ರಾಜ್ಯದಲ್ಲಿ ಬರೋಬ್ಬರಿ 750 ಭೂ ಮಾಪಕರ ಹುದ್ದೆಗಳ ನೇಮಕಾತಿ.

ಭೂ ಮಾಪಕರ ಕೊರತೆ ಇರುವ ಕಾರಣದಿಂದ ರಾಜ್ಯದಲ್ಲಿ ಭೂಮಿಯ ಹಕ್ಕು ಪಡೆಯಲು ಜನರು ಪರದಾಡುತ್ತ ಇದ್ದರೆ. ಈಗಾಗಲೇ ಹಲವು ಭೂ ಮಾಪನ ಮಾಡುವ ಅರ್ಜಿಗಳು ಬಂದಿದ್ದು ಸಮಸ್ಯೆಗಳನ್ನು ಬಗೆಹರಿಸಲು ವಿಳಂಬ ಆಗುತ್ತಿದೆ. ಇದನ್ನು ಅರಿತ ರಾಜ್ಯ ಸರಕಾರವು ಈಗ ಹೊಸದಾಗಿ ಭೂ ಮಾಪಕರನ್ನು ನೇಮಕ ಮಾಡಿಕೊಳ್ಳಲು ಹೊರಟಿದೆ. ಇದೇ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಕೃಷ್ಣ ಭೈರೇಗೌಡ ಅವರು ಹೇಳಿರುವುದು ಏನು?: ಕೃಷ್ಣ ಭೈರೇಗೌಡ ಅವರು ಮಾತನಾಡಿ ರಾಜ್ಯದಲ್ಲಿ ಭೂಮಿಯ ಮಾಲೀಕರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಖಾಲಿ ಇರುವ ಎಲ್ಲ ಹುದ್ದೆಗಳ ನೇಮಕ ಮಾಡಿಕೊಳ್ಳಲು ಈಗಾಗ್ಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭ ಆಗಲಿದೆ:-

ರಾಜ್ಯದಲ್ಲಿ ಖಾಲಿಯಿರುವ ಒಟ್ಟು 750 ಭೂ ಮಾಪಕರ ಹುದ್ದೆಗಳ ನೇಮಕಾತಿಯನ್ನು ಶೀಘ್ರವಾಗಿ ಮಾಡಿಕೊಳ್ಳಲಾಗುವುದು. ಇದರ ಬಗ್ಗೆ ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿ ಇದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿದರು.

ಲೋಕಸಭಾ ಆಯೋಗಕ್ಕೆ ಮನವಿ :- ರಾಜ್ಯದಲ್ಲಿ ಖಾಲಿ ಇರುವ 750 ಭೂಮಾಪಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಲು ಶೀಘ್ರ ಬೇಗನೆ ಚಾಲನೆ ನೀಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮನವಿ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

4-5 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸುವ ಆದೇಶ :- ಖಾಲಿ ಹುದ್ದೆಯ ಭರ್ತಿ ಮಾಡುವ ಪ್ರಸ್ತಾವನೆಯನ್ನು ಕೆಪಿಎಸ್‌ಸಿಗೆ ಈಗಾಗಲೇ ಸಲ್ಲಿಸಲಾಗಿದೆ. ಮುಂಬರುವ 4 ರಿಂದ 5 ತಿಂಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೋರಿಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಈಗಾಗಲೇ 750 ಹುದ್ದೆಗಳಿಗೆ ಬರೋಬ್ಬರಿ 77,241 ಅರ್ಜಿಗಳು ಇಲಾಖೆಗೆ ಆಗಿವೆ. ಇದರ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಅರ್ಜಿಗಳ ಪರಿಶೀಲನೆ ನಡೆಸಿ ನಂತರ ಆಯ್ಕೆ ಪ್ರಕ್ರಿಯೆಯಲ್ಲಿ ಹಿರಿಯ ಅಧಿಕಾರಿಗಳು ಉಪಸ್ಥಿತಿಯಲ್ಲಿ ನೇಮಕಾತಿ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು. 

ಇದನ್ನೂ ಓದಿ: ಕರ್ನಾಟಕದಲ್ಲಿ ಶೀಘ್ರದಲ್ಲೇ 400 ಪಶು ವೈದ್ಯರ ನೇಮಕ – ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಸರ್ವೇ ಕೆಲಸಗಳನ್ನು ಚುರುಕುಗೊಳಿಸಲು ಜಿಪಿಎಸ್ ಆಧಾರಿತ ರೋವರ್‌ ಬಳಸಲಾಗುವುದು :-

ಈಗ ಎಲ್ಲ ಕಡೆಯಲ್ಲಿಯೂ ಆನ್ಲೈನ್ ಮೂಲಕ ಮಾಹಿತಿಗಳನ್ನು ಪಡೆಯಬಹುದು. ಅದರಲ್ಲಿಯೂ ಒಂದು ಸ್ಥಳದ ಮಾಹಿತಿಗೆ ಮೊಬೈಲ್ ಜಿಪಿಎಸ್ ಮೂಲಕ ನಾವು ಹೋಗುವ ಸ್ಥಳ ಹಾಗೂ ನಮ್ಮ ಸುತ್ತ ಮುತ್ತಲಿನ ಪ್ರದೇಶಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸಾಧ್ಯ. ಅದರಂತೆಯೇ ಈಗ ಸರ್ವೇ ಡಿಪಾರ್ಟ್ಮೆಂಟ್ ನಲ್ಲಿಯೂ ಜಿಪಿಎಸ್ ಆಧಾರಿತ ರೋವರ್‌ ಅಳವಡಿಕೆಗೆ ಇಲಾಖೆ ಮುಂದಾಗಿದೆ. ಇದರಿಂದ ಸರ್ವೆ ಕಾರ್ಯವನ್ನು ಚುರುಕುಗೊಳಿಸಲು ಸಾಧ್ಯವಾಗುತ್ತದೆ. ಸರ್ವೇ ಸುಲಭವಾಗಿ ಮಾಡಲು ಹಾಗೂ ತ್ವರಿತವಾಗಿ ನಡೆಸಲು ಜಿಪಿಎಸ್ ಆಧಾರಿತ ರೋವರ್‌ ಅನ್ನು ಬಳಸಲಾಗುವುದು ಎಂದು ಸಚಿವರು ಮಾಹಿತಿ ತಿಳಿಸಿದರು. ಈ ರೋವರ್ ಪ್ರತಿ ತಾಲ್ಲೂಕಿ ಗೆ ಒಂದರಂತೆ ತಲಾ ಒಂದು ರೋವರ್‌ ಒದಗಿಸಲಾಗುವುದು ಎಂದು ತಿಳಿಸಿದರು. ಇದನ್ನು ಅಳವಡಿಕೆ ಮಾಡುವ ಸಲುವಾಗಿಯೇ ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದು ಹೇಳಿದರು. ಟೆಂಡರ್ ಬಳಿಕ ಇದನ್ನು ತ್ವರಿತಗತಿಯಲ್ಲಿ ಪೂರ್ಣ ಮಾಡಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಇದರಿಂದ ಜಮೀನಿನ ಮಾಹಿತಿಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; ಕರ್ನಾಟಕದಲ್ಲೂ ಖಾಲಿ ಇವೆ 1,940 ಹುದ್ದೆಗಳು, ಇಂದೇ ಆಪ್ಲೈ ಮಾಡಿ

Sharing Is Caring:

Leave a Comment