ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಪ್ರತಿಯೊಂದು ಮನೆಯ ಅಡಿಗೆ ಮನೆಯಲ್ಲಿ ಅನಿವಾರ್ಯವಾಗಿದೆ. ಜನರ ಜೀವನ ಶೈಲಿ ಬದಲಾಗುತ್ತಿದ್ದಂತೆ ಅಡುಗೆ ಮಾಡುವ ವಿಧಾನವೂ ಬದಲಾಗುತ್ತಿದೆ. ಇದರಿಂದ ಗ್ಯಾಸ್ ಬಳಕೆ ಹೆಚ್ಚಾಗಿದೆ ಈಗ ಹೊಸದಾಗಿ ಮದುವೆ ಆದವರಿಗೆ ಉಚಿತ ಗ್ಯಾಸ್ ಸಿಲೆಂಡರ್ ನೀಡುವ ಯೋಜನೆ ಒಂದು ಬಂದಿದೆ. ಈ ಯೋಜನೆಯ ಬಗ್ಗೆ ನೀವು ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನ ಓದಿ.
ಕೇಂದ್ರ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಇದು ಒಂದು :- ಕೇಂದ್ರ ಸರ್ಕಾರವು ದೇಶದ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಮೂಲಕ ಅವರಿಗೆ ಒಳ್ಳೆಯದಾಗುವಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯು ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಒದಗಿಸುವ ಒಂದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಬಡ ಕುಟುಂಬಗಳಲ್ಲಿ ಮಹಿಳೆಯರು ಅಡುಗೆ ಮಾಡುವಾಗ ಹೊಗೆಯಾಡುವಿಕೆಯಿಂದಾಗುವ ಆರೋಗ್ಯ ಸಮಸ್ಯೆಗಳನ್ನು ತಗ್ಗಿಸುವುದು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವುದು.
ನವ ವಿವಾಹಿತರಿಗೆ ಉಚಿತ ಸಿಲೆಂಡರ್ :-
ಈ ಯೋಜನೆಯು ಮನೆಯಲ್ಲಿ ಮಹಿಳೆಯರಿಗೆ ಉಚಿತ LPG ಸಂಪರ್ಕವನ್ನು ಒದಗಿಸುವ ಮೂಲಕ ಅವರ ಜೀವನವನ್ನು ಸುಲಭಗೊಳಿಸುತ್ತದೆ. ಹೊಸದಾಗಿ ವಿವಾಹವಾಗುವ ದಂಪತಿಗಳಿಗೆ ಈ ಯೋಜನೆಯು ಅಡುಗೆ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ವ್ಯಕ್ತಿಗಳು ತಮ್ಮ ಪತ್ನಿಯ ಹೆಸರಿನಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಮಹಿಳೆಯರು ಮಾತ್ರ ಈ ಯೋಜನೆಯನ್ನು ಪಡೆಯಬಹುದು :- ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಿಳಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ LPG ಸಂಪರ್ಕವನ್ನು ಉಚಿತವಾಗಿ ನೀಡಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳು ಈ ಯೋಜನೆಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆಯಲು ಅರ್ಹವಾಗಿದೆ. ಸರ್ಕಾರವು ಈ ಯೋಜನೆಗಳಿಗೆ ಮೊದಲ ಗ್ಯಾಸ್ ಮರುಪೂರಣವನ್ನು ಉಚಿತವಾಗಿ ನೀಡುವ ಮೂಲಕ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಯೋಜನೆಗಳು ಎಲ್ಲಾ ಮಹಿಳೆಯರೊಂದಿಗೆ ಇರುವುದು ಈ ಯೋಜನೆ ಒಂದು ಪ್ರಮುಖ ಅಂಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SBI ಬ್ಯಾಂಕ್ ನಲ್ಲಿ 5 ವರ್ಷಗಳ ಅವಧಿಗೆ 3 ಲಕ್ಷ ರೂಪಾಯಿ FD ಇಟ್ರೆ, ಎಷ್ಟು ರಿಟರ್ನ್ ಸಿಗುತ್ತದೆ?
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ :-
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಮಹಿಳೆಯಾಗಿದ್ದರೆ ಮತ್ತು ಮನೆಯ ಮುಖ್ಯಸ್ಥರಾಗಿರಬೇಕು. ಅರ್ಜಿದಾರರ ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ಆಗಿರಬೇಕು. ಅರ್ಜಿಯ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸಲ್ಲಿಸಬೇಕು. ಜೊತೆಗೆ, ಪಡಿತರ ಚೀಟಿಯ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಪ್ರತಿ ಕುಟುಂಬವು ಒಮ್ಮೆ ಮಾತ್ರ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಲು ಅರ್ಹವಾಗಿದೆ. ಈ ಯೋಜನೆಯ ಲಾಭವನ್ನು ನಿಮ್ಮ ಕುಟುಂಬದ ಯಾವುದೇ ಸದಸ್ಯರು ಈ ಹಿಂದೆ ಪಡೆದಿದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಪ್ರಸ್ತುತ ಜಾರಿಯಲ್ಲಿರುವ ಉಜ್ವಲ ಯೋಜನೆ 2.0 ಯೋಜನೆಯ ಸೌಲಭ್ಯ ಪಡೆಯಲು ನೀವು ಹತ್ತಿರದ ಜನ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಇದನ್ನೂ ಓದಿ: BSNL ಗೆ ಒಂದು ಹೊಸ ಆಯಾಮ ಇನ್ನುಮುಂದೆ ದೇಶದಲ್ಲಿ ಬಿಎಸ್ಎನ್ಎಲ್ 4G ಕ್ರಾಂತಿ.