ಎಲ್ಲ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗಿದೆ ಅದರ ಬೆನ್ನಲ್ಲೇ ಎಲ್ಲಾ ದಿನಸಿ ಬೆಳೆಗಳು ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಗಗನಕ್ಕೆ ಏರಿವೆ ಹಾಗಿದ್ದಾಗ ಜನಸಾಮಾನ್ಯರು ಬದುಕುವುದು ಕಷ್ಟ ಆಗಿದೆ. ಹೀಗೆ ಇರುವ ಕಡಿಮೆ ಬೆಲೆಯಲ್ಲಿ ಮೋದಿ ಸರ್ಕಾರವು ಬಡವರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಲ್ಲಿ ಪಿಎಂ ಉಜ್ವಲ ಯೋಜನೆಗಳನ್ನು ಆರಂಭಿಸಿದೆ.
ಮುಂದಿನ 9 ತಿಂಗಳ ವರೆಗೆ ಸಿಗಲಿದೆ ಕೇವಲ 503 ರೂಪಾಯಿಗೆ ಗ್ಯಾಸ್ ಸಿಲೆಂಡರ್ :- ಒಂದು ತಿಂಗಳು ನೀಡಿ ಆಮೇಲೆ ಸಿಲೆಂಡರ್ ದರ ಏರಿಕೆ ಆಗುತ್ತದೆ ಎಂದು ನೀವು ಅಂದುಕೊಳ್ಳಬಹುದು. ಆದರೆ ಪಿಎಂ ಉಜ್ವಲ ಯೋಜನೆಯಲ್ಲಿ ಈಗಾಗಲೇ ಕಡಿಮೆ ಬೆಲೆಯಲ್ಲಿ ಬಡವರಿಗೆ ಸಿಲೆಂಡರ್ ನೀಡಲಾಗುತ್ತಿದೆ. ಅದರಂತೆ ಈಗ ಸಿಲೆಂಡರ್ ಬೆಲೆ 800 ಯೂಪಾಯಿಗಿಂತ ಜಾಸ್ತಿ ಇದೆ. ಆದರೆ ಈಗ 300 ರೂಪಾಯಿಗಿಂತಲು ಕಡಿಮೆ ದರದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇನ್ನು ಸತತವಾಗಿ 9 ತಿಂಗಳು ಇದೆ ದರದಲ್ಲಿ ಸಿಲಿಂಡರ್ ಸಿಗಲಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಬಗ್ಗೆ ಮಾಹಿತಿ :-
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ನರೇಂದ್ರ ಮೋದಿ ಸರ್ಕಾರವು 2016 ರಲ್ಲಿ ಜಾರಿಗೆ ತಂದಿತು. 2016 ರಿಂದ ಇಲ್ಲಿಯ ವರೆಗೂ ಬಡ ಹೆಣ್ಣುಮಕ್ಕಳಿಗೆ ಈ ಯೋಜನೆಯಿಂದ ಬಹಳ ಅನುಕೂಲ ಆಗಿದೆ. ಬಡ ಹೆಣ್ಣು ಮಕ್ಕಳಿಗೆ ಅಡುಗೆ ಮನೆಯಲ್ಲಿ ಕಟ್ಟಿಗೆ ಉರಿಸಿ ಹೊಗೆಯಲ್ಲಿ ಅಡುಗೆ ಮಾಡುವುದು ತಪ್ಪುತ್ತಿದ್ದೆ. ಮಹಿಳೆಯರ ಆರೋಗ್ಯ ವೃದ್ಧಿ ಆಗಬೇಕು. ಅಡುಗೆ ಮನೆಯಲ್ಲಿ ಮಹಿಳೆಯರು ಜೀವನ ಸವೆಯಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಆರಂಭ ಮಾಡಿತು. ಇದರ ಜೊತೆಗೆ ಬಡವರಿಗೆ ಕಡಿಮೆ ದರದಲ್ಲಿ ಸಿಲೆಂಡರ್ ನೀಡುವ ಮೂಲಕ ಬಡವರಿಗೆ ಅನುಕೂಲ ಮಾಡಿದೆ. ಇಲ್ಲಿಯ ತನಕ ಸಬ್ಸಿಡಿ ದರದಲ್ಲಿ ನೀಡುತ್ತಿರುವ ಸಿಲೆಂಡರ್ ಅನ್ನು ಇನ್ನು ಮುಂದೆಯೂ ನರೇಂದ್ರ ಮೋದಿ ಸರ್ಕಾರವು ನೀಡಲಿದೆ.
