ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು ಸುರಕ್ಷಿತ ಮತ್ತು ದೀರ್ಘಾವಧಿಯ ಹೂಡಿಕೆ ಯೋಜನೆ, ಇದು ಹೆಚ್ಚಿನ ಬಡ್ಡಿಯ ದರವನ್ನು ಮತ್ತು ಹೂಡಿಕೆದಾರರಿಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಕೇವಲ ತಿಂಗಳಿಗೆ 300 ರೂಪಾಯಿ ಹೂಡಿಕೆ ಮಾಡಿ ನೀವು ಲಕ್ಷ ಲಕ್ಷ ಗಳಿಸುವ ಉತ್ತಮ ಸೌಲಭ್ಯ ನೀಡುತ್ತಿದೆ PPF. ಹಾಗಾದರೆ ನೀವು ಹೂಡಿಕೆ ಮಾಡುವ ಯೋಚನೆ ಇದ್ದರೆ ಈಗಲೇ ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ತಿಳಿಯಿರಿ.
ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ:- ಸಾರ್ವಜನಿಕ ಭವಿಷ್ಯ ನಿಧಿ (PPF) ಎಂಬ ಯೋಜನೆಯು ಯಾರು ಬೇಕಾದರೂ ತಮ್ಮ ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಸಹಾಯ ಮಾಡುವ ಸರ್ಕಾರಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಮಗುವಿನಿಂದ ಹಿಡಿದು ಯಾರಾದರೂ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಕನಿಷ್ಠ 15 ವರ್ಷಗಳ ಕಾಲ ಹಿಂಪಡೆಯಲು ಸಾಧ್ಯವಿಲ್ಲ. ಹಾಗೆಯೇ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಬಡ್ಡಿ ದರವನ್ನು ಪಡೆಯಬಹುದೂ.
ಬಡ್ಡಿದರ ವಿವರಗಳು :-
ಈಗಿನ ಬಡ್ಡಿ ದರವು ಶೇಕಡಾ 7.1% ಆಗಿದೆ. ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಟ್ಟರೆ ಸಿಗುವ ಬಡ್ಡಿದರಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ. ಅಂದರೆ, ತಿಂಗಳಿಗೆ ಕೇವಲ ₹1000 ಹೂಡಿಕೆ ಮಾಡಿದರೂ 15 ವರ್ಷಗಳವರೆಗೆ ₹3.21 ಲಕ್ಷಗಳನ್ನು ಗಳಿಸಬಹುದು.
ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಹಣ ನಿಮಗೆ ಸಿಗುತ್ತದೆ?: ಪಿಪಿಎಫ್ ಯೋಜನೆಯಲ್ಲಿ ಪ್ರತಿ ತಿಂಗಳು ₹500 ಹೂಡಿಕೆ ಮಾಡುವುದರಿಂದ 15 ವರ್ಷದಿಂದ ₹1.6 ಲಕ್ಷ ಮತ್ತು 20 ವರ್ಷಕ್ಕೆ ₹2.65 ಲಕ್ಷಗಳನ್ನು ಪಡೆಯಬಹುದು. ಹಾಗೂ ತಿಂಗಳಿಗೆ ₹1000 ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ₹3.21 ಲಕ್ಷ ಮತ್ತು 20 ವರ್ಷಗಳಲ್ಲಿ ₹5.30 ಲಕ್ಷಗಳನ್ನು ಗಳಿಸಬಹುದು. ಹಾಗೂ ತಿಂಗಳಿಗೆ ₹2000 ಹೂಡಿಕೆ ಮಾಡುವುದರಿಂದ 15 ವರ್ಷಗಳಲ್ಲಿ ₹6.43 ಲಕ್ಷ ಮತ್ತು 20 ವರ್ಷಗಳಲ್ಲಿ ₹10.60 ಲಕ್ಷ ಗಳಿಸಬಹುದು. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ತಿಂಗಳಿಗೆ ₹3000 ಹೂಡಿಕೆ ಮಾಡುವುದರಿಂದ ನೀವು 15 ವರ್ಷಗಳಲ್ಲಿ ₹9.64 ಲಕ್ಷ ಮತ್ತು 20 ವರ್ಷಗಳಲ್ಲಿ ₹15.91 ಲಕ್ಷಗಳನ್ನು ಗಳಿಸಬಹುದು.
