ಬಿಎಸ್ಎನ್ಎಲ್ ಭಾರತದ ಅತಿದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆ ಆಗಿದೆ.. ದೇಶದ ಮೂಲೆಮೂಲೆಗಳಲ್ಲಿ ಜನರಿಗೆ ದೂರವಾಣಿ ಸಂಪರ್ಕ ಹಾಗೂ ಇಂಟರ್ನೆಟ್ ಮತ್ತು ಇತರ ಸಂವಹನ ಸೇವೆಗಳನ್ನು ಒದಗಿಸುತ್ತಿದೆ. ಈಗ ಎಲ್ಲ ಪ್ರೈವೇಟ್ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಈಗ ಜನಸಾಮಾನ್ಯರು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಈಗ ನೀವು ಬಿಎಸ್ಎನ್ಎಲ್ ಕಚೇರಿಗೆ ಹೋಗಿ ಅಥವಾ ನಿಮ್ಮ ಹತ್ತಿರದ ಮೊಬೈಲ್ ಅಂಗಡಿಗೆ ಹೋಗಿ ನಿಮ್ಮ ಪ್ರೈವೇಟ್ ಸಿಮ್ ಅನ್ನು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸಬೇಕು ಎಂದಿಲ್ಲ. ನೀವು ನಿಮ್ಮ ಮನೆಯಲ್ಲಿ ಕುಳಿತು ನೀವು ಕೆಲವು ಸುಲಭ ಹಂತಗಳನ್ನು ಅನುಸರಿಸುವ ಅನುಸರಿಸುವ ಮೂಲಕ ಬಿಎಸ್ಎನ್ಎಲ್ ಗೆ ಪೋರ್ಟ್ ಆಗಬಹುದು.
ಬಿಎಸ್ಎನ್ಎಲ್ ಗೆ ಪೋರ್ಟ್ ಆಗುವ ಸುಲಭವಾದ ಹಂತಗಳು ಹೀಗಿವೆ :-
1. ಮೊದಲ ಹಂತ:
1900 ಕ್ಕೆ ಪೋರ್ಟ್ ಎಂದು SMS ಕಳುಹಿಸಿ. ನಿಮ್ಮ ಸಂಖ್ಯೆಗೆ ಒಂದು ವಿಶೇಷ ಪೋರ್ಟಿಂಗ್ ಕೋಡ್ ಬರುತ್ತದೆ. ಈ ಕೋಡ್ ಕೇವಲ 15 ದಿನಗಳು ಮಾತ್ರ ಬಳಕೆಯಲ್ಲಿ ಇರುತ್ತದೆ. ನೀವು ಈ 15 ದಿನಗಳ ಒಳಗಾಗಿ ಮುಂದಿನ ಹಂತವನ್ನು ಕೈಗೊಳ್ಳಬೇಕು.
2. ಎರಡನೇ ಹಂತ:
- ಕೋಡ್ ಮತ್ತು ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಬಿಎಸ್‌ಎನ್‌ಎಲ್ ಕೇಂದ್ರಕ್ಕೆ ಹೋಗಿಬೇಕಾಗುತ್ತದೆ.
- ಅಲ್ಲಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ದ ಬಳಿಕ ನಿಮಗೆ ಕಚೇರಿಯಲ್ಲಿ ಬಿಎಸ್ಎನ್ಎಲ್ ಸಿಮ್ ನೀಡುತ್ತಾರೆ.
- ನಿಮಗೆ ಹೊಸ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಕೆಲವೊಮ್ಮೆ ಇದು ಉಚಿತವಾಗಿ ಸಿಗಬಹುದು ಅಥವಾ ಸಣ್ಣ ಹಣ ಕಟ್ಟಬೇಕಾಗಬಹುದು.
3. ಮೂರನೇ ಹಂತ:
- ನಿಮ್ಮ ಪೋರ್ಟಿಂಗ್ ಅರ್ಜಿ ಅನುಮೋದನೆ ಆದ ನಂತರ, ನಿಮ್ಮ ಹೊಸ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಯಾವಾಗ ಆಕ್ಟಿವೇಟ್ ಆಗುತ್ತದೆ ಎಂಬ ಮಾಹಿತಿ ನಿಮಗೆ ಕಚೇರಿಯಲ್ಲಿ ತಿಳಿಸುತ್ತಾರೆ .
