ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಪ್ರತಿ ಕ್ಷೇತ್ರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕು ಎಂದು ಈಗಾಗಲೇ ಪೋಸ್ಟ್ ಆಫೀಸ್ ನಲ್ಲಿ ಹಲವು ಹೂಡಿಕೆ ಯೋಜನಗಳನ್ನು ನೀಡಿದೆ. ಅದರ ಜೊತೆಗೆ ಈಗ ಹೊಸದಾಗಿ ಮಹಿಳಾ ಸಮ್ಮಾನ್ ಯೋಜನಯನ್ನು ಜಾರಿಗೆ ತಂದಿದೆ. ಈಗ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಈ ಲೇಖನವನ್ನು ಓದಿ.
ಮಹಿಳಾ ಸಮ್ಮಾನ್ ಯೋಜನೆ ಸರ್ಕಾರದ ಯೋಜನೆ ಆಗಿದೆ. :- ದೇಶದ ಮಹಿಳೆಯರಿಗಾಗಿ ಸರ್ಕಾರವು ಈ ಯೋಜನೆಯನ್ನು ಆರಂಭಿಸಿದೆ. ಇದು ಮಹಿಳೆಯರಿಗೆ ಉತ್ತಮ ಹೂಡಿಕೆ ಯೋಜನೆ ಆಗಿದ್ದು 2 ವರ್ಷಗಳ ವರೆಗೆ ಹೂಡಿಕೆ ಮಾಡಬಹುದು. ನಿಗದಿತ ಬಡ್ಡಿದರ ಸಿಗುತ್ತದೆ.
ಹೂಡಿಕೆ ಹೇಗೆ?: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ನೀವು ಹೂಡಿಕೆ ಮಾಡಲು ಇಚ್ಛಿಸಿದರೆ ಕನಿಷ್ಠ 1000 ರೂಪಾಯಿ ಹೂಡಿಕೆ ಆರಂಭ ಮಾಡಬಹುದು. ಈ ಯೋಜನೆಯಲ್ಲಿ ನೀವು ಗರಿಷ್ಠ 2 ಲಕ್ಷ ರೂಪಯಿಗಳ ವರೆಗೆ ಹೂಡಿಕೆ ಮಾಡುವ ಅವಕಾಶ ಇದೆ.
ತೆರಿಗೆ ಸೌಲಭ್ಯ :- ನಿಮಗೆ ಈ ಯೋಜನೆಯಲ್ಲಿ ತೆರಿಗೆ ಸೌಲಭ್ಯ ಸಿಗುತ್ತದೆ. ನೀವು ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ಇವು ಸಂಪೂರ್ಣವಾಗಿ ತೆರಿಗೆ ಮುಕ್ತ ಅವಕಾಶ ಪಡೆಯುತ್ತೀರಿ. ಆದರೆ ನೀವು ಬಡ್ಡಿದರಕ್ಕೆ ತೆರಿಗೆ ಕಟ್ಟಬೇಕು. ಬಡ್ಡಿಯ ಮೇಲೆ ನಿಮಗೆ ಯಾವುದೇ ರೀತಿಯ ತೆರಿಗೆ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಈ ಟ್ರಿಕ್ಸ್ ಫಾಲೋ ಮಾಡಿದರೆ ನಿಮ್ಮ ಗ್ಯಾಸ್ ಬುಕಿಂಗ್ ಗೆ 80 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.
ಬಡ್ಡಿದರ ಮಾಹಿತಿ :-
ನೀವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಪ್ರಸ್ತುತವಾಗಿ ಶೇಕಡಾ 7.5% ಬಡ್ಡಿದರ ಸಿಗುತ್ತದೆ. ಇದು ಭಾರತೀಯ ಸರ್ಕಾರ ನೀಡುವ ಬಡ್ಡಿದರ ಆಗಿದೆ. ಬಡ್ಡಿದರವನ್ನು ತ್ರೈಮಾಸಿಕ ರೂಪದಲ್ಲಿ ನೇರವಾಗಿ ಖಾತೆಗೆ ಜಮಾ ಆಗುತ್ತದೆ. ಹೂಡಿಕೆಯ ಅವಧಿಯ ಮುಗಿದು ನಿಮಗೆ ಪೂರ್ಣ ಹಣ ನೀಡುವಾಗ ಬಡ್ಡಿದರ ಸೇರಿಸಿ ಹಾಗೂ TDS ಮೊತ್ತವನ್ನು ಕಡಿತ ಗೊಳಿಸಿ ಹಣ ನೀಡಲಾಗುತ್ತದೆ.
ಬ್ಯಾಂಕ್ ಹಾಗೂ ಅಂಚೆಕಛೇರಿಯಲ್ಲಿ ನೀವು ಖಾತೆ ತೆರೆಯಬಹುದು.:-
ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಅಥವಾ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಮತ್ತು ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಅರ್ಜಿ’ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಇಲ್ಲವೇ ನಿಮ್ಮ ಹತ್ತಿರದ ಅರ್ಹ ಬ್ಯಾಂಕ್‌ಗೆ ಭೇಟಿ ನೀಡಿ ಮತ್ತು ಫಾರ್ಮ್‌ನ ಹಾರ್ಡ್ ಪ್ರತಿಯನ್ನು ಪಡೆಯಿರಿ. ನಂತರ ಅರ್ಜಿಯಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ನಂತರ ಎಲ್ಲಾ ದಾಖಲೆಗಳು ಎಂದರೆ PAN ಕಾರ್ಡ್, ಆಧಾರ್ ಕಾರ್ಡ್, ವಿಳಾಸ ಪುರಾವೆ ಇತ್ಯಾದಿ ವಿವರಗಳನ್ನು ನೀಡಬೇಕು. ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಸಂಪೂರ್ಣಗೊಳಿಸಿದ ಅರ್ಜಿ ಫಾರ್ಮ್ ಅನ್ನು ಬ್ಯಾಂಕ್‌ನ ಅಧಿಕಾರಿಗಳಿಗೆ ಸಲ್ಲಿಸಿ. ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ, ಯೋಜನೆಯಲ್ಲಿ ನಿಮ್ಮ ಹೂಡಿಕೆಯನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ನೀವು ಪಡೆಯುತ್ತೀರಿ.
ಮುಖ್ಯ ಸೂಚನೆಗಳು: ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಓದಿ ಮತ್ತು ಅರ್ಥಮಾಡಿಕೊಳ್ಳಿ.
ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಒಟ್ಟಿಗೆ ಸಲ್ಲಿಸಿ. ಯಾವುದೇ ಪ್ರಶ್ನೆಗಳು ಅಥವಾ ಸ್ಪಷ್ಟತೆಗಳಿಗಾಗಿ, ನಿಮ್ಮ ಹತ್ತಿರದ ಅರ್ಹ ಬ್ಯಾಂಕ್‌ನ ಶಾಖೆಯನ್ನು ಸಂಪರ್ಕಿಸಿ.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಆಯುಷ್ಮಾನ್ ಯೋಜನೆಯಲ್ಲಿ ಸಿಗಲಿದೆ 5 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ.