ಖಾಲಿ ಇರುವ ಗ್ರಾಮ ಪಂಚಾಯತಿ ಹುದ್ದೆಗಳ ನೇಮಕಾತಿಗೆ ಆದೇಶಿಸಿದ ರಾಜ್ಯ ಸರಕಾರ.

ಈಗಾಗಲೇ ರಾಜ್ಯದ ಗ್ರಾಮಪಂಚಾಯಿತಿ ಗಳಲಿ ಹಲವು ಹುದ್ದೆಗಳು ಖಾಲಿ ಇವೆ. ಹುದ್ದೆಗಳು ಖಾಲಿ ಇರುವ ಕಾರಣ ಜನರಿಗೆ ತೊಂದರೆ ಉಂಟಾಗುತ್ತಿದೆ ಇದೆ ಕಾರಣಕ್ಕೆ ಈಗ ರಾಜ್ಯ ಸರ್ಕಾರವು ಖಾಲಿ ಇರುವ ಹುದ್ದೆಗಳ ನೇಮಕಾತಿ ಆಗಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದೆ. ಯಾವ ಯಾವ ಹುದ್ದೆಗಳ ನೇಮಕಾತಿಗೆ ಆದೇಶ ಸೂಚಿಸಲಾಗಿದೆ ಎಂದು ತಿಳಿಯೋಣ.

WhatsApp Group Join Now
Telegram Group Join Now

ಯಾವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. :- ರಾಜ್ಯದಲ್ಲಿ ಖಾಲಿ ಇರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಇಲಾಖೆಗಳಲ್ಲಿನ ಕರ್ನಾಟಕ ಪಂಚಾಯತ್ ರಾಜ್‌ ಇಲಾಖೆಯ ಅಡಿಯಲ್ಲಿ ಬರುವಂತಹ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆದೇಶ ಹೊರಡಿಸಲಾಗಿದೆ. ಪಂಚಾಯಿತಿಗಳಲ್ಲಿ ಖಾಲಿ ಇರುವಂತಹ ನಾಲ್ಕು ಪದನಾಮಗಳ ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶಿಸಿದೆ.

ಯಾವ ಜಿಲ್ಲೆಯಲ್ಲಿ ಏಷ್ಟು ಹುದ್ದೆಗಳ ನೇಮಕಾತಿ ಎಂದು ಕಾದು ನೋಡಬೇಕು :- ನಾಲ್ಕು ಪದನಾಮಗಳ ಹುದ್ದೆಗಳು ಯಾವ ಜಿಲ್ಲೆಯಲ್ಲಿ ಏಷ್ಟು ಖಾಲಿ ಇವೆ ಹಾಗೂ ಎಷ್ಟು ಹುದ್ದೆಗಳ ನೇಮಕಾತಿ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. 

ನೇಮಕಾತಿ ಪಟ್ಟಿ ಹೇಗೆ ಬಿಡುಗಡೆ ಆಗಲಿದೆ :- ಪ್ರತಿ ಜಿಲ್ಲಾ ಪಂಚಾಯ್ತಿಗಳು ಎಷ್ಟು ಹುದ್ದೆಗಳು ಖಾಲಿ ಇವೆ ಹಾಗೂ ಯಾವ ಹುದ್ದೆಗಳನ್ನು ಭರ್ತಿ ಮಾಡುವ ಅನಿವಾರ್ಯ ಕಾರಣ ಇದೆ ಎಂಬುದನ್ನು ಅರಿತು ನಂತರ ನೇಮಕಾತಿ ಅಧಿಸೂಚನೆ ಹೊರಡಿಸಲಿದೆ. ನೇಮಕಾತಿ ಅಧಿಸೂಚನೆ ಹೊರಡಿಸಿದ ನಂತರವೇ ಯಾವ ಜಿಲ್ಲೆಯಲ್ಲಿ ಏಷ್ಟು ಹುದ್ದೆಗಳು ಖಾಲಿ ಇವೆ ಎಂಬುದು ತಿಳಿಯುವುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಿಮಗೆ ಡಿಗ್ರಿ ಆಗಿದೆಯೇ? ಕೇಂದ್ರ ಸರ್ಕಾರ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಲೇ ಅರ್ಜಿ ಸಲ್ಲಿಸಿ.

