ಪೋಸ್ಟ್ ಆಫೀಸ್ ಸರ್ಕಾರದಿಂದ ಬೆಂಬಲಿತವಾದ ಸಂಸ್ಥೆ ಆಗಿರುವುದರಿಂದ ಹೀಗಾಗಿ, ನಿಮ್ಮ ಹೂಡಿಕೆ ಸುರಕ್ಷಿತವಾಗಲಿದೆ. ಬಹಳ ಕಡಿಮೆ ಮೊತ್ತದಿಂದಲೂ ನೀವು ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಿವಿಧ ಅವಧಿಗಳಿಗೆ FD ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನೀವು ಎಷ್ಟು ಲಾಭ ಪಡೆಯಬಹುದು ನಿಮಗೆ ಸಿಗುವ ಬಡ್ಡಿಯ ಮೊತ್ತ ಎಷ್ಟು ಎಂಬುದನ್ನು ನೋಡೋಣ.
ಬಡ್ಡಿದರ ಏಷ್ಟು?
ನೀವು ಪೋಸ್ಟ್ ಆಫೀಸ್ನಲ್ಲಿ ಎಷ್ಟು ಕಾಲ ಹಣ ಇಡುತ್ತೀರಿ ನಿಮ್ಮ ಮೇಲೆ ನಿಮಗೆ ಸಿಗುವ ಬಡ್ಡಿ ಬರುತ್ತದೆ. ನೀವು ಹೆಚ್ಚು ಕಾಲ ಹಣ ಇಟ್ಟರೆ, ಹೆಚ್ಚು ಬಡ್ಡಿ ಸಿಗುತ್ತದೆ. ಉದಾಹರಣೆಗೆ, ನೀವು 1 ವರ್ಷಕ್ಕೆ ಹಣ ಇಟ್ಟರೆ ಕಡಿಮೆ ಬಡ್ಡಿ ಸಿಗುತ್ತದೆ, ಆದರೆ 5 ವರ್ಷಕ್ಕೆ ಕೊಟ್ಟರೆ ಇನ್ನೂ ಹೆಚ್ಚಿನ ಬಡ್ಡಿ ಸಿಗುತ್ತದೆ. ಹಾಗಾದರೆ ನೀವು 2,00,000 ರೂಪಾಯಿ ಮೊತ್ತವನ್ನು ಹೂಡಿಕೆ ಮಾಡಿದರೆ ಎಷ್ಟು ವರುಷಕ್ಕೆ ಏಷ್ಟು ಬಡ್ಡಿದರ ಸಿಗುತ್ತದೆ ಎಂಬುದನ್ನು ನೋಡೋಣ.
- 1 ವರ್ಷಕ್ಕೆ: 2,00,000 ರೂಪಾಯಿಗಳ ಮೇಲೆ 6.9% ಬಡ್ಡಿ ದರ ಸಿಗುತ್ತದೆ.
- 2 ವರ್ಷಕ್ಕೆ: 7.0% ಬಡ್ಡಿಯನ್ನು ಪಡೆಯಬಹುದು.
- 3 ವರ್ಷಕ್ಕೆ: 7.1% ಬಡ್ಡಿಯನ್ನು ಪಡೆಯಬಹುದು.
- 5 ವರ್ಷಕ್ಕೆ: 7.5% ಬಡ್ಡಿ ಪಡೆಯಬಹುದು.
ನೀವು 1,00,000 ಹಣವನ್ನು ಎಫ್ಡಿ ಮಾಡಿದರೆ ಸಿಗುವ ಬಡ್ಡಿ ಮೊತ್ತ ಎಷ್ಟು?
- 1 ವರ್ಷದ ಅವಧಿಗೆ ಸಿಗುವ ಬಡ್ಡಿಯು 7,080 ರೂಪಾಯಿ.
- 2 ವರ್ಷಗಳ ಅವಧಿಗೆ ಸಿಗುವ ಬಡ್ಡಿಯ ಮೊತ್ತ 14,888 ರೂಪಾಯಿ
- 3 ವರ್ಷಗಳ ಅವಧಿಗೆ ಬಡ್ಡಿ ಮೊತ್ತ 23,507 ರೂಪಾಯಿ ಆಗುತ್ತದೆ.
- 5 ವರ್ಷಗಳ ಅವಧಿಗೆ ಬಡ್ಡಿಯ ಮೊತ್ತ 44,994 ರೂಪಾಯಿ ಸಿಗುತ್ತದೆ.