- ಅಲ್ಲಿಯವರೆಗೆ ನಿಮ್ಮ ಹಳೆಯ ಸಿಮ್ ಕಾರ್ಡ್ ಬಳಸಬಹುದಾಗಿದೆ.
- ಸಾಮಾನ್ಯವಾಗಿ, ಹೊಸ ಸಿಮ್ ಕಾರ್ಡ್ 7 ದಿನಗಳ ಒಳಗೆ ಆಕ್ಟಿವೇಟ್ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಿಎಸ್‌ಎಲ್ ತನ್ನ ಪ್ರಸ್ತುತ ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸಲು ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಆಗಿದೆ. ಇದರಿಂದ ಗ್ರಾಹಕರಿಗೆ ಅನೇಕ ಅನುಕೂಲಗಳು ಆಗಲಿದೆ. ಪ್ರೈವೇಟ್ ನೆಟ್ವರ್ಕ್ ಗಳ ಸುಂಕ ಅಥವಾ ಬೆಲೆ ಹೆಚ್ಚಾದ ಈ ಸಮಯವನ್ನು ಬಿಎಸ್ಎನ್ಎಲ್ ಚೆನ್ನಾಗಿ ಬಳಸಿಕೊಂಡು ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದೆ. ಆದರೆ ಸದ್ಯಕ್ಕೆ ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್‌ಗೆ ಸೀಮಿತವಾಗಿದೆ. ಆದರೆ ಪ್ರತಿಸ್ಪರ್ಧಿಗಳು 5G ನೆಟ್‌ವರ್ಕ್‌ಗೆ ಸ್ಥಳಾಂತರಗೊಂಡಿವೆ. ಇದು ಬಿಎಸ್‌ಎನ್‌ಎಲ್‌ಗೆ ದೊಡ್ಡ ಸವಾಲಾಗಿದೆ.
ಇದಕ್ಕೆ ಈಗ ಬಿಎಸ್‌ಎನ್‌ಎಲ್ ಕೂಡ ಶೀಘ್ರದಲ್ಲೇ 5G ನೆಟ್‌ವರ್ಕ್‌ಗೆ ಸ್ಥಳಾಂತರಗೊಳ್ಳುವ ಯೋಜನೆ ಹೊಂದಿದೆ. 5G ನೆಟ್‌ವರ್ಕ್ ಜಾರಿಯಾದ ನಂತರ ಗ್ರಾಹಕರು ಹೆಚ್ಚು ವೇಗದ ಇಂಟರ್ನೆಟ್ ಮತ್ತು ಇತರ ಹಲವು ಸೌಲಭ್ಯಗಳು ಲಭ್ಯವಾಗಲಿವೆ. ಹೊಸ ಯೋಜನೆಗಳ ಮೂಲಕ ಗ್ರಾಹಕರಿಗೆ ವೇಗದ ಇಂಟರ್ನೆಟ್, ಅನಿಯಮಿತ ಕರೆಗಳು, ಹೆಚ್ಚಿನ ಡೇಟಾ ಮತ್ತು ಇತರ ಹಲವು ಸೌಲಭ್ಯಗಳನ್ನು ನೀಡಿ ಇನ್ನಷ್ಟು ಹೆಚ್ಚಿನ ಗ್ರಾಹಕರನ್ನು ಸೆಳೆದು ಮತ್ತೆ ಹಳೆಯ ಚಾರ್ಮ್ ಗೆ ಬಿಎಸ್ಎನ್ಎಲ್ ಬರಲಿದೆ ಎಂಬ ಮಾತುಗಳು ಟೆಲಿಕಾಂ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: BSNL ನ 797 ರೂಪಾಯಿ ಪ್ಲಾನ್ 300 ದಿನಗಳ ವ್ಯಾಲಿಡಿಟಿ ಮತ್ತು 600GB ಡೇಟಾವನ್ನು ನೀಡುತ್ತದೆ; ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೊಬೈಲ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ; ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ ರಿಚಾರ್ಜ್ ಬೆಲೆಗಳು!