SBI ಬ್ಯಾಂಕ್ ಶಿಶು ಮುದ್ರಾ ಯೋಜನೆ ಅಡಿಯಲ್ಲಿ 50,000 ರೂಪಾಯಿ ಸಾಲ ನೀಡುತ್ತಿದೆ; ಈ ರೀತಿ ಅರ್ಜಿ ಸಲ್ಲಿಸಿ.

ಎಸ್‌ಬಿಐ ತನ್ನ ಗ್ರಾಹಕರಿಗೆ ಶಿಶು ಮುದ್ರಾ ಸಾಲ ಯೋಜನೆ ಯನ್ನು ನೀಡುತ್ತದೆ. ಶಿಶು ಯೋಜನೆ ಎಂದರೇನು? ಯೋಜನೆಯ ಪ್ರಯೋಜನಗಳು ಹಾಗೂ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಹಾಗೂ ಅರ್ಹತೆ ಪಟ್ಟಿಯ ಮಾಹಿತಿಗಳು ಹಾಗೂ ಅರ್ಜಿ ಸಲ್ಲಿಸುವ ವಿಧಗಳ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

WhatsApp Group Join Now
Telegram Group Join Now

ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ :- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಣಕಾಸು ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ನೀವು ಉದ್ಯಮ ಆರಂಭಿಸಲು 50,000 ರೂಪಾಯಿ ಹಿಂದ 1,00,000 ರೂಪಾಯಿಗಳ ವರೆಗೆ ಸಾಲವನ್ನು ಪಡೆಯಬಹುದಾಗಿದೆ. ಈ ಹಣದಿಂದ ನೀವು ಹೊಸದಾಗಿ ಉದ್ಯಮ ಪ್ರಾರಂಭಿಸಲು ಹಾಗೂ ಈಗ ಇರುವ ಉದ್ಯವನನ್ನು ವಿಸ್ತರಿಸಲು ಸಹಾಯ ಆಗುತ್ತದೆ.

SBI ಶಿಶು ಮುದ್ರ ಯೋಜನೆಯ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಏನೇನು?

  1. SBI ಶಿಶು ಮುದ್ರ ಯೋಜನೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕು.
  2. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 60 ವರ್ಷ ಆಗಿರಬೇಕು.
  3. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಈಗಾಗಲೇ ವ್ಯಾಪಾರದ ನೋಂದಣಿ ಮಾಡಿಸಿರಬೇಕು.
  4. ನೀವು ಕಡ್ಡಾಯವಾಗಿ SBI ನಲ್ಲಿ ಖಾತೆಯನ್ನು ಹೊಂದಿರಬೇಕು. ಹಾಗೂ ಖಾತೆ ತೆರೆದು ಕನಿಷ್ಠ 6 ತಿಂಗಳು ಆಗಿರಬೇಕು.
  5. ಶಿಶು ಮುದ್ರಾ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರನ್ನು ಸಾಲದಲ್ಲಿ ಡೀಫಾಲ್ಟರ್ ಎಂದು ಘೋಷಿಸಬಾರದು, ಡೀಫಾಲ್ಟರ್ ಇದ್ದರೆ, ಈ ಯೋಜನೆಯಲ್ಲಿ ನಿಮ್ಮ ಅರ್ಜಿ ನಮೂನೆಯನ್ನು ರದ್ದುಗೊಳಿಸಲಾಗುತ್ತದೆ.

SBI ಶಿಶು ಮುದ್ರಾ ಸಾಲ ಯೋಜನೆಗೆ ನೀಡಬೇಕಾದ ದಾಖಲೆಗಳು ಯಾವುವು?

  • ಅರ್ಜಿದಾರರ ಆಧಾರ್ ಕಾರ್ಡ್.
  • ಅರ್ಜಿದಾರರ PAN ಕಾರ್ಡ್.
  • ವ್ಯಾಪಾರದ ಪ್ರಮಾಣಪತ್ರ.
  • ಆದಾಯ ಪ್ರಮಾಣಪತ್ರ.
  • ಬ್ಯಾಂಕ್ ಅಕೌಂಟ್ ಡೀಟೇಲ್ಸ್.
  • ಅರ್ಜಿದಾರರ ಮೊಬೈಲ್ ಸಂಖ್ಯೆ.

