ಬ್ಯಾಂಕ್ ಎಂಬುದು ಗ್ರಾಹಕರ ಅತ್ಯಂತ ಮುಖ್ಯವಾದ ಸಂಸ್ಥೆ. ಏಕೆಂದರೆ ಬ್ಯಾಂಕ್‌ಗಳು ನಮ್ಮ ಹಣವನ್ನು ಸುರಕ್ಷಿತವಾಗಿ ಇಡಲು ಮತ್ತು ನಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನಮಗೆ ಸಹಾಯ ಮಾಡಲಿವೆ. ಬ್ಯಾಂಕ್ ನಲ್ಲಿ ನಾವು ಹಣ ಇಡುತ್ತೇವೆ ಹಾಗೂ ಪಡೆಯುತ್ತೇವೆ. ಬ್ಯಾಂಕ್ ಗೆ ರಜಾ ದಿನಗಳು ಬಂತು ಎಂದರೆ ನಮಗೆ ಟೆನ್ಷನ್ ಯಾಕೆ ಎಂದರೆ ನಮ್ಮ ಅಗತ್ಯಕ್ಕೆ ಹಣ ಸಿಗುವುದಿಲ್ಲವಲ್ಲ ಎಂದು. ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬ ಹಾಗೂ ಭಾರತದ ಪ್ರಮುಖ ಹಬ್ಬಗಳಲ್ಲಿ ಬ್ಯಾಂಕ್ ಗೆ ರಜೆ ಇರುತ್ತದೆ. ಇದಾದ ಜೊತೆ ಕೆಲವು ಬ್ಯಾಂಕ್ ನಲ್ಲಿ ಸ್ಥಳೀಯ ರಜೆಗಳು ಇರುತ್ತವೆ. ಭಾರತದಲ್ಲಿ ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ತೆರೆದುಕೊಳ್ಳುತ್ತದೆ. ಮುಂದಿನ ತಿಂಗಳಲ್ಲಿ ಭಾರತದ ಯಾವ ಯಾವ ಬ್ಯಾಂಕ್ ನಲ್ಲಿ ಏಷ್ಟು ದಿನ ರಜೆ ಇರಲಿದೆ ಹಾಗೂ ಯಾವ ದಿನಾಂಕದಂದು ಬ್ಯಾಂಕ್ ಮುಚ್ಚಿರಲಿದೆ ಎಂಬ ಮಾಹಿತಿ ಇಲ್ಲಿದೆ.
ಈ ದಿನಗಳು ಬ್ಯಾಂಕ್ ರಜೆ ಇರಲಿದೆ :-
- ಸೆಪ್ಟೆಂಬರ್ 1 ರಂದು ಭಾನುವಾರ:- ಸಾಮಾನ್ಯವಾಗಿ ಭಾನುವಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ರಜೆ ಇರುತ್ತದೆ.
- ಸೆಪ್ಟೆಂಬರ್ 4:- ಶ್ರೀಮಂತ ಶಂಕರದೇವರ ತಿರುಭವ ತಿಥಿಯ ಸಂದರ್ಭದಲ್ಲಿ ಗುವಾಹಟಿಯ ಬ್ಯಾಂಕುಗಳು ಸೆಪ್ಟೆಂಬರ್ 4 ರಂದು ಮುಚ್ಚಲಾಗುತ್ತದೆ. ಶ್ರೀಮಂತ ಶಂಕರದೇವರು ಅಸ್ಸಾಂನಲ್ಲಿ ಬಹಳ ಪ್ರಸಿದ್ಧಿ ಪಡೆದ ಸಂತ. ಇದು ಒಂದು ಅಲ್ಲಿಯ ಧಾರ್ಮಿಕ ಹಬ್ಬ ಆಗಿದೆ. ಅಲ್ಲಿಯ ಸ್ಥಳೀಯರು ಆಚರಿಸುತ್ತಾರೆ.
- ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ:- ಇದು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು ಆಗಿದೆ. ಆದ ಕಾರಣ ಭಾರತದ ಹಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಅಹಮದಾಬಾದ್, ಬೇಲಾಪುರ್, ಕರ್ನಾಟಕ, ಭುವನೇಶ್ವರ್, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ, ಪಣಜಿ ಬ್ಯಾಂಕ್‌ಗಳಲ್ಲಿ ರಜೆ ಇರುತ್ತದೆ.
- ಸೆಪ್ಟೆಂಬರ್ 8, ಭಾನುವಾರ: ಎಲ್ಲಾ ಬ್ಯಾಂಕುಗಳು ಸಾಮಾನ್ಯವಾಗಿ ಭಾನುವಾರಗಳಂದು ಮುಚ್ಚಲ್ಪಡುತ್ತವೆ.
- ಸೆಪ್ಟೆಂಬರ್ 14, ಎರಡನೇ ಶನಿವಾರ: ಹಲವು ಬ್ಯಾಂಕುಗಳು ತಿಂಗಳ ಎರಡನೇ ಶನಿವಾರವನ್ನು ರಜಾದಿನವಾಗಿ ಆಚರಿಸುತ್ತವೆ. ಕೆಲವು ಬ್ಯಾಂಕ್ ನಲ್ಲಿ ಅರ್ಧ ದಿನ ಕಾರ್ಯ ನಿರ್ವಹಿಸುತ್ತದೆ. ಆದರೆ ಸಾಮಾನ್ಯವಾಗಿ ಸರಕಾರಿ ಬ್ಯಾಂಕ್ ಗಳು ಹಾಗೂ ದೊಡ್ಡ ಖಾಸಗಿ ಬ್ಯಾಂಕ್ ಗಳು ಕ್ಲೋಸ್ ಆಗಿರುತ್ತದೆ.
- ಸಪ್ಟೆಂಬರ್ 15, ಭಾನುವಾರ: ಸೆಪ್ಟೆಂಬರ್ ಮತ್ತೊಂದು ಭಾನುವಾರದ ಕಾರಣ ಈ ದಿನವೂ ಎಲ್ಲಾ ಬ್ಯಾಂಕುಗಳು ಮುಚ್ಚಲಿವೆ.
- ಸೆಪ್ಟೆಂಬರ್ 16: ಬರವಫತ್ ಹಬ್ಬದ ಇರುವ ಕಾರಣ ಕೆಲವು ಭಾಗಗಳಲ್ಲಿ ಬ್ಯಾಂಕ್ಗಳು ಮುಚ್ಚಿತಲಿದೆ. ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಐಜ್ವಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇನ್ಫಾಲ್, 6 ಕೊಚ್ಚಿ , ಕಾನ್ಪುರ, ಲಕ್ನೋ, ಮುಂಬೈ, ನಾಗ್ಪುರ, ಮುಂಬೈ, ರಾಂಚಿ, ಶ್ರೀನಗರ, ತಿರುವನಂತಪುರಂ ಈ ಎಲ್ಲಾ ನಗರಗಳಲ್ಲಿ ಬ್ಯಾಂಕ ರಜೆ ಇರುತ್ತದೆ.
- ಸೆಪ್ಟೆಂಬರ್ 17: ಮಿಲಾದ್-ಉನ್-ನಬಿ ಹಬ್ಬದ ಸಂದರ್ಭದಲ್ಲಿ ಗ್ಯಾಂಗ್‌ಟಾಕ್ ಮತ್ತು ರಾಯಪುರದ ಬ್ಯಾಂಕುಗಳು ಮುಚ್ಚಿರುತ್ತದೆ.
- ಸೆಪ್ಟೆಂಬರ್ 18: ಗ್ಯಾಂಗ್ಟಾಕ್‌ನಲ್ಲಿ ಪ್ಯಾಂಗ್-ಲಹಾಬ್ಸೋಲ್ ಎಂಬ ಸ್ಥಳೀಯ ಹಬ್ಬದ ಬ್ಯಾಂಕುಗಳು ಮುಚ್ಚಲಿವೆ.
- ಸೆಪ್ಟೆಂಬರ್ 20: ಈದ್-ಎ-ಮಿಲಾದ್-ಉಲ್-ನಬಿ ಹಬ್ಬದ ಸಂದರ್ಭದಲ್ಲಿ ಮತ್ತು ಶ್ರೀನಗರದ ಬ್ಯಾಂಕ್ ಮುಚ್ಚಿರಲಿದೆ.
- ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ ದಿನದ ಕಾರಣ ಕೊಚ್ಚಿ ಮತ್ತು ತಿರುವನಂತಪುರಂ ನಗರಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
- ಸೆಪ್ಟೆಂಬರ್22: ಈ ಭಾನುವಾರದಂದು ದೇಶದ ಎಲ್ಲಾ ಬ್ಯಾಂಕುಗಳು ಸಾಮಾನ್ಯವಾಗಿ ಮುಚ್ಚಲ್ಪಡುತ್ತವೆ.
- ಸೆಪ್ಟೆಂಬರ್ 23: ಮಹಾರಾಜ ಹರಿ ಸಿಂಗ್ ಅವರ ಜನ್ಮದಿನದ ಸಂದರ್ಭದಲ್ಲಿ ಮತ್ತು ಶ್ರೀನಗರದ ಬ್ಯಾಂಕುಗಳು ಮುಚ್ಚಲ್ಪಟ್ಟಿವೆ.
- ಸೆಪ್ಟೆಂಬರ್ 28: ಸೆಪ್ಟೆಂಬರ್ ತಿಂಗಳ ನಾಲ್ಕನೇ ಶನಿವಾರ ಆಗಿರುವ ಹಲವು ಬ್ಯಾಂಕುಗಳು ಮುಚ್ಚಿರುತ್ತವೆ.
- ಸೆಪ್ಟೆಂಬರ್ 29: ಭಾನುವಾರದಂದು ದೇಶದ ಎಲ್ಲಾ ಬ್ಯಾಂಕುಗಳು ಸಾಮಾನ್ಯವಾಗಿ ಮುಚ್ಚಲ್ಪಡುತ್ತವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಾಖಲೆಗಳಿಲ್ಲದೇ ನಿಮ್ಮ ವಿಳಾಸವನ್ನು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ
ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನಯಿಂದ ಕೇವಲ 10 ವರ್ಷಗಳ ಸರ್ಕಾರಿ ಸೇವೆಗೆ ಸಿಗಲಿದೆ ಪಿಂಚಣಿ ಹಣ!?