ಈಗ ಎಲ್ಲ ಖಾಸಗಿ ಟೆಲಿಕಾಂ ಸಂಸ್ಥೆ ಗಳು ರೀಚಾರ್ಜ್ ದರವನ್ನು ಏರಿಕೆ ಮಾಡಿವೆ. ಇದರ ಬೆನ್ನಲ್ಲೇ ಈಗ ಗ್ರಾಹಕರು ಬಿಎಸ್ಎನ್ಎಲ್ ಗೆ ಮತ್ತೆ ಮರಳಲು ಬಯಸುತ್ತಾ ಇದ್ದರೆ. ಕಡಿಮೆ ಮೊತ್ತದಲ್ಲಿ ರೀಚಾರ್ಜ್ ಪ್ಲಾನ್ ಗಳನ್ನೂ ಹೊಂದಿರುವ ಬಿಎನ್ಎಲ್ ಗೆ ಮರಳಲು ಸಿಮ್ ಕಾರ್ಡ್ ಪೋರ್ಟ್ ಮಾಡಿಸಿಕೊಳ್ಳಬೇಕು. ನೀವು ಸಹ ಬಿಎಸ್ಎನ್ಎಲ್ ಗೆ ಮತ್ತೆ ವಾಪಸ್ ಆಗುವ ಬಯಕೆ ಇದ್ದರೆ ನೀವು ಸುಲಭ ವಿಧಾನವನ್ನು ಅನುಸರಿಸಿ ಪೋರ್ಟ್ ಆಗಬಹುದು.
ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡುವುದು ಹೇಗೆ?
BSNL ಗೆ ನಿಮ್ಮ ಪ್ರಸ್ತುತ ಸಿಮ್ ಸಂಖ್ಯೆಯನ್ನು ಪೋರ್ಟ್ ಮಾಡಲು ಈ ಸುಲಭ ಹಂತಗಳನ್ನು ಅನುಸರಿಸಿ:
- ಹಂತ 1. SMS ಕಳುಹಿಸಿ:ಮೊದಲೂ, ನಿಮ್ಮ ಪ್ರಸ್ತುತ ಸಿಮ್‌ನಿಂದ 1900 ಗೆ SMS ಕಳುಹಿಸಿ. SMS ಈ ರೀತಿ ಇರಬೇಕು: PORT_XXXXXXXXXX(ಮಾಬೈಲ್ ನಂಬರ್) ಎಂದು ಟೈಪ್ ಮಾಡಿ ಕಳುಹಿಸಿ..
- ಹಂತ 2. ಪೋರ್ಟಿಂಗ್ ಕೋಡ್ ಪಡೆಯಿರಿ: ನೀವು ಒಂದು SMS ಮೂಲಕ 15 ದಿನಗಳ ಮಾನ್ಯತೆಯೊಂದಿಗೆ ಒಂದು ವಿಶಿಷ್ಟ ಪೋರ್ಟಿಂಗ್ ಕೋಡ್ (UPC) ಸ್ವೀಕರಿಸುತ್ತೀರಿ.
- ಹಂತ 3:-BSNL ಗ್ರಾಹಕರಾಗಿ ಅರ್ಜಿ ಸಲ್ಲಿಸಿ: ನೀವು ಈ ಕೆಳಗಿನ ಯಾವುದೇ ವಿಧಾನದ ಮೂಲಕ BSNL ಗ್ರಾಹಕರಾಗಿ ಅರ್ಜಿ ಸಲ್ಲಿಸಬಹುದು:
- BSNL ಸೇವಾ ಕೇಂದ್ರಕ್ಕೆ ಭೇಟಿ ನೀಡಿ: ನಿಮ್ಮ ಗುರುತಿನ ದಾಖಲೆಗಳು ಮತ್ತು ಪೋರ್ಟಿಂಗ್ ಕೋಡ್‌ನೊಂದಿಗೆ ಭೇಟಿ ನೀಡಿ.
- BSNL ಮೊಬೈಲ್ ಕೇರ್ ಅನ್ನು ಸಂಪರ್ಕಿಸಿ: ಪೋರ್ಟಿಂಗ್ ಭವಿಷ್ಯವನ್ನು ಪ್ರಾರಂಭಿಸಲು 1800-424-3636 ಗೆ ಕರೆ ಮಾಡಿ.