ಪಿಪಿಎಫ್ ಖಾತೆಯನ್ನು ಎಲ್ಲಿ ತೆರೆಯಬಹುದು? ಒಂದು ಸಂಪೂರ್ಣ ವಿವರಣೆ: ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಖಾತೆಯನ್ನು ತೆರೆಯಲು ನೀವು ಯಾವುದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು. ಇದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಒಂದು ಹೂಡಿಕೆ ಯೋಜನೆಯಾಗಿದ್ದು, ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಬಯಸುವವರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನೀವು ಎಟಿಎಂ ಕಾರ್ಡ್ ಇಲ್ಲದೆಯೇ UPI ಬಳಸಿ ಈಗ ನಿಮ್ಮ ಹಣವನ್ನು ಡೆಪಾಸಿಟ್ ಮಾಡಿ.
ಪಿಪಿಎಫ್ ಖಾತೆಯನ್ನು ವಿಸ್ತರಿಸುವ ಅವಕಾಶ ಇದೆ :-
ಪಿಪಿಎಫ್ ಖಾತೆಯ ಮೂಲ ಮೆಚ್ಯೂರಿಟಿ ಅವಧಿ 15 ವರ್ಷಗಳು. ಆದರೆ, ನಿಮಗೆ ಬೇಕಾದರೆ ನೀವು ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಬಹುದು.15 ವರ್ಷಗಳ ನಂತರ, ನೀವು ನಿಮ್ಮ ಖಾತೆಯನ್ನು ಮತ್ತೊಂದು 5 ವರ್ಷಗಳಿಗೆ ವಿಸ್ತರಿಸಬಹುದು. ಜೊತೆಗೆ ಮೊದಲ 20 ವರ್ಷಗಳ ನಂತರ, ನೀವು ಮತ್ತೊಂದು 5 ವರ್ಷಗಳಿಗೆ ವಿಸ್ತರಿಸಬಹುದು.
5 ವರ್ಷಕ್ಕೆ ಹಣ ಹಿಂಪಡೆಯುವ ಅವಕಾಶ :- PPF ಖಾತೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಕನಿಷ್ಠ 5 ವರ್ಷಗಳ ಕಾಲ ಇಡಬೇಕು.
5 ವರ್ಷಗಳ ನಂತರ ನೀವು ಫಾರ್ಮ್ 2 ಅನ್ನು ಭರ್ತಿ ಮಾಡುವ ಮೂಲಕ ಹಣವನ್ನು ಹಿಂಪಡೆಯಬಹುದು.
ತೆರಿಗೆ ವಿನಾಯಿತಿ ನೀಡಲಾಗಿದೆ:- PPF ಖಾತೆಯಲ್ಲಿ ಹೂಡಿಕೆ ಮಾಡಿದವರ EEE ತೆರಿಗೆ ವರ್ಗದಲ್ಲಿ ಸೇರ್ಪಡೆ ಆಗುತ್ತದೆ. ಇದರ ಅರ್ಥ, ನೀವು ಹೂಡಿಕೆ ಮಾಡಿದ ಹಣ, ಅದರ ಮೇಲೆ ಬೆಳೆದ ಬಡ್ಡಿ ಮತ್ತು ಅಂತಿಮವಾಗಿ ಹಿಂಪಡೆದ ಹಣದ ಮೇಲೂ ತೆರಿಗೆ ಇರುವುದಿಲ್ಲ. ಇದರಿಂದ PPF ಖಾತೆಯು ನಿಮ್ಮ ಹಣವನ್ನು ತೆರಿಗೆಯಿಂದ ರಕ್ಷಿಸಲು ಒಂದು ಉತ್ತಮ ಮಾರ್ಗವಾಗಿದೆ.
ಇದನ್ನೂ ಓದಿ: ಈ ಎರಡು BSNL ರೀಚಾರ್ಜ್ ಯೋಜನೆಗಳು 200 ರೂಪಾಯಿ ಒಳಗೆ 70 ದಿನಗಳವರೆಗೆ ಮಾನ್ಯವಾಗಿರುತ್ತದೆ.