ಸಾಮಾನ್ಯವಾಗಿ ಜನರು ಹೆಚ್ಚಿನ ಲಾಭ ಸಿಗುವ ಕಡೆಯಲ್ಲಿ ಹಾಗೂ ಹೂಡಿಕೆ ಮಾಡಿದ ಹಣವು ಸೇಫ್ ಆಗಿ ಎಲ್ಲಿ ಸೇಫ್ ಆಗಿ ಇರುತ್ತದೆಯೋ ಅಂತಹ ಕಡೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅಂತವರಿಗೆ ಈಗ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಆಗಿದೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಹೂಡಿಕೆ ಮಾಡಿದ ಮೊತ್ತವು ಸೇಫ್ ಆಗಿ ಇರುತ್ತದೆ. ಹಾಗೂ ಭಾರತದಾದ್ಯಂತ ಶಾಖೆಯನ್ನು ಹೊಂದಿರುವುದರಿಂದ ಹೂಡಿಕೆ ಮಾಡಲು ಸಹಾಯಕ ಆಗಿರುತ್ತದೆ. ಈಗಾಗಲೇ ಹೆಚ್ಚಿನ ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಹಲವು ಸ್ಕೀಂ ಗಳನ್ನೂ ಪರಿಚಯ ಮಾಡಿದೆ. ಇದರಲ್ಲಿ ಹೂಡಿಕೆ ಮಾಡಿ ಬ್ಯಾಂಕ್ ನಾ FD ಯೋಜನೆಯಲ್ಲಿ ನೀಡುವ ಬದ್ದುದರಕ್ಕಿಂತ ಹೆಚ್ಚಿನ ಲಾಭವನ್ನು ಗಳಿಸಲು ಸಹ್ಯಾವುದೇ. ಹಾಗಾದರೆ ಪೋಸ್ಟ್ ಆಫೀಸ್ ನಾ ಸ್ಕೀಂ ಗಳ ಬಗ್ಗೆ ತಿಳಿಯೋಣ.
ಬ್ಯಾಂಕ್ ನಲ್ಲಿ ನೀಡುವ ಬಡ್ಡಿಗಿಂತ ಹೆಚ್ಚಿನ ಬಡ್ಡಿ ನೀಡುತ್ತದೆ ಪೋಸ್ಟ್ ಆಫೀಸ್ :- ಸಾಮಾನ್ಯವಾಗಿ ಯಾವ ಬ್ಯಾಂಕ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದ ಎಂಬುದನ್ನು ತಿಳಿದು ಹೂಡಿಕೆ ಮಾಡುತ್ತೇವೆ. ಆದರೆ ಈಗ ಎಲ್ಲ ಬ್ಯಾಂಕ್ ಗಿಂತ ಹೆಚ್ಚಿನ ಬಡ್ಡಿಯನ್ನು ಪೋಸ್ಟ್ ಆಫೀಸ್ ನೀಡುತ್ತಿದೆ. ಸಣ್ಣ ಪ್ರಮಾಣದ ಹೂಡಿಕೆಯನ್ನು ಮಾಡಿ ಹೆಚ್ಚಿನ ಲಾಭವನ್ನು ಗಳಿಸಲು ಈಗ ಪೋಸ್ಟ್ ಆಫೀಸ್ ಉತ್ತಮ ಆಯ್ಕೆ ಆಗಿದೆ. ಪೋಸ್ಟ್ ಆಫೀಸ್ ನಲ್ಲಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿದರವನ್ನು ಪರಿಷ್ಕರಣೆ ಮಾಡಲಾಗುತ್ತದೆ.