- ಹಂತ 4:-ಅರ್ಜಿ ನಮೂನೆಯನ್ನು ಭರ್ತಿ ಮಾಡಿ: ಸಿಮ್ ಪೋರ್ಟಿಂಗ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
- ಹಂತ 5:- BSNL ಸಿಮ್ ಕಾರ್ಡ್ ಸ್ವೀಕರಿಸಿ: ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ, BSNL ನಿಮಗೆ ಹೊಸ ಸಿಮ್ ಕಾರ್ಡ್ ಅನ್ನು ಒದಗಿಸುತ್ತದೆ.
ಬಿಎಸ್ಎನ್ಎಲ್ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ಸ್ ನೀಡುತ್ತಿದೆ :-
ಬಿಎಸ್‌ಎನ್‌ಎಲ್ ತನ್ನ ಅಗ್ಗದ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ, ಇದು 28 ದಿನಗಳಿಂದ 365 ವ್ಯಾಲಿಡಿಟಿಯಲ್ಲಿ ಹಲವು ಆಯ್ಕೆಗಳನ್ನು ನೀಡಲಾಗಿದೆ. ಇದು ಇತರ ಟೆಲಿಕಾಂ ಕಂಪನಿಗೆ ಕಡಿಮೆ ವೆಚ್ಚದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಿಎಸ್ಎನ್ಎಲ್ 5G ಸೇವೆ ಗೆ ಕಾಲಿಡುತ್ತಿದೆ. :-
ಈಗಾಗ್ಲೇ ನೆಟ್‌ವರ್ಕ್ ವಿಷಯದಲ್ಲಿ ಬಿಎಸ್‌ಎನ್‌ಎಲ್ ಹಿಂದೆ ಬಿದ್ದಿದೆ. ಯಾಕೆಂದರೆ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ 4G ಮತ್ತು 5G ಸೇವೆಗಳನ್ನು ನೀಡುತ್ತಿದೆ, ಆದರೆ ಬಿಎಸ್‌ಎನ್‌ಎಲ್ ಇನ್ನೂ 3G ಗೆ ಸೀಮಿತವಾಗಿದೆ. ಇದು ಗ್ರಾಹಕರೂ ಬೇರೆ ನೆಟ್ವರ್ಕ್ ಗಳತ್ತ ಮುಖ ಮಾಡುವಂತೆ ಮಾಡಿದೆ. ವಿಶೇಷವಾಗಿ ಡೇಟಾ ಬಳಕೆ ಹೆಚ್ಚುತ್ತಿರುವ ಈ ಕಾಲದಲ್ಲಿ. ಒಟ್ಟಾರೆಯಾಗಿ, ಬಿಎಸ್‌ಎನ್‌ಎಲ್ ಬಜೆಟ್ ನಲ್ಲಿ ಗ್ರಾಹಕರು ಉತ್ತಮ ಆಯ್ಕೆಯಾಗಿದೆ. ಆದರೆ ನೀವು ವೇಗದ ನೆಟ್‌ವರ್ಕ್ ಮತ್ತು ಉತ್ತಮ ಕವರೇಜ್ ಅನ್ನು ಹುಡುಕುತ್ತಿರುವಿರಿ ಎಂದಾದರೆ ಇತರ ಟೆಲಿಕಾಂ ಕಂಪನಿಗಳನ್ನು ಪರಿಗಣಿಸುವುದು ಒಳ್ಳೆಯದು.
ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ BSNL ನ 84 ದಿನಗಳ ರಿಚಾರ್ಜ್ ಪ್ಲಾನ್ ಮಾಡಿಕೊಳ್ಳಿ! ಸಖತ್ ಉಪಯೋಗ
ಇದನ್ನೂ ಓದಿ: RBI CIBIL ಸ್ಕೋರ್‌ನಲ್ಲಿ 5 ಹೊಸ ಬದಲಾವಣೆಗಳು; ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ತಿಳಿದುಕೊಳ್ಳಿ