ಮುದ್ರಾ ಯೋಜನೆ ಅಡಿಯಲ್ಲಿ ಈಗ ನಿಮಗೆ ಸಿಗುತ್ತದೆ 20ಲಕ್ಷ ರೂಪಾಯಿ ವರೆಗೂ ಸಾಲ. ಈ ರೀತಿ ಸಾಲ ಪಡೆಯಿರಿ ಕಡಿಮೆ ಬಡ್ಡಿದರದಲ್ಲಿ

ಇಂದು ಕೇಂದ್ರ ಬಜೆಟ್ ಮಂಡನೆ. ಇದು ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಆಗಿದ್ದು, ರಾಷ್ಟ್ರದ ಹಿತದೃಷ್ಟಿಯಿಂದ ಹಲವು ಮುಖ್ಯ ಘೋಷಣೆಗಳನ್ನು ಮಾಡಲಾಗಿದೆ. ನಿರ್ಮಲ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ್ದು ಮುದ್ರಾ ಯೋಜನೆಯ ಸಾಲದ ಮಿತಿಯನ್ನು ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

ಎಂಎಸ್‌ಎಂಇಗಳಿಗೆ ಸಾಲದ ಮಿತಿಯನ್ನು 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ :- ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024 ರ ಬಜೆಟ್ ಮಂಡನೆಯಲ್ಲಿ ಮಾಡಿದ್ದಾರೆ.. ಎಂಎಸ್‌ಎಂಇಗಳಿಗೆ ಸಾಲ ನೀಡುವ ಮುದ್ರಾ ಯೋಜನೆ ಅಡಿಯಲ್ಲಿ ನೀಡಲಾಗುವ ಗರಿಷ್ಠ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆ ಮತ್ತು ನವೀನತೆಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ.

ಹೆಚ್ಚಿದ ಸಾಲದ ಮಿತಿಯ ಪ್ರಯೋಜನಗಳು :-

  • ಆರ್ಥಿಕತೆ ಬಲವರ್ಧನೆ :- ಹೆಚ್ಚಿದ ಆರ್ಥಿಕ ಬೆಂಬಲವು ಸಣ್ಣ ಉದ್ಯಮಗಳನ್ನು ಸಮರ್ಥಿಸಲು ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
  • ಉದ್ಯೋಗ ಅವಕಾಶ ಹೆಚ್ಚಳ :- ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸುವಲ್ಲಿ ಈ ಯೋಜನೆಯು ಹೆಚ್ಚು ಉಪಯೋಗ ಆಗಲಿದೆ.
  • ಸುಲಭ ಸಾಲ :- ಯೋಜನೆಯು ಲಕ್ಷಾಂತರ ಉದ್ಯಮಿಗಳಿಗೆ ಸಾಲವನ್ನು ಪಡೆಯಲು ಸಹಾಯ ಆಗಲಿದೆ. ಇದರಿಂದ ಸುಲಭವಾಗಿ ಸಾಲವನ್ನು ಪಡೆಯಬಹುದು.
  • ಬೆಂಬಲ ಸಿಗಲಿದೆ :- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಐ) ಹೆಚ್ಚಿನ ಬೆಂಬಲವನ್ನು ಒದಗಿಸಲು ಹೊಸ ಸಾಲ ಭರವಸೆ ನೀಡಲಿದೆ.

ಮುದ್ರಾ ಯೋಜನೆ: ಸಣ್ಣ ಉದ್ಯಮಗಳಿಗೆ ಸಬಲೀಕರಣದ ಕಿರಣ :- ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮುದ್ರಾ ಸಾಲ ಯೋಜನೆ ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ (ಎಂಎಸ್‌ಎಂಇಗಳು) ಹಣಕಾಸು ಒದಗಿಸುವಲ್ಲಿ ಸಹಾಯ ನೀಡುವ ಯೋಜನೆ ಆಗಿದೆ. ಈ ಯೋಜನೆಯು ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ತೊಡಗಿರುವ ಅಥವಾ ಕೋಳಿ ಸಾಕಣೆ, ಹೈನುಗಾರಿಕೆ ಮತ್ತು ಜೇನುಸಾಕಣೆಯಂತಹ ಕೃಷಿ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರುವಂತಹ ಲಾಭದಾಯಕ ಸಣ್ಣ ಉದ್ಯಮಗಳಿಗೆ ಸಾಲವನ್ನು ಸುಲಭವಾಗಿ ಒದಗಿಸುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಮುದ್ರಾ ಯೋಜನೆಯು ಆರ್ಥಿಕವಾಗಿ ಹಿಂದುಳಿದಿದೆ ಆದರೆ ಉದ್ಯಮಶೀಲತೆಯ ಛಲ ಹೊಂದಿರುವ ವ್ಯಕ್ತಿಗಳಿಗೆ ಸ್ವಾವಲಂಬನೆಯತ್ತ ಒಂದು ಮಾರ್ಗವನ್ನು ಒದಗಿಸುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸುವಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಈ ಕಾರ್ಡ್ ಇದ್ರೆ 2 ಲಕ್ಷ ರೂಪಾಯಿಗಳ ಉಚಿತ ವಿಮೆ ಸೌಲಭ್ಯ; ಯಾರಿಗೆ ಸಿಗಲಿದೆ ಇದರ ಪ್ರಯೋಜನ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯುವುದು ಹೇಗೆ?

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು, ನೀವು ಯಾವುದೇ ಅನುಮೋದಿತ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಬಹುದು. ಈ ಯೋಜನೆಯಡಿ ಸಾಲ ನೀಡಲು ಅಧಿಕೃತ ಸಂಸ್ಥೆಗಳಲ್ಲಿ ಕೆಲವು ಈ ಕೆಳಗಿನಂತಿವೆ.

  • ಸರ್ಕಾರಿ ಬ್ಯಾಂಕುಗಳು: ಭಾರತೀಯ ಸ್ಟೇಟ್ ಬ್ಯಾಂಕ್ , ಪಂಜಾಬ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಇತ್ಯಾದಿ.
  • ಖಾಸಗಿ ವಲಯದ ಬ್ಯಾಂಕುಗಳು: ಐಸಿಐಸಿಐ ಬ್ಯಾಂಕ್, HDFC ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇತ್ಯಾದಿ.
  • ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು: ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇತ್ಯಾದಿ.
  • ಮೈಕ್ರೋ ಫೈನಾನ್ಸ್ ಸಂಸ್ಥೆಗಳು : ಬಂಧನ ಬ್ಯಾಂಕ್, ಪ್ರತಿಮ ಮೈಕ್ರೋ ಫೈನಾನ್ಸ್, ಸರ್ವೋತ್ತಮ್ ಫೈನಾನ್ಸ್ ಇತ್ಯಾದಿ.
  • ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು : ಜನಸಮೃದ್ಧಿ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಜ್ವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಇತ್ಯಾದಿ.

ಇದನ್ನೂ ಓದಿ: ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂಪಾಯಿಯ ವರೆಗೆ ಸಾಲ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್.

Sharing Is Caring:

Leave a Comment