ಮಕ್ಕಳ ವಯಸ್ಸಿನ ಆಧಾರದ ಮೇಲೆ 1 ನೇ ತರಗತಿಗೆ ಪ್ರವೇಶ ನಿಯಮಗಳಲ್ಲಿ ಬದಲಾವಣೆ ಮಾಡಿರುವ ಶಿಕ್ಷಣ ಇಲಾಖೆ.

ಶಿಕ್ಷಣ ಇಲಾಖೆಯ ಪ್ರಕಟಣೆಯ ಪ್ರಕಾರ ಇನ್ನು ಮುಂದೆ ಕರ್ನಾಟಕದಲ್ಲಿ ಮಕ್ಕಳು 8 ವರ್ಷ ವಯಸ್ಸಿಗೆ ಹೆಚ್ಚಾಗಿದ್ದು 1 ನೇ ತರಗತಿಗೆ ಪ್ರವೇಶ ಪಡೆಯಲು ಬಯಸಿದರೆ ಅವರು ಒಂದನೇ ತರಗತಿ ಪ್ರವೇಶಕ್ಕೆ ಅರ್ಹರಲ್ಲ ಎಂದುದಾಗಿ ತಿಳಿಸಿದೆ. ಶಿಕ್ಷಣ ಇಲಾಖೆಯ ಈ ಹೊಸ ನಿಯಮವು 2024-25 ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಶಿಕ್ಷಣ ಇಲಾಖೆಯ ಪ್ರಕಟಣೆಯಲ್ಲಿ ಹೇಳಲಾದ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಕಡ್ಡಾಯ ಶಿಕ್ಷಣ ಇಲಾಖೆ ನಿಯಮ :- ಸರ್ಕಾರದ ಆದೇಶದ ಪ್ರಕಾರವಾಗಿ ಶಿಕ್ಷಣ ಹಕ್ಕು ಕಾಯ್ದೆ-2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರ ಅನ್ವಯ, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. 6 ವರ್ಷ ತುಂಬಿದ ಮಗುವು ಒಂದನೇ ತರಗತಿಗೆ ಪ್ರವೇಶ ಪಡೆಯಬೇಕು. ಶಾಲಾ ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಕ್ಕಳೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.

LKG, UKG ಮತ್ತು ಒಂದನೇ ತರಗತಿಗೆ ಪ್ರವೇಶ ಪಡೆಯಲು ನಿಗದಿ ಪಡಿಸಿದ ಗರಿಷ್ಠ ವಯೋಮಿತಿ ಏಷ್ಟು?

  • LKG ಗೆ ಪ್ರವೇಶ, ಮಕ್ಕಳು ಕನಿಷ್ಠ 4 ವರ್ಷ ವಯಸ್ಸಿನವರಿಗೆ ಮತ್ತು 2023-24 ಶಿಕ್ಷಣದಲ್ಲಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ.
  • UKG ಗೆ ಪ್ರವೇಶ ಪಡೆಯಲು, ಮಕ್ಕಳು 2024-25 ಶಿಕ್ಷಣದಲ್ಲಿ 5 ವರ್ಷ ವಯಸ್ಸಿನವರು ಮತ್ತು 7 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
  • 1ನೇ ತರಗತಿಗೆ ಪ್ರವೇಶ ಪಡೆಯಲು, ಮಕ್ಕಳು 2025-26 ಶಿಕ್ಷಣದಲ್ಲಿ 6 ವರ್ಷ ವಯಸ್ಸಿನವರಿಗೆ ಮತ್ತು 8 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಣ ಇಲಾಖೆಯ ಪ್ರಕಟಣೆಯಲ್ಲಿ ಇರುವ ಪ್ರಸ್ತಾವನೆಯ ಅಂಶಗಳು ಏನು?

ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ಪ್ರಶನವಣೆಯಲ್ಲಿ ತಿಳಿಸಿದ ಅಂಶಗಳು :-

  • ಕ್ರಮಾಂಕ (1)ರ ಸರ್ಕಾರದ ಆದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ-2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರ ಶೈಕ್ಷಣಿಕ ವರ್ಷದ ಪ್ರಕಟಣೆಯಲ್ಲಿ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ತಿಳಿಸಲಾಗಿದೆ.
  • ಕ್ರಮಾಂಕ (2)ರಲ್ಲಿ ಸರ್ಕಾರದ ಆದೇಶ ಸಂಖ್ಯೆ: ಇಪಿ 260 ಪಿಜಿಸಿ 2021, ದಿನಾಂಕ:26.07.2022 ರಂದು ನೀಡಿರುವ ಸರ್ಕಾರದ ಆದೇಶದಲ್ಲಿ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ವಿಗಧಿಪಡಿಸಲಾಗಿರುವುದನ್ನು 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.
  • ಕ್ರಮಾಂಕ (3)ರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪತ್ರದಲ್ಲಿ LKG, UKG ಮತ್ತು 01ನೇ ತರಗತಿ ಪ್ರವೇಶಕ್ಕೆ ಈಗಾಗಲೇ ದಾಖಲಾತಿಗೆ ಕನಿಷ್ಠ ಅರ್ಹ ವಯಸ್ಸಿನ ಮಿತಿ ಪರಿಷ್ಕರಿಸಿ ನಿಗದಿ ಮಾಡಲಾಗದೆ. ಅದರೆ ಗರಿಷ್ಟ ವಯಸ್ಸಿನ ಮಿತಿ ಪರಿಷ್ಕರಿಸಿರುವುದಿಲ್ಲ.
  • * ವಯಸ್ಸಿನ ಮಿತಿಯಲ್ಲಿ ಬದಲಾವಣೆ ತಂದಿರುವುದರಿಂದ ಡ್ರಾಪ್ ಔಟ್ ಮಕ್ಕಳ ಸಂಖ್ಯೆಯನ್ನು ಸಹ ತಗಿಸಬಹುದಾಗಿರುವ ಪ್ರಯುಕ್ತ LKG, UKG ಮತ್ತು 01ನೇ ತರಗತಿಗಳಿಗೆ ಈಗಾಗಲೇ ಮಕ್ಕಳ ದಾಖಲಾತಿಗಾಗಿ ಕನಿಷ್ಠ ವಯೋಮಿತಿಯನ್ನು ಪರಿಷ್ಕರಿಸಿ ನಿಗಧಿಪಡಿಸಿರುವಂತೆ ಗರಿಷ್ಠ ವಯೋಮಾನದ ಮಾನದಂಡವನ್ನು ಸಡಿಲಿಸಿ ಪರಿಷ್ಕರಿಸುವ ಅಗತ್ಯವಿದ್ದು ಪರಿಷ್ಕರಿಸಲು ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ 12 ನೇ ಕಂತಿನ ಹಣ ಬಿಡುಗಡೆಯ ಮುನ್ನ ಬಿಗ್ ಅಪ್ಡೇಟ್ ನೀಡಿದೆ.

ಇದನ್ನೂ ಓದಿ: ಈ ಯೋಜನೆಯಲ್ಲಿ ಕೇವಲ 20 ರೂಪಾಯಿ ಪಾವತಿಸಿ 20 ಲಕ್ಷ ರೂಪಾಯಿ ಪ್ರೀಮಿಯಂ ಗಳಿಸಿ.

Sharing Is Caring:

Leave a Comment