ಕೇಂದ್ರ ಸರ್ಕಾರದ PM ಉಷಾ ಸ್ಕಾಲರ್ ಶಿಪ್ ಗೆ ಅಪ್ಲೈ ಮಾಡಿ 20,000 ಹಣ ಪಡೆಯಿರಿ.

ಉನ್ನತ ವ್ಯಾಸಂಗಕ್ಕೆ ಸ್ಕಾಲರ್‌ಶಿಪ್‌ಗಳು ಬಹಳ ಸಹಾಯಕವಾಗಿವೆ. ಉನ್ನತ ವ್ಯಾಸಂಗಕ್ಕೆ ಬೇಕಾಗುವ ಶುಲ್ಕ, ವಸತಿ, ಪುಸ್ತಕಗಳು ಮತ್ತು ಇತರ ಖರ್ಚುಗಳನ್ನು ಭರಿಸಲು ಸ್ಕಾಲರ್‌ಶಿಪ್‌ಗಳು ಸಹಾಯ ಮಾಡುತ್ತವೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಈಗ ಪದವಿ ಓದುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆರ್ಥಿಕ ಸಹಾಯ ಮಾಡಲು ಕೇಂದ್ರವು ಪಿಎಂ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ನೀವು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

WhatsApp Group Join Now
Telegram Group Join Now

ಯಾರಿಗಾಗಿ ಈ ಯೋಜನೆ ಆರಂಭ ಆಗಿದೆ :- 12ನೇ ತರಗತಿಯಲ್ಲಿ 80% ಹೆಚ್ಚು ಅಂಕ ಪಡೆದ ಮತ್ತು ಯಾವುದೇ ಪದವಿ ಕೋರ್ಸ್‌ನಲ್ಲಿ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಶುಲ್ಕ, ಹಾಸ್ಟೆಲ್ ವೆಚ್ಚ, ಪುಸ್ತಕಗಳು ಮತ್ತು ಇತರ ಅಗತ್ಯ ವೆಚ್ಚಗಳನ್ನು ಭರಿಸಲು ನಿಮಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಆರಂಭ ಮಾಡಲಾಗಿದೆ. 80%ಗಿಂತ ಹೆಚ್ಚು ಅಂಕ ಪಡೆದ ಮತ್ತು ಸ್ನಾತಕ ಪದವಿಯನ್ನು ಪಡೆದ ನಂತರ ಈ ಸ್ಕಾಲರ್‌ಶಿಪ್ ಲಭ್ಯವಿರುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತಾ ಮಾನದಂಡಗಳು ಏನೇನು?: ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲು, ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 80% ಅಂಕಗಳನ್ನು ಪಡೆದಿರಬೇಕು ಮತ್ತು ಪ್ರಸ್ತುತ ಯಾವುದೇ ಮೂರು ವರ್ಷಗಳ ಪದವಿ ಕೋರ್ಸ್‌ನಲ್ಲಿ ಅಧ್ಯಯನ ಮಾಡಬೇಕು.

ಅರ್ಜಿ ಸಲ್ಲಿಸುವ ವಿಧಾನ:-

  • ವೆಬ್‌ಸೈಟ್‌ಗೆ ಭೇಟಿ ನೀಡಿ: ಕುರಿತು, https://scholarships.gov.in/ ಈ ವೆಬ್‌ಸೈಟ್‌ಗೆ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಭೇಟಿ ನೀಡಿ.
  • ವಿದ್ಯಾರ್ಥಿಗಳ ಕ್ಲಿಕ್ ಹೋಗಿ: ವೆಬ್‌ಸೈಟ್ ತೆರೆದ ನಂತರ, “ವಿದ್ಯಾರ್ಥಿಗಳು” ಎಂಬ ಆಯ್ಕೆಯನ್ನು ಹುಡುಕಿ ಮತ್ತು ಅದರ ಮೇಲೆ ಮಾಡಿ.
  • ಅರ್ಜಿ ಸಲ್ಲಿಸಿ: “ವಿದ್ಯಾರ್ಥಿಗಳು” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ, “ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಿ ಲಾಗಿನ್” ಎಂಬ ಆಯ್ಕೆಯನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
  • ಹೊಸ ಖಾತೆ ರಚಿಸಿ: ಈಗ, “ರಿಜಿಸ್ಟರ್” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ನಿಮಗೆ ಒಂದು ಹೊಸ ಖಾತೆಯನ್ನು ರಚಿಸಲು.
  • ಮಾಹಿತಿ: ಹೊಸ ಖಾತೆಯನ್ನು ರಚಿಸುವಾಗ, ನಿಮ್ಮ ಹೆಸರು, ಇಮೇಲ್ ಐಡಿ, ಪಾಸ್ವರ್ಡ್ ಮತ್ತು ಇತರ ಮಾಹಿತಿಯನ್ನು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್: ನಿಮ್ಮ ಗುರುತಿನ ಪುರಾವೆ.
  • ದ್ವಿತೀಯ ಪಿಯುಸಿ ಅಂಕಪಟ್ಟಿ: ನಿಮ್ಮ 12ನೇ ತರಗತಿಯ ಅಂಕಗಳನ್ನು ತೋರಿಸುವ ದಾಖಲೆ.
  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ: ನಿಮ್ಮ 10ನೇ ತರಗತಿಯ ಅಂಕಗಳನ್ನು ತೋರಿಸುವ ದಾಖಲೆ.
  • ಪದವಿ ವ್ಯಾಸಂಗಕ್ಕೆ ಸೇರಿದ ದಾಖಲೆ: ನೀವು ಪದವಿ ಕೋರ್ಸ್‌ಗೆ ಸೇರಿರುವುದನ್ನು ತೋರಿಸುವ ದಾಖಲೆ (ಉದಾಹರಣೆಗೆ, ಪ್ರವೇಶ ಪತ್ರ).
  • ಇ-ಮೇಲ್ ವಿಳಾಸ: ನಿಮ್ಮ ಇ-ಮೇಲ್ ಐಡಿ.
  • ಮೊಬೈಲ್ ನಂಬರ್: ನಿಮ್ಮ ಮೊಬೈಲ್ ನಂಬರ್.
  • ಭಾವಚಿತ್ರ: ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಸೈಜಿನ ಫೋಟೋ.

ಅರ್ಜಿ ಸಲ್ಲಿಸಿದವರಿಗೆ ಸಿಗುವ ಸ್ಕಾಲರ್ಶಿಪ್ ಮೊತ್ತ?

ಅರ್ಜಿ ಸಲ್ಲಿಸಿದವರಿಗೆ ಪದವಿ ಮೊದಲನೇ ವರ್ಷದಲ್ಲಿ 12,000 ರೂಪಾಯಿ ಹಾಗೂ ಎರಡನೇ ಮತ್ತು ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ 20,000 ರೂಪಾಯಿ ಸ್ಕಾಲರ್ಶಿಪ್ ಸಿಗಲಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ FD ಮಾಡಿದರೆ 5 ವರ್ಷದಲ್ಲಿ ಎಷ್ಟು ಬಡ್ಡಿ ಹಣ ಸಿಗುತ್ತದೆ?

Sharing Is Caring:

Leave a Comment