ಹಿರಿಯ ನಾಗರಿಕರಿಗೆ ಉತ್ತಮ ಯೋಜನೆಯನ್ನು ಪೋಸ್ಟ್ ಆಫೀಸ್ ನೀಡುತ್ತಿದೆ. ಇದರಿಂದ ತಿಂಗಳಿಗೆ 20,000 ರೂಪಾಯಿ ಪೆನ್ಷನ್ ಪಡೆಯಿರಿ

ಪೋಸ್ಟ್ ಆಫೀಸ್ ಈಗ ಹಿರಿಯ ನಾಗರಿಕರ ಭವಿಷ್ಯಕ್ಕೆ ಹಲವು ಯೋಜನೆಗಳನ್ನು ನೀಡುತ್ತಿದೆ. ರಿಟೈರ್ಮೆಂಟ್ ಲೈಫ್ ನಲ್ಲಿ ಜೀವನ ನಡೆಸಲು ಹಣದ ಅವಶ್ಯಕತೆ ಇರುತ್ತದೆ. ಮಕ್ಕಳು ತಮ್ಮನ್ನು ನೋಡಿಕೊಳ್ಳದೆ ಇದ್ದರೂ ನಮಗೆ ನಿವೃತ್ತಿಯ ನಂತರ ಯಾರ ಹಂಗಿಲ್ಲದೆ ಜೀವನ ನಡೆಸಲು ಹಲವು ಸ್ಕೀಮ್ ಗಳು ಈಗ ಇವೆ. ಅವುಗಳಲ್ಲಿ ನೀವು ತಿಂಗಳಿಗೆ 20,000 ಗಳಿಸುವ ಪೆನ್ಷನ್ ಸ್ಕೀಮ್ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ ನ ಸ್ಕೀಮ್ ಬಗ್ಗೆ ಮಾಹಿತಿ ಇಲ್ಲಿದೆ:- ಪೋಸ್ಟ್ ಆಫೀಸ್ ಹಲವು ಯೋಜನೆಗಳಲ್ಲಿ ಹೆಚ್ಚು ಜನಪ್ರಿಯ ಆಗಿರುವ ಉಳಿತಾಯ ಯೋಜನೆ ಎಂದರೆ ಅದು ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್. ಈ ಯೋಜನೆಯಲ್ಲಿ ಹೂಡಿಕೆಗೆ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಹಾಗೂ ಈ ಯೋಜನೆಯು ಹೂಡಿಕೆಗೆ ಅತ್ಯಂತ ಸುರಕ್ಷಿತವಾಗಿದೆ.

Post Office Senior Citizen Savings Scheme ಗೆ ನೀಡುವ ಬಡ್ಡಿದರ ಏಷ್ಟು?: ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 8.2% ಬಡ್ಡಿದರವನ್ನು ನೀಡಲಾಗುತ್ತದೆ. ಈ ಬಡ್ಡಿದರವು ಜನವರಿ 1, 2024 ಜಾರಿಯಲ್ಲಿದೆ. ಈ ಬಡ್ಡಿದರವು ಬ್ಯಾಂಕ್ ನಲ್ಲಿ FD ಯೋಜನೆಗಿಂತ ಹೆಚ್ಚಿನ ಬಡ್ಡಿದರ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಡಿಮೆ ಮೊತ್ತದ ಇನ್ವೆಸ್ಟ್ಮೆಂಟ್ ಮಾಡಿ ಹೆಚ್ಚು ಹಣವನ್ನು ಗಳಿಸಿ :-

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ಠೇವಣಿಯ ಮೊತ್ತ 1,000 ಹಾಗೂ ಗರಿಷ್ಠ ಠೇವಣಿಯ ಮೊತ್ತ 30 ಲಕ್ಷ ಆಗಿರುತ್ತದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ಏಕೈಕ ಖಾತೆ ತೆರೆಯಬಹುದು ಅಥವಾ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯೊಂದಿಗೆ ಜಂಟಿ ಖಾತೆ ತೆರೆಯಬಹುದಾಗಿದೆ.