1,50,000 ರೂಪಾಯಿ ಹೂಡಿಕೆ ಮಾಡಿದರೆ ಸಿಗುವ ಬಡ್ಡಿಯ ಮಿತ್ತ ಎಷ್ಟು..
- 1 ವರ್ಷದ ಅವಧಿಗೆ ಹೂಡಿಕೆ ಮಾಡಿದ್ದಾರೆ 10,621 ರೂಪಾಯಿ ಬಡ್ಡಿ ಸಿಗುತ್ತದೆ.
- 2 ವರ್ಷಗಳ ಅವಧಿಗೆ ಹೂಡಿಕೆ ಮಾಡಿದ್ರೆ ಬಡ್ಡಿ ಮೊತ್ತ 22,332 ರೂಪಾಯಿ.
- 3 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಬಡ್ಡಿಯು 35,261 ರೂಪಾಯಿ ಆಗಿರುತ್ತದೆ.
- 5 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೇ ಬಡ್ಡಿಯು 67,492 ರೂಪಾಯಿ ಆಗಿರುತ್ತದೆ.
2,00,000 ರೂಪಾಯಿ ಹೂಡಿಕೆ ಮಾಡಿದರೆ, ನಿಮ್ಮ ಕೈಗೆ ಏಷ್ಟು ಹಣ ಸಿಗುತ್ತದೆ.
- 1 ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ನಿಮಗೆ ಬಡ್ಡಿಯು 14,161 ರೂಪಾಯಿ ಆಗಿರುತ್ತದೆ ನಿಮ್ಮ ಹೂಡಿಕೆಯ ಮೊತ್ತ 2,00,000 ರೂಪಾಯಿ ಸೇರಿಸಿದರೆ ನಿಮಗೆ ಸಿಗುವ ಪೂರ್ಣ ಪ್ರಮಾಣದ ಮೊತ್ತ 2,14,161 ರೂಪಾಯಿ ಆಗಿರುತ್ತದೆ
- 2 ವರ್ಷಗಳ ಅವಧಿಗೆ ಹೂಡಿಕೆಯ ಮೊತ್ತಕ್ಕೆ ಬಡ್ಡಿಯು 29,776 ರೂಪಾಯಿ ಆಗಿರುತ್ತದೆ, ನಿಮ್ಮ ಹೂಡಿಕೆಯ ಮೊತ್ತ ಹಾಗೂ ಬಡ್ಡಿದರ ಸೇರಿಸಿ ಒಟ್ಟು 2,29,776 ರೂಪಾಯಿ ನಿಮಗೆ ಸಿಗುತ್ತದೆ.
- 3 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಬಡ್ಡಿಯ ಮೊತ್ತವು 47,015 ರೂಪಾಯಿ ನಿಮ್ಮ ಹೂಡಿಕೆಯ ಮೊತ್ತ 2,00,000 ರೂಪಾಯಿ ಸೇರಿಸಿದರೆ ನಿಮಗೆ ಸಿಗುವ ಒಟ್ಟು ನಿತ್ಯವೂ 2,47,015 ರೂಪಾಯಿ ಆಗಿರುತ್ತದೆ.
- 5 ವರ್ಷಗಳ ಅವಧಿಗೆ ನೀವು ಹೂಡಿಕೆ ಮಾಡಿದರ ನಿಮಗೆ 89,989 ರೂಪಾಯಿ ಬಡ್ಡಿ ಮೊತ್ತ ಸಿಗುತ್ತದೆ. ನಿಮ್ಮ ಹೂಡಿಕೆಯ ಮೊತ್ತ 2,00,000 ರೂಪಾಯಿ ಆಗಿದ್ದರೆ ಬಡ್ಡಿ ಮೊತ್ತವನ್ನು ಸೇರಿಸಿ ನಿಮ್ಮ ಹೂಡಿಕೆಯ 8ಮೊತ್ತ 2,89,989 ರೂಪಾಯಿ ಸಿಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಿಯೋ ಮೂರು ಅಗ್ಗದ ರೀಚಾರ್ಜ್ ಪ್ಲಾನ್ ಮೂಲಕ ನೀವು ಉಚಿತ OTT ಅಪ್ಲಿಕೇಶನ್ಗಳು ಅನಿಯಮಿತ ಕರೆ ಮತ್ತು ಡೇಟಾ ಸಿಗಲಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