ಕರ್ನಾಟಕದ ಮಹಿಳೆಯರಿಗೆ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿ 50,000 ರೂಪಾಯಿ ಸಾಲ ಸಿಗಲಿದೆ 25000 ರೂಪಾಯಿ ಮರುಪಾವತಿ ಮಾಡಿದರೆ ಸಾಕು.

ಮಹಿಳೆಯರ ಸಬಲೀಕರಣವು ಸಮಾಜದ ಎಲ್ಲಾ ವರ್ಗದ ಜನರಿಗೆ ಪ್ರಯೋಜನಕಾರಿಯಾಗಿದೆ. ಇದು ಆರ್ಥಿಕ ಬೆಳವಣಿಗೆ, ಸಾಮಾಜಿಕ ಸಮಾನತೆ ಮತ್ತು ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದನ್ನು ಅವಿತಿರುವ ರಾಜ್ಯ ಸರ್ಕಾರವು ಮಹಿಳೆಯರಿಗೆ ಎಂದೇ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೆ ಗೃಹ ಲಕ್ಷ್ಮಿ ಹಾಗೂ ಶಕ್ತಿ ಯೋಜನೆ ರಾಜ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿ ಇದ್ದು ಈಗ ಮತ್ತೊಂದು ಉತ್ತಮ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆ ಮಹಿಳೆಯಾರಿಗೆ ಸಾಲ ನೀಡುವ ಯೋಜನೆ ಆಗಿದ್ದು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಯೋಜನೆಯ ವಿಶೇಷತೆ ಏನು?: 50,000 ರೂಪಾಯಿಗೆ ಸಾಲ ಯೋಜನೆಯ ಅಡಿಯಲ್ಲಿ ನಿಮಗೆ ಸಿಗುವ ಸಾಲವನ್ನು ನೀವು ಅರ್ಧ ಮಾತ್ರ ತೀರಿಸಿದರೆ ಸಾಕು ಇನ್ನುಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ.

ಯೋಜನೆಯ ಉದ್ದೇಶ ಏನು?

ಶ್ರಮಶಕ್ತಿ ಯೋಜನೆಯ ಮುಖ್ಯ ಗುರಿ ಕರ್ನಾಟಕದ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುವುದು ಮತ್ತು ಅವರಿಗೆ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ಅಗತ್ಯವಾದ ಹಣಕಾಸಿನ ಸಹಾಯವನ್ನು ಒದಗಿಸುವುದು. ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಈ ಯೋಜನೆಯನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಹೊತ್ತಿದೆ ಮತ್ತು ಯೋಜನೆ ಯಶಸ್ಸಿಗಾಗಿ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಯೋಜನೆಯಲ್ಲಿ ವಿಧವೆ, ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರು ಸೇರಿದಂತೆ ಎಲ್ಲಾ ಅರ್ಹ ಮಹಿಳೆಯರು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಮಹಿಳೆಯರು ಈ ಸಾಲವನ್ನು ಕೃಷಿ ಹೊಸ ವ್ಯಾಪಾರವನ್ನು ಪ್ರಾರಂಭಿಸಬಹುದು, ಚಟುವಟಿಕೆಗಳಲ್ಲಿ ತೊಡಗಬಹುದು, ಸಣ್ಣ ಪ್ರಮಾಣದ ವ್ಯಾಪಾರ ಅಥವಾ ಸೇವಾ ವಲಯದಲ್ಲಿ ತೊಡಗಬಹುದು.

ಮುಖ್ಯವಾಗಿ ಯಾರು ಈ ಯೋಜನೆಗೆ ಅರ್ಹರು?: ಈ ವಿಶೇಷ ಯೋಜನೆಯು ವಿಧವೆ, ವಿಚ್ಛೇದಿತ ಮತ್ತು ಅವಿವಾಹಿತ ಮಹಿಳೆಯರಿಗೆ ಸ್ವಾವಲಂಬಿಯಾಗಲು ಅವಕಾಶ ನೀಡಲಾಗಿದೆ. ಇದರ ಮೂಲಕ ಅವರು ಯಾರ ಮೇಲೂ ಅವಲಂಬಿತರಾಗದೆ ಸ್ವಂತ ಕಾಲಿನ ಮೇಲೆ ನಿಲ್ಲಲು ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಫಲಾನುಭವಿಗಳ ಅರ್ಹತೆ ಏನಿರಬೇಕು?

  • ಮಹಿಳಾ ಕುಟುಂಬದ ವಾರ್ಷಿಕ ಆದಾಯ 3,50,000 ರೂಪಾಯಿಗೂ ಹೆಚ್ಚಿದ್ದರೆ ಆಕೆ ಕರ್ನಾಟಕ ಸರ್ಕಾರದ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಸಾಲ ಅರ್ಹರಲ್ಲ.
  • 18-55 ವಯಸ್ಸಿನ ಅವಿವಾಹಿತ, ವಿಚ್ಛೇದಿತ ಅಥವಾ ವಿಧವೆ ಮಹಿಳೆಯರು ಮಾತ್ರ ಶ್ರಮಶಕ್ತಿ ಯೋಜನೆಗೆ ಅರ್ಹರು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆಗಳನ್ನು ಸರಳವಾಗಿ ಹೇಳುವುದಾದರೆ:

  • ಮೂಲಭೂತ ದಾಖಲೆಗಳು: ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಪಾಸ್‌ಪೋರ್ಟ್ ಗಾತ್ರದ ಫೋಟೋ, ಮೊಬೈಲ್ ನಂಬರ್.
  • ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗೆ ಸಂಬಂಧಿಸಿದ ದಾಖಲೆಗಳು: ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ), ಅಲ್ಪಸಂಖ್ಯಾತರ ಪ್ರಮಾಣಪತ್ರ (ಅನ್ವಯಿಸಿದರೆ).
  • ನಿವಾಸ ಮತ್ತು ಗುರುತಿನ ದಾಖಲೆಗಳು: ಕರ್ನಾಟಕದ ನಿವಾಸ ಪುರವೆ, ವಯಸ್ಸಿನ ಪುರಾವೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಾಟ್ಸಾಪ್ ಸಹಾಯವಾಣಿ ಸಂಖ್ಯೆ 08277799990 ಗೆ ಸಂಪರ್ಕಿಸಿ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ 

ಇದನ್ನೂ ಓದಿ: ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಉಚಿತ ಬೋರ್ ವೆಲ್ ಕೊರೆಸಲು ಅರ್ಜಿ ಆಹ್ವಾನ; ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಿ

Sharing Is Caring:

Leave a Comment