SBI ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಮತ್ತು ಪ್ರಮುಖ ಹಣಕಾಸು ಸಂಸ್ಥೆಯಾಗಿದೆ. ಉಳಿತಾಯ ಖಾತೆಗಳು, ಚಾಲ್ತಿ ಖಾತೆಗಳು, ಸ್ಥಿರ ಠೇವಣಿಗಳು, ಮರುಕಳಿಸುವ ಠೇವಣಿಗಳು, ಸಾಲಗಳು ಹೀಗೆ ಹಲವಾರು ಸೌಲಭ್ಯಗಳು ಲಭ್ಯ ಇವೆ. ನೀವು SBI bank ನಲ್ಲಿ ಗೃಹ ಸಾಲ ಮಾಡಿದರೆ ನಿಮಗೆ ಬಡ್ಡಿದರ ಏಷ್ಟು ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
SBI ನಲ್ಲಿ ಗೃಹ ಸಾಲದ ಬಡ್ಡಿದರ ಏಷ್ಟು?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈಗ 8.50% ಆರಂಭಿಕ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ನೀಡಬಹುದು ಎಂದು ಹೇಳಬಹುದು. ಆದರೆ, ಗೃಹ ಸಾಲದ ಬಡ್ಡಿ ದರಗಳು ಆಗಾಗ ಬದಲಾಗುತ್ತಿರುತ್ತವೆ. ಸಾಲದ ಮೊತ್ತ ಹೆಚ್ಚಾದಂತೆ ಬಡ್ಡಿ ದರ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹಾಗೂ ಸಾಲದ ಅವಧಿ ಹೆಚ್ಚಾದಂತೆ ಬಡ್ಡಿ ದರ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಇರುವವರಿಗೆ ಕಡಿಮೆ ಬಡ್ಡಿ ದರ ಸಿಗುತ್ತದೆ.
10 ವರ್ಷಗಳ ಅವಧಿಗೆ 20 ಲಕ್ಷ ರೂಪಾಯಿಯ EMI ಮೊತ್ತ ಎಷ್ಟು?
ಎಸ್‌ಬಿಐ ಕ್ಯಾಲ್ಕುಲೇಟರ್‌ನ ಪ್ರಕಾರ, 8.5% ಬಡ್ಡಿ ದರದಲ್ಲಿ 10 ವರ್ಷಗಳಷ್ಟು 20 ಲಕ್ಷ ರೂಪಾಯಿ ಗೃಹ ಸಾಲವನ್ನು ಪಡೆದರೆ, ಗ್ರಾಹಕರು ಪ್ರತಿ ತಿಂಗಳು 24,797 ರೂಪಾಯಿಗಳಿಗೆ ಮಾಸಿಕ ಇಎಂಐ ಮೊತ್ತ ಆಗಿದೆ. ಲೆಕ್ಕಾಚಾರದ ಪ್ರಕಾರ, ಈ ಸಾಲದ ಅವಧಿಯಲ್ಲಿ ನೀವು ಬ್ಯಾಂಕ್‌ಗೆ 9,75,657 ರೂಪಾಯಿ ಬಡ್ಡಿಗೆ ಪಾವತಿ ಮಾಡಬೇಕು. ನೀವು SBI ನಿಂದ ತೆಗೆದುಕೊಂಡ ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಬಡ್ಡಿ ಸೇರಿ ಒಟ್ಟು 29,75,657 ರೂಪಾಯಿಗಳನ್ನು ಹಿಂದಿರುಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹ ಸಾಲ ಪಡೆಯುವ ಮುನ್ನ ಕೆಲವು ವಿಚಾರಗಳ ಬಗ್ಗೆ ಗಮನ ಇರಲಿ:- ನಿಮ್ಮ ಹಣಕಾಸಿನ ಸ್ಥಿತಿಯನ್ನು ಅಂದಾಜು ಮಾಡಿ:
- EMI ಪಾವತಿಸುವ ಸಾಮರ್ಥ್ಯ: ನಿಮ್ಮ ಮಾಸಿಕ ಆದಾಯ ಮತ್ತು ಇತರ ಸಾಲಗಳನ್ನು ಗಮನಿಸಿ, ನೀವು ಎಷ್ಟು EMI ಪಾವತಿಸಬಹುದು ಎಂಬುದನ್ನು ನಿರ್ಧರಿಸಿ. EMIಯು ನಿಮ್ಮ ಮಾಸಿಕ ಆದಾಯದ 30-40% ಗಿಂತ ಹೆಚ್ಚಾಗಬಾರದು.
