ಈಗ ಪೋಸ್ಟ್ ಆಫೀಸ್ ನಲ್ಲಿ ಗ್ರಾಹಕರಿಗೆ ಅನುಕೂಲ ಆಗುವಂತೆ ಹಲವಾರು ಯೋಜನೆಗಳು ಜಾರಿಯಾಗುತ್ತಲಿದೆ. ಬಡವರು ಸಹ ಹಣ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸಲು ಸಾಧ್ಯವಿದೆ. ಅದರಲ್ಲಿಯೂ ಮಕ್ಕಳ ಮುಂದಿನ ಭವಿಷ್ಯಕ್ಕೆ ಎಂದು ಪಾಲಕರು ತಾವು ದುಡಿದ ಹಣದಲ್ಲಿ ಸ್ವಲ್ಪ ಆದರೂ ಕೂಡಿಡಬೇಕು ಎಂದು ಆಲೋಚನೆ ಮಾಡುತ್ತಾರೆ. ಹಾಗಾದರೆ ಮಕ್ಕಳ ಭವಿಷ್ಯಕ್ಕೆ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿ 8,24,641 ರೂಪಾಯಿ ಗಳಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ 8,24,641 ರೂಪಾಯಿ ಗಳಿಸುವ ಪೋಸ್ಟ್ ಆಫೀಸ್ ಯೋಜನೆ ಯಾವುದು?: ಪೋಸ್ಟ್ ಆಫೀಸ್ ನಲ್ಲಿ ಮಕ್ಕಳ ಭವಿಷಕ್ಕೆ ಹಲವಾರು ಯೋಜನೆಗಳು ಇವೆ. ಕೇವಲ 1000 ರೂಪಾಯಿ ಲಕ್ಷ ಲಕ್ಷ ಗಳಿಸುವ ಯೋಜನೆಯ ಹೆಸರು ಪಿಪಿಎಫ್ ಯೋಜನೆ. ಅಲ್ಪ ಮೊತ್ತದ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಹಣ ಪಡೆಯಬಹುದು. ಆದರೆ ಇದು ಅಲ್ಪಾವಧಿ ಹೂಡಿಕೆಯ ಯೋಜನೆ ಅಲ್ಲ ದೀರ್ಘಾವಧಿ ಯೋಜನೆಯ ಹೂಡಿಕೆ ಆಗಿದೆ. ಧೀರ್ಘಾವಧಿ ಯೋಜನೆ ಮಾಡಲು ಬಯಸುವವರು ಹೂಡಿಕೆ ಮಾಡಬಹುದು.
ಸರ್ಕಾರಿ ಯೋಜನೆ :- ಯಾವುದೇ ಯೋಜನೆ ಸರ್ಕಾರ ಮಾನ್ಯ ಮಾಡುತ್ತದೆ ಅಥವಾ ಸರ್ಕಾರಿ ಯೋಜನೆ ಎಂದಾದಾಗ ಹಿಂಜರಿಯುವ ಅಗತ್ಯ ಇರುವುದಿಲ್ಲ. ಯಾಕೆಂದರೆ ನಾವು ಹೂಡಿಕೆ ಮಾಡಿದ ಹಣ ಭದ್ರವಾಗಿ ಇರುತ್ತದೆ. ಹಾಗೂ ನಮಗೆ ಉತ್ತಮ ಲಾಭ ಸಿಗುತ್ತದೆ ಎಂಬ ನಂಬಿಕೆ ಇರುತ್ತದೆ. ಅದೇ ರೀತಿ ಈ ಪಿಪಿಎಫ್ ಯೋಜನೆಯು ಸಹ ಸರ್ಕಾರಿ ಯೋಜನೆ ಆಗಿದೆ.
ಎಷ್ಟು ವರ್ಷಕ್ಕೆ ಯೋಜನೆ ವರ್ಷಗಳಲ್ಲಿ ಪಕ್ವವಾಗುತ್ತದೆ. :- ಹೂಡಿಕೆದಾರರು ಹೂಡಿಕೆ ಮಾಡುವ ಮುನ್ನ ಮೊದಲು ಯೋಚನೆ ಮಾಡುವುದು ಯಾವಾಗ ಈ ಯೋಜನೆ ಪಕ್ವವಾಗುತ್ತದೆ ಎಂದು. ಇದೊಂದು ದೀರ್ಘಾವಧಿ ಯೋಜನೆ ಆಗಿರುವುದರಿಂದ ನೀವು ಕನಿಷ್ಠ 500 ರೂಪಾಯಿ ಗಳಿಂದ 1.5ಲಕ್ಷ ರೂಪಾಯಿಯ ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯ ಮಚ್ಯೂರಿಟಿ ಸಮಯ 15 ವರ್ಷಗಳು. 15 ವರ್ಷಗಳಲ್ಲಿ ಈ ಯೋಜನೆ ಪಕ್ವವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಡ್ಡಿದರ :- ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7.1% ಬಡ್ಡಿದರ ಸಿಗುತ್ತದೆ.
ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 11 ಸಾವಿರ ರೂಪಾಯಿ.
8 ಲಕ್ಷ ಹಣ ಪಡೆಯುವುದು ಹೇಗೆ :-
ನೀವು ಪ್ರತಿ ತಿಂಗಳು ಏಷ್ಟು ಹೂಡಿಕೆ ಮಾಡಿ 8ಲಕ್ಷ ಪಡೆಯಬಹುದು ಹಾಗೂ ನೀವು ಏಷ್ಟು ವರ್ಷಗಳ ಕಾಲ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿಯಿರಿ. ನೀವು ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 12000 ನಿಮ್ಮ ಹೂಡಿಕೆಯ ಮೊತ್ತ ಆಗುತ್ತದೆ. ಹಾಗೆಯೇ ನೀವು 15 ವರ್ಷಗಳ ವರೆಗೆ ನಿರಂತರವಾಗಿ ಹೂಡಿಕೆ ಮಾಡಿಬೇಕು. 15 ವರ್ಷಕ್ಕೆ ನಿಮ್ಮ ಹೂಡಿಕೆಯ ಮೊತ್ತ 1,80,000 ರೂಪಾಯಿ ಆಗಿರುತ್ತದೆ. ನೀವು ಎರಡು ಬಾರಿ ಈ ಯೋಜನೆಯನ್ನು ವಿಸ್ತರಿಸಲು ಸಾಧ್ಯವಿದೆ ಅಂದರೆ ನೀವು 25 ವರ್ಷಗಳ ವರೆಗೆ ಹೂಡಿಕೆ ಮಾಡ್ಬಹುದು. 25 ವರ್ಷಕ್ಕೆ ನಿಮ್ಮ ಹೂಡಿಕೆ ಮೊತ್ತವು 3,00,000 ರೂಪಾಯಿ ಆಗಿರುತ್ತದೆ. ಪ್ರಸ್ತುತ ಬಡ್ಡಿದರ ಶೇಕಡಾ 7.1% ಪ್ರಕಾರ ನೀವು 5,24,641 ಬಡ್ಡಿದರ ಪಡೆಯುತ್ತೀರಿ. ಅಂದರೆ ನಿಮ್ಮ ಹೂಡಿಕೆಯ ಮೊತ್ತ ಮತ್ತು ಬಡ್ಡಿದರ ಎರಡು ಸೇರಿ ನಿಮಗೆ ಸಿಗುವ ಹಣ 8,24,641 ರೂಪಾಯಿ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದಿಂದ 3 ಲಕ್ಷದವರೆಗೆ ಸಿಗಲಿದೆ ಸಾಲ ಸೌಲಭ್ಯ..