ಮೋದಿ ಸರ್ಕಾರದ ಹೊಸ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 11 ಸಾವಿರ ರೂಪಾಯಿ.

ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ನರೇಂದ್ರ ಮೋದಿ ಸರಕಾರವು ಈಗ ಒಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಮಹಿಳೆಯರು 11 ಸಾವಿರ ರೂಪಾಯಿಗಳನ್ನು ಪಡೆಯಲು ಸಾಧ್ಯವಿದೆ. ಹಾಗಾದರೆ ನರೇಂದ್ರ ಮೋದಿ ಸರ್ಕಾರವು ಜಾರಿಗೆ ತಂದಿರುವ ಯೋಜನೆ ಯಾವುದು ಹಾಗೂ ಈ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು ಎಂಬುದನ್ನು ತಿಳಿಯೋಣ.

WhatsApp Group Join Now
Telegram Group Join Now

11 ಸಾವಿರ ಸಹಾಯ ಧನ ನೀಡುವ ಮೋದಿ ಸರ್ಕಾರದ ಯೋಜನೆ ಯಾವುದು?: ನರೇಂದ್ರ ಮೋದಿ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಸಹಾಯ ಧನ ನೀಡುತ್ತಿದೆ. ಅದುವೇ ಮಾತೃ ವಂದನ ಯೋಜನೆ. ಮಹಿಳೆಯರ ಮೊದಲನೇ ಮತ್ತು ಎರಡನೇ ಗರ್ಭಾವಸ್ಥೆಯ ಸಮಯದಲ್ಲಿ ಈ ಯೋಜನೆಯಲ್ಲಿ ಸಹಾಯಧನ ಪಡೆಯಬಹುದಾಗಿದೆ.

ಮಾತೃ ವಂದನ ಯೋಜನೆಯಲ್ಲಿ ಎಷ್ಟು ಸಹಾಯಧನ ಸಿಗಲಿದೆ :- ಈ ಯೋಜನೆಯಲ್ಲಿ ಮಹಿಳೆಯರು ಮೊದಲನೇ ಬಾರಿಗೆ ಗರ್ಭಿಣಿ ಆದಾಗ 5000 ರೂಪಾಯಿ ಸಹಾಯಧನ ಸಿಗಲಿದೆ ಹಾಗೂ ಎರಡನೇ ಗರ್ಭಾವಸ್ಥೆಯ ಸಮಯದಲ್ಲಿ 6,000 ರೂಪಾಯಿ ಸಹಾಯಧನ ಸಿಗಲಿದೆ. ಒಟ್ಟು ಸಹಾಯಧನದ ಮೊತ್ತವು 11,000 ರೂಪಾಯಿ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗರ್ಭಾವಸ್ಥೆಯಲ್ಲಿ ತಗುಲುವ ಖರ್ಚಿಗೆ ಈ ಹಣ ಸಹಾಯಕ :- ಮಹಿಳೆಯರ ಗರ್ಭಾವಸ್ಥೆಯ ಸಮಯದಲ್ಲಿ ಔಷಧಿ ಮಾತ್ರೆ ಹಾಗೆ ಮಗುವಿನ ಬೆಳವಣಿಗೆಗೆ ಪೌಷ್ಟಿಕ ಆಹಾರ ಅಗತ್ಯ ಆಗಿರುತ್ತದೆ. ಹಾಗಿದ್ದಾಗ ಮೋದಿ ಸರ್ಕಾರ ನೀಡುವ ಈ ಸಹಾಯಾಧನವು ಉಪಯೋಗ ಆಗಲಿದೆ. ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯರ ಹೆರಿಗೆ ಉಚಿತವಾಗಿ ಇರುತ್ತದೆ. ಅದ್ರಿಂದ ಈ ಹಣವು ಸರಿಸುಮಾರು ಗರ್ಭಾವಸ್ಥೆಯ ಸಮಯಕ್ಕೆ ಸಾಕಾಗುತ್ತದೆ. 

ಇದನ್ನೂ ಓದಿ: PPF ಹಾಗೂ SSY ಯೋಜನೆಗಳಲ್ಲಿ ಯಾವ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತ ಎಂಬುದನ್ನು ತಿಳಿಯೋಣ.

ಬಾಣಂತಿ ಹೆಣ್ಣು ಮಕ್ಕಳ ಸಂಪೂರ್ಣ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತರು ಮಾಡುತ್ತಾರೆ :-

ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪ್ರತಿ ಊರಿನಲ್ಲಿ ಇರುವ ಗರ್ಭಿಣಿಯರ ಆರೈಕೆ ಪ್ರತಿ ತಿಂಗಳು ಸರ್ಕಾರ ನೀಡುವ ಫುಡ್ ಸಪ್ಲೈ ಹಾಗೂ ಪ್ರತಿ ತಿಂಗಳು ಮಹಿಳೆಯರ ಆರೋಗ್ಯದ ಮತ್ತೆ ಎಲ್ಲಾ ಮಾಹಿತಿಯನ್ನು ತೆಗೆದುಕೊಂಡು ಸರಕಾರಕ್ಕೆ ಮಾಹಿತಿ ನೀಡಬೇಕು. ಅದರ ಜೊತೆಗೆ ಬಾಣಂತಿಯರ ಆರೈಕೆ ಸಹ ಅದು ಅಂಗನವಾಡಿ ಕಾರ್ಯಕರ್ತರ ಸಂಪೂರ್ಣ ಜವಾಬ್ದಾರಿ ಆಗಿರುತ್ತದೆ ಮಹಿಳೆ ಮಗುವಿಗೆ ಜನ್ಮ ನೀಡಿದ ದಿನದಿಂದ ಮಗುವಿನ ಮತ್ತು ತಾಯಿಯ ತೂಕ ಮತ್ತು ಆರೋಗ್ಯಕರವಾದ ಮಾಹಿತಿಯನ್ನು ಸಂಪೂರ್ಣವಾಗಿ ಕಾಲಕಾಲಕ್ಕೆ ನೀಡಬೇಕು. ಮಗುವಿಗೆ ಜನ್ಮ ನೀಡಿದ ತಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನದ ಜೊತೆ ಜೊತೆಗೆ ಮಗುವಿನ ಬೆಳವಣಿಗೆಯ ಬಗ್ಗೆ ಹಾಗೂ ಮಗುವಿಗೆ ನೀಡುವ ಚುಚ್ಚುಮದ್ದಿನ ಮಾಹಿತಿಗಳನ್ನು ನೀಡಬೇಕಾಗಿರುವ ಜವಾಬ್ದಾರಿ ಆಯಾ ಅಂಗನವಾಡಿಗಳ ಕಾರ್ಯಕರ್ತೆಯರ ಮೇಲೆ ಇರುತ್ತದೆ.

ಮಾತೃ ವಂದನ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು:-

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳು ಹೇಗಿವೆ.

  1. ಭಾರತೀಯ ನಿವಾಸಿ :- ಮಾತೃ ವಂದನ್ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ಭಾರತೀಯ ನಿವಾಸಿಗಳು ಆಗಿರಬೇಕು.
  2. ವಯಸ್ಸು :- ಈ ಯೋಜನೆಗೆ ಅರ್ಜಿ ಸಲ್ಲಿಸುವ ಕನಿಷ್ಠ ವಯಸ್ಸು 19 ಆಗಿರಬೇಕು.
  3. ಗರ್ಭಿಣಿ ಮಹಿಳೆ ಆಗಿರಬೇಕು :- ಈ ಯೋಜನೆಗೆ ಕೇವಲ ಗರ್ಭಿಣಿ ಮಹಿಳೆಯರು ಮಾತ್ರ ಅರ್ಹರಾಗಿರುತ್ತಾರೆ.
  4. ಆಧಾರ್ ಲಿಂಕ್ ಕಡ್ಡಾಯ :- ಈ ಯೋಜನೆಯ ಹಣವು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುವ ಕಾರಣದಿಂದ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗಿರಬೇಕು.

ಇದನ್ನೂ ಓದಿ: ಟ್ರೈನ್ನಲ್ಲಿ ಪ್ರಯಾಣ ಮಾಡುವಾಗ ಲೋಯರ್ ಬರ್ತ್ ಬುಕ್ ಮಾಡಲು ಇರುವ ನಿಯಮಗಳು ಏನೇನು? 

Sharing Is Caring:

Leave a Comment