ಆದೇಶ ನೀಡಿರುವ ಹುದ್ದೆಗಳು ಯಾವುದು?

ರಾಜ್ಯ ಸರ್ಕಾರವು ಕರ್ನಾಟಕ ಪಂಚಾಯತ್ ರಾಜ್‌ ಇಲಾಖೆಯ ಅಡಿಯಲ್ಲಿ ಬರುವಂತಹ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಕರವಸೂಲಿಗಾರರು ಅಥವಾ ಬಿಲ್‌ ಕಲೆಕ್ಟರ್‌ ಹಾಗೂ ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳು ಹಾಗೂ ವಾಟರ್ ಆಪರೇಟರ್ ಹುದ್ದೆಗಳು ಸ್ವಚ್ಛತಾಗಾರ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಿದೆ.

ವಿದ್ಯಾರ್ಹತೆ ಏನು?

ಮೇಲಿನ ಎಲ್ಲಾ ಹುದ್ದೆಗಳಿಗೂ ಬೇರೆ ಬೇರೆ ರೀತಿಯ ವಿದ್ಯಾರ್ಹತೆ ಅಗತ್ಯ ಇರುತ್ತದೆ.

  1. ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭಾರ್ಥಿಯು ದ್ವಿತೀಯ ಪಿಯುಸಿ ಪಾಸ್‌ ಆಗಿರಬೇಕು ಇದರ ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಅವಶ್ಯಕ ಮತ್ತು ಕಂಪ್ಯೂಟರ್ ಜ್ಞಾನ ದ ಬಗ್ಗೆ ನೀಡುವ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ.
  2. ವಾಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 7ನೇ ತರಗತಿ ಪಾಸ್ ಆಗಿರಬೇಕಾಗುತ್ತದೆ.
  3. ಸ್ವಚ್ಛತಾಗಾರ ಹುದ್ದೆಗೆ ಯಾವುದೇ ಮಿನಿಮಮ್ ಎಜುಕೇಷನ್ ಆಗಬೇಕು ಎಂಬ ನಿಯಮ ಇಲ್ಲ.

ಮೇಲಿನ ಎಲ್ಲಾ ಹುದ್ದೆಗಳಲ್ಲಿ ಹಿಂದೆ ಇದ್ದ ಅಭ್ಯರ್ಥಿಗಳು ಯಾವುದೇ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಅಥವಾ ಮರಣ ಹೊಂದಿದರೆ ಅಥವಾ ಅವರು ನಿವೃತ್ತರಾಗಿದ್ದರೆ ಆ ಹುದ್ದೆಗಳನ್ನು ಜೂನ್ 29 2024 ರ ಒಳಗಾಗಿ ನೇಮಕಾತಿ ಅಧಿಸೂಚನೆ ಪ್ರಕಟಣೆ ಮಾಡುವಂತೆ ಆದೇಶ ನೀಡಲಾಗಿದೆ.ನೇಮಕಾತಿ ಮಾಡಿಕೊಳ್ಳುವಾಗ ಸರ್ಕಾರದ ನಿಯಮ ಪ್ರಕಾರ ಮೀಸಲಾತಿ ಅನುಸರಿಸಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಹೇಗೆ ಗ್ರಾಮ ಪಂಚಾಯತಿಗಳಿಗೆ ನಿಯೋಜಿಸಬಹುದಾದ ಒಟ್ಟು ಸಿಬ್ಬಂದಿಯನ್ನು ನಿಗದಿಪಡಿಸುವ ನಿಯಮಗಳಲ್ಲಿ ಬದಲಾವಣೆ ತರುವ ಪ್ರಸ್ತಾವನೆ ಸರ್ಕಾರದ ಮುಂದಿರುವುದರಿಂದ ಮುಂದಿನ ಆದೇಶ ಬರುವ ತನಕ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೊಸದಾಗಿ ಬರೋಬ್ಬರಿ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ.

Sharing Is Caring:

Leave a Comment