1)ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ :- ಈ ಯೋಜನೆ ಮಹಿಳೆಯರಿಗೆ ಉತ್ತಮ ಯೋಜನೆ ಆಗಿದೆ. ಇದರಲ್ಲಿ ತೆರಿಗೆ ವಿನಾಯಿತಿ ಇದೆ. ವಾರ್ಷಿಕವಾಗಿ 7.5% ಬಡ್ಡಿ ಸಿಗುತ್ತದೆ. ಇದರ ಮೆಚ್ಚುರಿಟಿ ಅವಧಿಯು 2 ವರ್ಷ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2) ಹಿರಿಯ ನಾಗರಿಕರ ಉಳಿತಾಯ ಯೋಜನೆ :- Post office ಹಿರಿಯ ನಾಗರಿಕರಿಗೆ ಉತ್ತಮ ಯೋಜನೆಯನ್ನು ನೀಡುತ್ತಿದೆ. ಇದು 60 ವರುಷಗಳಿಗಿಂತ ಹೆಚ್ಚಿನವರಿಗೆ ಯೋಜನೆಯ ಲಾಭವನ್ನು ಪಡೆಯುವ ಅವಕಾಶ ನೀಡುತ್ತದೆ. ಇದರಲ್ಲಿ ಹಿರಿಯ ನಾಗರಿಕರು 5 ವರುಷಗಳ ಅವಧಿಗೆ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ 1000 ರೂಪಾಯಿಯಿಂದ 30 ಲಕ್ಷ ರೂಪಾಯಿಯ ವರೆಗೆ ಹೂಡಿಕೆ ಮಾಡಬಹುದಾಗಿದೆ. 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಶೇಕಡಾ 8.2% ಬಡ್ಡಿದರ ಸಿಗುತ್ತದೆ.
3) ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ :-
ಈ ಯೋಜನೆಯಲ್ಲಿ ಕನಿಷ್ಠ 1500 ರೂಪಾಯಿ ಹೂಡಿಕೆ ಮಾಡಬೇಕು. ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಇದರ ಮೆಚ್ಚುರಿಟಿ ಅವಧಿಯು 5 ವರ್ಷ. ಈ ಯೋಜನೆಯಲ್ಲಿ ಶೇಕಡಾ 7.4% ಬಡ್ಡಿ ಸಿಗುತ್ತದೆ.
4) ಕಿಸಾನ್ ವಿಕಾಸ್ ಪತ್ರ ಯೋಜನೆ :- ಇದು ಪೋಸ್ಟ್ ಆಫೀಸ್ ನಾ ಉತ್ತಮ ಯೋಜನೆ ಆಗಿದೆ. ಇದರಲ್ಲಿ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇರುವುದಲ್ಲ. ಇರದಲ್ಲಿ ನಿಮಗೆ ಯಾವುದೇ ರೀತಿಯ ತೆರಿಗೆ ಪ್ರಯೋಜನಗಳು ಇರುವುದಿಲ್ಲ. ಈ ಯೋಜನೆಯ ಮೆಚ್ಚುರಿಟಿ ಅವಧಿಯು 115 ತಿಂಗಳು ಆಗಿರುತ್ತದೆ. ಇದರಲ್ಲಿ ನಿಮಗೆ ಸಿಗುವ ಬಡ್ಡಿದರ ಶೇಕಡಾ. 7.5% ಆಗಿರುತ್ತದೆ.
5) ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ :- ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ಗರಿಷ್ಠ ಮೊತ್ತದ ನಿಯಮ ಇಲ್ಲ. ಇದರ ತೆರಿಗೆ ವಿನಾಯಿತು ಇರುತ್ತದೆ. ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 7.7% ಬಡ್ಡಿ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗರ್ಭಿಣಿ ಮಹಿಳೆಯರಿಗೆ ಬ್ಯಾಂಕ್ ಖಾತೆಗೆ 5000 ಹಣ ಜಮೆ ಮಾಡಲಿದೆ ಕೇಂದ್ರ ಸರ್ಕಾರ! ಈ ರೀತಿ ಅರ್ಜಿ ಸಲ್ಲಿಸಿ
ಇದನ್ನೂ ಓದಿ: PM ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್! ಈ ರೀತಿ ಅರ್ಜಿ ಸಲ್ಲಿಸಿ.