿ ಸಲ್ಲಿಸೋದು ಹೇಗೆ? ಏನ್ ಮಾಡ್ಬೇಕು ಗೊತ್ತ

A) ಅರ್ಜಿ ಸಂಖ್ಯೆ ಪಡೆಯುವ ವಿಧಾನ :-

  • ಹಂತ 1:- ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ :- ಕಿಸಾನ್ ಸಮ್ಮಾನ್ ಯೋಜನೆಯ ವಿವರಗಳನ್ನು ಪಡೆಯಲು ಮೊದಲು ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಧಿಕೃತ ವೆಬ್ಸೈಟ್ ವಿಳಾಸ https://pmkisan.gov.in/.
  • ಹಂತ 2:- know your status ಬಟನ್ ಕ್ಲಿಕ್ ಮಾಡಿ :- ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ಮುಖಪುಟದಲ್ಲಿ ಕಾಣುವ know your status ಎಂಬ ಬಟನ್ ಕ್ಲಿಕ್ ಮಾಡಬೇಕು.
  • ಹಂತ 3:- ರಿಜಿಸ್ಟರ್ ನಂಬರ್ ಫಿಲ್ ಮಾಡಿ :- ನಂತರ ನೀವು know your register number ಬಟನ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ರಿಜಿಸ್ಟರ್ ನಂಬರ್ ಭರ್ತಿ ಮಾಡಬೇಕು.
  • ಹಂತ 4:- ಮೊಬೈಲ್ ಸಂಖ್ಯೆ ನಮೂದಿಸಿ :- ಕಿಸಾನ್ ಸಮ್ಮಾನ್ ಯೋಜನೆಯ ಅರ್ಜಿ ಭರ್ತಿ ಮಾಡುವಾಗ ಸಲ್ಲಿಸಿರುವ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು.
  • ಹಂತ 5:- captcha code ಹಾಕಿ :- ಮೊಬೈಲ್ ಸಂಖ್ಯೆ ನಮೂದಿಸಿದ ಬಳಿಕ ನಿಮಗೆ captcha ಕೋಡ್ ನಮೂದಿಸಿ ಎಂದು ಕೇಳುತ್ತದೆ. ಮೇಲೆ ಇರುವ ಲೆಟರ್ ಹೇಗೆ ಇದೆಯೋ ಹಾಗೆ ಕೋಡ್ ಹಾಕಬೇಕು. ಅಲ್ಲಿ ಕ್ಯಾಪಿಟಲ್ ಲೆಟರ್ ಇದ್ದರೆ ನೀವು ಸಹ ಕ್ಯಾಪಿಟಲ್ ಲೆಟರ್ ಹಾಕಬೇಕು ಹಾಗೆಯೇ ನಂಬರ್ ಇದ್ದರೆ ನೀವು ಅದನ್ನೇ ಹಾಕಬೇಕು.
  • ಹಂತ 6:- OTP ನಮೂದಿಸಿ :- ನಿಮ್ಮ ಮೊಬೈಲ್ ಸಂಖ್ಯೆಗೆ ಇಲಾಖೆಯಾಯಿಂದ OTP ಬರುತ್ತದೆ. ಅದನ್ನು ಖಾಲಿ ಇರುವ ಸ್ಥಳದಲ್ಲಿ ಭರ್ತಿ ಮಾಡಬೇಕು. ಒಮ್ಮೆಲೇ ನಿಮಗೆ OTP ಬಾರದೆ ಇದ್ದರೆ ನೀವು resend OTP ಬಟನ್ ಕ್ಲಿಕ್ ಮಾಡಬೇಕು. OTP ಬಂದ ಬಳಿಕ ನಿಗದಿತ ಸಮಯದ ಒಳಗಾಗಿ OTP ನಮೂದಿಸಬೇಕು.
  • ಹಂತ 7:- ಕಿಸಾನ್ ಸಮ್ಮಾನ್ ಯೋಜನೆಯ ಅರ್ಜಿ ಸಂಖ್ಯೆ ಖಚಿತಪಡಿಸಿ :- OTP ಭರ್ತಿ ಮಾಡಿದ ಬಳಿಕ ನಿಮಗೆ ನೀವು ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಜಿ ಸಂಖ್ಯೆ ಬರುತ್ತದೆ. ಆ ಅರ್ಜಿ ಸಂಖ್ಯೆಯನ್ನು ನೀವು ಬರೆದಿಟ್ಟುಕೊಳ್ಳಿ.

B) status ಚೆಕ್ ಮಾಡುವ ವಿಧಾನ :-

ನಿಮ್ಮ ಕಿಸಾನ್ ಸಮ್ಮಾನ್ ಯೋಜನೆಯ ಅರ್ಜಿ ಸಂಖ್ಯೆ ಸಿಕ್ಕ ಬಳಿಕ ನೀವು back ಬಟನ್ ಒತ್ತಿ ಮುಖ ಪುಟಕ್ಕೆ ಬನ್ನಿ. ನಂತರ ಈ ಕೆಳಗಿನ ಹಂತವನ್ನು ಅನುಸರಿಸಿ.