ಇದನ್ನೂ ಓದಿ: ಒಂದು ವರ್ಷದ ಅವಧಿಯ FD ಯೋಜನೆಗೆ ಹೆಚ್ಚು ಬಡ್ಡಿ ದರ ನೀಡುವ ಬ್ಯಾಂಕ್ ಗಳು ಇವು..

ಶಿಶು ಮುದ್ರಾ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :-

  • ಹಂತ 1 – ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೊದ್ಲು ಜನ್ ಸಮರ್ಥ್ ಪೋರ್ಟಲ್‌ನಲ್ಲಿ ನೋಂದಾಯಿಸಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಿಕೊಳ್ಳಬೇಕು. ಈಗಾಗಲೇ ನೋಂದಣಿ ಆಗಿದ್ದಾರೆ ನೀವು ಎಸ್‌ಬಿಐ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹಂತ 2 – ಈಗ ನೀವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಮುಖಪುಟದಲ್ಲಿ ಕಾಣುವ ವ್ಯಾಪಾರ ಎಂಬ ಆಪ್ಷನ್ ಕ್ಲಿಕ್ ಮಾಡಬೇಕು.
  • ಹಂತ 3:- ಹಂತ 3 – ನಂತರ SME ಎಂಬ ಆಪ್ಷನ್ ಕ್ಲಿಕ್ ಮಾಡಿ ಇದರಲ್ಲಿ ನಿಮಗೆ ಹಲವು ಸರ್ಕಾರಿ ಯೋಜನೆಗಳು ಕಾಣುತ್ತವೆ. ಅಲ್ಲಿ ನೀವು PMMY ಎಂಬ ಆಪ್ಷನ್ ಆಯ್ಕೆ ಮಾಡಿ.
  • ಹಂತ 4 – ನಿಮಗೆ ಹೊಸ ಪುಟ ಓಪನ್ ಆಗುತ್ತದೆ. ಅಲ್ಲಿ ನಿಮ್ಮನ್ನು ಜನ್ ಸಮರ್ಥ ಪೋರ್ಟಲ್ ಮೂಲಕ ಮತ್ತೊಂದು ಪುಟಕ್ಕೆ ಕಳುಹಿಸಲಾಗುತ್ತದೆ.
  • ಹಂತ 5 – ನಂತರ ಸ್ಕೀಮ್‌ಗಳ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಬಿಸಿನೆಸ್ ಆಕ್ಟಿವಿಟಿ ಲೋನ್ ಆಪ್ಷನ್ ಆಯ್ಕೆ ಮಾಡಿ.
  • ಹಂತ 6 – ನಂತರ PMMY ಆಯ್ಕೆಯನ್ನು ಕ್ಲಿಕ್ ಮಾಡಿ.
  • ಹಂತ 7 – ನಂತರ ಲಾಗಿನ್ ಆಗಿ.
  • ಹಂತ 8 – ಈಗ ನೀವು ಲಾಗಿನ್ ಆದ ಬಳಿಕ ನಿಮಗೆ ಈ ಯೋಜನೆಗೆ ಅರ್ಜಿ ನಮೂನೆಯಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ನಿಮ್ಮ ಅರ್ಜಿಯು ಪೂರ್ಣಗೊಂಡ ಬಳಿಕ ನಿಮ್ಮ ಅರ್ಜಿಯನ್ನು ಪರಿಶೀಲನೆ ನಡೆಸಿ ನಿಮಗೆ ಸಾಲವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೃಷಿ ಸಖಿ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 60,000 ರೂಪಾಯಿ ಆದಾಯ ಗಳಿಸುವ ಅವಕಾಶ 

Sharing Is Caring:

Leave a Comment