ನರೇಂದ್ರ ಮೋದಿಯವರ ಜಾರಿಗೆ ತಂದ ಯೋಜನೆಗಳೆಲ್ಲವು ಮುಂದುವರೆಯಲಿದೆ. :- ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿ NDA ಸರ್ಕಾರವನ್ನು ನಡೆಸುತ್ತಿರುವ ಪ್ರಧಾನಿ ನರೇಂದ್ರ ನೋಡಿ ಅವರು 2014 ಕ್ಕೆ ಅಧಿಕಾರಕ್ಕೆ ಬಂದಾಗಿನಿಂದ ಯಾವ ಯಾವ ಯೋಜನೆಗಳನ್ನು ಜನರ ಅನುಕೂಲಕ್ಕೆ ಜಾರಿಗೆ ತಂದಿದ್ದರೂ ಆ ಎಲ್ಲಾ ಯೋಜನೆಗಳು ಇನ್ನು ಮುಂದೆಯೂ ಇರಲಿವೆ. ಈಗಾಗಲೇ 17 ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ ಹಣ ಬಿಡುಗಡೆ ಆಗಿದೆ. ಜೊತೆಗೆ ಬಡವರಿಗೆ ವಸತಿ ಸೌಲಭ್ಯ ನೀಡುವುದನ್ನು ಈ ಬಾರಿಯೂ ಮುಂದುವರೆಯುವುದು ಎಂದು ಸರ್ಕಾರ ತಿಳಿಸಿದೆ.
ಸಬ್ಸಿಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ :- ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ ಸಬ್ಸಿಡಿ ಹಣವನ್ನು ಹೆಚ್ಚು ಕಡಿಮೆ ಮಾಡುತ್ತಾರೆ. ಆದರೆ ಉನ್ನತ ಮೂಲಗಳ ಪ್ರಕಾರ ಸಬ್ಸಿಡಿ ಹಣವನ್ನು ಇನ್ನು 9 ತಿಂಗಳು ಯಾವುದೇ ಬದಲಾವಣೆ ಇಲ್ಲ.
ಪ್ರಸ್ತುತ ಸಿಲೆಂಡರ್ ಬೆಲೆ ಎಷ್ಟು?: ಸ್ಥಳದಿಂದ ಸ್ಥಳಕ್ಕೆ ಸಿಲೆಂಡರ್ ಬೆಲೆ ಏರಿಕೆ ಹಾಗೂ ಇಳಿಕೆ ಆಗಲಿದೆ. ಸರಾಸರಿ 800 ರೂಪಾಯಿ ಇದೆ.
ಇದನ್ನೂ ಓದಿ: ಯಾವ ಬಣ್ಣದ ನಂದಿನಿ ಪ್ಯಾಕೇಟ್ ಹಾಲು ಬಳಕೆಗೆ ಉತ್ತಮ ಎಂಬುದನ್ನು ತಿಳಿಯಿರಿ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನಗಳು ಏನೇನು?
- ಗ್ರಾಮೀಣ ಪ್ರದೇಶಗಳಲ್ಲಿ ಸಿಲೆಂಡರ್ ಲಭ್ಯತೆಯನ್ನು ಹೆಚ್ಚಿಸುವುದು: ಉಜ್ವಲ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮನೆಗೂ ಅಡುಗೆಮನೆ ಅನಿಲ ಸಂಪರ್ಕವನ್ನು ಒದಗಿಸುವುದು. ಇದು ಗ್ರಾಮೀಣ ಜನರಿಗೆ ಶುದ್ಧ ಮತ್ತು ಆರೋಗ್ಯಕರ ಅಡುಗೆ ಮಾಡಲು ಸಹಾಯ ಆಗುತ್ತದೆ. ಇದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.
- ಮಹಿಳೆಯರಿಗೆ ಸಬಲೀಕಾರಣಕ್ಕೆ ಸಹಾಯಕ: , ಮಹಿಳೆಯರು ಅಡುಗೆಮನೆಯ ಕೆಲಸಗಳಿಗೆ ಹೆಚ್ಚು ಜವಾಬ್ದಾರರಾಗಿರುತ್ತಾರೆ. ಹೊಗೆಯ ತುಂಬಿದ ಅಡುಗೆ ಮನೆಯಲ್ಲಿ ಕೆಟ್ಟ ಗಾಳಿ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಅವರು ಹೆಚ್ಚು ಒಳಗಾಗುತ್ತಾರೆ ಅದ ಕಾರಣ ಉಜ್ವಲ ಯೋಜನೆಯು ಅಡುಗೆಮನೆಗಳಲ್ಲಿ ಕೆಲಸ ಮಾಡುವಾಗ ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆಯನ್ನು ಸುಧಾರಿಸುತ್ತದೆ.
- ಆರ್ಥಿಕ ಅಭಿವೃದ್ಧಿ ಆಗುತ್ತದೆ. : ಉಜ್ವಲ ಯೋಜನೆಯಿಂದ ಮಹಿಳೆಯರು ಅಡುಗೆ ಮನೆಯಿಂದ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟು ಹೊಸ ಉದ್ಯೋಗಾವಕಾಶಗಳ ಕಡೆಗೆ ಗಮನ ಹರಿಸಬಹುದು ಇದರಿಂದ ಗ್ರಾಮೀಣ ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣ ಆಗುತ್ತದೆ.. ಮನೆಯ ಕೆಲಸಗಳ ಜೊತೆಗೆ ಮಹಿಳೆಯರು ಬೇರೆ ಕೆಲಸಗಳ ಕಡೆಗೆ ಸಮಯ ನೀಡಲು ಸಾಧ್ಯವಾಗುತ್ತದೆ.
ಉಜ್ವಲ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
- ವಯಸ್ಸು :- ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 18 ವರ್ಷಕ್ಕಿಂತ ಜಾಸ್ತಿ ಇರಬೇಕು.
- LPG ಸಂಪರ್ಕ :- ಒಂದು ಮನೆಯವರು ಯಾವುದೇ OMC ಗಳಿಂದ ಬೇರೆ ಯಾವುದೇ ಸಿಲೆಂಡರ್ ಸಂಪರ್ಕ ಹೊಂದಿರಬಾರದು.
- ವರ್ಗ :- ಈ ಯೋಜನೆಗೆ SC ಅಥವಾ ST ಅಥವಾ ಅತ್ಯಂತ ಹಿಂದುಳಿದ ವರ್ಗಗಳು ಹಾಗೂ ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟುಗಳ ಜನಗಳು ಹಾಗೂ ಅರಣ್ಯವಾಸಿಗಳು ಹಾಗೂ ದ್ವೀಪಗಳು ಮತ್ತು ನದಿ ದ್ವೀಪಗಳು ಜನರು ಹಾಗೂ SECC ಕುಟುಂಬಗಳು ಹಾಗೂ ಬಡ ಕುಟುಂಬಗಳಿಗೆ ಸೇರಿದವರು ಅರ್ಜಿ ಸಲ್ಲಿಸಬಹುದು.
ಅವಶ್ಯಕ ದಾಖಲೆಗಳು :-
- ಆಧಾರ್ ಕಾರ್ಡ್ ಅಥವಾ ಯಾವುದೇ ಗುರುತಿನ ಪುರಾವೆ.
- ರಾಜ್ಯ ಸರ್ಕಾರ ನೀಡಿರುವ ಪಡಿತರ ಚೀಟಿ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದಾಖಲೆಗಳು.
- ಬ್ಯಾಂಕ್ ಖಾತೆಯ ವಿವರಗಳು.
ಭಾರತದಲ್ಲಿ ಇದುವರೆಗೆ ಕೋಟ್ಯಂತರ ಬದ ಕುಟುಂಬದವರು ಈ ಯೋಜನೆ ಲಾಭವನ್ನು ಪಡೆಯುತ್ತಿದ್ದಾರೆ. ಉಜ್ವಲ ಯೋಜನೆಯ ಮಾನದಂಡಗಳನ್ನು ತಿಳಿದು ನೀವು ಉಜ್ವಲ ಯೋಜನೆಯ ಫಲಾನುಭವಿ ಅಗಲು ಸಾಧ್ಯವಿದೆ.
ನೀವು ಉಜ್ವಲ ಯೋಜನೆಯ ಯಾವುದೇ ಅನುಮಾನಗಳು ದೂರುಗಳು ಇದ್ದರೆ ಟೋಲ್ ಫ್ರೀ ನಂಬರ್ ಅನ್ನು ಸಂಪರ್ಕಿಸಬಹುದು.
- ತುರ್ತು ಸಹಾಯವಾಣಿ ಸಂಖ್ಯೆ :- 1906.
- ಉಚಿತ ಸಹಾಯವಾಣಿ ಸಂಖ್ಯೆ :- 1800-2333-5555.
- ಉಜ್ವಲ ಸಹಾಯವಾಣಿ :- 1800-266-6696.
- ಉಜ್ವಲ ಯೋಜನೆಯ ವೆಬ್ಸೈಟ್ ವಿಳಾಸ :- https://www.pmuy.gov.in
ಇದನ್ನೂ ಓದಿ: ಟ್ರೈನ್ನಲ್ಲಿ ಪ್ರಯಾಣ ಮಾಡುವಾಗ ಲೋಯರ್ ಬರ್ತ್ ಬುಕ್ ಮಾಡಲು ಇರುವ ನಿಯಮಗಳು ಏನೇನು?