  • ಹಂತ 1:- ಸ್ಟೇಟಸ್ ಚೆಕ್ ಬಟನ್ ಒತ್ತಿ :- ಮುಖಪುಟದಲ್ಲಿ ಕಾಣುವ kisan samman status check ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಹಂತ 2:- ರಿಜಿಸ್ಟರ್ ನಂಬರ್ ನಮೂದಿಸಿ :- ನಿಮ್ಮ ಕಿಸಾನ್ ಸಮ್ಮಾನ್ ಯೋಜನೆಯ ಮಾಹಿತಿಗಳನ್ನು ಪಡೆಯಲು ನೀವು ನಿಮ್ಮ ಕಿಸಾನ್ ಸಮ್ಮಾನ ಯೋಜನೆಯ ರಿಜಿಸ್ಟರ್ ನಂಬರ್ ( ಅರ್ಜಿ ಸಲ್ಲಿಸಿದ ಸಂಖ್ಯೆ ) ನಮೂದಿಸಿ.
  • ಹಂತ 3:- captcha ಕೋಡ್ ಹಾಕಿ :- ನಿಮ್ಮ ರಿಜಿಸ್ಟರ್ ನಂಬರ್ ನಮೂದಿಸಿದ ಬಳಿಕ captcha ಕೋಡ್ ಇರುತ್ತದೆ. ಅಲ್ಲಿ ಇರುವಂತೆಯೇ captcha ಕೋಡ್ ಅನ್ನು ನಮೂದಿಸಬೇಕು. ತಪ್ಪಾದ captcha ಕೋಡ್ ನಮೂದಿಸಿದರೆ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಿಲ್ಲ.
  • ಹಂತ 4:- OTP ನಮೂದಿಸಿ :- ಮತ್ತೆ ನಿಮ್ಮ ಮೊಬೈಲ್ ಸಂಖ್ಯೆಗೆ ನಾಲ್ಕು ಸಂಖ್ಯೆಯ OTP ಬರುತ್ತದೆ. ಅದನ್ನು ನಮೂದಿಸಬೇಕು.
  • ಹಂತ 5:- get data ಬಟನ್ ಕ್ಲಿಕ್ ಮಾಡಿ :- get data ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಖಾತೆಯ ಕೊನೆಯ ನಾಲ್ಕು ಅಂಕೆಯ ವಿವರಗಳು , ನಿಮ್ಮ ಹೆಸರು , ನಿಮ್ಮ ವಿಳಾಸ ಹಾಗೂ ನಿಮಗೆ ಏಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ವಿವರಗಳು ಹಾಗೂ ಯಾವ ಕಂತಿನ ಹಣ ಯಾವ ದಿನಾಂಕದಂದು ಜಮಾ ಆಗಿದೆ ಎಂಬ ವಿವರಗಳು ಎಲ್ಲವೂ ನಿಮಗೆ ಒಂದೇ ಕಡೆ ಸಿಗುತ್ತದೆ.

ಗಮನಿಸಬೇಕಾದ ಒಂದು ಮಾಹಿತಿ :- ನೀವು installement details ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ ನೀವು ಪ್ರತಿ ಕಂತಿನ ಹಣದ ಪೂರ್ಣ ವಿವರಗಳನ್ನು ಪಡೆಯಲು ಸಾಧ್ಯವಿದೆ. 

ಪಿಎಂ ಕಿಸಾನ್ ಯೋಜನಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ನಿಮ್ಮ ಕಿಸಾನ್ ಸಮ್ಮಾನ ಖಾತೆಗೆ ಆನ್ಲೈನ್ ಮೂಲಕ EKYc ಮಾಡಿಸಲು ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ https://pmkisan.gov.in/ ಗೆ ಭೇಟಿ ನೀಡಿ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲದೆ ನಿಮ್ಮ ತಾಲೂಕು ಹಾಗೂ ನಿಮ್ಮ ಗ್ರಾಮದಲ್ಲಿ ಯಾರಿಗೆ ಕಿಸಾನ್ ಸಮ್ಮಾನ ಯೋಜನೆಯ ಹಣ ಸಿಕ್ಕಿದೆ ಎಂಬ ಮಾಹಿತಿಯನ್ನು ನೀವು ಆನ್ಲೈನ್ ನಲ್ಲಿ ಪಡೆಯಲು ಸಾಧ್ಯವಿದೆ.

ಇದನ್ನೂ ಓದಿ: ಎಟಿಎಂ ನಿಂದ ಹಣ ಡ್ರಾ ಮಾಡುವ ಮೊದಲು ಎಚ್ಚರ; ಬೇಕಾ ಬಿಟ್ಟಿ ಹಣ ಡ್ರಾ ಮಾಡುದ್ರೆ ಶುಲ್ಕ ಹೆಚ್ಚಳ 

Sharing Is Caring:

Leave a Comment