- ಡೌನ್ ಪೇಮೆಂಟ್: ಹೆಚ್ಚು ಡೌನ್ ಪೇಮೆಂಟ್ ಮಾಡಿದರೆ, ನಿಮ್ಮ ಸಾಲದ ಮೊತ್ತ ಮತ್ತು EMI ಇರುತ್ತದೆ.
- ಇತರೆ: ಸ್ಟಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಬ್ರೋಕರೇಜ್, ಇತ್ಯಾದಿಗಳಂತಹ ಇತರ ವೆಚ್ಚಗಳನ್ನು ಸಹ ಗಮನಿಸಿ.
ಇದನ್ನೂ ಓದಿ: ವೈಯಕ್ತಿಕ ಸಾಲದ ಅಗತ್ಯವಿದೆಯೇ? ಈ ಬ್ಯಾಂಕುಗಳು ಕಡಿಮೆ ಬಡ್ಡಿ ದರವನ್ನು ನೀಡುತ್ತಿವೆ.
ಬ್ಯಾಂಕುಗಳನ್ನು ಹೋಲಿಸಿ:
- ಬಡ್ಡಿ ದರ: ವಿವಿಧ ಬ್ಯಾಂಕುಗಳಲ್ಲಿನ ಬಡ್ಡಿ ದರಗಳನ್ನು ಹೋಲಿಸಿ. ಸ್ವಲ್ಪ ವ್ಯತ್ಯಾಸವು ದೀರ್ಘಾವಧಿಯಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು.
- ರಿಪೇಮೆಂಟ್ ಅವಧಿ: ವಿವಿಧ ಬ್ಯಾಂಕುಗಳು ವಿಭಿನ್ನ ರಿಪೇಮೆಂಟ್ ಅವಧಿಗಳನ್ನು ನೀಡುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಅವಧಿಯನ್ನು ಆಯ್ಕೆ ಮಾಡಿ.
- ಇತರ ಶುಲ್ಕಗಳು: ಸ್ವತ್ತು ಸ್ವಾಧೀನ ಶುಲ್ಕಗಳು, ಕಾನೂನು ಶುಲ್ಕಗಳು ಇತ್ಯಾದಿಗಳನ್ನು ಹೋಲಿಸಿ.
ಸಾಲದ ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ:
- ಫೋರ್ಕ್ಲೋಸರ್: ಸಾಲವನ್ನು ತೀರಿಸದಿದ್ದರೆ ಬ್ಯಾಂಕ್ ನಿಮ್ಮ ಮನೆಯನ್ನು ಮಾರಾಟ ಮಾಡುವ ಹಕ್ಕನ್ನು.
- ಪ್ರೀಪೇಮೆಂಟ್ ಶುಲ್ಕ: ಸಾಲವನ್ನು ಪಾವತಿಸಿದರೆ ಬ್ಯಾಂಕ್ ಶುಲ್ಕ ವಿಧಿಸಬಹುದು.
- ಟ್ಯಾಕ್ಸ್ ರಿಯಾಯಿತಿಗಳು: ಗೃಹ ಸಾಲದ ಮೇಲೆ ತೆರಿಗೆ ರಿಯಾಯಿತಿಗಳನ್ನು ಪಡೆಯಬಹುದು.
ಇದನ್ನೂ ಓದಿ: UPI ಮೂಲಕ ಈಗ ನೀವು ಒಂದು ಬಾರಿಗೆ 5 ಲಕ್ಷ ರೂಪಾಯಿವರೆಗೆ ಪಾವತಿಯನ್ನು ಮಾಡಬಹುದು, ಸಂಪೂರ್ಣ ವಿವರ ಇಲ್ಲಿದೆ.