ಯೋಜನೆಯ ಅವಧಿಯ ಬಗ್ಗೆ ಮಾಹಿತಿ :- ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆದಾರರು ಖಾತೆಯನ್ನು 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕು. ಒಮ್ಮೆ ನೀವು ಖಾತೆಯನ್ನು 5 ವರ್ಷಗಳ ಅವಧಿಗಿಂತ ಮೊದಲು ಮುಚ್ಚಿದರೆ ನೀವು ನಿಯಮಗಳ ಪ್ರಕಾರವಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SBI ಬ್ಯಾಂಕ್ ಶಿಶು ಮುದ್ರಾ ಯೋಜನೆ ಅಡಿಯಲ್ಲಿ 50,000 ರೂಪಾಯಿ ಸಾಲ ನೀಡುತ್ತಿದೆ; ಈ ರೀತಿ ಅರ್ಜಿ ಸಲ್ಲಿಸಿ.

ಕೆಲವು ಸಮಯದಲ್ಲಿ ವಯಸ್ಸಿನ ಸಡಿಲಿಕೆ ಇದೆ :-

ವಿಶೇಷ ಸಂದರ್ಭಗಳಲ್ಲಿ ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (SCSS) ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಈ ಸಡಿಲಿಕೆಗಳು ಈ ಕೆಳಗಿನಂತಿವೆ:

  1. VRs ಪಡೆಯುವವರು: ಯಾರಾದರೂ ಸ್ವಯಂ ನಿವೃತ್ತಿ (VRs) ಪಡೆದರೆ ಮತ್ತು ಅವರ ವಯಸ್ಸು 55 ವರ್ಷಗಳಿಗಿಂತ ಹೆಚ್ಚು ಮತ್ತು ಖಾತೆಯನ್ನು ತೆರೆಯುವ ಸಮಯದಲ್ಲಿ 60 ವರ್ಷಗಳಿಗಿಂತ ಕಡಿಮೆಯಿದ್ದರೆ, ಅವರು ಈ ಖಾತೆಯನ್ನು ತೆರೆಯಬಹುದಾಗಿದೆ.
  2. ರಕ್ಷಣಾ ಪಡೆಗಳ ನಿವೃತ್ತ ಉದ್ಯೋಗಿಗಳು: ರಕ್ಷಣಾ ಪಡೆಗಳಿಂದ ನಿವೃತ್ತಿ ಹೊಂದಿದ ಉದ್ಯೋಗಿಗಳು 50 ವರ್ಷಕ್ಕಿಂತ ಹೆಚ್ಚು ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ.

ತಿಂಗಳಿಗೆ 20000 ಆದಾಯ ಪಡೆಯಲು ಹೂಡಿಕೆಯ ವಿಧಾನ ಹೀಗಿರಬೇಕು :- ನೀವು ಕನಿಷ್ಠ 1000 ಹಾಗೂ ಗರಿಷ್ಠ 3,00,000 ಹೂಡಿಕೆ ಮಾಡಬಹುದು. ನೀವು 3,00,000 ಹೂಡಿಕೆ ಮಾಡಿದರೆ ನಿಮಗೆ ಸಿಗುವ 8.2% ಬಡ್ಡಿದರವನ್ನು ಲೆಕ್ಕಹಾಕಿ ನಿಮಗೆ ಸಿಗುವ ಬಡ್ಡಿದರವು 2.46 ಲಕ್ಷ ರೂಪಾಯಿ ಆಗಿರುತ್ತದೆ. ಹಿಂಗೆ ಮಾಡಿದರೆ ನೀವು ತಿಂಗಳಿಗೆ 20,000 ಹಣವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ತಿಂಗಳಿಗೆ 500 ರೂಪಾಯಿ ಇನ್ವೆಸ್ಟ್ ಮಾಡಿ 4,12,321ರೂಪಾಯಿ ಪಡೆಯಬಹುದು.

Sharing Is Caring:

Leave a Comment