ಯಾವುದೇ ಸರಕಾರಿ ಹುದ್ದೆಗಳು ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಯಾಕೆಂದರೆ ತಿಂಗಳಿಗೆ ನಿಗದಿತ ಸಂಬಳದ ಜೊತೆಗೆ ಜೀವನದುದ್ದಕ್ಕೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಒಳ್ಳೆಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಹಾಗೂ ಜನರ ಸೇವೆ ಮಾಡುವ ಒಂದು ಅವಕಾಶವೂ ಸರಕಾರಿ ಹುದ್ದೆಗಳಲ್ಲಿ ಸಿಗುತ್ತದೆ. ಈಗ ಅಂತಹ ಜನರಿಗೆ ಈಗ ಪೋಸ್ಟ್ ಆಫೀಸ್ ನಲ್ಲಿ ಸೇವೆ ಸಲ್ಲಿಸುವ ಅವಕಾಶ ಇದೆ. ಹುದ್ದೆಗಳಿಗೆ ನೇಮಕ ಆದರೆ ನಿಮಗೆ ಅಷ್ಟು ಸಂಬಳ ಸಿಗುತ್ತದೆ ಹಾಗೂ ಹುದ್ದೆಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನಿಮಗೆ ತಿಳಿಯುತ್ತದೆ.
ಎಷ್ಟು ಹುದ್ದೆಗಳು ಖಾಲಿ ಇವೆ?: ಪೋಸ್ಟ್ ಆಫೀಸ್ ನಲ್ಲಿ ಒಟ್ಟು 44,228 ಹುದ್ದೆಗಳ ಭರ್ತಿಗೆ ಅಂಚೆ ಇಲಾಖೆ ಮುಂದಾಗಿದ್ದು ಕರ್ನಾಟಕದಲ್ಲಿ ಒಟ್ಟು 1940 ಪೋಸ್ಟ್ ಮಾಸ್ಟರ್ ಹುದ್ದೆಗಳ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲಿ ಜಾತಿವಾರು ಖಾಲಿ ಇರುವ ಹುದ್ದೆಗಳ ಹೀಗಿವೆ :- ಸಾಮಾನ್ಯ ಕೆಟಗರಿ ಗೆ 827 ಹುದ್ದೆಗಳು ಹಾಗೂ ಇತರೆ ಹಿಂದುಳಿದ ವರ್ಗ ದವರಿಗೆ 446 ಹುದ್ದೆಗಳು ಪರಿಶಿಷ್ಟ ಜಾತಿ ಗೆ 264 ಹುದ್ದೆಗಳು, ಪರಿಶಿಷ್ಟ ಪಂಗಡ 130 ಹುದ್ದೆಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 230 ಹಾಗೂ PWD -A ಅವರಿಗೆ 7 ಹುದ್ದೆಗಳು ಹಾಗೂ PWD-B ಅವರಿಗೆ 22 ಹಾಗೂ PWD-C 12 ಹಾಗೂ PWD-DE 2 ಹುದ್ದೆಗಳು ಇವೆ.
ಹುದ್ದೆಗಳ ಸಂಬಳದ ವಿವರಗಳು :-
ಆಯ್ಕೆ ಆಗಿರುವ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ ಹುದ್ದೆಗೆ ತಿಂಗಳಿಗೆ 12,000 ರೂಪಾಯಿ ಯಿಂದ 29,380 ರೂಪಾಯಿಗಳ ಸಂಬಳ ನೀಡಲಾಗುತ್ತದೆ ಹಾಗೂ ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಡಾಕ್ ಸೇವಕ್ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ 10,000 ರೂಪಾಯಿಯಿಂದ 24,470 ರೂಪಾಯಿ ಮಾಸಿಕ ಸಂಬಳ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮೀಸಲಾತಿ ಪ್ರಕಾರ ಖಾಲಿ ಹುದ್ದೆಗಳ ವಿವರಗಳನ್ನು ತಿಳಿಯುವ ವಿಧಾನ :- ಮೊದಲು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ ತೆರಳಿ Karnataka ಪೋಸ್ಟಲ್ ಸರ್ಕಲ್ ಎಂಬ ಆಪ್ಷನ್ ಆಯ್ಕೆ ಮಾಡಬೇಕು. ಆಮೇಲೆ ಜಿಲ್ಲೆಗಳ ಆಯ್ಕೆ ಪಟ್ಟಿ ಕೇಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಬೇಕು ನಂತರ ನಿಮಗೆ View Posts ಎಂಬ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಸ್ಕ್ರೀನ್ ಮೇಲೆ ನೀವು ಆಯ್ಕೆ ಮಾಡಿರುವ ಜಿಲ್ಲೆಯಲ್ಲಿ ಯಾವ ಯಾವ ಪೋಸ್ಟ್ ಆಫೀಸ್ ನಲ್ಲಿ ಹುದ್ದೆಗಳು ಖಾಲಿ ಇವೆ ಎಂಬುದನ್ನು ತಿಳಿಯಬಹುದಾಗಿದೆ.
ವಿದ್ಯಾರ್ಹತೆ :- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ಪಾಸ್ ಆಗಿರಬೇಕು. ಇದರ ಜೊತೆಗೆ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಇರಬೇಕು. ಸ್ಪಷ್ಟವಾಗಿ ಕನ್ನಡ ಭಾಷೆ ಓದಲು ಮತ್ತು ಬರೆಯಲು ಹಾಗೂ ಮಾತನಾಡಲು ಬರಬೇಕು. ಹಾಗೂ ಬೇಸಿಕ್ ಕಂಪ್ಯೂಟರ್ ಬಗ್ಗೆ ತಿಳಿದುಕೊಂಡಿರಬೇಕು. ಕಂಪ್ಯೂಟರ್ ಸರ್ಟಿಫಿಕೇಟ್ ಇರಬೇಕು.
ಇದನ್ನೂ ಓದಿ: ಶೀಘ್ರವೇ ಅಂಗನವಾಡಿ ಶಿಕ್ಷಕಿಯರ ನೇಮಕಾತಿ ಮಾಡಿಕೊಳ್ಳಲಿರುವ ರಾಜ್ಯ ಸರಕಾರ.
ವಯಸ್ಸಿನ ವಿವರ :-
ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18ವರ್ಷ. ಗರಿಷ್ಠ ವಯಸ್ಸು 40 ವರ್ಷಗಳ. ಸರಕಾರಿ ಮೀಸಲಾತಿ ನಿಯಮದ ಪ್ರಕಾರ ಆಯಾ ವರ್ಗದ ಜನರಿಗೆ ಮೀಸಲಾತಿ ನಿಯಮ ಅನ್ವಯಿಸುತ್ತದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :- ಅಧಿಕೃತ ವೆಬ್ಸೈಟ್ ಗೆ ತೆರಳಿ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 5-08- 2024 ಆಗಿದೆ.
ಇದನ್ನೂ ಓದಿ: ಉದ್ಯೋಗ ಅವಕಾಶ: ಹಾವೇರಿ ಜಿಲ್ಲೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ.